ಮನೆಯಲ್ಲಿ ಕಮಲದ ಹೂವು ಬೆಳೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಮನೆಯಲ್ಲಿ ಹೂವಿನ ಗಿಡ ಬೆಳೆದು ಅದರಲ್ಲೂ ಹೂವು ಬಿಡುವಂತೆ ಮಾಡುವುದು ಎಲ್ಲರ ಕನಸಾಗಿರುತ್ತೆ. ಹೀಗಾಗಿ ಹಳ್ಳಿಗಳು, ನಗರಗಳಲ್ಲಿ ಮನೆಯಲ್ಲಿ ಯಾವುದಾದ್ರು ಒಂದಾದರೂ ಹೂವಿನ ಗಿಡ ನಾವು ನೋಡಬಹುದು. ಪಾಟ್‌ಗಳಲ್ಲಿ ಸಣ್ಣ ಸಣ್ಣ ಹೂವಿನ ಗಿಡಗಳು ನೆಟ್ಟು ಪೋಷಿಸಿ ಅವು ಹೂವು ಬಿಟ್ಟಾಗ ಆಗುವ ಸಂತೋಷವೇ ಬೇರೆ. ಹೀಗಿರುವಾಗ ಹೂವು ನಿಮ್ಮ ಆದಾಯದ ಮೂಲವು ಆದರೆ ಹೇಗೆ?

ಹೌದು ಕೆಲವೊಂದು ಹೂವುಗಳು ಅಲಂಕಾರದ ದೃಷ್ಟಿಯಿಂದ ಮಾತ್ರವಲ್ಲ, ಆದಾಯದ ಮೂಲವೂ ಆಗಿರುತ್ತವೆ. ಇಂತಹ ಹತ್ತಾರು ಹೂವುಗಳಿವೆ. ಗುಲಾಬಿ, ಮಲ್ಲಿಗೆ ಚೆಂಡು ಹೂವು, ಸೇವಂತಿ, ಕನಕಾಂಬರ ಹೀಗೆ ಹತ್ತಾರು ಹೂವುಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಜೊತೆಗೆ ಆದಾಯವೂ ಚೆನ್ನಾಗಿ ಸಿಗುತ್ತದೆ. ಇದರ ಸಾಲಿಗೆ ಕಮಲದ ಹೂವು ಸಹ ಸೇರಿಕೊಳ್ಳುತ್ತದೆ.

How To Grow Lotus Flower At Home

ಕಮಲದ ಹೂವನ್ನು ಅಲಂಕಾರಿಕ ಹೂವಾಗಿಯೇ ಹೆಚ್ಚಾಗಿ ಜನರು ಬಳಸುತ್ತಾರೆ. ಮನೆಯಲ್ಲಿ ಸಣ್ಣದಾದ ನೀರು ಕೊಳ ಮಾಡಿ ಅದರಲ್ಲಿ ಕಮಲದ ಹೂವು ಹಾಕಿ ಅದರಲ್ಲಿ ಹೂವು ಬಿಡುವುದು ನೋಡಿ ಸಂತೋಷ ಪಡುತ್ತಾರೆ. ಕೆಂಪು, ಬಿಳಿ ಕಮಲದ ಹೂವುಗಳು ಸಾಮಾನ್ಯವಾಗಿ ನೋಡುತ್ತೇವೆ. ಮನೆಯ ಗಾರ್ಡನ್ ಅಲಂಕಾರಕ್ಕೆ ಈ ಕಮಲದ ಹೂವುಗಳು ಸೂಕ್ತ ಆಯ್ಕೆ.

ಇಲ್ಲೊಬ್ಬ ಮಹಿಳೆ ಕಮಲ ಹೂವುಗಳ ಬೆಳೆದು ಲಕ್ಷ ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ. ಕೇರಳದ ತ್ರಿಶೂರ್ ಜಿಲ್ಲೆಯ ಲತಿಕಾ ಸುತನ್ ಎಂಬಾಕೆ ಕಮಲಗಳ ಬೆಳೆದು ಪ್ರತಿ ತಿಂಗಳು 40 ಸಾವಿರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಮೊದಲಯ ಹವ್ಯಾಸವಾಗಿ ಆರಂಭಿಸಿದ ಅವರು ಬಳಿಕ ಆದಾಯದ ಮೂಲವಾಗಿ ಇದನ್ನೇ ಬೆಳೆಯಲು ಮುಂದಾದರು. ಏಕೆಂದರೆ ಕಮಲ ಬೆಳೆಯುವುದು ಬಹಳ ಸುಲಭ ಹಾಗೂ ಆದಾಯ ಹೆಚ್ಚು ಎಂದು ಅವರು ಅರಿತ್ತಿದ್ದರು.

ಮೊದಲು ಮನೆಯಲ್ಲಿ ದೊಡ್ಡ ಪಾಟ್‌ಗಳು ಅಥವಾ ದೊಡ್ಡ ನೀರಿನ ಕೊಳಗಳ ನಿರ್ಮಿಸಬೇಕು. ನಂತರ ಅದರ ಒಳಗೆ ಮರಳು ಹಾಗೂ ಕಲ್ಲುಗಳನ್ನು ಹಾಕಬೇಕು. ಇನ್ನು ಕಮಲದ ಗಿಡಗಳು ನರ್ಸರಿಯಲ್ಲಿ ಇಲ್ಲವೆ ಕೃಷಿ ಇಲಾಖೆಯಲ್ಲಿ ಸಿಗುತ್ತವೆ ಅದನ್ನು ಈ ಕೊಳ ಅಥವಾ ಪಾಟ್‌ನಲ್ಲಿ ಹಾಕಿಡಬೇಖು. ನೀರು ತುಂಬಾ ಇರುವಂತೆ ನೋಡಿಕೊಳ್ಳಬೇಕು.

ಹಾಗೆ ನೀವು ಬೀಜಗಳನ್ನು ಸಹ ತಂದು ಗಿಡ ಮಾಡಬಹುದು. ಮೊದಲು ಪಾಟ್‌ನಲ್ಲಿ ಈ ಬೀಜಗಳ ಹಾಕಿ ಮೊಳಕೆ ಬಂದ ಬಳಿಕ ಕೊಳದಲ್ಲಿ ಹಾಕಬಹುದು. ಅದರಲ್ಲಿ 'ವಿಂಗ್ ಲೋಟಸ್' ಅಥವಾ 'ಕ್ಲಿಯರ್ ಮೂನ್ ಲೋಟಸ್' ಎಂಬ ಜಾತಿಯ ಕಮಲ ಬಹಳ ಬೇಗ ಹಾಗೂ ನೋಡಲು ಸುಂದರವಾಗಿ ಕಾಣಿಸುತ್ತವೆ. ಒಮ್ಮೆ ಕಮಲದ ಹೂವುಗಳು ಬಿಡಲು ಆರಂಭಿಸಿದರೆ ನಿರಂತರವಾಗಿ ನೀವು ಹೂವು ಹಾಗೂ ಬೀಜಗಳನ್ನು ಪಡೆಯಬಹುದು.

ನೀವು ಕಮಲದ ಹೂವು ಬೆಳೆಯಲು ದೊಡ್ಡ ಪಾಟ್ ಬಳಸಬೇಕು. ಸುಮಾರು 18 ಇಂಚು ಅಗಲವಾದರೂ 8 ಇಂಚು ಆಳವಾದರು ಇರಬೇಕು. ಹೀಗಿದ್ದಾಗ ಮಾತ್ರ ಬಹಳ ಚೆನ್ನಾಗಿ ಕಮಲದ ಹೂವು ಬಿಡುತ್ತದೆ.

ಮಡಕೆಯೊಳಗೆ ಕಮಲವನ್ನು ಬೆಳೆಸುವ ಬಗ್ಗೆ ಯೋಚಿಸುವಾಗ, ಎಲೆಗಳು ಹರಡಿರುವ ಎಲೆಗಳನ್ನು ಬೆಂಬಲಿಸುವಷ್ಟು ಅಗಲವಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಅಗಲವಾದ, ಆಳವಿಲ್ಲದ ಮಡಕೆಯನ್ನು ಕನಿಷ್ಠ 18 ಇಂಚು ಅಗಲ ಮತ್ತು 8 ಇಂಚು ಆಳವನ್ನು ಬಳಸಿ ಇದರಿಂದ ಬೇರುಗಳು ಹರಡಬಹುದು. ಈ ಕಮಲದ ಹೂವಿನ ಗಿಡಗಳಿಗೆ ರಾಸಾಯನಿಕ ಗೊಬ್ಬರಕ್ಕಿಂತಲೂ ಸಾವಯವ ಗೊಬ್ಬರ ಹಾಕುವುದು ಉತ್ತಮ.

ಕಮಲದ ಗಡ್ಡೆಯನ್ನು ಆಳವಾಗಿ ಪಾಟ್‌ನಲ್ಲಿ ಊರಿರಬೇಕು. ಅದು ಹೊರಬಂದರೆ ಬೇಗ ಈ ಗಿಡ ಸಾಯುತ್ತದೆ. ಹಾಗಾಗಿ ಕಮಲದ ಗಡ್ಡೆಗಳು ಆಳವಾಗಿ ಮಣ್ಣಿನಲ್ಲಿ ಹೂಳಬೇಕು.

English summary

How To Grow Lotus Flower At Home

People often use the lotus flower as an ornamental flower. They make a small pond at home and plant the lotus flower in it, enjoying the joy of seeing it bloom.
Story first published: Saturday, November 23, 2024, 18:30 [IST]
X
Desktop Bottom Promotion