Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಮನೆಯಲ್ಲೇ ಶುಂಠಿ ಬೆಳೆಯೋದು ಹೇಗೆ? ಈ ವಿಡಿಯೋ ನೋಡಿದ್ರೆ ಸಾಕು..!
ಮಿಡಲ್ ಕ್ಲಾಸ್ ಕುಟುಂಬದವರು ಖರ್ಚಿನ ಬಗ್ಗೆ ಹೆಚ್ಚು ಲೆಕ್ಕ ಹಾಕುತ್ತಾರೆ. ಏನಾದರು ಖರೀದಿಸಬೇಕಾದರೆ ಹತ್ತು ಹಲವು ಬಾರಿ ಯೋಚಿಸಬೇಕಾಗುತ್ತದೆ. ಅದರಲ್ಲೂ ದಿನನಿತ್ಯದ ಖರ್ಚನ್ನು ಅವರು ನಿಭಾಯಿಸುವುದು ಕಷ್ಟವೇ ಸರಿ. ಹೀಗಾಗಿ ಯಾವುದೇ ಖರ್ಚು ಎದುರಾದರು ಹಲವು ಬಾರಿ ಯೋಚಿಸಿ ಮುಂದಿನ ಹೆಜ್ಜೆ ಇಡುತ್ತಾರೆ. ಹಾಗೆ ನಿತ್ಯದ ಮಾರುಕಟ್ಟೆಯಲ್ಲಿ ಮಧ್ಯಮ ಕುಟುಂಬದ ಜನ ಚರ್ಚೆ ಮಾಡಿ ಕಡಿಮೆ ಹಣಕ್ಕೆ ಖರೀದಿಸುವ ಚಾಳಿ ಹೊಂದಿರುತ್ತಾರೆ.
ಈಗಂತು ತರಕಾರಿ, ದಿನಸಿ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಹೀಗಿರುವಾಗ ಎಲ್ಲಾ ವಸ್ತುಗಳನ್ನು ಮಾರುಕಟ್ಟೆಯಿಂದ ಖರೀದಿಸಿ ತರುವುದು ದೊಡ್ಡ ಹೊರೆಯಾಗುತ್ತದೆ. ಹೀಗಾಗಿ ಹಳ್ಳಿಗಳಲ್ಲಿ ನಾವು ಮನೆ ಮನೆಯಲ್ಲೂ ಸಣ್ಣ ಪುಟ್ಟ ತರಕಾರಿಗಳ ಬೆಳೆದಿರುವುದನ್ನು ನೋಡಬಹುದು. ಹಾಗೆ ನಗರದಲ್ಲೂ ಚಿಕ್ಕಪುಟ್ಟ ಜಾಗದಲ್ಲೇ ಸಣ್ಣ ತರಕಾರಿಗಳ ಬೆಳೆಯುತ್ತಾರೆ.

ಹಳ್ಳಿಯಲ್ಲಿ ಟೊಮೆಟೋ, ಈರುಳ್ಳಿ, ಬೀನ್ಸ್, ಸೊಪ್ಪುಗಳು, ನುಗ್ಗೆಕಾಯಿ, ಬೆಂಡೆಕಾಯಿ, ಮೆಣಸು, ಶುಂಠಿ ಇದೆಲ್ಲವನ್ನು ಸುಲಭವಾಗಿ ಬೆಳೆಯುತ್ತಾರೆ. ಅವರ ಮನೆಗೆ ಅಗತ್ಯವಾಗಿ ಬೇಕಾಗುವಂತಹ ತರಕಾರಿಗಳನ್ನು ಅವರು ಬೆಳೆದು ಸಂಗ್ರಹಿಸುವುದು, ಮನೆಯ ಬಳಕೆಯಲ್ಲಿ ಉಪಯೋಗಿಸುವುದು ಮಾಡುತ್ತಾರೆ. ಆದ್ರೆ ಇದು ನಗರಗಳಲ್ಲಿ ಕಷ್ಟವಾಗುತ್ತದೆ. ಆದ್ರೆ ನಗರಗಳಲ್ಲಿ ಕೆಲವು ಸಣ್ಣ ತರಕಾರಿಗಳ ಬೆಳೆಯಬಹುದು.
ನಗರಗಳಲ್ಲೂ ಸುಲಭವಾಗಿ ಬೆಳೆಯುವಂತಹ ಶುಂಠಿ ಕುರಿತು ನಾವಿಂದು ತಿಳಿಯೋಣ. ಶುಂಠಿ ಎಲ್ಲಾ ಅಡುಗೆಗೆ ಅಗತ್ಯವಾಗಿ ಬೇಕಾಗಿರುವ ಪದಾರ್ಥವಾಗಿದೆ. ಹಳ್ಳಿಗಳಲ್ಲಿ ಮನೆ ಮನೆಯಲ್ಲೂ ಶುಂಠಿ ಬೆಳೆಯುವುದು ನೋಡಬಹುದು. ಸುಲಭವಾಗಿ ಇದನ್ನು ನೆಟ್ಟು ವರ್ಷವಿಡಿ ನಿಮಗೆ ಬೇಕಾದಾಗ ಅದನ್ನು ಬಳಸಬಹುದು. ಹಾಗಾದ್ರೆ ಮನೆಯಲ್ಲಿ ಶುಂಠಿಯನ್ನು ಬೆಳೆಯುವುದು ಹೇಗೆ? ಸಿಟಿಯಲ್ಲೂ ಈ ಶುಂಠಿ ಬೆಳೆಯುವುದು ಹೇಗೆ ಎಂಬುದನ್ನು ನೋಡೋಣ.
ಮನೆಯಲ್ಲಿ ಶುಂಠಿ ಬೆಳೆಯುವುದು ಹೇಗೆ ಎಂಬುದನ್ನು ವ್ಯಕ್ತಿಯೊಬ್ಬ ವಿಡಿಯೋ ಮಾಡಿ ಹಂಚಿಕೊಂಡಿದ್ದಾನೆ. ಇನ್ಸ್‌ಸ್ಟಾಗ್ರಾಮ್‌ನಲ್ಲಿ ಆತ ಹಾಕಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇಷ್ಟು ಸುಲಭವಾಗಿ ಶುಂಠಿ ಬೆಳೆಯಬಹುದಾ ಎಂದು ಅಚ್ಚರಿ ಹೊರಹಾಕಿದ್ದಾರೆ. 'creative_explained' ಎಂಬ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಈ ವಿಡಿಯೋದ ಪ್ರಕಾರ ಮೊದಲು ಶುಂಠಿಯನ್ನು ತೊಳೆದು ಇಟ್ಟುಕೊಂಡು ನಂತರ ಒಂದು ಟಿಷ್ಯೂ ಪೇಪರ್ ಅನ್ನು ನೀರಿನಲ್ಲಿ ಅದ್ದಿ ಹಿಂಡಿಕೊಂಡು ಅದರ ಒಳಗೆ ಶುಂಠಿ ಇಟ್ಟು ಮಡಚಬೇಕು. ನಂತರ ಅದಕ್ಕೆ ಒಂದು ಗಾಜಿನ ಲೋಟದಿಂದ ಮುಚ್ಚಿ ಇಡಬೇಕು, ಮಾರನೆ ದಿನ ಅದನ್ನು ತೆಗೆದು ಶುಂಠಿಯಲ್ಲಿ ಬೇರುಯ ಬಂದಿರುತ್ತದೆ, ಈಗ ಈ ಶುಂಠಿಗೆ ಒಂದಿಷ್ಟು ತೂತ್ ಪಿಕ್ ಚುಚ್ಚಿ ಒಂದು ಲೋಟದಲ್ಲಿ ನೀರು ತುಂಬಿ ಶುಂಠಿಯನ್ನು ಅದರ ಮೇಲೆ ಇಡಿ. ಶುಂಠಿ ನೀರಿಗೆ ತಾಕಬಾರದು.
ಈಗ ನಿಧಾನವಾಗಿ ಶುಂಠಿಗೆ ಬೇರು ಬರುತ್ತದೆ. ಈ ಬೇರು ಉದ್ದವಾಗುವವರೆಗೂ ನೀರಿನಲ್ಲಿ ಬಿಟ್ಟು ನಂತರ ಮೇಲೆ ತೆಗೆದಿಡಿ. ಅನಂತರ ಈ ಶುಂಠಿಯನ್ನು ಪಾಟ್‌ಗೆ ಹಾಕಿಕೊಳ್ಳಬೇಕು. ಪಾಟ್‌ನ ಕೆಳಗೆ ಮರಳು ಹಾಗೂ ಮಣ್ಣು ಹಾಕಿ ಬಳಿಕ ಶುಂಠಿಯ ಬೇರು ಚೆನ್ನಾಗಿ ಮಣ್ಣಿನಲ್ಲಿ ಹೋಗುವಂತೆ ಮಾಡಿ ಮಣ್ಣಿನಲ್ಲಿ ಮುಚ್ಚಬೇಕು. ನಂತರ ನೀರು ಹಾಕಿ ಬಿಸಿಲು ಬರುವ ಕಡೆ ಗಿಡವನ್ನು ಇಡಿ.
ಸುಮಾರು 2 ತಿಂಗಳಲ್ಲಿ ಈ ಶುಂಠಿ ಬೃಹತ್ ಆಕಾರವಾಗಿ ಬೆಳೆಯುತ್ತದೆ. ದೊಡ್ಡ ಹಲ್ಲೆ ಹರಡುತ್ತದೆ. ಇದನ್ನು ಕಿತ್ತು ನೀವು ಯಾವಾಗ ಬೇಕಾದರು ಬಳಸಬಹುದು. ಹಾಗೆ ಶುಂಠಿಯನ್ನು ಮತ್ತೆ ಮೊಳಕೆ ಬರಿಸಿ ಅದನ್ನು ನೆಡಬಹುದು. ನೀವು ಸಹ ಈ ವಿಡಿಯೋ ನೋಡಿಕೊಂಡು ಶುಂಠಿ ಬೆಳೆದು ನೋಡಿ.



Click it and Unblock the Notifications
