Latest Updates
-
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ!
ರುದ್ರಾಕ್ಷಿ ಗಿಡ ಬೆಳೆಸುವುದು ಹೇಗೆ ಗೊತ್ತಾ? ಏನೆಲ್ಲಾ ಮಾಡಬೇಕಿದೆ?
ಹಿಂದೂ ಪುರಾಣಗಳಿಂದ ಹಿಡಿದೂ ಮಹಾ ಗ್ರಂಥಗಳಲ್ಲಿನ ಉಲ್ಲೇಖದಲ್ಲೂ ನಾವು ರುದ್ರಾಕ್ಷಿ ಕುರಿತ ಉಲ್ಲೇಖ ನೋಡಬಹುದು. ಅದರಲ್ಲೂ ಶಿವನಿಗೆ ಅತ್ಯಂತ ಶ್ರೇಷ್ಠವಾದ ಧರಿಸು ಈ ರುದ್ರಾಕ್ಷಿ ಮಾಲೆಯಾಗಿದೆ. ಆದ್ರೆ ರುದ್ರಾಕ್ಷಿಯಲ್ಲಿ ಎಷ್ಟೊಂದು ವಿಧಗಳಿವೆ ಎಂಬುದು ನಿಮಗೆ ಗೊತ್ತಾ? ಪುರಾಣದ ಪ್ರಕಾರ ತ್ರಿಪುರಾಸುರ ರಾಕ್ಷಸನ ಸಂಹಾರದ ನಂತರ, ಪರಶಿವನ ಕಣ್ಣಿನಿಂದ ಬಂದ ಆನಂದದ ಕಣ್ಣೀರಿನ ಹನಿಗಳು ರುದ್ರಾಕ್ಷಿ ಮಣಿಗಳಾಗಿ ಬದಲಾದವು ಎಂದು ನಂಬಲಾಗಿದೆ.
ಹೀಗಾಗಿ ಶಿವನ ಭಕ್ತರು ರುದ್ರಾಕ್ಷಿ ಧರಿಸುವುದು ನೋಡಬಹುದು. ಆದ್ರೆ ನೈಸರ್ಗಿಕವಾಗಿ ಬಿಡುತ್ತಿದ್ದ ರುದ್ರಾಕ್ಷಿಯು ಈಗ ವ್ಯಾಪಾರದ ವಸ್ತುವಾಗಿದೆ. ರುದ್ರಾಕ್ಷಿ ಮರದಿಂದ ಪಡೆಯುವ ಬದಲಾಗಿ ಯಂತ್ರಗಳ ಸಹಾಯದಿಂದ ಕೃತಕವಾಗಿ ಉತ್ಪಾದಿಸುವುದು ಕೂಡ ನಾವು ನೋಡಬಹುದು. ರುದ್ರಾಕ್ಷಿಗೆ ಅತ್ಯಧಿಕ ಬೇಡಿಕೆ ಇರುವ ಕಾರಣ ಈ ರೀತಿ ಮಾಡಲಾಗುತ್ತಿದೆ.

ಆದ್ರೆ ನೀವು ಎಂದಾದ್ರು ರುದ್ರಾಕ್ಷಿ ಮರ ನೋಡಿದ್ದೀರಾ? ಅಥವಾ ಅದನ್ನು ಹೇಗೆ ಬೆಳೆಯುತ್ತಾರೆ ಎಂಬುದು ನಿಮಗೆ ಗೊತ್ತಾ? ರುದ್ರಾಕ್ಷಿಯ ಬೀಜವನ್ನ ಮರದಿಂದ ಮಾತ್ರವೇ ಪಡೆಯಲಾಗುತ್ತದೆ. ಅದೂ ಕೂಡ ವರ್ಷಗಳ ಕಾಲ ಆರೈಕೆ ಮಾಡಿದ ಮರದಿಂದ ಪಡೆಯಬಹುದು. ಆದ್ರೆ ಕೆಲವೊಂದು ಮರಗಳು ಮೂರರಿಂದ ನಾಲ್ಕು ವರ್ಷದಲ್ಲಿಯೇ ರುದ್ರಾಕ್ಷಿ ಬೀಜಗಳ ಬಿಡುತ್ತವೆ.
ಹಾಗಾದ್ರೆ ನಾವಿಂದು ಮನೆಯಲ್ಲೇ ಈ ರುದ್ರಾಕ್ಷಿ ಮರ ನಡೆವುದು ಹೇಗೆ? ಅದರ ಪೋಷಣೆಗೆ ಏನು ಮಾಡಬೇಕು? ಎಂಬೆಲ್ಲಾ ಕುರಿತ ಮಾಹಿತಿಯನ್ನು ತಿಳಿದುಕೊಳ್ಳೋಣ. ರುದ್ರಾಕ್ಷಿ ಮರವನ್ನು ಎಲಿಯೋಕಾರ್ಪಸ್ ಗ್ಯಾನಿಟ್ರಸ್ ಎಂದು ಕರೆಯಲಾಗುತ್ತದೆ. ಹಿಂದೂ ಪುರಾಣ, ಆಯುರ್ವೇದದಲ್ಲಿ ಇದರ ಕುರಿತ ಉಲ್ಲೇಖ ನಾವು ನೋಡಬಹುದು.
ಬೀಜದಿಂದ ಮರವನ್ನಾಗಿಸಬಹುದು
ಈ ರುದ್ರಾಕ್ಷಿ ಮರವನ್ನು ನೀವು ಮನೆಯಲ್ಲೇ ಬೆಳೆಸುವುದಾದರೆ ನರ್ಸರಿಯಲ್ಲಿ ಸಿಗುವ ಸಣ್ಣ ಗಿಡವನ್ನು ತಂದು ನೆಡಬಹುದು. ಆದ್ರೆ ನಿಮಗೆ ಬೀಜವನ್ನು ನೆಟ್ಟು ಅದರಿಂದ ಮರ ಮಾಡುವ ಆಲೋಚನೆಯಿಂದರೆ ಮೊದಲು ಸರಿಯಾದ ಬೀಜವನ್ನು ಆಯ್ಕೆ ಮಾಡಿಕೊಳ್ಳಬೇಕು. ಒಂದು ಗ್ಲಾಸ್‌ನಲ್ಲಿ ನೀರು ತೆಗೆದುಕೊಂಡು ರುದ್ರಾಕ್ಷಿ ಬೀಜಗಳನ್ನು ಅದರ ಒಳಗೆ ಹಾಕಿ. ಯಾವ ಬೀಜವು ನೀರಿನಲ್ಲಿ ಮುಳುಗುತ್ತದೆಯೋ ಅದನ್ನು ಮರವಾಗಿ ಬೆಳೆಸಬಹುದು. ಈ ಬೀಜವನ್ನು 2ದಿನಗಳ ಕಾಲ ಬಿಸಿ ನೀರಿನಲ್ಲಿ ನೆನೆಸಿಡಬೇಕು. ಏಕೆಂದರೆ ರುದ್ರಾಕ್ಷಿಯ ಮೇಲ್ಪದರ ಬಹಳ ಗಟ್ಟಿಯಾಗಿರುತ್ತದೆ. ಹೀಗಾಗಿ ಮೃದುವಾಗಿಸಲು ಈ ರೀತಿ ಮಾಡಬೇಕಾಗುತ್ತದೆ. ನಂತರ ಈ ಬೀಜ ಮೊಳಕೆ ಬಂದ ಬಳಿಕ ಮರವಾಗಿಸಬಹುದು.
ರುದ್ರಾಕ್ಷಿ ಗಿಡವು ಚೆನ್ನಾಗಿ ಬೆಳೆಯಬೇಕಾದರೆ ಬೆಚ್ಚಗಿನ ವಾತಾವರಣ ಮುಖ್ಯವಾಗುತ್ತದೆ. ಹಾಗೆ ನೆರಳಿನಲ್ಲಿ ಬೆಳೆಯುತ್ತದೆ. 20ರಿಂದ 30 ಡಿಗ್ರಿ ಸೆಲ್ಸಿಯಸ್ ಅಗತ್ಯವಾಗಿದೆ. ಹಾಗೆ ನೀರು ಕೂಡ ಅಷ್ಟೇ ಅಗತ್ಯವಾಗಿ ಬೇಳಾಗುತ್ತದೆ. ಮೊದಲು ಮೊಳಕೆ ಬರಿಸಿದ ಬೀಜವನ್ನು ಪಾಟ್‌ನಲ್ಲಿ ಹಾಕಿ ಗಿಡವಾಗಿ ಮಾಡಬೇಕಾಗುತ್ತದೆ. ಇದಕ್ಕೆ ಮರಳು ಮಿಶ್ರಿತ ಮಣ್ಣು ಬಳಸಬೇಕು. ಇದು ಮೊಳಕೆ ಒಡೆದು ಎರಡರಿಂದ ಮೂರು ತಿಂಗಳಲ್ಲಿ ಸಣ್ಣ ಎಲೆ ಮೇಲೆ ಬರಲು ಆರಂಭಿಸುತ್ತದೆ.
ಇದನ್ನು ನಂತರ ದೊಡ್ಡ ಹೊಂಡದಲ್ಲಿ ನೆಡಬಹುದು. ರುದ್ರಾಕ್ಷಿ ಮರ 3 ವರ್ಷಕ್ಕೆ ಬೀಜವನ್ನು ಬಿಡಬಹುದು. ಕೆಲವೊಂದು ಜಾತಿಯ ಮರವು 10ರಿಂದ 12 ವರ್ಷಕ್ಕೆ ಬೀಜ ಬಿಡಲು ಆರಂಭಿಸುತ್ತದೆ. ಇದಕ್ಕೆ ಆಗಾಗ ರಸಗೊಬ್ಬರ ಹಾಗೂ ಕೀಟನಾಶಕ ಹಾಕಿ ಬೆಳೆಸಬೇಕಾಗುತ್ತದೆ. ದೊಡ್ಡ ಮರಬಾಗುವ ಕಾರಣ ಜಾಗವು ಬೇಕಾಗುತ್ತದೆ. ಹಾಗೆ ಈಗ ಸಣ್ಣ ಸಸ್ಯದಲ್ಲಿ ಬೀಜಗಳು ಬಿಡುವಂತಹ ಜಾತಿಯ ಮರಗಳು ನರ್ಸರಿಯಲ್ಲಿ ಸಿಗುತ್ತವೆ.



Click it and Unblock the Notifications