Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಕಿವಿ ಹಣ್ಣಿನ ಗಿಡ ಮನೆಯಲ್ಲೇ ಬೆಳೆಸುವುದು ಹೇಗೆ? ಎಷ್ಟು ದಿನದಲ್ಲಿ ಹಣ್ಣು ಬಿಡುತ್ತೆ.!?
ಮನೆಯಲ್ಲಿ ಅಲ್ಪ ಸ್ವಲ್ಪ ಜಾಗವಿದ್ದರೂ ನಾವು ಸಣ್ಣ ಪುಟ್ಟ ತರಕಾರಿ, ಹೂವಿನ ಗಿಡಗಳು, ಹಣ್ಣಿನ ಗಿಡಗಳ ಬೆಳೆಯುತ್ತೇವೆ. ಅದ್ರಲ್ಲೂ ಹಳ್ಳಗಳಲ್ಲಿ ಹೆಚ್ಚು ಜಾಗವಿರುವ ಕಾರಣ ಅವರು ಮನೆಗೆ ಬೇಕಾದ ಕೆಲವು ತರಕಾರಿಗಳು, ಹಣ್ಣುಗಳನ್ನು ಸಹ ಬೆಳೆಯುತ್ತಾರೆ. ಇನ್ನು ನಗರ ಪ್ರದೇಶದಲ್ಲೂ ಸಹ ಕೆಲವೊಂದು ಮನೆಯ ಟೆರೇಸ್ ಮೇಲೆಯೇ ತೋಟ ಮಾಡಿಟ್ಟುಕೊಂಡಿರುತ್ತಾರೆ.
ಸ್ವಲ್ಪ ಜಾಗದಲ್ಲಿ ಹಣ್ಣು, ತರಕಾರಿಗಳ ಬೆಳೆಯುವುದು ಈಗ ಫ್ಯಾಷನ್ ಆಗಿದೆ. ಕೆಲವರು ಹವ್ಯಾಸವಾಗಿ ಹಣ್ಣು, ತರಕಾರಿಯನ್ನು ಪಾಟ್‌ನಲ್ಲಿ ಬೆಳೆಯುವುದನ್ನು ಸಹ ನಾವು ನೋಡಬಹುದು. ಪಾಟ್‌ನಲ್ಲಿ ಸುಲಭವಾಗಿ ನಾವು ಟೊಮೆಟೋ, ಈರುಳ್ಳಿ, ಶುಂಠಿ, ಅರಶಿನ ಬೆಳೆಯುವುದನ್ನು ನೋಡಿದ್ದೇವೆ. ಆದ್ರೆ ನೀವು ಸಣ್ಣ ಜಾಗದಲ್ಲಿ ಹಣ್ಣುಗಳ ಬೆಳೆಯುವುದು ನೋಡಿದ್ದೀರಾ?

ಸಣ್ಣ ಜಾಗದಲ್ಲಿ ಹಣ್ಣುಗಳ ಬೆಳೆಯುವುದನ್ನು ನೋಡಿರುತ್ತೀರಾ. ಅದ್ರಲ್ಲೂ ಕೆಲವೊಂದು ವಾಣಿಜ್ಯ ಉದ್ದೇಶದಿಂದ ಬೆಳೆದರೆ ಮತ್ತೆ ಕೆಲವರು ಮನೆಯಲ್ಲಿ ಹವ್ಯಾಸಕ್ಕಾಗಿ ಬೆಳೆಯುತ್ತಾರೆ. ಅಂತಹ ಹಣ್ಣಿನಲ್ಲಿ ಈ ಕಿವಿ ಹಣ್ಣು ಕೂಡ ಒಂದು. ಕಿವಿ ಹಣ್ಣು ಸದ್ಯ ಮಾರುಕಟ್ಟೆಯಲ್ಲಿ ಅತ್ಯಂತ ದುಬಾರಿ ಹಣ್ಣಾಗಿದೆ. ಅದ್ರಲ್ಲೂ ಡೆಂಗ್ಯೂ, ಜ್ವರ ಹೀಗೆ ಹಲವು ಸಮಸ್ಯೆ ಎದುರಾದಾಗ ಈ ಹಣ್ಣು ಸವಿಯಲು ಜನ ಮುಗಿಬೀಳುತ್ತಾರೆ.
ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮವಾದ ಹಣ್ಣು ಇದಾಗಿದೆ. ಆದ್ರೆ ಈ ಒಂದು ಹಣ್ಣಿಗೆ 50ರಿಂದ 100 ರೂಪಾಯಿವರೆಗೂ ದರವಿದೆ. ಸದ್ಯ ಭಾರತದಲ್ಲಿ ಕೆಲವು ಭಾಗದಲ್ಲಿ ಮಾತ್ರವೇ ಇದನ್ನು ಬೆಳೆಯಲಾಗುತ್ತಿದೆ. ಹೀಗಾಗಿ ಇದರ ದರ ಹೆಚ್ಚಾಗಿರುತ್ತದೆ. ಕಿವಿಗಳ ರಾಜಧಾನಿ ಎಂದು ನಾವು ನ್ಯೂಜಿಲೆಂಡ್ ಅನ್ನು ಕರೆಯಬಹುದು. ಅಲ್ಲಿ ಅತೀ ಹೆಚ್ಚು ಬೆಳೆಗಾರರು ಸಿಗುತ್ತಾರೆ.
ಹಾಗಾದ್ರೆ ನಾವು ಮನೆಯಲ್ಲೇ ಈ ಕಿವಿ ಹಣ್ಣಿನ ಗಿಡ ಬೆಳೆಸುವುದು ಹೇಗೆ? ಇದು ಹಣ್ಣುಗಳ ಬಿಡಲು ಎಷ್ಟು ಸಮಯ ಹಿಡಿಯುತ್ತದೆ. ಇದರ ಆರೈಕೆ ಹೇಗೆ ಮಾಡಬೇಕು ಎಂಬುದನ್ನು ನಾವು ನೋಡೋಣ.
ಕಿವಿ ಬೀಜಗಳು ಎಲ್ಲಿ ಸಿಗುತ್ತವೆ?
ನಿಮಗೆ ಕಿವಿ ಬೀಜಗಳು ಬೇಕಾದರೆ ಕೃಷಿ ಮಾರುಕಟ್ಟೆ ಸಂಪರ್ಕಿಸಬಹುದು. ಗಿಡಗಳೇ ಬೇಕಾದರೆ ನರ್ಸರಿಯಲ್ಲೂ ಲಭ್ಯವಿರುತ್ತವೆ. ಆದ್ರೆ ನೀವೇ ಇದರ ಬೀಜದಿಂದ ಗಿಡ ಮಾಡಬಹುದು. ಕಿವಿ ಹಣ್ಣು ಕತ್ತರಿಸಿ ಅದರ ಬೀಜವನ್ನು ತೆಗೆದು ಒಂದು ಬೌಲ್‌ಗೆ ಹಾಕಿಕೊಳ್ಳಿ. ಬಳಿಕ ಅದನ್ನು ಚೆನ್ನಾಗಿ ತೊಳೆದು ಒಂದು ಪೇಪರ್ ಅನ್ನು ನೀರಿನಲ್ಲಿ ನೆನೆಸಿ ಅದರ ಒಳಗೆ ಇಟ್ಟು ಚೆನ್ನಾಗಿ ಮುಚ್ಚಿ ಬಳಿಕ ಇದನ್ನು ಗಾಳಿ ಆಡದಂತಹ ಡಬ್ಬಿಯಲ್ಲಿ ಹಾಕಿ ಇಡಿ. ಸುಮಾರು ಮೂರು ವಾರದಲ್ಲಿ ಇದು ಮೊಳಗೆ ಒಡೆಯುತ್ತದೆ.
ಇಲ್ಲವೆ ಒಂದು ಕಿವಿ ಹಣ್ಣಿನ ಎರಡೂ ಬದಿಯಲ್ಲಿ ಸಣ್ಣದಾಗಿ ತೂತು ಮಾಡಿ ಆ ತೂತಿಗೆ ಅಲೂವೆರಾ ಹಚ್ಚಿ ಬಳಿಕ ಅದನ್ನು ಪಾಟ್‌ನಲ್ಲಿ ಮಣ್ಣು ಹಾಕಿ ಹಣ್ಣನ್ನು ಹೂತಿಡಿ, ಮೇಲೆ ಒಂದು ಪ್ಲಾಸ್ಟಿಕ್ ಕಟ್ಟಿ ಇದು ಸಹ ಮೂರು ದಿನದಲ್ಲಿ ಬೇರು ಬಿಟ್ಟಿರುತ್ತದೆ. ಸುಲಭದ ವಿಧಾನವೆಂದರೆ ಪೋಷಣೆಯುಕ್ತ ಗಿಡವನ್ನು ನರ್ಸರಿಯಿಂದ ಖರೀದಿಸಿ ತರುವುದಾಗಿದೆ.
ಗಿಡ ನೆಡುವುದು ಹೇಗೆ?
ಕಿವಿ ಗಿಡ ದೊಡ್ಡದಾಗಿ ಬೆಳೆಯುತ್ತೆ. ಇದು ಬಳ್ಳಿಯಂತೆ ಹರಡಿಕೊಳ್ಳುತ್ತದೆ. ಹೀಗಾಗಿ ಇದು ಹರಡಲು ಒಳ್ಳೆಯ ಚಪ್ಪರದಂತಹ ಅಥವಾ ಅದಕ್ಕೆ ಸಪೋರ್ಟ್ ಆಗಿ ಯಾವುದಾದರಿ ಗಿಡಗಳು ಇರಬೇಕು. ಈ ಗಿಡಗಳಿಗೆ ಹೆಚ್ಚು ಬಿಸಿಲಿ ಬೀಳಬಾರದು ಮೇಲೆ ಬಿಸಿಲು ತಡೆಯುವ ಹಸಿರು ಹೊದಿಕೆ ಅಥವಾ ಬಿಳಿಯ ಹೊದಿಕೆ ಇರಬೇಕು. ಹಾಗೆ ನೀರು ಸಹ ಹೆಚ್ಚಾಗಿಯೇ ಬೇಕು. ಆದರೆ ಈ ಗಿಡಗಳು ಮೂರು ವರ್ಷಕ್ಕೆ ಹಣ್ಣುಗಳ ಬಿಡಲು ಆರಂಭಿಸುತ್ತೆ. ಇದು ಹಿಮಾಚಲ ಪ್ರದೇಶ, ಕಾಶ್ಮೀರ, ಉತ್ತರಾಖಂಡ್ ಸೇರಿ ಹಲವು ಕಡೆ ಬೆಳೆಯಲಾಗುತ್ತದೆ. ನೀವು ಸಹ ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications
