Latest Updates
-
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು!
ಮನೆಯಲ್ಲಿ ನೊಣ, ಇರುವೆ, ಜಿರಳೆಯಿದ್ದರೆ ಶಾಶ್ವತವಾಗಿ ಮುಕ್ತಿ ಪಡೆಯಿರಿ..! ಹೇಗೆ ಗೊತ್ತಾ?
ನಾವು ಅಡುಗೆ ಮನೆಯನ್ನು ಎಷ್ಟು ಸ್ವಚ್ಛವಾಡಗಿಡುತ್ತೇವೆಯೋ ಮನೆಯ ಸೌಂದರ್ಯ ಸಹ ಅಷ್ಟೇ ಹೆಚ್ಚಾಗುತ್ತದೆ. ಅಡುಗೆ ಮನೆ ನೀಟಾಗಿ ಇಟ್ಟರೆ ಇಡೀ ಮನೆ ಸುಂದರವಾಗಿ ಕಾಣುತ್ತದೆ. ಆದರೆ ಅಡುಗೆ ಮನೆಯಲ್ಲಿ ನಮಗೆ ನೊಣಗಳು, ಇರುವೆ ಸೇರಿ ಹಲವು ರೀತಿಯ ಕೀಟಗಳು ಕಾಡುತ್ತವೆ.
ಇದು ಎಲ್ಲಾ ಅಡುಗೆ ಮನೆಗಳ ಸಮಸ್ಯೆಯಾಗಿದೆ. ಇಡೀ ಮನೆಯಲ್ಲಿ ನೊಣಗಳು, ಇರುವೆಗಳಿದ್ದರೆ ಅದಕ್ಕೆ ಅಡುವೆ ಮನೆ ಮೂಲವಾಗಿರುತ್ತದೆ. ಹೀಗಾಗಿ ಅಡುಗೆ ಮನೆ ಸ್ವಚ್ಛವಾಗಿದಷ್ಟು ಮನೆಯೂ ಸ್ವಚ್ಛವಾಗಿರುತ್ತದೆ. ಆದರೆ ಈ ನೊಣ, ಇರುವೆ, ಜಿರಳೆಗಳ ಓಡಿಸಲು ನಾವು ಎಷ್ಟೇ ಪ್ರಯತ್ನ ಪಟ್ಟರು ಅದು ಅಸಾಧ್ಯ ಎನಿಸಿಬಿಡುತ್ತದೆ.

ನಾವೆಷ್ಟೇ ಪ್ರಯತ್ನ ಮಾಡಿದರು ಒಂದಲ್ಲಾ ಒಂದು ರೀತಿಯಲ್ಲಿ ಇರುವೆ, ನೊಣಗಳು ಮನೆಯಲ್ಲಿ ತುಂಬಿಕೊಳ್ಳುತ್ತಲೇ ಇರುತ್ತವೆ. ಆದರೆ ಇಂದು ನಾವು ಇವುಗಳನ್ನು ಶಾಶ್ವತವಾಗಿ ಅಡುವೆ ಮನೆಯಿಂದ ಹೊರಹಾಕುವುದು ಹೇಗೆ ಎಂಬುದನ್ನು ನೋಡೋಣ.
ನಿಮ್ಮ ಅಡುಗೆಮನೆಯನ್ನು ಸ್ವಚ್ಛವಾಗಿಡಲು ನೀವು ಸರಳವಾದ ಪರಿಹಾರಗಳನ್ನು ಹುಡುಕುತ್ತಿದ್ದರೆ, ನಿಮಗೆ ಸಹಾಯ ಮಾಡುವ ಕೆಲವು ಸ್ಮಾರ್ಟ್ ಹ್ಯಾಕ್‌ಗಳು ಇಲ್ಲಿವೆ. ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಮಹತ್ವವೇನು? ಅಡುಗೆಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಸೌಂದರ್ಯದ ಉದ್ದೇಶಗಳಿಗಾಗಿ ಮಾತ್ರವಲ್ಲದೆ ನಮ್ಮ ಕುಟುಂಬದ ಒಟ್ಟಾರೆ ಯೋಗಕ್ಷೇಮಕ್ಕೆ ಅತ್ಯಗತ್ಯವೆಂದು ಪರಿಗಣಿಸಲಾಗಿದೆ. ಏಕೆಂದರೆ ಕೀಟಗಳು ಮತ್ತು ನೊಣಗಳು ಹಾನಿಕಾರಕ ರೋಗಕಾರಕಗಳನ್ನು ಹರಡುತ್ತವೆ.
ಈ ಕೀಟಗಳಿಂದ ಅಡುಗೆ ಮನೆಯಲ್ಲಿಟ್ಟ ಆಹಾರಗಳು ಕೆಡುವಂತಾಗುತ್ತದೆ. ಆದರೆ ಕೇವಲ ನೀರು ಮತ್ತು ಸಾಬೂನು ಬಳಸಿ ಸ್ವಚ್ಛ ಮಾಡುವುದರಿಂದ ಕೀಟಗಳು ಮತ್ತು ನೊಣಗಳನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಹಾಗಾದರೆ ಸರಳ ಉಪಾಯದ ಮೂಲಕ ಇವುಗಳಿಂದ ಮುಕ್ತಿ ಪಡೆಯಲು ಇಲ್ಲಿದೆ ಮಾರ್ಗ.
ಲವಂಗದ ಎಲೆ: ನಿಮ್ಮ ಅಡುಗೆಮನೆಯ ಕಪಾಟಿನಲ್ಲಿ ಕೆಲವು ಲವಂಗದ ಇಲ್ಲವೆ, ಬಿರಿಯಾನಿ ಎಲೆಗಳನ್ನು ಅಲ್ಲಲ್ಲಿ ಇರಿಸಿ. ಈ ಎಲೆಗಳಿಂದ ಹೊರಹೊಮ್ಮುವ ಬಲವಾದ ಪರಿಮಳವು ಜಿರಳೆ ಮತ್ತು ಇರುವೆಗಳಂತಹ ಕೀಟಗಳನ್ನು ತಡೆಯುತ್ತದೆ.
ಸೌತೆಕಾಯಿ ಚೂರುಗಳು : ನಿಮ್ಮ ಮನೆಯಲ್ಲಿ ಇರುವೆಗಳು ಮುತ್ತಿಕೊಂಡಿದ್ದರೆ, ಅವು ಅಡಗಿರುವ ಸ್ಥಳವನ್ನು ಹುಡುಕಿ ಮತ್ತು ಅಲ್ಲಿ ಸೌತೆಕಾಯಿ ಚೂರುಗಳನ್ನು ಇರಿಸಿ. ಇರುವೆಗಳಿಗೆ ಸೌತೆಕಾಯಿಯ ವಾಸನೆಯಿಂದ ಹೊರಬರುವುದಿಲ್ಲ.
ಸಿಟ್ರಸ್ ಸಿಪ್ಪೆಗಳು: ನಿಂಬೆಹಣ್ಣು, ಕಿತ್ತಳೆಯ ಸಿಟ್ರಸ್ ಹಣ್ಣುಗಳ ಸಿಪ್ಪೆಗಳು ನೈಸರ್ಗಿಕ ತೈಲಗಳನ್ನು ಹೊಂದಿರುತ್ತವೆ. ಈ ವಾಸನೆಯ ಕೀಟಗಳನ್ನು ಹಿಮ್ಮೆಟ್ಟಿಸುತ್ತದೆ. ಸಿಟ್ರಸ್ ಸಿಪ್ಪೆಗಳನ್ನು ಕಿಟಕಿಗಳು ಮತ್ತು ಬಾಗಿಲ ಬಳಿ ಇರಿಸುವುದರಿಂದ ಕೀಟಗಳು ಮನೆಯೊಳಗೆ ಬಾರದಂತೆ ತಡೆಯಬಹುದು.
ವಿನೆಗರ್: ಬಿಳಿ ವಿನೆಗರ್ ಅದ್ಭುತ ಕೀಟ ನಿವಾರಕವನ್ನು ಮಾಡುತ್ತದೆ. ಸ್ಪ್ರೇ ಬಾಟಲಿಯಲ್ಲಿ ಸಮಾನ ಪ್ರಮಾಣದ ನೀರು ಮತ್ತು ಬಿಳಿ ವಿನೆಗರ್ ಅನ್ನು ಮಿಶ್ರಣ ಮಾಡಿ ಮತ್ತು ಅಡುಗೆ ಮನೆಯಲ್ಲಿ ಸಿಂಪಡಿಸಬೇಕು. ಅಲ್ಲದೆ ಇರುವೆ ಗೂಡುಗಳಿದ್ದರೆ ಅವುಗಳ ಗೂಡಿನ ಒಳಗೆ ಇದನ್ನು ಸಿಂಪಡಿಸುವುದರಿಂದ ಮುಕ್ತಿ ಪಡೆಯಬಹುದು.
ದಾಲ್ಚಿನ್ನಿ ತೊಗಟೆ: ಇರುವೆಗಳು ಹೆಚ್ಚಾಗಿ ಬರುವ ಜಾಗಗಳ ಮೇಲೆ ತೊಗಟೆಯ ಪುಡಿಯನ್ನು ಸಿಂಪಡಿಸಿ. ಇರುವೆಗಳು ಈ ವಾಸನೆಯಿಂದ ದೂರ ಉಳಿಯುತ್ತವೆ.
ಪುದೀನಾ: ಪುದೀನಾ ಎಲೆಗಳನ್ನು ಮನೆಯ ಸುತ್ತ ಹರಡುವುದರಿಂದ ಕೀಟಗಳು ದೂರವಾಗುತ್ತವೆ. ಪುದೀನ ಎಲೆಗಳಿಂದ ಬರುವ ಬಲವಾದ ವಾಸನೆಯು ಕೀಟಗಳಿಗೆ ಅಹಿತಕರ ವಾತಾವರಣ ನಿರ್ಮಿಸುತ್ತದೆ. ಇದರಿಂದ ನೊಣ, ಮತ್ತು ಜಿರಳೆಗಳು ಹೊರಗಡೆಯಿಂದ ಮನೆಯೊಳಗೆ ಬರುವುದಿಲ್ಲ.
ಕಾಫಿ ಪೌಡರ್: ಕಾಫಿ ಪುಡಿ ನೈಸರ್ಗಿಕ ಇರುವೆ ನಿವಾರಕವಾಗಿದೆ. ಇರುವೆಗಳು ಅಡುಗೆಮನೆಗೆ ಪ್ರವೇಶಿಸಬಹುದಾದ ಪ್ರದೇಶಗಳಲ್ಲಿ ಕಾಫಿ ಪುಡಿಯನ್ನು ಸಿಂಪಡಿಸಿ.
ಬೊರಾಕ್ಸ್ ಮತ್ತು ಸಕ್ಕರೆ: ಬೊರಾಕ್ಸ್‌ನೊಂದಿಗೆ ಸಮಾನ ಪ್ರಮಾಣದ ಸಕ್ಕರೆಯನ್ನು ಮಿಶ್ರಣ ಮಾಡಿ ಮತ್ತು ಇರುವೆಗಳಿರುವ ಪ್ರದೇಶಗಳಲ್ಲಿ ಇರಿಸಿ. ಇರುವೆಗಳು ಸಕ್ಕರೆಗೆ ಆಕರ್ಷಿತರಾಗಿ ಅದನ್ನು ಹುಡುಕಿಕೊಂಡು ಬಂದಾಗ ಬೊರಾಕ್ಸ್ ವಿಷವಾಗಿ ವರ್ತಿಸಿ ನಾಶಪಡಿಸುತ್ತದೆ. ಬೋರಾಕ್ಸ್ ಪುಡಿ ಎಂದರೆ ವಾಷಿಂಗ್ ಮೆಷಿನ್ ಇಲ್ಲವೆ ಬಟ್ಟೆ ಸ್ವಚ್ಛಗೊಳಿಸಲು ಬಳಸು ಪುಡಿಗಳಾಗಿವೆ.
ನಿಯಮಿತವಾಗಿ ಸ್ವಚ್ಛಗೊಳಿಸಿ: ಪ್ರತಿದಿನ ಸಾಧ್ಯವಾದಷ್ಟು ನಿಮ್ಮ ಅಡುಗೆಮನೆಯನ್ನು ಸ್ವಚ್ಛಗೊಳಿಸುವುದು ಮತ್ತು ಶೇಖರಣಾ ಪಾತ್ರೆಗಳನ್ನು ತಿಂಗಳಿಗೊಮ್ಮೆ ಸ್ವಚ್ಛಗೊಳಿಸುವುದರಿಂದಲೂ ಕೀಟಗಳ ಹತೋಟಿಗೆ ತರಬಹುದು.



Click it and Unblock the Notifications
