Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಸಕ್ಕರೆ ಡಬ್ಬಕ್ಕೆ ಇರುವೆ ಮುತ್ತಿಕೊಳ್ಳುತ್ತೆ ಅಂದ್ರೆ ಈ ರೀತಿ ಮಾಡಿ.! ಅಡುಗೆ ಮನೆಗೆ ಇನ್ನೆಂದು ಇರುವೆ ಬರಲ್ಲ
ಅಡುಗೆ ಮನೆ ಒಂದು ಮನೆಯ ಹೃದಯ ಭಾಗ ಎನ್ನಬಹುದು. ಏಕೆಂದರೆ ಅಡುಗೆ ಮನೆಯಲ್ಲಿ ಎಲ್ಲವು ಸರಿಯಾಗಿದ್ದರೆ ಇಡೀ ಮನೆ ನೆಮ್ಮದಿಯಿಂದ ಇರುತ್ತೆ ಅನ್ನೋ ಭಾವನೆ. ಅಡುಗೆ ಮನೆಯಲ್ಲಿನ ವಸ್ತುಗಳನ್ನು ಕಾಪಾಡಿಕೊಳ್ಳುವುದು ಗೃಹಿಣಿಯರ ಸವಾಲಿನ ಕೆಲಸವಾಗಿರುತ್ತೆ. ಏಕೆಂದರೆ ಅಡಿಗೆ ಮನೆಯಲ್ಲಿ ಕೆಲಸವೇ ಹೆಚ್ಚಾಗಿರುವ ನಡುವೆ ಅಲ್ಲಿನ ಸ್ವಚ್ಛತೆಯನ್ನು ಸಹ ನೋಡಿಕೊಳ್ಳಬೇಕು.
ಹಾಗೆ ಅಡುಗೆ ಮನೆಯಲ್ಲಿ ಇರುವ ವಸ್ತುಗಳನ್ನು ಅವರು ಜವಾಬ್ದಾರಿಯುತವಾಗಿ ಬಳಸುವುದು, ಹಾಳಾಗದಂತೆ ನೋಡಿಕೊಳ್ಳುವುದು, ಹುಳುಗಳು ಹಿಡಿಯದಂತೆ ಕಾಪಾಡುವುದು ಕೂಡ ಅವರ ಕೆಲಸವಾಗಿರುತ್ತೆ. ಹಾಗೆ ಅಡುಗೆ ಮನೆಯಲ್ಲಿ ಸಿಹಿ, ಮಸಾಲೆಗಳು, ಅಳಿದುಳಿದ ಆಹಾರ ಬೀಳುವುದರಿಂದ ಇರುವೆಗಳಿಗೂ ಈ ಅಡುಗೆ ಮನೆ ಅಂದರೆ ಅಚ್ಚು ಮೆಚ್ಚಿನ ತಾಣವಾಗಿರುತ್ತದೆ.

ಅದರಲ್ಲೂ ಸಕ್ಕರೆ ಡಬ್ಬ ಹಾಗೂ ಬೆಲ್ಲದ ಡಬ್ಬ ಮನೆಯಲ್ಲಿ ಇದ್ದರೆ ಇರುವೆಗಳು ಹೇಗಾದರು ಮಾಡಿ ಅದರ ಒಳಗೆ ಹೋಗಿ ಬಿಡುತ್ತವೆ. ನೀವು ಎಷ್ಟೇ ಮೇಲೆ ಇಟ್ಟರೂ, ಅದರ ಮುಚ್ಚಳ ಎಷ್ಟೇ ಬಿಗಿಯಾಗಿ ಹಾಕಿದರೂ ಕೂಡ ಈ ಇರುವೆಗಳು ಡಬ್ಬದೊಳಗೆ ಸೇರಿಯೇ ಸೆರಿಕೊಳ್ಳುತ್ತವೆ. ಒಮ್ಮೆ ನೀವು ಈ ಡಬ್ಬಿಯಿಂದ ಇರುವೆಗಳ ಓಡಿಸಿ ಜಾಗ ಬದಲಿಸಿ ಇಟ್ಟರೂ ಕೂಡ ಮತ್ತೆ ಬೆಳಗ್ಗೆ ಎದ್ದು ನೋಡುವಾಗ ಇರುವೆಗಳು ತುಂಬಿರುತ್ತದೆ.
ಇದು ಕೆಲವೊಮ್ಮೆ ಕಿರಿಕಿರಿಗೆ ಕಾರಣವಾಗುತ್ತದೆ. ಸಕ್ಕರೆ ಬಳಸುವ ಮುನ್ನ ಇರುವೆಗಳ ಓಡಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ, ಇದು ಮತ್ತಷ್ಟು ಕೆಲಸ ಹೆಚ್ಚಿಸುವುದಲ್ಲದೆ ಮೇಲಿಂದ ಮೇಲೆ ಕೆಲಸಗಳ ತಂದು ಬಿಡುತ್ತದೆ. ಇರುವೆಗಳ ಓಡಿಸಲು ಎಷ್ಟೊಂದು ತಾಳ್ಮೆ ಬೇಕಾಗುತ್ತದೆ ಎಂಬುದು ಆ ಕಷ್ಟ ಅನುಭವಿಸಿದವರಿಗೆ ಮಾತ್ರ ಗೊತ್ತಿರುತ್ತೆ.
ಹಾಗಾದ್ರೆ ಮನೆಯಲ್ಲಿ ಇರುವೆ ಕಾಟ ಇಲ್ಲದಂತೆ ಮಾಡುವುದು ಹೇಗೆ? ಅದರಲ್ಲೂ ಸಕ್ಕರೆ ಡಬ್ಬಕ್ಕೆ ಇರುವೆಗಳು ಮುತ್ತಿಕೊಳ್ಳದಂತೆ ಮಾಡುವುದಾದರು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸೀಮೆ ಸುಣ್ಣ ಅಥವಾ ಚಾಕ್ ಪೀಸ್
ಹೌದು ಶಾಲೆಯಲ್ಲಿ ಬ್ಲಾಕ್ ಬೋರ್ಡ್ ಮೇಲೆ ಬರೆಯಲು ಬಳಸುವ ಈ ಸೀಮೆ ಸುಣ್ಣ ಅಥವಾ ಚಾಕ್ ಪೀಸ್ ನಿಮ್ಮ ಮನೆಯ ಈ ಇರುವೆ ಸಮಸ್ಯೆ ಬಗೆಹರಿಸಲಿದೆ. ಈ ಚಾಕ್‌ಪೀಸ್‌ನಲ್ಲಿ ಕ್ಯಾಲ್ಸಿಯಂ ಕಾರ್ಬೋನೆಟ್ ಅಂಶ ಇರುತ್ತದೆ, ಇದು ಇರುವೆಗಳ ಪಾಲಿಗೆ ವಿಷವೆಂದೇ ಹೇಳಬಹುದು. ಹೀಗಾಗಿ ಸಕ್ಕರೆ ಡಬ್ಬ ಇಡುವ ಜಾಗದಲ್ಲಿ ಅಥವಾ ಇರುವೆಗಳು ಬರುವ ಜಾಗದಲ್ಲಿ ಇದರಿಂದ ಗೆರೆ ಎಳೆದರೆ ಇರುವೆಗಳ ಕಾಟ ತಪ್ಪಲಿದೆ. ಇಲ್ಲವೆ ಸಕ್ಕರೆ ಡಬ್ಬಿ ಇಡುವ ಜಾಗದಲ್ಲಿ ವೃತ್ತ ಬರೆದು ಅದರ ಒಳಗೆ ಸಕ್ಕರೆ ಡಬ್ಬ ಇಟ್ಟು ನೋಡಿ.
ನಿಂಬೆ ಸಿಪ್ಪೆ
ಇರುವೆಗಳಿಗೆ ನಿಂಬೆ ರಸದ ವಾಸನೆಯೂ ಆಗಿಬರುವುದಿಲ್ಲ. ಅಂದರೆ ಈ ನಿಂಬೆಯ ಸಿಪ್ಪೆಯನ್ನು ಬಿಡಿಸಿ ಇರುವೆ ಗೂಡು ಅಥವಾ ಅವುಗಳು ಬರುವ ಸ್ಥಳದಲ್ಲಿ ಹಾಕಬೇಕು. ಹಾಗೆ ನಿಂಬೆ ರಸವನ್ನು ಬಾಟಲಿಗೆ ಹಾಕಿ ಸ್ಪ್ರೇ ಮಾಡಿದರೆ ಇರುವೆ ಕಾಟ ತಪ್ಪಲಿದೆ.
ಪುಡಿ ಉಪ್ಪು ಅಥವಾ ಕಲ್ಲು ಉಪ್ಪು
ಬಿಸಿ ನೀರಿಗೆ ಉಪ್ಪು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು. ನಂತರ ಈ ನೀರನ್ನು ಒಂದು ಬಾಟಲಿಗೆ ಹಾಕಿ ಇರುವೆ ಗೂಡಿಗೆ ಅಥವಾ ಅವು ಬರುವ ಜಾಗದಲ್ಲಿ ಸ್ಪ್ರೇ ಮಾಡಿದರೆ ಇರುವೆ ಕಾಟದಿಂದ ಖಂಡಿತ ಮುಕ್ತಿ ಸಿಗಲಿದೆ.
ಪುದಿನ ಎಲೆ
ನಿಮ್ಮ ಮನೆಯಲ್ಲಿ ಪುದಿ ಎಲೆಗಳ ಬೆಳೆದಿರಬಹುದು. ಈ ಎಲೆಗಳನ್ನು ಅಡುಗೆ ಮನೆಯಲ್ಲಿ ಇರುವೆ ಬರುವ ಜಾಗದಲ್ಲಿ ಸುಮ್ಮನೆ ಇಟ್ಟರು ಸಾಕು ಇದರ ವಾಸನೆಗೆ ಇರುವೆಗಳು ಇನ್ನೆಂದು ಅಡುಗೆ ಮನೆಗೆ ಬರುವುದು ನಿಂತು ಹೋಗಲಿದೆ.



Click it and Unblock the Notifications
