Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಮನೆಯ ಸೋಫಾ ಕಲೆಯಾಗಿದ್ಯಾ.? ಈ ರೀತಿ ಮಾಡಿದ್ರೆ ಹೊಸತರಂತೆ ಹೊಳೆಯುತ್ತೆ..!!
ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು, ಸುಂದರವಾಗಿ ಕಾಣುವಂತೆ ಮಾಡುವುದು ಎಲ್ಲರ ಆಸೆಯಾಗಿರುತ್ತೆ. ಆದ್ರೆ ಅದು ಅಷ್ಟೊಂದು ಸುಲಭದ ಮಾತಲ್ಲ. ನಾವು ಎಷ್ಟೇ ಜಾಗೃತೆ ವಹಿಸಿದರು ಕೂಡ ಒಂದಲ್ಲಾ ಒಂದು ರೀತಿಯಲ್ಲಿ ಮನೆಯ ಹಲವು ವಸ್ತುಗಳು ಕಲೆಗಳಾಗುತ್ತಲೇ ಇರುತ್ತವೆ. ನೀವು ಎಷ್ಟೇ ಜಾಗೃತೆ ವಹಿಸಿ ಅವುಗಳನ್ನು ಕಲೆ ಮುಕ್ತವಾಗಿಸುವ ಪ್ರಯತ್ನದಲ್ಲಿದ್ದರೂ ಕೂಡ ಅದು ಸಾಧ್ಯವಾಗೋದಿಲ್ಲ.
ಇಂತಹ ಕೆಲವು ವಸ್ತುಗಳೆಂದರೆ ಅದರಲ್ಲೂ ಕಿಟಕಿ, ಬಾಗಿಲಿಗೆ ಹಾಕಿರುವ ಬಟ್ಟೆಗಳು, ಸೋಫಾ ಮೇಲಿನ ಬಟ್ಟೆಗಳಿ, ಟಿಪಾಯಿ, ಡಿನ್ನರ್ ಟೇಬಲ್‌ಗೆ ಹಾಕಿದ ಬಟ್ಟೆ ಯಾವಾಗಲು ಕಲೆಯಾಗುತ್ತದೆ. ನೀವು ಎಷ್ಟು ಸ್ಚಚ್ಛ ಮಾಡಿದ್ರು ಕೂಡ ಈ ಬಟ್ಟೆಗಳು ಯಾವಾಗಲು ಕೊಳೆಯಾಗುತ್ತದೆ. ಹಾಗೆ ಸೋಫಾ ಮೇಲೆ ಹಾಕಿರುವ ಬಟ್ಟೆ ಯಾವಾಗಲು ಕಲೆಯಾಗುತ್ತದೆ.

ಇನ್ನು ಕೆಲವರು ಸೋಫಾದ ಮೇಲೆ ಯಾವುದೇ ಬಟ್ಟೆ ಹಾಕಿರುವುದಿಲ್ಲ. ಹಾಗೆಯೆ ಬಿಡುತ್ತಾರೆ, ಹೀಗಾಗಿ ಬಹುಬೇಗ ಕಲೆಯಾಗುವುದನ್ನು ನಾವು ನೋಡಬಹುದು. ನಾವು ಕುಳಿತುಕೊಳ್ಳುವಾಗ, ಕೈ ಇಡುವಾಗ, ಕಾಲಿನ ಧೂಳು ಎಲ್ಲ ಕಲೆಗಳು ಸೋಫಾ ಮೇಲೆ ನೋಡಬಹುದು. ಆದ್ರೆ ಇದನ್ನು ಕ್ಲೀನ್ ಮಾಡುವುದು ಹೇಗೆ? ನೀವು ಈ ಸೋಫಾವನ್ನು ಬಾತ್ ರೂಮ್‌ಗೆ ಹಾಕಿ ಇಲ್ಲವೆ ಲಾಂಡ್ರಿಗೆ ನೀಡಲು ಆಗುವುದಿಲ್ಲ. ಆದ್ರೆ ನಾವು ಮನೆಯಲ್ಲೇ ಈ ರೀತಿ ಮಾಡಿ ಕ್ಲೀನ್ ಮಾಡಬಹುದು.
ಹಾಗಾದ್ರೆ ನಿಮ್ಮ ಮನೆಯ ಸೋಫಾವನ್ನು ಮನೆಯಲ್ಲೇ ಕ್ಲೀನ್ ಮಾಡೋದು ಹೇಗೆ? ಸುಲಭವಾಗಿ ಕ್ಲೀನ್ ಮಾಡುವುದು ಹೇಗೆ? ಇದಕ್ಕೆ ಏನು ಮಾಡಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೊದಲು ಒಂದು ಪಾತ್ರೆಯಲ್ಲಿ ನೀರು ಹಾಕಿ ಒಲೆ ಮೇಲೆ ಇಟ್ಟು ಕುದಿಯಲು ಬಿಡಿ. ಇಲ್ಲವೆ ಗ್ಯಾಸ್ ಗೀಸರ್‌ನಿಂದ ಬಿಸಿ ನೀರು ತೆಗೆದುಕೊಂಡು ಒಂದು ಟಬ್‌ಗೆ ಹಾಕಿಟ್ಟುಕೊಳ್ಳಿ. ನಂತರ ಈ ಟಬ್‌ಗೆ ಸ್ವಲ್ಪ ಬಟ್ಟೆ ತೊಳೆಯಲು ಬಳಸುವಂತಹ ಪುಡಿ ಹಾಕಿಕೊಳ್ಳಿ, ಸ್ವಲ್ಪ ಹೆಚ್ಚಿನ ಪುಡಿ ಹಾಕಿಕೊಳ್ಳಿ. ಯಾವುದೇ ಕಂಪನಿಯ ಪುಡಿಯಾಗಿದ್ದರೂ ನಡೆಯುತ್ತದೆ.
ಅನಂತರ ಇದಕ್ಕೆ 5 ಚಮಚ ಬೇಕಿಂಗ್ ಸೋಡಾ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಇದ್ದಕ್ಕೆ ಯಾವುದಾದರು ಲಿಕ್ವಿಡ್ ಕ್ಲೀನರ್ ಕೂಡ ಹಾಕಿಕೊಳ್ಳಿ, ಪಾತ್ರೆ ತೊಳೆಯಲು ಬಳಸುವ ಲಿಕ್ವಿಡ್ ಆದರೂ ನಡೆಯುತ್ತದೆ. 4 ಸ್ಪೂನ್ ಹಾಕಿ ಮಿಕ್ಸ್ ಮಾಡಿ 5 ನಿಮಿಷ ಹಾಗೆಯೇ ಬಿಡಿ. ಅನಂತರ ಒಂದು ತಂಬಿಗೆಯಲ್ಲಿ ಈ ನೀರನ್ನು ತೆಗೆದುಕೊಂಡು ಸೋಫಾದ ಮೇಲೆ ಚೆನ್ನಾಗಿ ಸಿಂಪಡಿಸಿ.
ನಂತರ ಒಂದು ಬ್ರಷ್ ತೆಗೆದುಕೊಳ್ಳಬೇಕು, ಬಟ್ಟೆ ಉಜ್ಜಲು ನೀವು ಬಳಸುವ ಬ್ರಷ್ ಆದರೆ ಉತ್ತಮ ಇದರಿಂದ ಸೋಫಾದ ಮೇಲೆ ಉಜ್ಜಿಕೊಳ್ಳಬೇಕು. ಸೋಫಾದ ಯಾವ ಭಾಗದಲ್ಲಿ ಹೆಚ್ಚು ಕಲೆಯಾಗಿದೆಯೋ ಅಲ್ಲಿ ಬೇಕಾದರೆ ಬಟ್ಟೆ ಒಗೆಯಲು ಬಳಸುವ ಸಾಬೂನು ಬಳಸಿ ಕೂಡ ಉಜ್ಜಿಕೊಳ್ಳಬಹುದು. ಹೀಗೆ ನಿಧಾನವಾಗಿ ಇಡೀ ಸೋಫಾವನ್ನು ಉಜ್ಜಿಕೊಳ್ಳಬೇಕು. ಒಮ್ಮೆ ಉಜ್ಜಿದ ಬಳಿಕ ಶುದ್ಧ ನೀರಿನಿಂದ ತೊಳೆದು ಮತ್ತೊಂದು ಸುತ್ತು ಮಿಶ್ರಣದ ನೀರನ್ನು ಸೋಫಾ ಮೇಲೆ ಹಾಕಿಕೊಳ್ಳಬೇಕು. ಈ ವೇಳೆ ಈ ನೀರು ಹಾಕಿ 15 ನಿಮಿಷ ಹಾಗೆಯೇ ಬಿಡಬೇಕು.
ಈಗ ಒಂದು ಸುತ್ತು ಸಾಬೂನು ಹಚ್ಚಿಕೊಂಡು ಮತ್ತೆ ಬ್ರಷ್ ಬಳಸಿ ಉಜ್ಜಿಕೊಳ್ಳಬೇಕು. ಇಡೀ ಸೋಫಾ ಉಜ್ಜಿದ ಬಳಿಕ ಶುದ್ಧ ನೀರಿನಿಂದ ಎರಡೆರಡು ಬಾರಿ ತೊಳೆದುಕೊಳ್ಳಬೇಕು. ಹಾಗೆ ಸೋಫಾ ದಪ್ಪವಿರುವ ಕಾರಣ ಒಣಗಲು ಬಿಸಿಲಿನಲ್ಲಿ ಇಡಬೇಕಾಗುತ್ತದೆ. ಇಲ್ಲವೆ ವಾಕ್ಯೂಮ್ ಇದ್ದರೆ ಅಥವಾ ಹೀಟರ್ ಬಳಸಿಯೂ ಒಣಗಿಸಬಹುದು.
ಸೋಫಾ ಒಣಗಿದ ಬಳಿಕ ಹೊಸತರಂತೆ ಹೊಳೆಯುತ್ತದೆ. ಆದ್ರೆ ತೊಳೆಯುವಾಗ ನೀವು ಎಚ್ಚರ ವಹಿಸಬೇಕು. ಹೆಚ್ಚು ಬ್ರಷ್‌ನಿಂದ ಉಜ್ಜಿದಾಗ ಕಿತ್ತು ಬರಬಹುದು ಇಲ್ಲದೆ ಹರಿದು ಹೋಗಬಹುದು. ಹೀಗಾಗಿ ನಿಧಾನವಾಗಿ ಕ್ಲೀನ್ ಮಾಡಿಕೊಳ್ಳಿ. ಇಷ್ಟಾದರೆ ನೀವು ಹೊಸ ರೀತಿಯ ಸೋಫಾ ಪಡೆಯುತ್ತೀರಿ.



Click it and Unblock the Notifications
