Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
5 ನಿಮಿಷದಲ್ಲಿ ಇಡೀ ಬಾತ್‌ರೂಮ್ ಟೈಲ್ಸ್ ಕ್ಲೀನ್ ಮಾಡಿ.! ಲಿಕ್ವಿಡ್ ಮಾಡೋದು ಹೇಗೆ?
ನೀವು ಮನೆಯನ್ನು ಯಾವಾಗಲು ಶುಚಿಯಾಗಿಟ್ಟುಕೊಳ್ಳಬೇಕು ಎಂದು ಬಯಸುತ್ತಿರುತ್ತೀರಿ. ಹೀಗಾಗಿ ನಿತ್ಯವು ಮನೆಯನ್ನು ಒರೆಸುವುದು, ಗುಡಿಸುವುದು, ರೂಮ್ ಫ್ರೆಷ್ನರ್ ಹಾಕಿ ಚೆನ್ನಾಗಿ ಕಾಣುವಂತೆ ಸುಗಂಧ ಭರಿತವಾಗಿಡಲು ಪ್ರಯತ್ನಿಸುತ್ತೀರಿ. ಅದರಲ್ಲೂ ಮನೆಗೆ ಯಾರಾದರು ಅತಿಥಿ, ಸ್ನೇಹಿತರು, ನೆರೆ ಹೊರೆಯವರು ಬರುತ್ತಾರೆ ಅಂದಾಗ ಮನೆಯನ್ನು ಕ್ಲೀನ್ ಮಾಡುವುದೇ ನಿಮಗೆ ದೊಟ್ಡ ಕೆಲಸವಾಗಿರುತ್ತದೆ.
ಅದರಲ್ಲೂ ಮನೆಯಲ್ಲಿ ಯಾವ ರೀತಿ ವಸ್ತುಗಳನ್ನು ಜೋಡಿಸಿಡಬೇಕು. ಯಾವ ವಸ್ತುವನ್ನು ಎಲ್ಲಿಡಬೇಕು ಎಂಬುದನ್ನು ನೀವು ಆಲೋಚಿಸಿ ಅದನ್ನು ಸರಿಯಾಗಿ ಇಡಲು ಮುಂದಾಗಬಹುದು. ಹಾಗೆ ನೀವು ಮನೆಯಲ್ಲಿ ಬಹಳಷ್ಟು ಸ್ವಚ್ಛತೆಗೆ ಆಧ್ಯತೆ ನೀಡುವ ಸ್ಥಳವೆಂದರೆ ಅದು ಅಡುಗೆ ಮನೆ ಹಾಗೆ ಬಾತ್ ರೂಮ್ ಆಗಿರಲಿದೆ. ಅತಿಥಿಗಳು ಬಂದಾಗ ಅಡುಗೆ ಮನೆ ಹಾಗೂ ಬಾತ್‌ರೂಮ್ ಸ್ವಚ್ಛತೆಯನ್ನೇ ಹೆಚ್ಚಾಗಿ ಗಮನಿಸುವುದು ನೋಡಬಹುದು.

ಒಂದು ವೇಳೆ ಅವರು ಬಂದಾಗ ಅಡುಗೆ ಮತ್ತು ಬಾತ್ ರೂಮ್ ಸ್ವಚ್ಛವಾಗಿಲ್ಲದಿದ್ದರೆ ನಿಮಗೂ ಮುಜುಗರಕ್ಕೆ ಕಾರಣವಾಗಬಹುದು. ಆದ್ರೆ ನೀವು ಅಡುಗೆ ಮನೆಯನ್ನ ಸುಲಭವಾಗಿ ಸ್ವಚ್ಛ ಮಾಡಬಹುದು, ಬಾತ್‌ರೂಮ್ ಸ್ವಚ್ಛ ಮಾಡೋದು ನಿಮಗೆ ತಲೆನೋವಾಗಿ ಪರಿಣಮಿಸಬಹುದು. ಏಕೆಂದರೆ ಬಾತ್‌ರೂಮ್ ಟೈಲ್ಸ್‌ನಲ್ಲಿನ ಕೊಳೆಯು ಯಾವುದೇ ಲಿಕ್ವಿಡ್ ಬಳಸಿದರೂ ಹೋಗುವುದಿಲ್ಲ.
ಬಾತ್‌ರೂಮ್‌ನ ಟೈಲ್ಸ್‌ಗಳ ಮೇಲೆ ಕಲೆಗಳು ಹಾಗೆ ಉಳಿಯುವುದು ಸಾಮಾನ್ಯ. ನೀವು ಮಾರುಕಟ್ಟೆಯಲ್ಲಿ ಸಿಗುವಂತಹ ಹಲವು ರೀತಿಯ ಲಿಕ್ವಿಡ್ ಅನ್ನು ಬಳಸಿದರೂ ಕೂಡ ಅಲ್ಲಿ ಹಿಡಿದಿರುವ ಕಲೆಯನ್ನು ತೆಗೆಯುವುದು ಅಷ್ಟು ಸುಲಭವಲ್ಲ. ಟೈಲ್ಸ್‌ನಲ್ಲಿ ಹಿಡಿದ ಕಲೆ ನಿಮ್ಮ ಬಾತ್‌ರೂಮ್‌ನ ಅಂದ ಕೆಡಿಸುತ್ತವೆ. ಆದ್ರೆ ನಾವಿಂದು ಸುಲಭವಾಗಿ ಬಾತ್ ರೂಮ್ ಟೈಲ್ಸ್ ಸ್ವಚ್ಛ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಅದರಲ್ಲೂ ಯಾವ ಲಿಕ್ವಿಡ್ ಬಳಸಬೇಕು? ಮನೆಯಲ್ಲೇ ಲಿಕ್ವಿಡ್ ತಯಾರಿಸುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಮನೆಯಲ್ಲೇ ಮಾಡಿ ಲಿಕ್ವಿಡ್..!
ಬಾತ್ ರೂಮ್‌ನ ಟೈಲ್ಸ್ ಹೊಳೆಯುವಂತೆ ಮಾಡಬೇಕಾದರೆ ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ನೀರು ಹಾಕಿಕೊಂಡು ಬಿಸಿಯಾಗಲು ಬಿಡಿ. ಬಿಸಿಯಾದ ಬಳಿಕ ಇದಕ್ಕೆ ಸ್ವಲ್ಪ ವಿನೆಗರ್ ಹಾಕಿ ಮಿಕ್ಸ್ ಮಾಡಿ ಕುದಿಬರಲು ಬಿಡಬೇಕು. 3 ನಿಮಿಷ ಕುದಿಬಂದ ಬಳಿಕ ಅದಕ್ಕೆ ಒಂದು ಪ್ಯಾಕ್ ಈನೋ ಅನ್ನು ಒಡೆದು ಹಾಕಿಕೊಳ್ಳಿ. ನಂತರ ಚೆನ್ನಾಗಿ ತಿರುಗಿಸಿಕೊಂಡು ಮಿಕ್ಸ್ ಮಾಡಿ. ಹಾಗೆ ತಣ್ಣಗಾಗಲು ಬಿಡಿ. ಈ ಲಿಕ್ವಿಡ್ ತಣ್ಣಗಾದಾಗ ಇದಕ್ಕೆ 50 ಎಂಎಲ್‌ನಷ್ಟು ಹಾರ್ಪಿಕ್ ಅಥವಾ ಯಾವುದಾದರು ಫೆನಾಯಿಲ್ ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಈಗ ಬಾತ್‌ರೂನ್ ಟೈಲ್ಸ್‌ನ ಮೇಲೆ ಈ ಲಿಕ್ವಿಡ್ ಅನ್ನು ಚೆನ್ನಾಗಿ ಹಾಕಬೇಕು, ಎಲ್ಲಾ ಕಡೆಯೂ ಲಿಕ್ವಿಡ್ ಹರಡುವಂತೆ ಹಾಕಿಕೊಂಡು 5 ನಿಮಿಷ ಹಾಗೆಯೇ ಬಿಡಿ. ಇಗ ನೀವು ನಿತ್ಯ ಬಾತ್ ರೂಮ್ ಕ್ಲೀನ್ ಮಾಡಲು ಬಳಸುವ ಬ್ರಷ್‌ನಿಂದ ಸ್ವಚ್ಛ ಮಾಡಲು ಆರಂಭಿಸಿ. ಹೀಗೆ ಮಾಡುವುದರಿಂದ ಸಮಯದ ಜೊತೆಗೆ ಟೈಲ್ಸ್ ಕೂಡ ಹೊಳೆಯುತ್ತದೆ.
ಇದು ಸುಲಭವಾಗಿ ನಿಮ್ಮ ಬಾತ್ ರೂಮ್ ಕ್ಲೀನ್ ಮಾಡುವ ವಿಧಾನವಾಗಿದೆ. ಟೈಲ್ಸ್ ಮಾತ್ರವಲ್ಲ ಬಾತ್‌ರೂಮ್‌ನ ಎಲ್ಲಾ ವಸ್ತುಗಳನ್ನು ಕೂಡ ಕ್ಲೀನ್ ಮಾಡಬಹುದು. ಇದು ಮನೆಯ ಲಿಕ್ವಿಡ್‌ಗಿಂತ ಬಹಳ ಸುಲಭವಾಗಿ ಕ್ಲೀನ್ ಮಾಡಬಹುದಾಗಿದೆ. ನೀವು ಕೂಡ ಮನೆಯಲ್ಲಿ ಈ ರೀತಿ ಲಿಕ್ವಿಡ್ ಮಾಡಿ ಅದರಿಂದ ಕ್ಲೀನ್ ಮಾಡಲು ಪ್ರಯತ್ನಿಸಿ. ಕೇವಲ ಎರಡು ವಸ್ತುಗಳಿದ್ದರೆ ಇದನ್ನು ಮನೆಯಲ್ಲಿ ನೀವು ರೆಡಿ ಮಾಡಬಹುದು. ದುಬಾರಿ ಲಿಕ್ವಿಡ್ ಮೊರೆ ಹೋಗುವ ಬದಲಾಗಿ ಹಾಗೆ ಪದೇ ಪದೇ ಟೈಲ್ಸ್ ಕ್ಲೀನ್ ಮಾಡುವ ಬದಲು ಈ ವಿಧಾನದಲ್ಲಿ ನೀವೇ ಲಿಕ್ವಿಡ್ ಮಾಡಿ ಕ್ಲೀನ್ ಮಾಡಿ.



Click it and Unblock the Notifications
