Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಕೊಳೆಯಾದ ಕನ್ನಡಿಯನ್ನು ಸುಲಭವಾಗಿ ಸ್ವಚ್ಛ ಮಾಡಿ..! ಇಲ್ಲಿದೆ ಟಿಪ್ಸ್!
ನಿಮ್ಮ ಮನೆಯಲ್ಲಿರುವ ಕನ್ನಡಿ ಯಾವಾಗಲು ಕೊಳೆಯಾಗಿರುತ್ತೆ. ಏಕೆಂದರೆ ನಾವು ಹತ್ತಾರು ಬಾರಿ ಅದರ ಮುಂದೆ ನಿಂತು ತಲೆ ಬಾಚಿಕೊಳ್ಳುವುದು, ಮೇಕಪ್ ಮಾಡುವುದು ಮಾಡಿರುತ್ತೇವೆ. ಆದರೆ ಈ ವೇಳೆ ಕನ್ನಡಿ ಮೇಲೆ ಕಲೆಗಳು, ಧೂಳು ಬೀಳುತ್ತದೆ. ಹೀಗಾಗಿ ಯಾವ ಕನ್ನಡಿಯೂ ಸ್ವಚ್ಛವಾಗಿರುವುದಿಲ್ಲ.
ನೀವು ಅದನ್ನು ಕ್ಲೀನ್ ಮಾಡಲೆಂದು ಹಲವು ರೀತಿಯಲ್ಲಿ ಪ್ರಯತ್ನ ಮಾಡಿರಬಹುದು. ಹಲವು ಬಾರಿ ಒದ್ದೆ ಬಟ್ಟೆಯಿಂದ ಒರೆಸಿರಬಹುದು, ಆದ್ರೆ ಕನ್ನಡಿ ಸ್ವಚ್ಛವಾದರು ಅದರಿಂದ ನಿಮ್ಮ ಮುಖ ಸರಿಯಾಗಿ ಕಾಣದಂತೆ ಮಸುಕಾಗಿರಬಹುದು.

ಹಾಗಾದ್ರೆ ಮನೆಯಲ್ಲಿರು ಕನ್ನಡಿಯನ್ನು ಸುಲಭವಾಗಿ ಸ್ವಚ್ಛ ಮಾಡುವುದು ಹೇಗೆ? ಈ ಕನ್ನಡಿ ಸೇರಿದಂತೆ ಹಲವು ವಿವಿಧ ವಸ್ತುಗಳ ಕ್ಲೀನ್ ಮಾಡಲು ಹಲವು ರೀತಿಯ ಕ್ಲೀನಿಂಗ್ ಕಿಟ್‌ಗಳು ಸಿಗುತ್ತವೆ. ಅದ್ರೆ ನಾವಿಂದು ಮನೆಯಲ್ಲೇ ಸಿಗುವ ವಸ್ತುಗಳ ಬಳಸಿ ಕೆಲವೇ ನಿಮಿಷಲ್ಲಿ ಕನ್ನಡಿ ಸ್ವಚ್ಛ ಮಾಡಲು ಇಲ್ಲದೆ ಕೆಲವು ಟಿಪ್ಸ್‌ಗಳು.
ವೈಟ್ ಪೇಪರ್
ಬಿಳಿ ಬಣ್ಣದ ಖಾಲಿ ಪೇಪರ್ ತೆಗೆದುಕೊಳ್ಳಿ. ಬಳಿಕ ಕನ್ನಡಿಗೆ ನೀರು ಹಾಕಿರಿ. ನಂತರ ಬಿಳಿ ಪೇಪರ್‌ನಿಂದ ಕನ್ನಡಿ ಒರೆಸಿದರೆ ಕನ್ನಡಿಯಲ್ಲಿರುವ ಕೊಳೆ ಪೇಪರ್‌ನಿಂದ ಹೋಗುತ್ತದೆ. ಕೊನೆಯಲ್ಲಿ ಟಿಷ್ಯೂ ಪೇಪರ್‌ನಿಂದ ಮತ್ತೊಮ್ಮೆ ಒರೆಸಿದರೆ ಕನ್ನಡಿ ಶುಚಿಯಾಗುತ್ತದೆ.
ವೆನಿಗರ್-ಸೋಡಾ
ಸಣ್ಣ ಬೌಲ್‌ನಲ್ಲಿ ಅಡುಗೆ ಸೋಡಾ ಹಾಗೂ ವೆನಿಗರ್ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಅದನ್ನು ಒಂದು ಶುದ್ಧವಾದ ಬಟ್ಟೆಯಲ್ಲಿ ತೆಗೆದುಕೊಂಡು ಕನ್ನಡಿಯನ್ನು ಒರೆಸಿ. ಹೀಗೆ ಕನ್ನಡಿ ಒರೆಸಿದ ಮೇಲೆ ಸ್ವಚ್ಛ ತೆಳುವಾದ ಒಣಗಿದ ಬಟ್ಟೆಯಿಂದ ಒರೆಸಿಬಿಡಿ.
ರಬ್ಬಿಂಗ್ ಆಲ್ಕೋಹಾಲ್
ರಬ್ಬಿಂಗ್ ಆಲ್ಕೋಹಾಲ್ ಕಠಿಣ ಕಲೆಗಳನ್ನು ಹೋಗಲಾಡಿಸುತ್ತದೆ. ಈ ಬಾಟಲಿ ಮಾರುಕಟ್ಟೆಯಲ್ಲಿ ಸಿಗುತ್ತದೆ, ಅದನ್ನು ಕನ್ನಡಿ ಮೇಲೆ ಚಿಮುಕಿಸಿ ಬಳಿಕ ಬಟ್ಟೆಯಿಂದ ಒರೆಸಿ ನೋಡಿ ನಿಮ್ಮ ಮನೆ ಕನ್ನಡಿ ಕ್ಲೀನ್ ಆಗಲಿದೆ. ಅಲ್ಲದೆ ಹಳೆಯ ಕಲೆಗಳು ಸಹ ಮರೆಯಾಗಲಿವೆ.
ಹಳೆಯ ಕಲೆಗಳಿಗೆ ಟೂತ್ ಪೇಸ್ಟ್
ಕನ್ನಡಿಯಲ್ಲಿ ಕಳೆಯ ಕಲೆಗಳು ಹೋಗಲಾಡಿಸಲು ನೀವು ಕಷ್ಟಪಡುತ್ತಿದ್ದರೆ ನೀವು ಹಲ್ಲುಜ್ಜಲು ಬಳಸುವ ಟೂತ್‌ಪೇಸ್ಟ್ ಬಳಸಿ. ಟೂತ್‌ಪೇಸ್ಟ್ ಅನ್ನು ಕನ್ನಡಿಗೆ ಹಚ್ಚಿ ಬಳಿಕ ಬಟ್ಟೆಯಿಂದ ಒರೆಸಿ, ಕೊನೆಯಲ್ಲಿ ನೀರು ಚಿಮುಕಿಸಿ ಬಟ್ಟೆಯಿಂದ ಮತ್ತೊಮ್ಮೆ ಒರೆಸಿ.
ಒಂದು ಕಪ್ ನೀರು, ಒಂದು ಕಪ್ ವಿನೆಗರ್ ಮತ್ತು ಒಂದು ಟೀಚಮಚ ಡಿಶ್ ಸೋಪ್ ಅನ್ನು ಸ್ಪ್ರೇ ಬಾಟಲಿಯಲ್ಲಿ ಸೇರಿಸಿ. ಮಿಶ್ರಣ ಮಾಡಲು ನಿಧಾನವಾಗಿ ಅಲ್ಲಾಡಿಸಿ. ದ್ರಾವಣವನ್ನು ನೇರವಾಗಿ ಕನ್ನಡಿಗೆ ಚಿಮುಕಿಸಿ ಮತ್ತು ಕೆಲವು ಸೆಕೆಂಡುಗಳ ಕಾಲ ಹಾಗೆಯೆ ಬಿಡಿ ಬಳಿಕ ಅದನ್ನು ಮೈಕ್ರೋಫೈಬರ್ ಬಟ್ಟೆ ಅಥವಾ ಪೇಪರ್‌ನಿಂದ ಕನ್ನಡಿಯ ಮೇಲಿರುವ ಸ್ಪ್ರೇ ಅನ್ನು ಒರೆಸಿ. ಕೆಲವು ದಿನಗಳವರೆಗೆ ನಿಮ್ಮ ಕನ್ನಡಿ ಶುದ್ಧವಾಗಲಿದೆ.
ಸೋಪಿನ ಪುಡಿ ನೀರು
ಸಾಮಾನ್ಯವಾಗಿ ಕನ್ನಡಿಯನ್ನು ಸೋಪಿನ ಪುಡಿ ಹಾಗೂ ನೀರು ಮಿಶ್ರಣ ಮಾಡಿರುವ ಸ್ಪ್ರೇ ಮೂಲಕ ಕ್ಲೀನ್ ಮಾಡಲಾಗುತ್ತದೆ. ಆದರೆ ಈ ಮಿಶ್ರಣವನ್ನು ಎರಡು ಮೂರು ಬಾರಿ ಚೆನ್ನಾಗಿ ಒರೆಸದಿದ್ದರೆ ಕನ್ನಡಿ ಮೇಲೆ ಮತ್ತೆ ಕಲೆಗಳು ಉಳಿದುಬಿಡುತ್ತವೆ. ಹೀಗಾಗಿ ಸೋಪಿನ ಪುಡಿ ಹಾಗೂ ನೀರಿನ ಮಿಶ್ರಣ ಹಾಕಿ ಮೂರಕ್ಕೂ ಹೆಚ್ಚು ಬಾರಿ ಕ್ಲೀನ್ ಮಾಡಬೇಕು. ಹೀಗೆ ಕನ್ನಡಿ ಸ್ವಚ್ಛ ಮಾಡುವುದು ಸಹ ಉತ್ತಮ ಕೆಲಸವೆ ಏಕೆಂದರೆ ನಿತ್ಯ ನಾವು ಕನ್ನಡಿಯಲ್ಲಿ ಮುಖ ನೋಡುತ್ತಿರುತ್ತೇವೆ. ಹೀಗಾಗಿ ಕನ್ನಡಿ ಸ್ವಚ್ಛ ಮಾಡುವುದು ಸಹ ಒಳ್ಳೆಯದು.



Click it and Unblock the Notifications
