Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ಮೊಟ್ಟೆ ಗುಣಮಟ್ಟ ನೋಡೋಕೆ ಒಂದು ಗ್ಲಾಸ್ ನೀರು ಇದ್ರೆ ಸಾಕು! ತಿಳಿಯೋದು ಹೇಗೆ?
ನೀವು ಮನೆಯಲ್ಲಿ ಊಟದೊಂದಿಗೆ ಸವಿಯಲು ಮಾಡುವ ಹಲವು ಖಾದ್ಯಗಳಲ್ಲಿ ಮೊಟ್ಟೆ ಬಳಸಿ ಹತ್ತಾರು ರೀತಿ ವಿಶೇಷ ರುಚಿಯ ಖಾದ್ಯಗಳ ಮಾಡಿರುತ್ತೀರಿ. ಹಾಗೆ ಮೊಟ್ಟೆಗಳನ್ನು ಮನೆಯಲ್ಲಿ ಬಹಳಷ್ಟು ದಿನ ಇಟ್ಟಿರಬಹುದು. ಇನ್ನು ಅಂಗಡಿಯಲ್ಲಿ ಇಟ್ಟ ಮೊಟ್ಟೆಗಳು ಎಷ್ಟು ದಿನ ಹಳೆಯದು, ಅದು ಹಾಳಾಗಿದೆಯೇ ಇಲ್ಲವೆ ಎಂಬುದನ್ನು ಪರೀಕ್ಷಿಸುವುದು ಕಷ್ಟವಾಗುತ್ತೆ.
ಮೊಟ್ಟೆಗಳಿಗೂ ಎಕ್ಸ್‌ಪೈರಿ ಡೇಟ್ ಇದೆ. ಆದ್ರೆ ನಾವು ಪತ್ತೆ ಮಾಡೋದು ಕಷ್ಟವಾಗುತ್ತೆ. ಹೀಗಾಗಿ ಹಲವು ಬಾರಿ ಅಂಗಡಿಯಿಂದ ತಂದು ಮನೆಯಲ್ಲಿ ಇಟ್ಟು ಮೊಟ್ಟೆಗಳು ಹಾಳಾಗಿರುವುದು ನೋಡಬಹುದು. ಅಲ್ಲದೆ ಮನೆಯಲ್ಲಿ ಇಟ್ಟಿರುವ ಮೊಟ್ಟೆಯನ್ನು ಮರೆತು ಹಲವು ದಿನಗಳ ಕಾಲ ಇಟ್ಟದರೆ ಅದು ಕೂಡ ಹಾಳಾಗುತ್ತದೆ. ಆದ್ರೆ ಮೊಟ್ಟೆಯನ್ನು ಒಡೆಯದೆ ಅದು ಹಾಳಾಗಿದೆಯೇ ಎಂಬುದನ್ನು ಪತ್ತೆ ಮಾಡೋದು ಸ್ವಲ್ಪ ಕಷ್ಟವಾಗುತ್ತೆ.

ಆದ್ರೆ ಮೊಟ್ಟೆ ಹಾಳಾಗಿದ್ಯಾ? ಅಥವಾ ಉತ್ತಮ ಗುಣಮಟ್ಟದಲ್ಲಿದೆಯೇ ಎಂಬುದನ್ನು ಪತ್ತೆ ಮಾಡುವುದು ಬಹಳ ಸುಲಭ. ಅದ್ರಲ್ಲೂ ಕೇವಲ 1 ಗ್ಲಾಸ್ ನೀರಿನಿಂದ ಮೊಟ್ಟೆಯ ಗುಣಮಟ್ಟವನ್ನು ನಾವು ಸುಲಭವಾಗಿ ಪತ್ತೆ ಮಾಡಬಹುದು. ಹಾಗಾದ್ರೆ ಮನೆಯಲ್ಲಿರುವ ಮೊಟ್ಟೆ ಹಾಳಾಗಿದ್ಯಾ? ಅದರ ಗುಣಮಟ್ಟ ಹೇಗಿದೆ ಎಂದು ಪತ್ತೆ ಮಾಡುವುದು ಹೇಗೆ ಎಂಬುದನ್ನು ಇಂದು ತಿಳಿದುಕೊಳ್ಳಿ.
ಮೊಟ್ಟೆಯನ್ನು ಒಡೆಯದೆ ಅದರ ಹುಣಮಟ್ಟ ಹೇಗಿದೆ ಎಂಬುದನ್ನು ತಿಳಿಯಲು ಒಂದು ಗ್ಲಾಸ್‌ನಲ್ಲಿ ನೀರು ತೆಗೆದುಕೊಳ್ಳಿ. ಅದರಲ್ಲಿ ಮೊಟ್ಟೆಯನ್ನು ಹಾಕಬೇಕು. ಇದರಿಂದ ಮೊಟ್ಟೆಯ ಗುಣಮಟ್ಟ ತಿಳಿಯಬಹುದು.
ನೀರಿನಲ್ಲಿ ಮೊಟ್ಟೆ ಮುಳುಗಿದರೆ
ನೀರಿನ ಗ್ಲಾಸ್‌ಗೆ ಮೊಟ್ಟೆ ಹಾಕಿದಾಗ ಆ ಮೊಟ್ಟೆ ಮುಳುಗಿದರೆ ಈ ಮೊಟ್ಟೆ ಸವಿಯಲು ಯೋಗ್ಯವಾಗಿದೆ ಎಂದರ್ಥ. ಇದು ಗುಣಮಟ್ಟದಲ್ಲಿ ಮೊದಲ ಆಧ್ಯತೆ ನೀಡಬೇಕಾದ ಮೊಟ್ಟೆಯಾಗಿರಲಿದೆ. ಸಾಮಾನ್ಯವಾಗಿ ತಣ್ಣೀರಿನಲ್ಲಿ ಮೊಟ್ಟೆ ಮುಳುಗಿದರೆ ಆ ಮೊಟ್ಟೆ ಇನ್ನು ಉತ್ತಮ ಗುಣಮಟ್ಟದಿಂದ ಕೂಡಿದೆ ಎಂದರ್ಥ. ಹೀಗಾಗಿ ನೀವು ಮನೆಯಲ್ಲಿರುವ ಮೊಟ್ಟೆ ಚೆನ್ನಾಗಿದ್ಯಾ ಎಂದು ಪರೀಕ್ಷಿಸಲು ಈ ರೀತಿ ನೀರಿನಲ್ಲಿ ಹಾಕಿ ಪರಿಶೀಲಿಸಿ.
ಮೊಟ್ಟೆ ಮಧ್ಯದಲ್ಲಿ ನಿಂತರೆ
ಮೊಟ್ಟೆಯನ್ನು ನೀರಿನ ಗ್ಲಾಸ್‌ಗೆ ಹಾಕಿದಾಗ ಆ ಮೊಟ್ಟೆ ಆ ಮೊಟ್ಟೆ ಮೇಲೆ ತೇಲದೆ ಅಥವಾ ಗ್ಲಾಸ್‌ನ ತಳಭಾಗಕ್ಕೂ ಹೋಗದೆ ಮಧ್ಯದಲ್ಲಿ ನಿಲ್ಲಬಹುದು. ಇಲ್ಲವೆ ತಳದಲ್ಲಿ ನೇರವಾಗಿ ನಿಲ್ಲಬಹುದು. ಇದರರ್ಥ ಆ ಮೊಟ್ಟೆಯನ್ನು ಬಳಸಬಹುದು. ಆದ್ರೆ ಅದನ್ನು ಇನ್ನಷ್ಟು ದಿನಗಳ ಕಾಲ ಇಡಲು ಆಗದು. ಅದಾಗಲೇ ಆ ಮೊಟ್ಟೆಯ ಗುಣಮಟ್ಟದಲ್ಲಿ ಸ್ವಲ್ಪ ರಾಜಿಯಾಗಿದೆ ಎಂದರ್ಥ.
ಮೊಟ್ಟೆ ನೀರಿನಲ್ಲಿ ತೇಲುತ್ತಿದ್ದರೆ
ಒಂದು ವೇಳೆ ಮೊಟ್ಟೆ ನೀರಿನಲ್ಲಿ ತೇಲುತ್ತಿದ್ದರೆ ಆ ಮೊಟ್ಟೆ ಬಹಳ ಹಳೆಯದಾಗಿದೆ ಹಾಗೆ ಹಾಳಾಗಿರುವ ಸಾಧ್ಯತೆ ಬಹಳ ಹೆಚ್ಚಾಗಿದೆ. ಇದನ್ನು ಒಡೆದು ನೋಡುವ ಸಾಹಸಕ್ಕೆ ಕೈ ಹಾಕದೆ ಇರುವುದು ಉತ್ತಮ. ಈ ಮೊಟ್ಟೆಯನ್ನು ಆದಷ್ಟು ಬೇಗ ಎಸೆಯುವುದು ಉತ್ತಮ. ಹಾಗೆ ಇದನ್ನು ಅಡುಗೆಗೆ ಬಳಸದಿರುವುದು ನಿಮ್ಮ ಆರೋಗ್ಯಕ್ಕೂ ಉತ್ತಮವಾಗಿರಲಿದೆ.
ಈ ರೀತಿ ವಿಧಾನದ ಮೂಲಕ ಮೊಟ್ಟೆಯ ಗುಣಮಟ್ಟವನ್ನು ನಾವು ಪರೀಕ್ಷಿಸಬಹುದು. ಅಲ್ಲದೆ ಈ ವಿಧಾನವನ್ನು ಗ್ಲಾಸ್ ಫ್ಲೋಟಿಂಗ್ ಎಗ್ ಎಂದು ಕರೆಯಲಾಗುತ್ತದೆ. ಇದಿಷ್ಟೇ ಅಲ್ಲ ನೀವು ಮೊಟ್ಟೆಯನ್ನು ಕೈಯಲ್ಲಿ ಹಿಡಿದು ಅಲುಗಾಡಿಸುವ ಮೂಲಕವು ಆ ಮೊಟ್ಟೆಯ ಗುಣ ಮಟ್ಟ ಪರೀಕ್ಷಿಸಬಹುದು. ಮೊಟ್ಟೆಯು ಅಲುಗಾಡಿಸಿದಾಗ ಶಬ್ದ ಬಂದರೆ ಅದು ಬಳಕೆಗೆ ಯೋಗ್ಯವಾಗಿಲ್ಲ ಎನ್ನಬಹುದು. ಹಾಗೆ ಗಟ್ಟಿಯಾಗಿದ್ದರೆ ಮೊಟ್ಟೆ ಉತ್ತಮವಾಗಿದೆ. ನೀವು ಸಹ ಮನೆಯಲ್ಲಿ ಮೊಟ್ಟೆ ಹಲವು ದಿನದಿಂದ ಇದ್ದರೆ ಅದನ್ನು ಹೇಗೆ ಪರೀಕ್ಷಿಸಬೇಕು ಎಂಬುದು ತಿಳಿದಿಲ್ಲದಿದ್ದರೆ ಈ ರೀತಿ ಸುಲಭದ ವಿಧಾನ ಟ್ರೈ ಮಾಡಿ.



Click it and Unblock the Notifications
