Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಗ್ಯಾಸ್ ಗೀಸರ್ ಅಪಾಯದಿಂದ ತಪ್ಪಿಸಿಕೊಳ್ಳೋದು ಹೇಗೆ? ಇಲ್ಲಿವೆ ಹಲವು ಟಿಪ್ಸ್!
ನಗರ ಪ್ರದೇಶದಿಂದ ಹಿಡಿದು ಹಳ್ಳಿಗಳಲ್ಲು ಈಗ ಬಿಸಿ ನೀರು ಪಡೆಯಲು ಗ್ಯಾಸ್ ಗೀಸರ್ ಬಳಕೆ ನೋಡಬಹುದು. ಗ್ಯಾಸ್ ಗೀಸರ್ ಬಳಸಿ ನಿಮಿಷದಲ್ಲಿ ಬಿಸಿ ನೀರು ಪಡೆಯುವುದು ಬಹು ವರ್ಷದಿಂದಲೂ ಸುಲಭದ ಹಾಗೆ ಕಡಿಮೆ ಖರ್ಚಿನ ವಿಧಾನಗಳಲ್ಲಿ ಒಂದು. ಆದ್ರೆ ಇತ್ತೀಚಿಗೆ ಈ ಗ್ಯಾಸ್ ಗೀಸರ್‌ನಿಂದ ಉಂಟಾಗುತ್ತಿರುವ ಅಪಾಯಗಳ ಪ್ರಕರಣಗಳು ಹೆಚ್ಚಾಗುತ್ತಿವೆ.
ಗ್ಯಾಸ್ ಗೀಸರ್ ಅಪಾಯಕಾರಿ ಅಲ್ಲದಿದ್ದರೂ ಹಲವು ಘಟನೆಗಳು ನಡೆಯುತ್ತಿದೆ. ವಿದ್ಯುತ್ ಚಾಲಿನ ಗೀಸರ್‌ಗಿಂತ ಗ್ಯಾಸ್ ಗೀಸರ್‌ಗಳು ಬಾಳಿಕೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚು ಬಳಕೆಯಲ್ಲಿವೆ. ಆದ್ರೆ ಗ್ಯಾಸ್ ಗೀಸರ್‌ನಿಂದಾಗಿ ಈಗ ಪ್ರಾಣ ಕಳೆದುಕೊಳ್ಳುತ್ತಿರುವಂತಹ ಪ್ರಕರಣಗಳು ಸಹ ವರದಿಯಾಗುತ್ತಿರುವುದು ಹೊಸ ಕಳವಳಕ್ಕೆ ಕಾರಣವಾಗಿದೆ.

ಇನ್ನು ಗ್ಯಾಸ್ ಗೀಸರ್ ಬಳಕೆಯಲ್ಲಿನ ದೋಷಗಳು ಈ ಘಟನೆಗಳಿಗೆ ಕಾರಣವಾಗುತ್ತಿದೆ. ಅದ್ರಲ್ಲೂ ಗ್ಯಾಸ್ ಗೀಸರ್ ಬಳಕೆಯಲ್ಲಿನ ಲೋಪ ದೋಷಗಳ ಕುರಿತಾಗಿ ಬಳಕೆದಾರರಲ್ಲಿ ಸೂಕ್ತ ಮಾಹಿತಿ ಕೊರತೆ ಬಹುಪಾಲು ಅಹಿತಕರ ಘಟನೆಗಳಿಗೆ ಕಾರಣವಾಗುತ್ತಿದೆ. ಹಾಗಾದ್ರೆ ನಾವಿಂದು ಗ್ಯಾಸ್ ಗೀಸರ್ ಬಳಕೆಗೂ ಮುನ್ನ ಯಾವ ರೀತಿ ಎಚ್ಚರಿಕೆ ವಹಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ. ಅದಕ್ಕೂ ಮೊದಲು ಗ್ಯಾಸ್ ಗೀಸರ್‌ನಿಂದ ಹಾನಿ ಆಗುವುದು ಹೇಗೆ ಎಂಬುದನ್ನು ತಿಳಿಯುವುದು ಮುಖ್ಯ.
ಗ್ಯಾಸ್ ಗೀಸರ್ ಬಳಸುವಾದ ಅದರ ಪ್ಲೇಮ್ ಅಥವಾ ಬೆಂಕಿಯ ಕಾರಣದಿಂದ ನೀರು ಬಿಸಿಯಾಗುತ್ತದೆ. ಈ ಬೇಳೆ ದಹನ ಕ್ರಿಯೆಯಲ್ಲಿ ಹೊರಬರುವ ಅನಿಲವು ನಿಮಗೆ ಹಾನಿ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ವೇಳೆ ಕಾರ್ಬನ್ ಮೊನೊಕ್ಸೈಡ್ ಅನಿಲ ಬಿಡುಗಡೆಯಾಗುತ್ತದೆ. ಸ್ನಾನದ ಕೋಣೆಯಲ್ಲಿ ಆಮ್ಲಜನಕ ಪ್ರಮಾಣಕ್ಕಿಂತಲೂ ಈ ಕಾರ್ಬನ್ ಮೊನೊಕ್ಸೈಡ್ ಪ್ರಮಾಣ ಹೆಚ್ಚಾದರೆ ನಿಮ್ಮ ಉಸಿರಾಟ ಸಮಸ್ಯೆಗೆ ಕಾರಣವಾಗುತ್ತದೆ. ನೀವು ನಿಮಿಷದಲ್ಲಿ ಕುಸಿದು ಬೀಳುವ ಸಂಭವ ಇರಲಿದೆ. ಹಾಗಾದ್ರೆ ಇದರಿಂದ ಪಾರಾಗುವುದು ಹೇಗೆ?
ಗ್ಯಾಸ್ ಗೀಸರ್ ಇಡುವ ಸ್ಥಳ
ನೀವು ಬಾತ್‌ರೂಮ್‌ನಲ್ಲಿ ಗ್ಯಾಸ್ ಗೀಸರ್ ಅಳವಡಿಸುವ ಜಾಗ ಹೇಗಿರಬೇಕು ಎಂಬುದು ಬಹಳ ಮುಖ್ಯವಾಗಲಿದೆ. ನೀವು ಮುಚ್ಚಿದ ಕೋಣೆಯಲ್ಲಿ ಗೀಸರ್ ಅಳವಡಿಸಬಾರದು, ಗಾಳಿ ಹೋಗಲು ವೆಂಟಿಲೇಷನ್ ಫ್ಯಾನ್, ಕಿಟಕಿ, ಹಾಗೆ ವಿಶಾಲ ಜಾಗವೂ ಇರಬೇಕು. ಜೊತೆಗೆ ಗೀಸರ್ ಮೇಲೆ ಕನಿಷ್ಟ 1 ಅಡಿಗಿಂತ ಹೆಚ್ಚು ಜಾಗ ಬಿಟ್ಟಿರಬೇಕು. ಆದಷ್ಟು ಕಿಟಕಿ ಪಕ್ಕದಲ್ಲಿ ಗೀಸರ್ ಅಳವಡಿಸಬೇಕು.
ಗ್ಯಾಸ್ ಕಲೆಕ್ಷನ್ ಹೊರಗಿಂದ ಬರಬೇಕು
ಗೀಸರ್‌ಗೆ ಗ್ಯಾಸ್ ಅನ್ನು ಗೋಡೆಯ ಹೊರಗಿಂದ ಕನೆಕ್ಷನ್ ನೀಡುವುದು ಬಹಳ ಉತ್ತಮ. ಒಂದು ವೇಳೆ ಜಾಗ ಇಲ್ಲದಿದ್ದರೂ ಗ್ಯಾಸ್ ಸಿಲಿಂಡರ್ ಇರಿಸಲು ಒಂದು ರಚನೆ ಪ್ರತ್ಯೇಕವಾಗಿ ಮಾಡುವುದು ಉತ್ತಮ.
ಉತ್ತಮ ಗುಣ ಮಟ್ಟದ ಗೀಸರ್
ಗೀಸರ್ ಖರೀದಿಸುವಾಗ ಯಾವುದೇ ಕಾರಣಕ್ಕೂ ಬೆಲೆಗೆ ರಾಜಿಯಾಗಬೇಡಿ. ಉತ್ತಮ ಗುಣಮಟ್ಟದ ಹಾಗೆ 5 ಸ್ಟಾರ್ ರೇಟಿಂಗ್‌ನ ಕಂಪನಿ ಗೀಸರ್‌ಗಳ ಖರೀದಿಸುವುದು ಬಹಳ ಉತ್ತಮ. ಇದು ನಿಮ್ಮ ಸುರಕ್ಷತೆಯ ಮೊದಲ ಹೆಜ್ಜೆಯಾಗಿರಲಿದೆ. ಬಹುತೇಕ ಕಂಪನಿಗಳು 5 ವರ್ಷ ವಾರೆಂಟಿ ಸಹ ನೀಡುತ್ತವೆ. ಆದ್ರೆ ದುಬಾರಿ ಬೆಲೆ ಎಂದು ರಾಜಿಯಾದರೆ ಅಪಾಯ ನೀವೆ ಕರೆದಂತಾಗಲಿದೆ.
ಗೀಸರ್ ನೀರು ಮೊದಲೇ ತುಂಬಿಡುವುದು
ನೀವು ಸ್ನಾನಕ್ಕೆ ಹೋದಾಗ ಗ್ಯಾಸ್ ಗೀಸರ್ ಆನ್ ಮಾಡಿ ನೀರು ತುಂಬುವವರೆಗೂ ಕಾಯಬೇಡಿ. ಅದರ ಬದಲು ಮೊದಲು ಗೀಸರ್‌ನಿಂದ ನೀರು ಬಿಟ್ಟು ಬಂದ 5 ನಿಮಿಷ ಬಿಟ್ಟು ನಂತರ ಒಳ ಹೋಗಿ ಆಫ್ ಮಾಡಿಕೊಂಡರೆ ಎಲ್ಲಾ ಅಪಾಯಗಳಿಂದಲೂ ಪಾರಾಗಬಹುದು.



Click it and Unblock the Notifications
