Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
ಫ್ರಿಡ್ಜ್ ಬ್ಲಾಸ್ಟ್ ಆಗಲು ಕಾರಣವೇನು? ತಡೆಗಟ್ಟುವುದು ಹೇಗೆ?
ಫ್ರಿಡ್ಜ್ ಬ್ಲಾಸ್ಟ್ ಆಗಿರುವ ಹಲವು ಘಟನೆಗಳು ಸಂಭವಿಸಿವೆ. ಫ್ರಿಡ್ಜ್ ಬ್ಲಾಸ್ಟ್ ಆದರೆ ತುಂಬಾನೇ ಅಪಾಯಕಾರಿ, ಇಡೀ ಮನೆ ಬೆಂಕಿಗೆ ಆಹುತಿಯಾಗಬಹುದು, ಆದ್ದರಿಂದ ಫ್ರಿಡ್ಜ್ ವಿಷಯದಲ್ಲಿ ನಿರ್ಲಕ್ಷ್ಯ ಮಾಡಲೇಬಾರದು.

ಫ್ರಿಡ್ಜ್ ಬ್ಲಾಸ್ಟ್‌ಗೆ ಕಾರಣವೇನು?
ಫ್ರಿಡ್ಜ್ ಬ್ಲಾಸ್ಟ್‌ಗೆ ಪ್ರಮುಖ ಕಾರಣ ಕಂಪ್ರೆಸರ್‌ನಲ್ಲಿ ಬೀಳುವ ಒತ್ತಡ ಎಂದು ಹೇಳಲಾಗುವುದು, ಕಂಪ್ರೆಸರ್ ಒಳಗಡೆ ಗ್ಯಾಸ್ ಸೇರಿಕೊಂಡು ಒತ್ತಡ ಉಂಟಾಗಿ ಬ್ಲಾಸ್ಟ್ ಸಂಭವಿಸಬಹುದು.ಸಾಮಾನ್ಯವಾಗಿ 8-10 ವರ್ಷ ಹಳೆಯದಾದ ಫ್ರಿಡ್ಜ್ ಬ್ಲಾಸ್ಟ್ ಆಗಿದೆ, ಹೊಸ ಫ್ರಿಡ್ಜ್‌ನಲ್ಲಿ ಈ ರೀತಿ ಕಂಡು ಬಂದಿಲ್ಲ.
ಅಲ್ಲದೆ ಫ್ರಿಡ್ಜ್ ಅನ್ನು ಗೋಡೆ ಅಂಟಿದಂತೆ ಇಡಬಾರದು ಎಂದು ಹೇಳಲಾಗುವುದು, ಇನ್ನು ಕಂಪ್ರೆಸರ್ ಕಾಯಿಲ್ ಆಗಾಗ ಶುಚಿಗೊಳಿಸುವುದರಿಂದ ಈ ರೀತಿಯ ಅಪಾಯ ತಪ್ಪಿಸಬಹುದು.
ಫ್ರಿಡ್ಜ್ ಯಾವ ರೀತಿಯ ಸೌಂಡ್ ಮಾಡಿದರೆ ಗಮನಿಸಬೇಕು?
ಕಂಪ್ರೆಸರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೆ ಅದರಿಂದ ಒಂದು ರೀತಿಯ ಸೌಂಡ್ ಬರಲಾರಂಭಿಸುತ್ತದೆ. ಅದೇ ಫ್ರಿಡ್ಜ್‌ನಿಂದ ಬೇರೆ ರೀತಿಯ ಸೌಂಡ್ ಬರುತ್ತಿದ್ದರೆ ಅದರ ಕಾಯಿಲ್ ಬಂದ್ ಆಗಿದೆ ಎಂದರ್ಥ. ಒಂದು ವೇಳೆ ಫ್ರಿಡ್ಜ್ ಯಾವುದೇ ಸೌಂಡ್ ಬೀರದಿದ್ದರೂಕೂಡ ಅಪಾಯಕಾರಿ, ಫ್ರಿಡ್ಜ್‌ನಲ್ಲಿ ಆಗುವ ಈ ವ್ಯತ್ಯಾಸ ಗಮನಿಸಬೇಕು.
ಫ್ರಿಡ್ಜ್ ಬ್ಲಾಸ್ಟ್ ತಪ್ಪಿಸಲು ವಿಧಾನವೆಂದರೆ ಕಂಡೆನ್ಸರ್ ಕಾಯಿಲ್ ಶುದ್ಧಗೊಳಿಸಲೇಬೇಕು. ಈ ರೀತಿ ಮಾಡುವುದರಿಂದ ಫ್ರಿಡ್ಜ್ ಬ್ಲಾಸ್ಟ್ ಆಗುವುದನ್ನು ತಡೆಗಟ್ಟಬಹುದು.
ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊಬ್ಬರು ಹಂಚಿಕೊಂಡ ಉಪಯುಕ್ತ ಮಾಹಿತಿ
ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊಬ್ಬರು ಫ್ರಿಡ್ಜ್ ಬ್ಲಾಸ್ಟ್‌ಗೆ ಇನ್ನಿತರ ಕಾರಣ ಏನಿರಬಹುದು ಎಂಬುವುದಾಗಿ ಹೇಳಿದ್ದಾರೆ, ಅವರು ಹೇಳಿರುವ ರೀತಿಗಳು ಸಮಂಜಸವಾಗಿರುವುದರಿಂದ ಅದರ ಮಾಹಿತಿ ಇಲ್ಲಿ ಹಂಚಿಕೊಂಡಿದ್ದೇವೆ.
ಫ್ರಿಡ್ಜ್ ಮೇಲೆ ಬೆಂಕಿಪೊಟ್ಟಣ ಇಡುವುದರಿಂದ ಬ್ಲಾಸ್ಟ್ ಆಗುವ ಸಾಧ್ಯತೆ ಇದೆ
ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಫ್ರಿಡ್ಜ್ ಬ್ಲಾಸ್ಟ್ ಆಯ್ತು ಎಂದು ಹೇಳುವುದನ್ನು ಕೇಳುತ್ತೇವೆ, ಆದರೆ ಶಾರ್ಟ್ ಸರ್ಕ್ಯೂಟ್‌ನಿಂದ ಆಗುವ ಸಾಧ್ಯತೆ ಕಡಿಮೆ, ಶಾರ್ಟ್ ಸರ್ಕ್ಯೂಟ್ ಆದರೆ ಪವರ್
ಕಟ್ ಆಗಿ ಈ ಅಪಾಯ ತಪ್ಪುತ್ತದೆ.
ಇನ್ನು ಸಾಮಾನ್ಯವಾಗಿ ಫ್ರಿಡ್ಜ್ ಮೇಲೆ ಬೆಂಕಿಪೊಟ್ಟಣ ಇಡುವ ಅಭ್ಯಾಸ ಕೆಲವರಲ್ಲಿದೆ ಇದು ಕೂಡ ಅಪಾಯಕಾರಿ
ಫ್ರಿಡ್ಜ್ ಮೇಲೆ ವಸ್ತುಗಳನ್ನು ಇಡುವ ಅಭ್ಯಾಸ ಕೆಲವರಲ್ಲಿ ಇರುತ್ತದೆ, ಆದರೆ ಫ್ರಿಡ್ಜ್ ಮೇಲೆ ಬೆಂಕಿಪೊಟ್ಟಣ ಇಟ್ಟರೆ ಅದು ಕಾಯಿಲೆ ಮೇಲೆ ಬಿದ್ದರೆ ಹೊತ್ತಿಕೊಂಡು ಉರಿಯಬಹುದು. ಹಾಗಾಗಿ ಬೆಂಕಿಪೊಟ್ಟಣ ಇಡಬೇಡಿ ಎಂದು ತಿಳಿಸಿದ್ದಾರೆ.
ಫ್ರಿಡ್ಜ್ ಬೆಡ್‌ರೂಂನಲ್ಲಿ ಇಡುವುದು ಅಥವಾ ಫ್ರಿಡ್ಜ್ ಬಳಿ ಮಲಗುವುದು ಮಾಡಬೇಡಿ
ಇದು ತುಂಬಾನೇ ಅಪಾಯಕಾರಿ, ಫ್ರಿಡ್ಜ್ ಬ್ಲಾಸ್ಟ್ ಆದರೆ ಹೆಚ್ಚು ಅಪಾಯ ಉಂಟಾಗಬಹುದು. ಮನೆ ಚಿಕ್ಕದಾಗಿದ್ದರೆ ಫ್ರಿಡ್ಜ್ ಸಮೀಪ ಮಲಗುತ್ತಾರೆ. ಆದರೆ ಇದು ಸುರಕ್ಷತೆ ದೃಷ್ಟಿಯಿಂದ ಒಳ್ಳೆಯದಲ್ಲ.



Click it and Unblock the Notifications
