Latest Updates
-
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು!
ಪ್ಯಾಕ್ ಮಾಡಲಾದ ಹಾಲು ಎಷ್ಟು ಸಮಯ ಕುದಿಸಬೇಕು? ಈ ತಪ್ಪು ಇಂದೆ ನಿಲ್ಲಿಸಿ!
ನೀವು ನಿತ್ಯ ಮನೆಯಲ್ಲಿ ಪಾಕೆಟ್ ಹಾಲನ್ನು ಬಳಸಿರುತ್ತೀರಿ. ಟೀ, ಕಾಫಿಯ ಕಾರಣಕ್ಕೆ ಮಾತ್ರವಲ್ಲದೆ ಹಲವು ಉದ್ದೇಶಗಳಿಗಾಗಿ ಹಾಲನ್ನು ಬಳಸುವುದು ನೋಡಹುದು. ಆದ್ರೆ ಇತ್ತೀಚಿನ ದಿನಗಳಲ್ಲಿ ಹಾಲು ಕೂಡ ಅನಾರೋಗ್ಯಕಾರಿ ಅಂಶಗಳಿಂದ ತುಂಬಿರುವುದು ಸುದ್ದಿಯಾಗುತ್ತಿದೆ. ಕಲಬೆರೆಕೆ ಹಾಲು, ನಕಲಿ ಪ್ರಾಂಡ್ ಸೃಷ್ಟಿಸಿ ಹಾಲು ಮಾರುವುದು, ರಾಸಾಯನಿಕ ಬಳಸಿ ತಯಾರಿಸಿದ ಹಾಲು ಹೀಗೆ ಹತ್ತಾರು ರೀತಿಯ ಸುದ್ದಿಗಳು ನಿಮಗೂ ತಲುಪಿರುತ್ತದೆ. ಹೀಗಾಗಿ ಈಗ ಹಾಲು ಕುಡಿಯುವುದು ಕೂಡ ಅಪಾಯಕ್ಕೆ ತಳ್ಳುವ ಸಾಧ್ಯತೆ ತರಲಿದೆ.
ಹಾಗೆ ಪ್ಯಾಕೆಟ್ ಹಾಲುಗಳನ್ನು ಕೂಡ ನಾವು ಯಾವ ರೀತಿ ಕುದಿಸಿ ಕುಡಿಯವೇಕು? ಎಷ್ಟು ಬಾರಿ ಕುದಿಸಬೇಕು ಅದನ್ನು ಹೇಗೆ ಶೇಖರಿಸಿ ಇಡಬೇಕು ಎಂಬ ಕುರಿತಾಗಿ ಮಾಹಿತಿಗಳಿಲ್ಲದೆ ಸಮಸ್ಯೆಗಳಿಗೆ ಒಳಗಾಗಬಹುದು. ನಾವು ಮನೆಯಲ್ಲಿ ಬೆಳಗ್ಗೆ ಹಾಗೂ ಸಂಜೆ ಎರಡು ಬಾರಿ ಹಾಲು ಕುದಿಸುವುದು ನೋಡಬಹುದು. ಆದ್ರೆ ಇದರ ಹಿಂದೆ ಇರುವ ವೈಜ್ಞಾನಿಕ ವಿಚಾರಗಳೇನು? ಹಾಲನ್ನು ಎಷ್ಟು ಬಾರಿ ಕುದಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.

ಸಾಮಾನ್ಯವಾಗಿ ಡೈರಿ ಉತ್ಪನ್ನಗಳಲ್ಲಿ ಬ್ಯಾಕ್ಟಿರಿಯಾ ರಚನೆಯಾಗುವ ಸಾಧ್ಯತೆ ಬಹಳ ವೇಗ ಪಡೆದಿರುತ್ತದೆ. ಬೇರೆ ವಸ್ತುಗಳಂತೆ ಇವುಗಳನ್ನು ಹೊರಗಿನ ಪರಿಸರಕ್ಕೆ ತರೆದಿಟ್ಟಾಗ ಬಹಳ ಸಮಯ ಶುದ್ಧವಾಗಿ ಉಳಿಯುವುದಿಲ್ಲ. ಹಾಗೆ ಕುದಿಸಿದ ಹಾಲು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಕೂಡ ನಿಮ್ಮಲ್ಲಿ ಎದ್ದಿರಬಹುದು.
ಎಷ್ಟು ಸಮಯ ಹಾಲು ಕುದಿಸಬೇಕು?
ಭಾರತದಲ್ಲಿ ಪ್ಯಾಕ್ ಮಾಡಲಾದ ಹಾಲು ಸಾಮಾನ್ಯವಾಗಿ ಪಾಶ್ಚರೀಕರಣಕ್ಕೆ ಒಳಗಾಗಿರುತ್ತದೆ. ಈ ಹಾಲನ್ನು 15 ಸೆಕೆಂಡ್‌ಗಳ ಕಾಲ 75 ಡಿಗ್ರಿಯಲ್ಲಿ ಬಿಸಿ ಮಾಡಲಾಗಿರುತ್ತದೆ. ಹಾಗೆ ಇದು ತ್ವರಿತವಾಗಿ ತಂಪಾಗುತ್ತದೆ. ಈ ಪ್ರಕ್ರಿಯೆಯೆಲ್ಲಿ ಇ.ಕೋಲಿ ಮತ್ತು ಸಾಲ್ಮೊನೆಲ್ಲಾದಂತಹ ಬ್ಯಾಕ್ಟೀರಿಯಾ ನಾಶವಾಗುತ್ತದೆ. ಆದರೂ ಈ ಹಾಲಿನಲ್ಲಿ ಬ್ಯಾಕ್ಟೀರಿಯಾ ಇರುವುದಿಲ್ಲ ಎಂದು ಹೇಳಲಾಗುವುದಿಲ್ಲ.
ಆದ್ರೆ ಹಾಲನ್ನು 100 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕುದಿಸಲು ಆರಂಭಿಸಿದಾಗ ಉತ್ತಮ ಬ್ಯಾಕ್ಟೀರಿಯಾಗಳು ಸೇರಿ ವಿಟಮಿನ್ ಬಿ 12 ಮತ್ತು ಫೋಲೇಟ್‌ನಂತಹ ಶಾಖ-ಸೂಕ್ಷ್ಮ ಪೋಷಕಾಂಶಗಳು ಹಾಳಾಗಬಹುದು. ಇದು ಶುದ್ಧ ಹಾಲು ಎಂದು ಕರೆಸಿಕೊಳ್ಳುವುದಿಲ್ಲ. ಹಾಲಿನ ಪ್ಯಾಕೆಟ್‌ಗಳು ತಂಪಾದ ವಾತಾವರಣದಲ್ಲಿ ಇರುವವರೆಗೂ ಯಾವುದೇ ಬ್ಯಾಕ್ಟೀರಿಯಾ ವೃದ್ಧಿಯಾಗುವುದಿಲ್ಲ. ಆದ್ರೆ ನೀವು ಅಂಗಡಿಯಿಂದ ಖರೀದಿಸಿ ತರುವ ಸಮಯದಲ್ಲಿ ಅಥವಾ ಮನೆಯಲ್ಲಿ ಶೇಖರಿಸಿ ಇಡುವ ಸಮಯದಲ್ಲಿ ಬ್ಯಾಕ್ಟೀರಿಯಾ ವೃದ್ಧಿಯಾಗಬಹುದು.
ಹೀಗಾಗಿ ಹಾಲು ಮನೆಗೆ ತಂದ ಬಳಿಕ ಕಡಿಮೆ ತಾಪಮಾನದಲ್ಲಿ ಶೇಖರಿಸಿ ಇಡಬೇಕು, ಇಲ್ಲವೆ ಕುದಿಸಿದ ಬಳಿಕ ಮತ್ತೆ 4 ಡಿಗ್ರಿಗಿಂತ ಕಡಿಮೆ ತಾಪಮಾನದಲ್ಲಿ ಶೇಖರಿಸಬೇಕು. ನೀವು ಪ್ಯಾಕ್ ಮಾಡಿದ ಹಾಲನ್ನು ಕುಡಿಯುವ ಮೊದಲು ಸ್ವಲ್ಪ ಬಿಸಿ ಮಾಡಬಹುದು. ಒಂದು ಲೋಟ ಹಾಲು ಮಧ್ಯಮ ಉರಿಯಲ್ಲಿ 4-5 ನಿಮಿಷಗಳಲ್ಲಿ ಸಾಕಷ್ಟು ಬೆಚ್ಚಗಾಗುತ್ತದೆ ಮತ್ತು ಅಗತ್ಯ ಪೋಷಕಾಂಶಗಳನ್ನು ಹಾಗೆಯೇ ಉಳಿಸಿಕೊಂಡು ಕುಡಿಯಲು ಯೋಗ್ಯವಾಗುತ್ತದೆ.
ಪಾಶ್ಚರೀಕರಣ ಪ್ರಕ್ರಿಯೆಯು ಶಾಖ ಸಂಸ್ಕರಣಾ ಪ್ರಕ್ರಿಯೆಯಾಗಿದೆ. ಅಲ್ಲಿ ಹಾಲನ್ನು ಒಂದು ನಿರ್ದಿಷ್ಟ ತಾಪಮಾನದಲ್ಲಿ ಬಿಸಿಮಾಡಲಾಗುತ್ತದೆ. ಈ ಸಮಯದಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾ ನಾಶವಾಗುತ್ತದೆ. ಹಾಗೆ ಈ ವಿಧಾನದಲ್ಲಿ ಹಾಲಿನ ಪೋಷಕಾಂಶಗಳು ಹಾನಿಯಾಗದೆ ಉಳಿದುಬಿಡುತ್ತದೆ. ಹೀಗಾಗಿಪಾಶ್ಚರೀಕರಣವು ಹಾಲಿನ ಶೆಲ್ಫ್ ಜೀವಿತಾವಧಿಯನ್ನು ಮತ್ತಷ್ಟು ಹೆಚ್ಚಿಸಲಿದೆ. ಹೀಗಾಗಿ ಪಾಶ್ಚರೀಕರಿಸಿದ ಹಾಲನ್ನು ನೀವು ಮತ್ತೆ ಹೆಚ್ಚು ಸಮಯ ಕುದಿಸುವ ಅಗತ್ಯವಿರುವುದಿಲ್ಲ. ಕೇವಲ ಬಿಸಿ ಮಾಡಿಕೊಂಡರೆ ಸಾಕಾಗುತ್ತದೆ.
ಆದ್ರೆ ಬಹುತೇಕರು ಹಾಲನ್ನು ಹಲವು ಬಾರಿ ಕುದಿಸುತ್ತಾರೆ. ಹಾಲನ್ನು ಕುದಿಸುವುದರಿಂದ ಹಾಲು ಹಾಳಾಗದೆ ಬಹು ಸಮಯ ಉಳಿಯಲಿದೆ. ಆದ್ರೆ ಅದರಲ್ಲಿನ ಅಗತ್ಯ ಪೋಷಕಾಂಶಗಳು ಹಾನಿಯಾಗಿ ನಾಶವಾಗುತ್ತದೆ. ಇದರಿಂದ ಹಾಲು ತನ್ನ ಶಕ್ತಿ ಗುಣ ಕಳೆದುಕೊಳ್ಳುತ್ತದೆ.



Click it and Unblock the Notifications
