Latest Updates
-
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ? -
ಸೆಪ್ಟೆಂಬರ್ ಇಕ್ವಿನಾಕ್ಸ್: ನಿಮ್ಮ ಕ್ಯಾಮೆರಾದಲ್ಲಿ ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ದೃಶ್ಯ ಸೆರೆಹಿಡಿಯಿರಿ! -
ವಿಶ್ವ ಕಾರ್-ಫ್ರೀ ಡೇ: ಟ್ರಾಫಿಕ್ ಬಿಟ್ಟು 20 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ?
ಮನೆಯಲ್ಲಿ ಎಷ್ಟು ದಿನ ನೀರು ಸಂಗ್ರಹಿಸಿಡಬಹುದು..? ನೀರು ಎಷ್ಟು ದಿನದಲ್ಲಿ ಹಾಳಾಗುತ್ತದೆ?
ಈಗ ನೀರು ಸಹ ಫ್ರೀಯಾಗಿ ಸಿಗುವುದಿಲ್ಲ ಹಣ ನೀಡಿಯೇ ಖರೀದಿಸಬೇಕು. ಅದರಲ್ಲೂ ಕುಡಿಯುವ ನೀರು ಈಗ ಬಂಗಾರದಂತೆ ನೋಡಬೇಕಾದ ಪರಿಸ್ಥಿತಿ ಇದೆ. ಕೇವಲ ನಗರ ಪ್ರದೇಶ ಮಾತ್ರವಲ್ಲ ಹಳ್ಳಿಯಲ್ಲೂ ಕುಡಿಯುವ ನೀರು ಈಗ ಅಮೃತವಾಗುತ್ತಿದೆ. ಹೀಗಾಗಿ ನಾವು ಕುಡಿಯಲು ಫಿಲ್ಟರ್ ನೀರು, ಕ್ಯಾನ್, ಬಾಟಲಿ ನೀರು ಬಳಸುತ್ತೇವೆ.
ಆದ್ರೆ ಹಳ್ಳಿಗಳಲ್ಲಿ ಬಾವಿ ನೀಡು ಶುಚಿಯಾಗಿರುವುದರಿಂದ ನೇರವಾಗಿ ಅವರು ಕುಡಿಯುತ್ತಾರೆ. ಆದ್ರೆ ನಗರದಲ್ಲಿ ಫಿಲ್ಟರ್ ಇಲ್ಲದೆ ನೀರು ಕುಡಿಯಲು ಸಾಧ್ಯವಿಲ್ಲದ ಸ್ಥಿತಿ ಇದೆ. ಈಗ ಕುಡಿಯುವ ನೀರು ಆಯಾ ಪಟ್ಟಣದಲ್ಲಿ ಪಟ್ಟಣ ಆಡಳಿತ, ಪುರಸಭೆ, ನಗರಸಭೆ, ಬಿಬಿಎಂಪಿ ಹೀಗೆ ಸ್ಥಳೀಯ ಆಡಳಿತದ ಅಡಿಯಲ್ಲಿ ಬರುತ್ತವೆ.

ಅವರು ನಿತ್ಯ ಇಲ್ಲವೆ ವಾರಕ್ಕೆ ಮೂರು ಬಾರಿ ನೀರು ಬಿಡುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಹೀಗಾಗಿ ಬಹುತೇಕರ ಮನೆಯಲ್ಲಿ ನೀರನ್ನು ಸಂಗ್ರಹಿಸಿಡಲಾಗುತ್ತದೆ. ದೊಡ್ಡ ಡ್ರಮ್‌ಗಳಲ್ಲಿ, ಪಾತ್ರೆಗಳಲ್ಲಿ ಹೀಗೆ ಸಿಕ್ಕ ಸಿಕ್ಕ ವಸ್ತುಗಳಲ್ಲಿ ನೀರನ್ನು ಸಂಗ್ರಹಿಸಿಡುತ್ತಾರೆ. ಇದೇ ನೀರನ್ನು ಅಡುಗೆ ಮಾಡಲು ಹಾಗೂ ಕುಡಿಯಲು ನಾವು ಬಳಸುತ್ತಿರುತ್ತೇವೆ. ಮನೆಯಲ್ಲಿ ಗೃಹಿಣಿಯರಿದ್ದಾಗ ಹೆಚ್ಚಿಗೆ ನೀರನ್ನು ಸಂಗ್ರಹಿಸಿಡುತ್ತಾರೆ. ಮನೆಗೆ ಅಚಾನಕ್ ಆಗಿ ಯಾರಾದರು ಬಂದರೆ ನೀರಿನ ಅವಶ್ಯಕತೆ ಹೆಚ್ಚಾಗುತ್ತದೆ. ಹೀಗಾಗಿ ಡ್ರಮ್‌ಗಳಿಗೆ ಪಾತ್ರೆಗಳಲ್ಲಿ ಸಂಗ್ರಹಿಸಿಡುತ್ತಾರೆ.
ಆದ್ರೆ ನಿಮಗೆ ಗೊತ್ತಾ ಈ ರೀತಿ ನೀರನ್ನು ಷ್ಟು ದಿನಗಳವರೆಗೆ ಇಟ್ಟು ಕುಡಿಯಬಹುದು? ಎಷ್ಟು ದಿನದ ಬಳಿಕ ಈ ನೀರು ಬಳಸಲು ಯೋಗ್ಯವಿರುವುದಿಲ್ಲ ಎಂದು ನಿಮಗೆ ತಿಳಿದಿದ್ಯಾ? ಹಾಗಾದ್ರೆ ನಾವಿಂದು ಮನೆಯಲ್ಲಿ ಸಂಗ್ರಹಿಸಿಟ್ಟ ನೀರು ಎಷ್ಟು ದಿನಗಳ ಕಾಲ ಬಳಸಬಹುದು ಎಂಬ ಮಾಹಿತಿ ತಿಳಿದುಕೊಳ್ಳೋಣ.
ನೀರನ್ನು ಎಷ್ಟು ದಿನ ಮನೆಯಲ್ಲಿ ಇಡಬಹುದು?
ಮನೆಯಲ್ಲಿ ಸಂಗ್ರಹಿಸಿಟ್ಟ ನೀರು ಕೇವಲ 12 ಗಂಟೆಗಳ ನಂತರ ಇಂಗಾಲದ ಡೈ ಆಕ್ಸೈಡ್ ನೀರಿನೊಂದಿಗೆ ಬೆರೆಯಲು ಆರಂಭಿಸಲಿದೆ. ಇದರಿಂದ ನೀರಿನ pH ಲೆವೆಲ್ ಕಡಿಮೆಯಾಗಲು ಆರಂಭಿಸುತ್ತದೆ. ನೀರಿನಲ್ಲಿ 72 ಗಂಟೆಗಳ ಬಳಿಕ ಬ್ಯಾಕ್ಟೀರಿಯಾ ಬೆಳೆಯಬಹುದು. ಅಥವಾ ಪಾಚಿ ಬೆಳೆಯಲು ಆರಂಭಗಾಗುತ್ತದೆ. ನೀವು ನೀರು ತುಂಬಿದ ಪಾತ್ರೆ, ಡ್ರಮ್, ಬಾಟಲಿಗೆ ಮುಚ್ಚಳ ಹಾಕಿದ್ದರೂ ಕೂಡ ನೀರು ಕುಡಿಯಲು ಯೋಗ್ಯವಲ್ಲದ ಸ್ಥಿತಿಗೆ ತಿರುಗಲು ಆರಂಭಿಸುತ್ತದೆ.
ಇನ್ನು ನೀವು ಮನೆಯಲ್ಲಿ ಸಂಗ್ರಹಿಸಿಟ್ಟ ನೀರಿನ ಮೇಲೆ ನೇರವಾಗಿ ಸೂರ್ಯನ ಬೆಳಕು ಬೀಳದಂತೆ ನೋಡಿಕೊಳ್ಳಬೇಕು. ಇದರಿಂದ ನೀರಿನಲ್ಲಿ ಬ್ಯಾಕ್ಟೀರಿಯಾ ಹರಡುವುದು ವೇಗಗೊಳ್ಳುತ್ತದೆ. ಇನ್ನು ನೀರಿನಲ್ಲಿ ಹಸಿರು ಅಂಶ ಕಂಡುಬಂದತೆ ಅಥವಾ ತಳದಲ್ಲಿ ನೀರಿನ ಬಣ್ಣ ಬದಲಾಗುತ್ತಿದ್ದರೆ ಅಂತಹ ನೀರು ಕುಡಿಯುವುದನ್ನು ತಪ್ಪಿಸುವುದು ಉತ್ತಮ.
ಇನ್ನು ನೀವು ನೀರನ್ನು ಯಾವುದರಲ್ಲಿ ಸಂಗ್ರಹಿಸಿಟ್ಟಿದ್ದೀರಿ ಎಂಬುದು ಸಹ ಮುಖ್ಯವಾಗುತ್ತದೆ. ಫಿಲ್ಟರ್ ನೀರು ಬಹಳ ದಿನಗಳ ಕಾಲ ಇಟ್ಟು ಸವಿಯಬಹುದು. ಇನ್ನು ಕ್ಯಾನ್‌ನಲ್ಲಿ ಸಿಗುವ ನೀರನ್ನು ಸಹ ಬಹಳ ದಿನಗಳ ಸಂಗ್ರಹಿಸಿಡಬಹುದು. ಆದ್ರೆ ಪ್ಲಾಸ್ಟಿಕ್ ಬಾಟಲಿ, ಡ್ರಮ್‌ನಲ್ಲಿ ಹಾಕಿರುವ ನೀರು ಬಹುಬೇಗ ಹಾಳಾಗುವ ಸಾಧ್ಯತೆ ಇರುತ್ತದೆ.
ಇನ್ನು ಮಳೆ ನೀರಿನ ಕೊಯ್ಲು ಮೂಲಕ ಸಂಗ್ರಹಿಸಲಾದ ನೀರನ್ನು ಸುಮಾರು 6 ತಿಂಗಳ ವರೆಗೂ ಬಳಸಬಹುದು. ಮಳೆ ನೀರಿನ ಕೊಯ್ಲು ಮಾಡಲು ಹಾಗೂ ನೀರು ಸಂಗ್ರಹಿಸಲು ಮಾಡಲಾದ ಟ್ಯಾಂಕ್ ಸ್ವಚ್ಛ ವಾಗಿರುವುದರ ಆಧಾರದ ಮೇಲೆ ಈ ದಿನಗಳು ನಿರ್ಧಾರವಾಗುತ್ತದೆ.



Click it and Unblock the Notifications
