Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಪ್ಯಾಕೆಟ್ ಹಾಲಿನಲ್ಲೂ ಕೆಜಿಗೂ ಹೆಚ್ಚು ಬೆಣ್ಣೆ ತೆಗೆಯಿರಿ..! ಈ ಟ್ರಿಕ್ಸ್ ಯಾರು ಹೇಳೋದಿಲ್ಲ..!!
ನಾವು ಬೆಳಗ್ಗೆ ತಿಂಡಿಗೆ ಹಲವು ಬಗೆಯ ಖಾದ್ಯ ಮಾಡಲು ಬೆಣ್ಣೆಯನ್ನು ಬಳಸುತ್ತೇವೆ. ಬೆಣ್ಣೆಯನ್ನ ಸಾಮಾನ್ಯವಾಗಿ ನಾವು ಅಂಗಡಿಯಿಂದ ತಂದು ಬಳಸುತ್ತೇವೆ. ಆದ್ರೆ ಮನೆಯಲ್ಲೇ ಹಾಲು ಕೊಡುವ ಹಸುಗಳಿದ್ದರೆ ಮನೆಯಲ್ಲೆ ಬೆಣ್ಣೆ ಮಾಡಿಕೊಳ್ಳಬಹುದು. ಈಗ ಬೆಣ್ಣೆಯೂ ಕೂಡ ದುಬಾರಿಯಾಗಿದೆ. ಒಂದು ಚಿಕ್ಕ ಬಾಕ್ಸ್‌ನಲ್ಲಿರುವ ಬೆಣ್ಣೆಗೆ ನೂರಾರು ರೂಪಾಯಿ ನೀಡಬೇಕಿದೆ. ಚಪಾತಿ, ಪರೋಟ, ಯಾವುದಾದರು ಸಿಹಿ ಮಾಡುವಾಗ ಬೆಣ್ಣೆಯನ್ನು ಬಳಸುವುದು ಸಾಮಾನ್ಯ.
ಆದ್ರೆ ನಾವು ಮನೆಯಲ್ಲಿ ಬೆಣ್ಣೆ ರೆಡಿ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದಿದ್ದೇವೆ. ಪ್ಯಾಕೆಟ್ ಹಾಲಿನಿಂದ ಕೂಡ ನಾವು ಬೆಣ್ಣೆ ತೆಗೆಯಬಹುದು ಎಂಬುದು ನಿಮಗೆ ಗೊತ್ತಾ? ಹೌದು ಅಂಗಡಿಯಿಂದ ನಾವು ನಿತ್ಯ ಖರೀದಿಸಿ ತರುವ ಪ್ಯಾಕೆಟ್ ಹಾಲಿನಿಂದಲೂ ಕೂಡ ಬೆಣ್ಣೆ ತೆಗೆಯಬಹುದು. ನಿಮಗಿದು ಅಚ್ಚರಿ ಎನಿಸಬಹುದು. ಏಕೆಂದರೆ ಈ ಹಾಲನ್ನು ಹಲವು ರೀತಿಯಲ್ಲಿ ಪಾಶ್ಚರೀಕರಿಸಲಾಗಿರುತ್ತದೆ.

ಹೀಗೆ ಪಾಶ್ಚರೀಕರಣಕ್ಕೆ ಒಳಗಾಗಿ ಹಾಲಿನಿಂದಲೂ ಬೆಣ್ಣೆ ಬರುವಂತೆ ಮಾಡಬಹುದು. ಹಾಗಾದ್ರೆ ಪ್ಯಾಕೆಟ್ ಹಾಲಿನಿಂದ ಬೆಣ್ಣೆ ತೆಗೆಯುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಮೊದಲು ನಾವು ಬಳಸುವ ಹಾಲು ಯಾವುದು ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ಕೆನೆ ಹೆಚ್ಚು ಬರುವಂತಹ ಹಾಲಿನಿಂದ ಬೆಣ್ಣೆ ಮಾಡಬಹುದು, ಹೀಗಾಗಿ ನಂದಿನಿ ಅವರ 1 ಲೀಟರ್ ಶುಭಂ ಹಾಲು ಇದ್ದರೆ ತುಂಬಾನೆ ಒಳ್ಳೆಯದು.
ಸರಳವಾಗಿ ಹೇಳುವುದಾದರೆ ಈ ನೀಲಿ ಬಣ್ಣದ ಪ್ಯಾಕೆಟ್‌ಗಿಂತ, ಕೆಂಪು ಬಣ್ಣದ ಪ್ಯಾಕೆಟ್ ಬಳಸುವುದು ಉತ್ತಮ. ಈ ಹಾಲು ಸ್ವಲ್ಪ ದಪ್ಪವಾಗಿರುತ್ತದೆ. ಮೊದಲು ಒಂದು ಲೀಟರ್ ಹಾಲಿನ ಪ್ಯಾಕೆಟ್ ಅನ್ನು ಪಾತ್ರೆಗೆ ಹಾಕಿಕೊಂಡು ನೀರು ಹಾಕದೆಯೇ ಕುದಿಸಿಕೊಳ್ಳಬೇಕು. ಕುದಿಸುವಾಗ ಉರಿ ಹೆಚ್ಚು ಇಡಬೇಕು. ಹಾಗೆ ಹಾಲು ಉಕ್ಕಿ ಹೋಗವಂತೆ ಮಾಡಿಕೊಳ್ಳಬೇಡಿ.
ಈ ಹಾಲು ಚೆನ್ನಾಗಿ ಕುದಿಯಬೇಕು. ಕೊನೆಯ 5 ನಿಮಿಷ ಸಣ್ಣ ಉರಿಯಲ್ಲಿ ಕುದಿಯಬೇಕು. ನಂತರ ಒಲೆ ಆಫ್ ಮಾಡಿಕೊಂಡು ಹಾಲು ತಣ್ಣಗಾಗಲು ಇಟ್ಟುಕೊಳ್ಳಬೇಕು. ನಂತರ ತಣ್ಣಗಾಗಲು ಬಿಟ್ಟು ಒಂದು ಮುಚ್ಚಳವನ್ನು ಮುಕ್ಕಾಲು ಭಾಗ ಮುಚ್ಚಿ ಫ್ರಿಡ್ಜ್‌ನಲ್ಲಿ ಇಡಬೇಕು. ಹೀಗೆ ಇಟ್ಟ ಬಳಿಕ ಅದರ ಹಾಲನ್ನು ನೀವು ಯಾವಾಗ ಬೇಕಾದರು ಆಗ ನಿಧಾನವಾಗಿ ಮತ್ತೊಂದು ಲೋಟಕ್ಕೆ ಬೇಕಾದಷ್ಟು ಬಗ್ಗಿಸಿಕೊಂಡು ಬಳಸಿಕೊಳ್ಳಬಹುದು.
ಮಾರನೆ ದಿನ ಈ ಹಾಲಿನ ಪಾತ್ರೆಯಲ್ಲಿ ದಪ್ಪದಾಗಿ ಕೆನೆ ಬಂದಿರುತ್ತದೆ. ಅದನ್ನು ಒಂದು ಡಬ್ಬದಲ್ಲಿ ಹಾಕಿ ಶೇಖರಣೆ ಮಾಡುತ್ತಾ ಇಟ್ಟುಕೊಳ್ಳಬೇಡು. ಆ ಡಬ್ಬಿಯ ಮುಚ್ಚಳ ಮುಚ್ಚಿ ಕೆನೆಯನ್ನು ಶೇಖರಿಸಿ ಫ್ರಿಡ್ಜ್‌ನಲ್ಲಿ ಇಡಿ. ಒಂದು ವಾರ ನಿರಂತವಾಗಿ ಶೇಖರಿಸಿಟ್ಟರೆ ಒಂದು ದೊಡ್ಡ ಉಂಡೆಯಷ್ಟು ದೊಡ್ಡ ಕೆನೆ ಒಟ್ಟಾಗುತ್ತದೆ. ಇಗ ಒಂದು ಪಾತ್ರೆ ತೆಗೆದುಕೊಂಡು ಒಂದು ಸಣ್ಣ ಬೌಲ್‌ನಲ್ಲಿ ಮೊಸರು ತೆಗೆದುಕೊಂಡು ಅದನ್ನು ಹಾಕಿಕೊಳ್ಳಿ. ನಂತರ ಎಲ್ಲ ಕೆನೆಗಳನ್ನು ತೆಗೆದು ಆ ಪಾತ್ರೆಗೆ ಹಾಕಿಕೊಂಡು ಒಂದು ಗಂಟೆ ಹಾಗೆ ಬಿಡಬೇಕು.
ಈಗ ಸ್ವಲ್ಪ ನೀರು ತೆಗೆದುಕೊಂಡು ಆ ನೀರನ್ನು ಕೆನೆ ಹಾಕಿರುವ ಪಾತ್ರೆಗೆ ಹಾಕಿ ಮಿಕ್ಸ್ ಮಾಡಿ. ಕೆನೆ ಮುಚ್ಚುವಷ್ಟು ನೀರು ಹಾಕಿದರೆ ಸಾಕು. ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳುತ್ತಾ ಇರಬೇಕು. ಬೆಣ್ಣೆ ತೆಗೆಯುವ ಕೋಲು ಅಥವಾ ಸ್ಟೀಲ್‌ನ ಸೌಟನ್ನು ಬಳಸಿ ಮಿಕ್ಸ್ ಮಾಡುತ್ತಾ ಇರಿ. 15 ನಿಮಿಷದಕ್ಕೂ ಹೆಚ್ಚು ಕಾಲ ಮಿಕ್ಸ್ ಮಾಡುತ್ತಾ ಇದ್ದರೆ ಐಸ್ ಕ್ರೀಮ್‌ನಂತಹ ರಚನೆ ಮೊದಲು ಕಾಣಿಸುತ್ತೆ. ಇದಾದ ಬಳಿಕ ಸ್ವಲ್ಪ ಹೊತ್ತು ತಿರುಗಿಸುತ್ತಾ ಇದ್ದಂತೆ ನಿಧಾನವಾಗಿ ಬೆಣ್ಣೆ ಬರಲು ಆರಂಭಿಸುತ್ತದೆ. ನಂತರ ಕೈಯನ್ನು ನೆನೆಸಿಕೊಂಡು ಬೆಣ್ಣೆಯನ್ನು ನಿಧಾನವಾಗಿ ತೆಗೆದು ತಣ್ಣೀರಿನಲ್ಲಿ ಹಾಕಿ. ಹೆಚ್ಚು ಕೆನೆ ಇದ್ದರೆ ಹೆಚ್ಚು ಬೆಣ್ಣೆ ಬರುವುದು ಖಚಿತ. ನೀವು ಕೂಡ ಒಮ್ಮೆ ಟ್ರೈ ಮಾಡಿ ನೋಡಿ. ಈ ಬೆಣ್ಣೆಯನ್ನ ಬಳಿಕ ತುಪ್ಪ ಮಾಡಿ ಸವಿಯಿರಿ.



Click it and Unblock the Notifications
