Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವಾಸ್ತು ಪ್ರಕಾರ ಹಾಗಾಲಕಾಯಿ ಗಿಡ ವಾಸ್ತು ಪ್ರಕಾರ ಮನೆ ಬಳಿ ಇರಬಾರದು, ಏಕೆ?
ಕೈ ತೋಟ ಮಾಡುವಾಗ ಮನೆ ಸಮೀಪ ಸ್ವಲ್ಪ ಜಾಗವಿದ್ದರೆ ಎಲ್ಲಾ ಬಗೆಯ ತರಕಾರಿ ಬೆಳೆಯುವ ಅಭ್ಯಾಸ ಹಲವರಲ್ಲಿ ಇರುತ್ತದೆ. ಮನೆಯಲ್ಲಿಯೇ ತರಕಾರಿ ಬೆಳೆದರೆ ಫ್ರೆಶ್ ತರಕಾರಿ ದೊರೆಯುವುದು ಜೊತೆಗೆ ಆರ್ಥಿಕವಾಗಿಯೂ ಅದು ನಮಗೆ ಸಹಾಯ ಮಾಡುತ್ತದೆ. ಆದರೆ ವಾಸ್ತು ಶಾಸ್ತ್ರವು ಮನೆ ಸಮೀಪ ಹಾಗಾಲಕಾಯಿ ಬೆಳೆಯಬಾರದು ಎಂದು ಹೇಳುತ್ತದೆ? ವಾಸ್ತು ಪ್ರಕಾರ ಹಾಗಾಲಕಾಯಿ ಏಕೆ ಬೆಳೆಯಬಾರದು ಎಂದು ನೋಡೋಣ ಬನ್ನಿ:

ವಾಸ್ತು ಪ್ರಕಾರ ಮನೆಯಲ್ಲಿ ಹಾಗಲಕಾಯಿ ಗಿಡ ನೆಡಬೇಡಿ
ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಹಲವಾರು ಮರ, ಗಿಡಗಳನ್ನು ನೆಡಬೇಕೆಂದು ಸಲಹೆ ನೀಡಿದ್ದರೂ ಮನೆಯೊಳಗೆ ತಪ್ಪದೆ ಕೂಡ ನೆಡಬಾರದ ಒಂದು ಗಿಡವಿದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಹಾಗಲಕಾಯಿ ಗಿಡವಿರಬಾರದು. ಈ ಸಸ್ಯವನ್ನು ನೆಡುವುದರಿಂದ ವಾಸ್ತು ದೋಷಗಳು ಉಂಟಾಗಬಹುದು ಮತ್ತು ವ್ಯಕ್ತಿಯು ಅಶುಭ ಫಲಿತಾಂಶಗಳನ್ನು ಅನುಭವಿಸಬೇಕಾಗುವುದು ಎಂದು ಹೇಳಲಾಗುವುದು.
ಹಾಗಲಕಾಯಿಯನ್ನು ಕಹಿ ತರಕಾರಿ ಎಂದು ಪರಿಗಣಿಸಲಾಗುತ್ತದೆ ಮತ್ತು ಅದರಿಂದ ಹೊರಹೊಮ್ಮುವ ಶಕ್ತಿಯು ನಕಾರಾತ್ಮಕವಾಗಿರುತ್ತದೆ ಎಂದು ಹೇಳಲಾಗುವುದು. ಹಾಗಲಕಾಯಿ ಗಿಡವನ್ನು ಮನೆಯಿಂದ ಸ್ವಲ್ಪ ದೂರದಲ್ಲಿ ಬೆಳೆಯಬಹುದು, ಆದರೆ ಮನೆಗೆ ಅಂಟಿಕೊಂಡಂತೆ ಬೆಳೆಯುವುದು ಅಥವಾ ಟೆರೇಸ್ ಮೇಲೆ ಬೆಳೆಯುವುದು, ಅದರ ಬಳ್ಳಿಯನ್ನು ಮನೆಯ ಮೇಲೆ ಹಬ್ಬಲು ಬಿಡುವುದು ಮಾಡಬಾರದು ಎಂದು ಹೇಳಲಾಗುವುದು. ಆದರೆ ಈ ಗಿಡವನ್ನು ಮನೆಯ ದಕ್ಷಿಣ ದಿಕ್ಕಿಗೆ ನೆಡಬಾರದು ಎಂಬುದನ್ನು ಸಹ ನೆನಪಿನಲ್ಲಿಡಬೇಕು. ಹಾಗಲಕಾಯಿ ಗಿಡವನ್ನು ದಕ್ಷಿಣ ದಿಕ್ಕಿಗೆ ನೆಟ್ಟರೆ ಮನೆಯಲ್ಲಿ ಸದಾ ವೈಮನಸ್ಸು ಇರುತ್ತದೆ ಎಂದು ಹೇಳಲಾಗುವುದು. ಆದ್ದರಿಂದ ಹಾಗಲಕಾಯಿ ಗಿಡ ಯಾವ ಕಡೆ ನೆಡುವುದು ಎಂಬುವುದು ಕೂಡ ಮುಖ್ಯ.
ಹಣಕಾಸಿನ ಪರಿಸ್ಥಿತಿ ದುರ್ಬಲವಾಗಬಹುದು
ವಾಸ್ತು ಪ್ರಕಾರ ಮನೆಯಲ್ಲಿ ಹಾಗಲಕಾಯಿ ಗಿಡ ನೆಟ್ಟರೆ ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ. ವ್ಯಕ್ತಿಯು ಸಾಲಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ಎದುರಿಸಬೇಕಾಗುತ್ತದೆ. ಆದ್ದರಿಂದ ಮನೆಯಲ್ಲಿ ಹಾಗಲಕಾಯಿ ಗಿಡವನ್ನು ನೆಡದಂತೆ ವಿಶೇಷ ಕಾಳಜಿ ವಹಿಸಿ. ಅಷ್ಟೇ ಅಲ್ಲ ವ್ಯಕ್ತಿಯ ಗೌರವ, ಗೌರವಕ್ಕೆ ಧಕ್ಕೆಯಾಗಬಹುದು ಎಂದು ವಾಸ್ತುಶಾಸ್ತ್ರ ಹೇಳುತ್ತದೆ.
ತಾಯಿ ಲಕ್ಷ್ಮಿ ಕೋಪಗೊಳ್ಳಬಹುದು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿ ಹಾಗಲಕಾಯಿ ಗಿಡ ನೆಟ್ಟರೆ ಲಕ್ಷ್ಮಿ ದೇವಿಗೆ ಕೋಪ ಬರಬಹುದು. ಹಣವು ವ್ಯಕ್ತಿಯ ಜೀವನದಲ್ಲಿ ಬರುವುದಿಲ್ಲ ಮತ್ತು ವೆಚ್ಚಗಳು ಹೆಚ್ಚಾಗಲು ಪ್ರಾರಂಭಿಸುತ್ತವೆ. ಆದ್ದರಿಂದ, ಮನೆಯಲ್ಲಿ ಹಾಗಲಕಾಯಿಯನ್ನು ಎಂದಿಗೂ ನೆಡಬೇಡಿ ಎಂಬುವುದು ವಾಸ್ತು ಟಿಪ್ಸ್. ಆದ್ದರಿಂದ ವಾಸ್ತು ಪ್ರಕಾರ ಮನೆಮುಂದೆ ಹಾಗಲಕಾಯಿ ಗಿಡ ಇರಬಾರದು.
ಹಾಗಲಕಾಯಿ ಆರೋಗ್ಯಕ್ಕೆ ಒಳ್ಳೆಯದು
ತಿನ್ನಲು ಹಾಗಾಲಕಾಯಿ ಕಹಿ ಇರಬಹುದು, ಆರೋಗ್ಯ ತುಂಬಾನೇ ಒಳ್ಳೆಯದು, ಆದ್ದರಿಂದ ನೀವು ಹಾಗಲಕಾಯಿ ಗಿಡ ಮನೆಯೊಳಗಡೆ ಅಥವಾ ಮನೆ ಸಮೀಪ ನೆಡಬಾರದು, ಆದರೆ ಹಾಗಲಕಾಯಿ ತಿನ್ನಿ, ಹಾಗಲಕಾಯಿ ಗಿಡವನ್ನು ಬೇಲಿಯಲ್ಲಿ ಅಥವಾ ಅಂಗಳ ಬಿಟ್ಟು ಸ್ವಲ್ಪ ದೂರ ನೆಡಿ, ಆದರೆ ಮನೆಯ ವಾಸ್ತು ಬರುತ್ತದೆಯಲ್ವಾ ಅದರೊಳಗೆ ಈ ಗಿಡ ಇರಬಾರದು ಅಷ್ಟೆ.
ಸಲಹೆ: ವಾಸ್ತು ಎಂಬುವುದು ಒಂದು ಶಾಸ್ತ್ರ, ಅದನ್ನು ನಂಬುವವರು ಇದ್ದಾರೆ, ಅದನ್ನು ನಂಬದವರು ಇದ್ದಾರೆ, ಕೆಲವರು ವಾಸ್ತು ಪ್ರಕಾರ ಮನೆ ಕಟ್ಟಿದರೆ ಇನ್ನು ಕೆಲವರು ಏನೂ ವಾಸ್ತು ನೋಡದೆಯೂ ತುಂಬಾ ಚೆನ್ನಾಗಿ ಇರುತ್ತಾರೆ, ಆದ್ದರಿಂದ ಎಲ್ಲವೂ ಅವರವರ ನಂಬಿಕೆಗೆ ಬಿಟ್ಟ ವಿಚಾರ. ಆದ್ದರಿಂದ ಇದೊಂದು ವಾಸ್ತು ಟಿಪ್ಸ್ ಅಷ್ಟೇ.



Click it and Unblock the Notifications
