Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಒಂದು ಬಟ್ಟೆ ಸೋಪು ಇದ್ರೆ ವರ್ಷಗಳ ಹಳೆಯ ಕಲೆ ತೆಗೆಯಬಹುದು: ಹೇಗೆ ಗೊತ್ತಾ?
ಮನೆಯನ್ನು ಸ್ವಚ್ಛ ಮಾಡಿ ಇಡುವುದು, ಯಾವಾಗಲು ಕಸ ಇರದಂತೆ, ಕೊಳೆಗಳು ಕಾಣದಂತೆ ಮಾಡಲು ಗೃಹಿಣಿಯರು ಯಾವಾಗಲು ಪ್ರಯತ್ನಿಸುತ್ತಿರುತ್ತಾರೆ. ಅದ್ರಲ್ಲೂ ಮನೆಯನ್ನು ಕ್ಲೀನ್ ಮಾಡಿದಷ್ಟು ಅವರಿಗೆ ನೆಮ್ಮದಿ ಇರುವುದಿಲ್ಲ. ಗುಡಿಸುವುದು, ಒರೆಸುವುದು ಒಂದರ ಹಿಂದೆ ಒಂದರಂತೆ ಮಾಡಿಯೇ ಮಾಡುತ್ತಾರೆ. ಹಾಗೆ ನಿತ್ಯ ಇದೊಂದು ಅವರ ಕೆಲಸವಾಗಿರಲಿದೆ.
ಹಾಗೆ ಬಾತ್ ರೂಮ್ ವಿಚಾರದಲ್ಲೂ ಕೂಡ ಅವರು ಯಾವಾಗಲು ಶುಚಿಯಾಗಿ ಇಡಲು ಯತ್ನಿಸುತ್ತಿರುತ್ತಾರೆ. ಏಕೆಂದರೆ ಮನೆಗೆ ಅತಿಥಿಗಳು ಬಂದರೆ ಇಲ್ಲದೆ ಹಠಾತ್ ಆಗಿ ಯಾರಾದರು ಬಂದಾಗ ಬಾತ್ ರೂಮ್ ಬಳಸಬೇಕಾಗಬಹುದು. ಹೀಗಾಗಿ ಗೃಹಿಣಿಯರನ್ನು ಬಾತ್ ರೂಮ್ ಕ್ಲೀನ್ ಮಾಡುವುದು ಕೂಡ ಸಾಮಾನ್ಯ ಸಂಗತಿ. ಹಾಗೆ ಬಾತ್ ರೂಮ್ ಕ್ಲೀನ್ ಮಾಡಲು ಈಗ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಲಿಕ್ವಿಡ್‌ಗಳು, ರಾಸಾಯನಿಕಗಳು ಬಂದಿವೆ.

ಹಾಗೆ ಈ ಲಿಕ್ವಿಡ್‌ಗಳಿಂದ ಬಾತ್ ರೂಮ್ ನಿತ್ಯವೂ ಸ್ವಚ್ಛ ಮಾಡೋದು ನೋಡಬಹುದು. ಇನ್ನು ಬಾತ್‌ರೂಮ್‌ನಲ್ಲಿರುವ ವಸ್ತುಗಳ ಸ್ವಚ್ಛತೆ ಕೂಡ ಅಷ್ಟೇ ಮುಖ್ಯ ಎನಿಸಿದೆ. ಅದ್ರಲ್ಲೂ ಬಜೆಟ್‌ಗಳು, ಮಗ್‌ಗಳು, ಟಬ್‌ಗಳು ಹೀಗೆ ಬಾತ್‌ರೂಮ್‌ನಲ್ಲಿನ ನಲ್ಲಿಗಳು ಕೂಡ ಶುಚಿಯಾಗಿಡಲು ಮುಂದಾಗುತ್ತೇವೆ. ಆದ್ರೆ ಕ್ಲೋರೈಡ್ ನೀರು ಅಥವಾ ಗಡಸು ನೀರಿನ ಪರಿಣಾಮವಾಗಿ ಬಾತ್‌ರೂಮ್‌ನಲ್ಲಿ ಬಳಸುವ ವಸ್ತುಗಳು ಬಹುಬೇಗ ಹಾಳಾದಂತೆ ಇಲ್ಲವೆ ಗಲೀಜುಗಳಿಂದ ತುಂಬಿಕೊಂಡಿರುತ್ತವೆ.
ಸಾಮಾನ್ಯವಾಗಿ ಬಕೆಟ್‌ಗಳು ಜಗ್‌ಗಳು ಗಡಸು ನೀರಿನ ಕಾರಣ ಬೀಳಿಯಾಗಿ ಇಲ್ಲವೆ ಸುಳಭವಾಗಿ ಬಿಡಿಸಲಾಗದಂತಹ ಕೊಳೆಗೆ ಸಿಲುಕುತ್ತವೆ. ಇದನ್ನು ನೀವು ಎಷ್ಟು ತೊಳೆದರು ಮುಕ್ತಿ ಸಿಗೋದಿಲ್ಲ. ಆದ್ರೆ ನಾವಿಂದು ಈ ಕಲೆಗಳನ್ನು ಸುಲಭವಾಗಿ ಹೋಗಲಾಡಿಸಲು ನೀವೆ ಖುದ್ದು ಮಾಡಿಕೊಳ್ಳಬಹುದಾದ ಒಂದು ಪರಿಹಾರದ ಕುರಿತು ಹೇಳಲಿದ್ದೇವೆ.
ಹಾರ್ಪಿಕ್ ಸೋಪಿನ ಲಿಕ್ವಿಡ್ ಮಾಡಿ ನೋಡಿ
ಮೊದಲು ಯಾವುದಾದರು ಬಟ್ಟೆ ತೊಳೆಯುವ ಸೋಪನ್ನು ತೆಗೆದುಕೊಳ್ಳಿ. ಅನಂತರ ಅರ್ಧ ಸೋಪನ್ನು ಕ್ಯಾರಂಟ್‌ನಂತೆ ತುರಿದುಕೊಳ್ಳಿ. ಈ ತುರಿದ ಪುಡಿಯನ್ನು ಒಂದು ಪ್ಲಾಸ್ಟಿಕ್ ಡಬ್ಬಿಗೆ ಹಾಕಿಕೊಳ್ಳಿ. ಅನಂತರ ಈ ಪುಡಿಗೆ ಹಾರ್ಪಿಕ್ ಲಿಕ್ವಿಡ್ ಹಾಕಿಕೊಳ್ಳಿ. ಈ ಪುಡಿ ಮುಚ್ಚುವಷ್ಟು ಹಾರ್ಪಿಕ್ ಹಾಕಿ ಅಂತರ ಒಂದು ಗ್ಲಾಸ್ ನೀರು ಕೂಡ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸೋಪಿನ ಪುಡಿ ಕರಗುವಂತೆ ಮಿಕ್ಸ್ ಮಾಡಿಕೊಳ್ಳಿ.
ಈಗ ಕೈಗೆ ಗ್ಲೌಸ್ ಹಾಕಿಕೊಂಡು ಈ ಲಿಕ್ವಿಡ್ ಅನ್ನು ಬಕೆಟ್‌ಗೆ ಹಾಗೆ ಜಗ್‌ಗಳ ಮೇಲೆ ಹಾಕಿ ಬ್ರಷ್‌ನಿಂದ ಉಜ್ಜಿಕೊಳ್ಳಿ. ನೀವು ಊಹಿಸದ ರೀತಿಯಲ್ಲಿ ಇದರಿಂದ ಬಕೆಟ್ ಸ್ವಚ್ಛವಾಗಲಿದೆ. ಯಾವುದೇ ಶ್ರಮ ಇಲ್ಲದೆಯೇ ಕ್ಲೀನ್ ಮಾಡಬಹುದು. ಹಾಗೆ ಕ್ಲೀನ್ ಮಾಡುವಾಗ ಮುಖಕ್ಕೆ ಮಾಸ್ಕ್ ಧರಿಸುವುದು ಉತ್ತಮ. ಹಾಗೆ ಬಟ್ಟೆ ಸೋಪಿನ ಬದಲು ನೀವು ಸೋಪಿನ ಪೌಡರ್ ಕೂಡ ಬಳಸಬಹುದು.
ಹಾಗೆ ಬಾತ್ ರೂಮ್‌ನ ಟೈಲ್ಸ್‌ಗಳು ಹಾಗೆ ಸಿಲಿಂಡರ್ ಇಟ್ಟು ಕೆಲಗಳು ಆಗಿರುವ ಜಾಗ ಕೂಡ ಇದರಿಂದ ಕ್ಲೀನ್ ಮಾಡಬಹುದು, ಈ ಲಿಕ್ವಿಡ್ ಹಾಕಿ ಚೆನ್ನಾಗಿ ಉಜ್ಜಿದರೆ ವರ್ಷಗಳ ಹಳೆಯ ಕಲೆಗಳು ಕೂಡ ಮಾಯವಾಗುತ್ತೆ. ಹಾಗೆ ಸಿಂಕ್‌ಗಳು, ನಲ್ಲಿಗಳ ಮೇಲಿನ ಕೊಳೆ ಕೂಡ ಕ್ಷಣದಲ್ಲಿ ಮಾಯವಾಗುತ್ತೆ.
ಈ ರೀತಿ ಹೆಚ್ಚಿನ ಲಕ್ವಿಡ್ ಮಾಡಿ ನೀವು ಹಲವು ದಿನಗಳ ಕಾಲ ಇಡಬಹುದು. ಒಂದು ಪ್ಲಾಸ್ಟಿಕ್ ಬಾಟಲಿಗೆ ಹಾಕಿಟ್ಟು ಬೇಕಾದಾಗ ಬಳಸಿ. ಮನೆಯಲ್ಲಿ ಯಾವ ಜಾಗದಲ್ಲಿ ಆದರೂ ಕಠಿಣ ಕಲೆಗಳು ಇದ್ದರೆ ಅದನ್ನು ನಿವಾರಿಸಲು ಇದು ಸುಲಭದ ಮಾರ್ಗವಾಗಿದೆ. ನೀವು ಕೂಡ ಮನೆಯಲ್ಲಿ ಈ ರೀತಿಯ ವಿಧಾನ ಟ್ರೈ ಮಾಡಿ ನೋಡಿ.



Click it and Unblock the Notifications
