Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
10 ರೂಪಾಯಿ ಕಮ್‌ಫರ್ಟ್ ಇದ್ರೆ ಮನೆ 24 ಗಂಟೆ ಘಮ ಘಮ ಎನ್ನಲಿದೆ..! ಹೇಗೆ ಗೊತ್ತಾ?
ಮನೆಯನ್ನು ಸ್ವಚ್ಛವಾಗಿಡುವುದು ಹಾಗೆ ಶುಭ್ರವಾಗಿ ಸುವಾಸನೆ ಬರುವಂತೆ ಇಡುವುದು ಈಗಿನ ಫ್ಯಾಷನ್ ಆಗಿದೆ. ಮನೆಯಲ್ಲಿ ಶುಭ ಸಮಾರಂಭಗಳು, ಅತಿಥಿಗಳ ಆಗಮನದ ಮುನ್ನ ಮನೆಯನ್ನು ಸ್ವಚ್ಛವಾಗಿಡುವುದು ಎಲ್ಲರ ಆಸೆಯಾಗಿರುತ್ತೆ. ಹಾಗೆ ಎಲ್ಲರ ಮನೆಯನ್ನು ಕ್ಲೀನ್ ಮಾಡುವುದು ಗೃಹಿಣಿಯರು. ಹಾಗೆ ಮನೆಯಲ್ಲಿ ಯಾವುದೇ ಮೂಲೆ ಹೋದರು ಘಮ ಘಮಿಸವಬೇಕು ಎಂದು ಅವರು ಬಯಸುತ್ತಾರೆ.
ಅದ್ರಲ್ಲೂ ಮನೆಯ ಅಡುಗೆ ಮನೆಗೆ ಹೋದರೆ ಅಲ್ಲಿ ವಿವಿಧ ರೀತಿಯ ಅಡುಗೆ ವಾಸನೆ ಮೂಗಿಗೆ ಬಡಿಯಲಿದೆ. ಹಾಗೆ ರೂಮ್‌ಗೆ ತೆರಳಿದರ ಬಟ್ಟೆಗಳಿಂದ ಬರುವ ವಾಸನೆ, ಹಾಗೆ ಬಾತ್‌ರೂಮ್ ಕೂಡ ಈ ಸಮಯದಲ್ಲಿ ದುರ್ಗಂಧ ಬರುವುದು ನೋಡಬಹುದು. ಆದ್ರೆ ಮನೆಯ ಈ ಹಲವು ರೀತಿಯ ದುರ್ಗಂಧಗಳ ತಡೆಯಲು ಈಗ ಮಾರುಕಟ್ಟೆಯಲ್ಲಿ ಹಲವು ರೀತಿಯ ಪರಿಹಾರಗಳು ಸಿಗಲಿವೆ.

ಅದ್ರಲ್ಲೂ ಮನೆಗಾಗಿ ಸಿಗುವ ರೂಮ್ ಫ್ರೆಶ್ನರ್‌ಗಳು ಎಲ್ಲರು ಬಳಸುವುದು ನೋಡಬಹುದು. ಇದನ್ನು ಮನೆಯ ಮೂಲೆ ಮೂಲೆಗೂ ಸಿಂಪಡಿಸಲಾಗುತ್ತದೆ. ಆದ್ರೆ ಕೆಲ ಹೊತ್ತಿನಲ್ಲಿ ಇದರ ಸುವಾಸನೆ ಕಡಿಮೆಯಾಗಲಿದೆ. ಆದ್ರೆ ನಾವಿಂದು ಇಡೀ ಮನೆ 24 ಗಂಟೆಗಳ ಕಾಲ ಘಮ ಘಮ ಅನ್ನುವಂತೆ ಮಾಡುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ.
ನಾವಿಲ್ಲಿ ಕೇವಲ ಮನೆಯಲ್ಲಿನ ವಸ್ತುವನ್ನು ಬಳಸಿಕೊಂಡು ರೂಮ್ ಫ್ರೆಶ್ನರ್ ತಯಾರಿಸಿಕೊಳ್ಳುವ ವಿಧಾನ ಕುರಿತು ಹೇಳಲಿದ್ದೇವೆ. ಇದರಿಂದ ನಿಮ್ಮ ಮನೆಯನ್ನು 24 ಗಂಟೆಗಳ ಕಾಲ ಘಮ ಘಮ ಎನಿಸುವಂತೆ ಇಟ್ಟುಕೊಳ್ಳಬಹುದು. ಇದು ಖರ್ಚು ಕೂಡ ಕಡಿಮೆ ಹಾಗೆ ನಿಮಗೆ ಅತ್ಯುತ್ತಮ ಸುವಾಸನೆ ನೀಡುವ ದ್ರಾವಣವನ್ನು ಮಾಡಬಹುದು. ಹಾಗಾದ್ರೆ ಮನೆಯಲ್ಲಿ ಈ ದ್ರಾವಣ ಮಾಡಲು ಯಾವೆಲ್ಲಾ ವಸ್ತು ಬೇಕು? ಹೇಗೆ ಮಾಡಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. ಇದಕ್ಕೆ ಒಂದು ಪ್ಯಾಕ್ ಬಟ್ಟೆ ಒಗೆದ ಬಳಿಕ ಬಳಸುವ ಕಮ್‌ಫರ್ಟ್ ಬಳಸಿದರೆ ಸಾಕಾಗುತ್ತದೆ.
ಮೊದಲು ಒಲೆ ಮೇಲೆ ಒಂದು ಪಾತ್ರೆ ಇಟ್ಟು 2 ಗ್ಲಾಸ್ ನೀರು ಹಾಕಿಕೊಳ್ಳಿ. ಬಳಿಕ ನೀರು ಬಿಸಿಯಾಗಲು ಬಿಡಿ. ನೀರು ಬಿಸಿಯಾದಾಗ ಇದಕ್ಕೆ 2 ಸ್ಪೂನ್ ಅಷ್ಟು ಕಮ್‌ಫರ್ಟ್ ದ್ರಾವಣವನ್ನು ಇದಕ್ಕೆ ಹಾಕಿಕೊಳ್ಳಿ. ನಂತರ ಕುದಿಬರಲು ಬಿಡಿ. ನಂತರ ಇದನ್ನು ಒಂದೆರಡು ನಿಮಿಷ ಕುದಿಸಿಕೊಂಡು ಒಲೆ ಆಫ್ ಮಾಡಿ ಇಳಿಸಿಕೊಳ್ಳಿ.
ಅನಂತರ ಇದನ್ನು ಒಂದು ಬಾಟಲಿಯಲ್ಲಿ ತೊಂಬಿಕೊಂಡು ಅದಕ್ಕೆ ಚಿಕ್ಕದಾದ ತೂತು ಮಾಡಿ ಬಳಿಕ ಮನೆಯಲ್ಲಿ ಸಿಂಪಡಿಸಿ. ಅದರಲ್ಲೂ ಕಿಟಕಿಗೆ ಹಾಕಲಾಗಿರುವ ಬಟ್ಟೆಗಳಿಗೆ. ಬಾಗಿಲಿಗೆ ಹಾಕಿದ ಕರ್ಟನ್ ಪರದೆಗಳಿಗೆ, ಸೋಫಾ, ಹೀಗೆ ಮನೆಯ ಮೂಲೆಯಲ್ಲಿ ಇದನ್ನು ಸ್ಪಲ್ಪ ಸ್ಪ್ರೇ ಮಾಡಿಕೊಂಡರೆ ಮನೆ 24 ಗಂಟೆಗಳ ಕಾಲ ಘಮ ಘಮ ಎನ್ನುವ ಸುವಾಸನೆಯಿಂದ ತುಂಬಿರಲಿದೆ.
ಕಮ್‌ಫರ್ಟ್ ಹಾಗೂ ಕರ್ಪೂರ
ಅರ್ಧ ಕರ್ಪೂರನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಪುಡಿ ಮಾಡಿ ಒಂದು ಚಿಕ್ಕ ಗ್ಲಾಸ್‌ಗೆ ಹಾಕಿಕೊಳ್ಳಿ. ಬಳಿಕ ಅದಕ್ಕೆ ಸ್ವಲ್ಪ ಕಮ್‌ಫರ್ಟ್ ಹನಿಗಳ ಹಾಕಿ ಚೆನ್ನಾಗಿ ಕಲಸಿ. ಅದರ ವಾಸನೆ ಸರಿಯಾಗದಿದ್ದರೆ ಅಥವಾ ಗಡಸು ಎನಿಸಿದರೆ ಸ್ವಲ್ಪ ನೀರು ಬೆರೆಸಿ ಚೆನ್ನಾಗಿ ಕಲಸಿಕೊಳ್ಳಿ, ನಂತರ ಅದನ್ನು ಮನೆಯಲ್ಲಿ ಚಿಮುಕಿಸಿ ಹೀಗೆ ಮಾಡಿದರೆ ನಿಮ್ಮ ಮನೆ ಯಾವಾಗಲು ಘಮ ಘಮ ಎನ್ನುತ್ತಲೇ ಇರುತ್ತೆ. ಆದ್ರೆ ಮನೆಯಲ್ಲಿ ಪುಟ್ಟ ಮಕ್ಕಳಿದ್ದರೆ ಇದನ್ನು ಬಳಸಬೇಡಿ. ಇದು ಅವರಿಗೆ ಅಲರ್ಜಿ ಉಂಟು ಮಾಡಬಹುದು. ಆದ್ರೆ ಮನೆ ತುಂಬೆಲ್ಲಾ ಈ ಸುವಾಸನೆ ತುಂಬಿದ್ದರೆ ಮನೆಗೆ ಬಂದ ಅತಿಥಿಗಳು ಕೂಡ ಒಮ್ಮೆ ಆ ಕಡೆ ಗಮನ ಹರಿಸುವುದು ಖಚಿತ.



Click it and Unblock the Notifications
