Latest Updates
-
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು? -
ಜನ್ಮಾಷ್ಟಮಿ ಉಪವಾಸ: ಸುಸ್ತಾಗದೆ, ಆರೋಗ್ಯಕರವಾಗಿ ವ್ರತ ಆಚರಿಸಲು ಇಲ್ಲಿವೆ ಸರಳ ಟಿಪ್ಸ್!
ಈ ಕೆಲಸ ಮಾಡಿದ್ರೆ ಮಳೆಗಾಲದಲ್ಲಿ ಹಾವುಗಳು ಮನೆ ಬಳಿ ಸುಳಿಯಲ್ಲ..! ಟಿಪ್ಸ್ ಇಲ್ಲಿದೆ!
ಮಳೆಗಾಲ ಆರಂಭಗೊಂಡಿದೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಆರಂಭದಲ್ಲೇ ಉತ್ತಮ ಮಳೆಯಾಗಿದೆ. ಇನ್ನು ಮಳೆಗಾಲ ಆರಂಭಗೊಂಡಿದೆ ಎಂದರೆ ಸಮಸ್ಯೆಗಳು ಕೂಡ ಆರಂಭಗೊಳ್ಳುತ್ತವೆ. ಮಳೆಯಲ್ಲಿ ನೀರು ನುಗ್ಗುವುದು, ವಿದ್ಯುತ್ ಸಮಸ್ಯೆ, ಗುಡ್ಡ ಕುಸಿತ ಹೀಗೆ ಹಲವು ಭೀತಿಯ ನಡುವೆ ನಮಗೆ ಕಾಡುವ ಮತ್ತೊಂದು ಸಮಸ್ಯೆ ಎಂದರೆ ಮನೆಗೆ ಹುಳು, ಕೀಟ, ಪ್ರಾಣಿಗಳು ನುಗ್ಗುವುದು.
ವಿಪರೀತ ಮಳೆಯು ಪ್ರಾಣಿಗಳಿಗೆ ಬೆಚ್ಚಗಿನ ಸ್ಥಳವನ್ನು ಹುಡುಕುವಂತೆ ಮಾಡಲಿದೆ. ಅದರಲ್ಲೂ ಹಾವುಗಳು ಮಳೆಗಾಲದಲ್ಲಿ ಮನೆಯೊಳಗೆ ಬರುವುದು, ಅಥವಾ ಮನೆ ಸುತ್ತ ಮುತ್ತ ಕಾಣಿಸಿಕೊಳ್ಳುವುದು ಸಾಮಾನ್ಯ. ಹೀಗಾಗಿ ಮಳೆಗಾಲದಲ್ಲಿ ನಾವು ಹಾವುಗಳು ಹೆಚ್ಚು ಮನೆ ಬಳಿ ಓಡಾಡುವುದನ್ನು ನೋಡುತ್ತೇವೆ. ಅವು ಮಳೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಬೆಚ್ಚಗಿನ ಸ್ಥಳಗಳನ್ನು ಹುಡುಕುತ್ತಿರುತ್ತವೆ.

ಅದರ ಪರಿಣಾಮವಾಗಿ ಅವು ಮನೆಯೊಳಗೆ ಬರುವುದು, ಅಥವಾ ಹೊರಗೆ ನೀರು ಬೀಳದಂತಹ ಸ್ಥಳದಲ್ಲಿ ಆಶ್ರಯ ಪಡೆಯುವುದು ಮಾಡುತ್ತವೆ. ಹಳ್ಳಿಗಳಲ್ಲಿ ಮಾತ್ರವಲ್ಲ ನಗರ ಪ್ರದೇಶದಲ್ಲೂ ಕೂಡ ಮಳೆಗಾಲದಲ್ಲಿಯೇ ಇಂತಹ ಸ್ಥಿತಿ ಇರಲಿದೆ. ಹಲವು ಸಮಯದಲ್ಲಿ ಇದು ಪ್ರಾಣಕ್ಕೂ ಅಪಾಯ ತಂದಿಡಲಿದೆ. ಒಂದು ವೇಳೆ ಮನೆಯಲ್ಲಿ ಮಕ್ಕಳಿದ್ದರಂತು ವಿಶೇಷ ಕಾಳಜಿ ಮಾಡಬೇಕಾಗುತ್ತದೆ. ಹಾಗಾದ್ರೆ ನಾವಿಂದು ಮಳೆಗಾಲದಲ್ಲಿ ಮನೆಯ ಬಳಿ ಹಾವಿನ ಕಾಟ ಇಲ್ಲದಂತೆ ಮಾಡುವುದು ಹೇಗೆ? ಏನೆಲ್ಲಾ ಮಾಡಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹಾವುಗಳು ಉಳಿಯುವಂತೆ ಯಾವ ವಸ್ತುಗಳನ್ನು ಇಡಬೇಡಿ
ಸಾಮಾನ್ಯವಾಗಿ ಹಾವುಗಳು ವಿಪರೀತ ಮಳೆ ಇದ್ದಾಗ, ಹಾಗೆ ಎಲ್ಲಿಯೂ ಬೆಚ್ಚಗಿನ ಸ್ಥಳ ಸಿಗದೆ ಇದ್ದಾಗ ಮಾನವರ ಆವಾಸ ಸ್ಥಳಗಳಿಗೆ ಆಗಮಿಸುತವೆ. ಹೀಗಾಗಿ ಮನೆಯ ಬಾಗಿಲ ಮುಂದೆ ಅವುಗಳು ನೆಲೆಸಲು ಸಹಕಾರಿಯಾಗುವಂತೆ ಯಾವುದೇ ವಸ್ತುಗಳ ಇಡಬೇಡಿ. ಅದರಲ್ಲೂ ಹೂವಿನ ಪಾಟ್‌ಗಳು, ಶೂ, ಚಪ್ಪಲಿಗಳು, ಚೀಲ, ಬಟ್ಟೆಗಳನ್ನು ಮನೆಯ ಮುಂದೆ ಅಥವಾ ಸುತ್ತ ಮುತ್ತ ಎಲ್ಲಿಯೂ ಇಡಬೇಕು. ಅವುಗಳನ್ನು ಆದಷ್ಟು ನೆಲಮಟ್ಟದಿಂದ ಸ್ವಲ್ಪ ಮೇಲೆ ಇರುವಂತೆ ನೋಡಿಕೊಳ್ಳಿ. ಈ ವಸ್ತುಗಳಲ್ಲ ಹಾವುಗಳು ಪತ್ತೆಯಾಗುವುದು ಹೆಚ್ಚು.
ಮನೆ ಸುತ್ತ ಕೀಟಗಳು ಬಾರದಂತೆ ನೋಡಿಕೊಳ್ಳುವುದು
ಹಾವುಗಳಿಗೆ ಆಹಾರ ಸಿಗದಂತೆ ನೋಡಿಕೊಳ್ಳುವುದು ಕೂಡ ನಿಮ್ಮ ಮನೆ ಸುತ್ತ ಹಾವು ಸುಳಿದಾಡದಂತೆ ಮಾಡಲಿದೆ. ಹೀಗಾಗಿ ನೀವು ಮನೆಯ ಬಳಿ ಕೀಟಗಳು ಬಾರದಂತೆ ಸ್ವಚ್ಚವಾಗಿಡಲು ಮುಂದಾಗಬೇಕು. ಅದರಲ್ಲೂ ಕಪ್ಪೆಗಳು ಸುಳಿಯದಂತೆ, ಮನೆ ಬಳಿ ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಿ. ಏಕೆಂದರೆ ಕಪ್ಪೆಗಳಿರುವ ಕಡೆ ಹಾವುಗಳ ಓಡಾಟ ಹೆಚ್ಚಾಗಿರಲಿದೆ.
ಚೆಂಡು ಹೂವಿನ ಗಿಡ ನೆಡುವುದು
ಗೊಂಡೆ ಹೂವು ಅಥವಾ ಚೆಂಡೂ ಹೂವು ಎಂದು ಕರೆಯುವ ಗಿಡವನ್ನು ಮನೆ ಬಳಿ ನಡೆವುದರಿಂದ ಹಾವುಗಳು ಹಾಗೆ ಕೀಟಗಳ ಸಮಸ್ಯೆ ನಿವಾರಣೆಯಾಗಲಿದೆ. ಈ ಗಿಡವು ತೀಕ್ಷ್ಣವಾದ ಸುವಾಸನೆಯನ್ನು ಹೊಂದಿದೆ. ಇದು ಹಾವುಗಳಿಂದ ಹಿಡಿದು ಎಲ್ಲಾ ಕೀಟಗಳಿಗೂ ಹಿಡಿಸುವುದಿಲ್ಲ. ಹೀಗಾಗಿ ಈ ಗಿಡಗಳನ್ನು ಜೀವ ರಕ್ಷಕಗಳು ಎನ್ನಬಹುದು.
ಇನ್ನು ಮನೆಯಲ್ಲೇ ಇರುವ ಹಲವು ವಸ್ತುಗಳನ್ನು ಬಳಸಿ ಹಾವುಗಳಿ ಮನೆ ಬಳಸಿ ಸುಳಿಯದಂತೆ ಮಾಡಬಹುದು. ಅದರಲ್ಲೂ ಲವಂಗ ಮತ್ತು ದಾಲ್ಚಿನ್ನಿ ಎಣ್ಣೆ, ಬೆಳ್ಳುಳ್ಳಿ ಮತ್ತು ಈರುಳ್ಳಿಯ ಅಳಿದುಳಿದ ಪುಡಿಗಳು, ವಿನೆಗರ್, ನಾಪ್ತಲಿನ್ ಬಾಲ್‌ಗಳು ಇದೆಲ್ಲವೂ ಕೀಟ ನಿವಾಕರಗಳು, ಹಾಗೆ ಹಾವುಗಳು ಕೂಡ ಇಂತಹ ಪ್ರಬಲ ಸುವಾಸನೆಯುಕ್ತ ವಸ್ತುಳಿಂದ ದೂರ ಉಳಿಯಲಿವೆ. ಹಾವುಗಳು ತಮ್ಮ ನಾಲಗೆ ಮೂಲಕ ವಾಸನೆ ಗ್ರಹಿಸುತ್ತವೆ. ಹೀಗಾಗಿ ಅವುಗಳಿಗೆ ಪ್ರಬಲ ಸುವಾಸನೆ ನೀಡುವ ಯಾವುದೇ ವಸ್ತುಗಳು ಹಿಡಿಸುವುದಿಲ್ಲ. ಹಾಗೆ ಗುಲಾಬಿ ಅಗಾಪಂಥಸ್, ಸರ್ಪಗಂಧ ಸಸ್ಯಗಳು ಕೂಡ ಹಾವುಗಳ ಓಡಾಟ ಕಡಿಮೆ ಮಾಡಲಿವೆ ಎಂದು ಹೇಳಲಾಗುತ್ತದೆ.



Click it and Unblock the Notifications