Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನೀರಿನ ಕ್ಯಾನ್ ಕ್ಲೀನ್ ಮಾಡೋದು ಕಷ್ಟವಾಗಿದ್ಯಾ? ಇಲ್ಲಿದೆ ಸುಲಭದ ವಿಧಾನ
ನೀವು ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಪ್ಲಾಸ್ಟಿಕ್ ಬಾಟಲಿ ಕ್ಯಾನ್‌ನ ನೀರು ಬಳಸುತ್ತಿರಬಹುದು. 10ರಿಂದ 20 ರೂಪಾಯಿಗೆ ಈ ಕ್ಯಾನ್‌ಗಳು ಸಿಗುತ್ತವೆ. 20 ಲೀಟರ್ ಕುಡಿಯುವ ನೀರಿನ ಬಾಟಲಿಗಳಿವು. ಸಾಮಾನ್ಯವಾಗಿ ಈ ನೀರನ್ನು ನೇರವಾಗಿ ಕುಡಿಯಲಾಗುತ್ತದೆ. ಆದ್ರೆ ಮತ್ತೆ ಕೆಲವರು ಈ ನೀರನ್ನು ಫಿಲ್ಟರ್‌ಗೂ ಸಹ ಹಾಕಿ ಕುಡಿಯುವುದು ನೋಡಬಹುದು.
ಈ ಕ್ಯಾನ್‌ನ ನೀರು ಸೇವನೆಗೆ ಸುರಕ್ಷಿತವಲ್ಲ ಎಂಬ ಆತಂಕಕಾರಿ ಅಂಶವೂ ಕೂಡ ಈಗ ಚರ್ಚೆಯಲ್ಲಿದೆ. ಈ ನೀರುಗಳನ್ನು ದೊಡ್ಡ ಆರ್‌ಓ ಘಟಕದ ಮೂಲಕವು ಪಡೆಯಬಹುದು. ಬೆಂಗಳೂರಿನಲ್ಲಿ 10 ರೂಪಾಯಿಗೆ ನಾಣ್ಯದ ಮೂಲಕ ಈ ಘಟಕದಿಂದ ನೀರು ಪಡೆಯಬಹುದು. ಈ ನೀರುಗಳನ್ನು ಸಂಗ್ರಹಿಸಲು ಬಳಸುವಂತಹ ಪ್ಲಾಸ್ಟಿಕ್ ಬಾಟಲಿಗಳು ಈಗ ಸಮಸ್ಯೆಗಳ ತರಬಹುದು ಎಂಬ ಆತಂಕ ಕೂಡ ಇದೆ.

ಈ ಪ್ಲಾಸ್ಟಿಕ್ ಬಾಟಲಿಗಳು ಹೊರಗಿನಿಂದ ಸ್ವಚ್ಛವಾಗಿ ಕಂಡರೂ ಒಳಗೆ ಸಮಸ್ಯೆಗಳು ನೋಡಬಹುದು. ಈ ಬಾಟಲಿಯ ಒಳಗೆ ಕೊಳೆಗಳು ಕಟ್ಟಿಕೊಳ್ಳುತ್ತದೆ. ಹಾಗೆ ಕಾಣದ ಕೊಳಕು ಕಣಗಳು, ಕಸ ಮತ್ತು ಪಾಚಿ ಕಟ್ಟಿಕೊಳ್ಳುವ ಸಾಧ್ಯತೆ ಇರಲಿದೆ. ಆದ್ರೆ ನೀವು ಈ ಕ್ಯಾನ್ ಅನ್ನು ಸ್ವಚ್ಛಗೊಳಿಸದೆ ಬಳಸುವುದು ನಿಮಗೆ ಅಪಾಯ ತರಬಹುದು.
ಕೆಲ ಸಮಯದಲ್ಲಿ ನೀವು ಈ ಕ್ಯಾನ್ ಅನ್ನು ಸರಿಯಾಗಿ ಗಮನಿಸಿದಾಗ ಅದರ ಸುತ್ತಲೂ ಹಸಿರು ಬಣ್ಣ ಅಥವಾ ಕಪ್ಪು, ಹಳದಿ ಕಲೆಗಳು ಕಾಣಿಸಬಹುದು. ಇದು ನೀರಿನಿಂದ ಉಂಟಾಗುವ ಕಲೆಗಳು. ಹಾಗೆ ಪ್ಲಾಸ್ಟಿಕ್ ಬಾಟಲಿ ಆಗಿರುವುದರಿಂದ ಅದನ್ನು ಬಹುಸಮಯ ಬಳಸುವುದು ರಾಸಾಯನಿಕ ಕ್ರಿಯೆಗೆ ಒಳಗಾಗುವುದು ಸಹ ನೋಡಬಹುದು.
ಈ ಕ್ಯಾನ್ ಅನ್ನು ಸುಲಭವಾಗಿ ನೀವು ಸ್ವಚ್ಛ ಮಾಡಲು ಆಗುವುದಿಲ್ಲ. ಸಣ್ಣದಾದ ರಂಧ್ರವಿರುವ ಕಾರಣಕ್ಕೆ ಒಳಗೆ ಕೈ ಹೋಗುವುದಿಲ್ಲ ಹೀಗಾಗಿ ಸ್ವಚ್ಛ ಮಾಡುವುದು ದೊಡ್ಡ ಸವಾಲಿನ ಕೆಲಸವಾಗುತ್ತದೆ. ಆದ್ರೆ ನಾವಿಂದು ಸುಲಭದವಾಗಿ ಈ ನೀರಿನ ಕ್ಯಾನ್ ಅನ್ನು ಸ್ವಚ್ಛ ಮಾಡುವುದು ಹೇಗೆ ಎನ್ನುವುದನ್ನು ನೋಡೋಣ.
ಹರಳು ಉಪ್ಪು
ಈ ಕ್ಯಾನ್ ಅನ್ನು ಸ್ವಚ್ಛಗೊಳಿಸಲು ಹರಳು ಉಪ್ಪು ಬಳಸಬಹುದು. ಮೊದಲು ಒಂದು ಮುಷ್ಠಿ ಅಷ್ಟು ಹರಳು ಉಪ್ಪನ್ನು ತೆಗೆದುಕೊಂಡು ಕ್ಯಾನ್ ಒಳಗೆ ಹಾಕಿಕೊಂಡು ಚೆನ್ನಾಗಿ ಕ್ಯಾನ್ ಅನ್ನು ಅಲುಗಾಡಿಸಿ. ಇದರಿಂದ ಸುಲಭವಾಗಿ ಕಲೆಗಳು ನಿವಾರಣೆಯಾಗುತ್ತದೆ. ಹಾಗೆ ಉಪ್ಪಿನ ಉತ್ತಮ ಅಂಶವು ಕಲೆಗಳ ನಿವಾರಿಸಲಿದೆ.
ಅಡುಗೆ ಸೋಡಾ
ಈ ಕ್ಯಾನ್ ಕ್ಲೀನ್ ಮಾಡಲು ಅಡುಗೆ ಸೋಡಾ ಬಹಳ ಉತ್ತಮ. ಕ್ಯಾನ್ ಒಳಗೆ ಅಡುಗೆ ಸೋಡಾ ಹಾಗೂ ವಿನೆಗರ್ ಮಿಕ್ಸ್ ಮಾಡಿ ಚೆನ್ನಾಗಿ ಅಲುಗಾಡಿಸಬೇಕು. ಇದರಿಂದ ತಳದಲ್ಲಿ ಹಿಡಿದಿರುವ ಕಪ್ಪು ಕಲೆಗಳು ನಿವಾರಣೆಯಾಗಲಿದೆ. ಹಾಗೆ ಇದನ್ನು ಹಾಕಿ ತೊಳೆದ ಬಳಿಕ ಮತ್ತೆ ಶುದ್ಧ ನೀರಿನ್ನು ಬಳಸಿ ಒಮ್ಮೆ ತೊಳೆದರೆ ಕ್ಯಾನ್ ಸ್ವಚ್ಛವಾಗುತ್ತೆ.
ಹುಣಸೆ ಹುಳಿ-ನಿಂಬೆ ಹುಳಿ
ಈ ಕ್ಯಾನ್ ಕ್ಲೀನ್ ಮಾಡಲು ಯಾವುದೇ ಲಿಕ್ವಿಡ್ ಬಳಸದೆ ಇರುವುದು ಉತ್ತಮ. ಏಕೆಂದರೆ ಈ ನೀರು ಕುಡಿಯಲು ಬಳಸುವ ಕಾರಣ ನೈಸರ್ಗಿಕ ರೀತಿಯಲ್ಲಿ ಸ್ವಚ್ಛ ಮಾಡುವುದು ಉತ್ತಮ. ಅದ್ರಲ್ಲೂ ನಿಂಬೆ ಹುಳಿ ಹಾಗೂ ಹುಣಸೆ ಹುಳಿಯನ್ನು ಬಳಸಿ ಅದರ ಒಳಗೆ ಚೆನ್ನಾಗಿ ನೀರು ಸಹ ಹಾಕಿ ಅಲುಗಾಡಿಸಿದರೆ ಪಾಚಿ ನಿವಾರಣೆಯಾಗಲಿದೆ.
(ಹಕ್ಕುತ್ಯಾಗ: ಮೇಲೆ ಒದಗಿಸಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications
