Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಪಶ್ಚಿಮಾಭಿಮುಖ ಮನೆಯ ವಾಸ್ತು ಸಲಹೆಗಳು ಇಲ್ಲಿವೆ..!
ಭಾರತೀಯ ವಾಸ್ತುಶಾಸ್ತ್ರವು ಎಲ್ಲಾ ಕಟ್ಟಡಗಳ ನಿರ್ಮಾಣದ ಹಿಂದಿರುವ ಒಂದು ಅದ್ಭುತ ಕಲೆಯಾಗಿದೆ. ಮನೆ, ಕಟ್ಟಡಗಳನ್ನ ವಾಸ್ತು ಪ್ರಕಾರವಾಗಿಯೇ ಕಟ್ಟಲಾಗಿರುತ್ತದೆ. ಉತ್ತಮ ವಾಸ್ತುವಿನಿಂದ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನು ಉತ್ತೇಜಿಸುತ್ತದೆ. ಅದ್ರಲ್ಲೂ ಮನೆ ವಾಸ್ತು ಶಾಸ್ತ್ರದ ನಿಯಮಗಳ ಮೇಲೆ ಕಟ್ಟಿರಲಾಗುತ್ತದೆ.
ನಿಮ್ಮ ಮನೆ ಯಾವ ದಿಕ್ಕಿಗೆ ಮುಖ ಮಾಡಿದೆ ಎಂಬುದರ ಮೇಲೆ ವಾಸ್ತುಗಳು ನಿರ್ಧಾರವಾಗುತ್ತದೆ. ಯಾವ ದಿಕ್ಕಿಗೆ ಮುಖ ಮಾಡಿದ್ದರೆ ಒಳ್ಳೆಯದು ಎಂಬುದನ್ನು ವಾಸ್ತು ಶಾಸ್ತ್ರ ತಿಳಿಸುತ್ತದೆ. ಹಾಗೆ ನಿಮ್ಮ ಮುಂದೆ ಪಶ್ಚಿಮಕ್ಕೆ ಮುಖ ಮಾಡಿದರೆ ಒಳಿತಲ್ಲ ಎಂದು ಹಲವರು ಹೇಳುವುದನ್ನು ನಾವು ಕೇಳಿದ್ದೇವೆ. ಆದ್ರೆ ಹಲವು ಸಮಸ್ಯೆಗಳು ಅಥವಾ ಜಾಗದ ಸಮಸ್ಯೆಯಿಂದಲೋ ಕೆಲವರು ಪಶ್ಚಿಮಕ್ಕೆ ಮುಖ ಮಾಡಿ ಮನೆಯನ್ನು ಕಟ್ಟಿಸಿರುತ್ತಾರೆ.

ಮತ್ತೆ ಪಶ್ಚಿಮ ದಿಕ್ಕಿನ ಮನೆಗಳು ಕಡಿಮೆ ಮಂಗಳಕರವೆಂದು ಅನೇಕ ಜನರು ನಂಬುತ್ತಾರೆ, ಆದರೆ ಕೆಲವು ಬಾರಿ ಈ ಪಶ್ಚಿಮಕ್ಕೆ ಮುಖ ಮಾಡಿರುವ ಮನೆಯಲ್ಲಿ ಅಶಾಂತಿ, ಅಥವಾ ಸಮಸ್ಯೆಗಳು ಎದುರಾಗುತ್ತದೆ. ಆದ್ರೆ ಈ ಪಶ್ಚಿಮಕ್ಕೆ ಮುಖ ಮಾಡಿರುವ ಮನೆಯಲ್ಲಿ ನೀವು ಕಡ್ಡಾಯವಾಗಿ ಪಾಲಿಸಬೇಕಾದ ಕೆಲವು ಮುಖ್ಯ ವಾಸ್ತು ನಿಯಮಗಳನ್ನು ನಾವಿಂದು ಹೇಳಲಿದ್ದೇವೆ ನೋಡಿ.
ಮುಖ್ಯ ಪ್ರವೇಶದ್ವಾರ
ಯಾವುದೇ ಮನೆಗೆ ಮುಖ್ಯ ದ್ವಾರವು ಅತ್ಯಂತ ನಿರ್ಣಾಯಕ ಅಂಶವಾಗಿದೆ. ಪಶ್ಚಿಮಾಭಿಮುಖವಾಗಿರುವ ಮನೆಗಾಗಿ, ಪ್ರವೇಶದ್ವಾರವು ಪಶ್ಚಿಮ ಗೋಡೆಯ 3 ನೇ, 4 ನೇ, 5 ನೇ ಅಥವಾ 6 ನೇ ಪಾದ (ಹೆಜ್ಜೆ) ಯಲ್ಲಿರಬೇಕು. ಈ ಪಾದಗಳನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಧನಾತ್ಮಕ ಶಕ್ತಿಯನ್ನು ಮನೆಗೆ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಇದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿರುವ ಸಲಹೆಯಾಗಿದೆ.
ಮಧ್ಯ ಮನೆಯ ವಿನ್ಯಾಸ
ಪಶ್ಚಿಮಕ್ಕೆ ಮುಖಮಾಡಿರುವ ಮನೆಯಲ್ಲಿ ಕುಳಿತುಕೊಳ್ಳುವ ಕುರ್ಚಿಗಳು ಯಾವಾಗಲು ಉತ್ತರ ಅಥವಾ ಪೂರ್ವ ದಿಕ್ಕಿನಂತೆ ಮುಖ ಮಾಡಿರಬೇಕು. ಇದು ಮನೆಗೆ ಉತ್ತಮವಂತೆ. ಅಲ್ಲದೆ ಈ ಮಧ್ಯ ಮನೆಗೆ ಸಾಕಷ್ಟು ಬೆಳಕು, ಗಾಳಿ ಬರುವಂತೆ ಪೂರ್ವ ದಿಕ್ಕಿನಲ್ಲಿ ಕಿಟಕಿ ಬರುವಂತೆ ನೋಡಿಕೊಳ್ಳಬೇಕು.
ಅಡುಗೆ ಮನೆ
ಪಶ್ಚಿಮಾಭಿಮುಖವಾಗಿರುವ ಮನೆಗೆ ಅಡುಗೆ ಮನೆಯು ಆಗ್ನೇಯ ಮೂಲೆಯಲ್ಲಿರಬೇಕು. ಆಗ್ನೇಯವು ಬೆಂಕಿಯ ಅಂಶದಿಂದ ನಿಯಂತ್ರಿಸಲ್ಪಡುತ್ತದೆ, ಇದು ಅಡುಗೆಗೆ ಸೂಕ್ತವಾದ ಸ್ಥಳವಾಗಿದೆ. ಹಾಗೆ ಪೂರ್ವ ದಿಕ್ಕಿಗೆ ಮುಖ ಮಾಡಿ ನಿಂತು ಅಡುಗೆ ಮಾಡುವಂತೆ ವಿನ್ಯಾಸವಿರಬೇಕು.
ಮಲಗುವ ಕೋಣೆ
ಮುಖ್ಯ ಮಲಗುವ ಕೋಣೆಯನ್ನು ಮನೆಯ ನೈಋತ್ಯ ಮೂಲೆಯಲ್ಲಿ ಇರಿಸಬೇಕು. ಪಶ್ಚಿಮ ಅಥವಾ ವಾಯುವ್ಯ ಮೂಲೆಯನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಇದು ಉತ್ತಮ ಆರೋಗ್ಯ ಮತ್ತು ಶೈಕ್ಷಣಿಕ ಯಶಸ್ಸನ್ನು ಉತ್ತೇಜಿಸುತ್ತದೆ. ಹಾಗೆ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗುವುದನ್ನು ತಪ್ಪಿಸಿ.
ಬಾತ್ ರೂಮ್ ಹಾಗೂ ಶೌಚಾಲಯ
ಸ್ನಾನಗೃಹಗಳು ಮತ್ತು ಶೌಚಾಲಯಗಳನ್ನು ಮನೆಯ ವಾಯುವ್ಯ ಅಥವಾ ಆಗ್ನೇಯ ಮೂಲೆಗಳಲ್ಲಿ ಇಡಬೇಕು. ಆದರೆ ಈ ಎರಡೂ ಕೋಣೆಗಳು ಪೂರ್ವ ದಿಕ್ಕಿಗೆ ಇರುವುದನ್ನು ತಪ್ಪಿಸಿ ಇದು ಮನೆಗೆ ಶುಭ ವಲ್ಲ.
ಪೂಜಾ ಕೊಠಡಿ
ಪೂಜಾ ಕೋಣೆ ಅಥವಾ ದೇವರ ಕೋಣೆ ಈಶಾನ್ಯ ಮೂಲೆಯಲ್ಲಿರಬೇಕು. ಮನೆ ಪಶ್ಚಿಮಾಭಿಮುಖವಾಗಿರುವುದರಿಂದ ಪೂಜಾ ಕೊಠಡಿಯು ಈಶಾನ್ಯ ದಿಕ್ಕಿ ಮುಖ ಮಾಡಿರಬೇಕು, ಇದು ಸಂಪತ್ತು, ಆರೋಗ್ಯದ ಸಂಕೇತವಾಗಿದೆ.



Click it and Unblock the Notifications
