Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಅಡುಗೆ ಮನೆ ಸಿಂಕ್ ಹೊಸತರಂತೆ ಹೊಳೆಯಲು ಇಲ್ಲಿದೆ ಟಿಪ್ಸ್..!!
ಮನೆಯಲ್ಲಿ ನಾವು ನಿತ್ಯ ಎಲ್ಲಾ ವಸ್ತುಗಳ ಸ್ವಚ್ಛ ಮಾಡುತ್ತಿರುತ್ತೇವೆ. ಅದರಲ್ಲೂ ಅಡುಗೆ ಮನೆ ಯಾವಾಗಲು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು ಎಂಬುದು ಗೃಹಿಣಿಯರ ಬಯಕೆಯಾಗಿರುತ್ತೆ. ಮನೆಯ ಉಳಿದ ಜಾಗಕ್ಕಿಂತಲೂ ಅಡುಗೆ ಮನೆ ಬಹುಬೇಗ ಕಲೆಗಳಿಂದ ತುಂಬಿಕೊಳ್ಳುತ್ತದೆ. ಹೀಗಾಗಿ ಮಹಿಳೆಯರು ಅಡುಗೆ ಮನೆಯ ಸ್ವಚ್ಛತೆಗೆ ಹೆಚ್ಚು ಒತ್ತು ನೀಡುವುದು ನಾವು ನೋಡಬಹುದು.
ಅದರಲ್ಲೂ ಅಡುಗೆ ಮನೆಯ ಪಾತ್ರೆಗಳು ಒಂದೊಂದು ಅಡುಗೆಯಲ್ಲೂ ಕಲೆಯಾಗುವುದು ಸಾಮಾನ್ಯ. ಹಾಗೆ ಅಡುಗೆ ಮನೆಯ ಸಿಂಕ್ ಯಾವಾಗಲು ಕೊಳೆಯಿಂದ ಕೂಡಿರುತ್ತೆ. ನೀವು ಎಷ್ಟೇ ನೀರು ಹಾಕುತ್ತಿದ್ದರೂ ಕೂಡ ಕೊಳೆ ಹಾಗೆ ಉಳಿದುಬಿಡುತ್ತದೆ. ನಿತ್ಯ ನೀವು ಸಿಂಕ್ ತೊಳೆಯದೇ ಹಾಗೆಯೇ ಬಿಟ್ಟರೆ ಕಲೆಗಳು ಹೆಚ್ಚಾಗುತ್ತವೆ.

ಸಿಂಕ್ ಹೆಚ್ಚು ದಿನ ತೊಳೆಯದೇ ಬಿಟ್ಟರೆ ಕಲೆಗಳಿಂದ ಕೂಡಿ ವಾಸನೆ ಬರುವುದು ನೋಡಬಹುದು. ಹಾಗಾದ್ರೆ ಸುಲಭವಾಗಿ ಅಡುಗೆ ಮನೆ ಸಿಂಕ್ ಕ್ಲೀನ್ ಮಾಡುವುದು ಹೇಗೆ? ಮನೆಯಲ್ಲಿರುವ ವಸ್ತುಗಳನ್ನೇ ಬಳಸಿ ಸಿಂಕ್ ಅನ್ನು ಹೊಳೆಯುವಂತೆ ಮಾಡುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೊದಲು ಹಲ್ಲು ಉಜ್ಜು ಪೇಸ್ಟ್ ತೆಗೆದುಕೊಂಡು ಅದನ್ನು ಒಂದು ಹಳೆಯ ಬ್ರಷ್‌ಗೆ ಹಾಕಿಕೊಂಡು ನೀರು ಹಾಕದೆಯೇ ಉಜ್ಜಿಕೊಳ್ಳಬೇಕು. ಒಂದು ಮೂಲೆಯನ್ನು ಬಿಡದೆ ಸಂಪೂರ್ಣ ಹಚ್ಚಿಕೊಳ್ಳಬೇಕು. ನಂತರ 10 ನಿಮಿಷ ಹಾಗೆಯೆ ಒಣಗಲು ಬಿಡಿ. ನಂತರ ಸ್ವಲ್ಪ ನೀರನ್ನು ಚಿಮುಕಿಸಿಕೊಂಡು ಪಾತ್ರೆ ಉಜ್ಜುವ ಸ್ಕ್ರಬ್ ನಿಂದ ಉಜ್ಜಿಕೊಳ್ಳಿ.
ನಂತರ ಕ್ಲೀನ್ ಆದ ಬಳಿಕ ನೀರಿನಿಂದ ಒಮ್ಮೆ ತೊಳೆದುಕೊಳ್ಳಿ. ಇಷ್ಟಾದರೆ ಸಿಂಕ್ ಹೊಸ ಬಣ್ಣಕ್ಕೆ ತಿರುಗುತ್ತದೆ. ಬಿಳಿ ಬಿಳಿಯಾಗಿ ಹೊಳೆಯುತ್ತದೆ. ನೀವು ಯಾವ ಕಂಪನಿಯ ಪೇಸ್ಟ್ ಬೇಕಾದರು ಬಳಸಬಹುದು. ವಾರದಲ್ಲಿ ಒಮ್ಮೆ ಈ ರೀತಿ ಮಾಡಿದರೆ ಸಿಂಕ್ ಸುಂದರವಾಗುತ್ತದೆ. ಕಲೆಗಳು ನಿವಾರಣೆಯಾಗುತ್ತದೆ.
ಕುಕ್ಕರ್ ಕ್ಲೀನ್ ಮಾಡುವುದು ಹೇಗೆ?
ಮನೆಯಲ್ಲಿ ಕುಕ್ಕರ್‌ಗಳು ಬಹುಬೇಗ ಕಲೆಯಾಗುತ್ತಿರುವುತ್ತದೆ. ಬೇಳೆ ಕರಟುವುದು, ಪಲಾವ್ ಮಾಡುವಾಗ ಅನ್ನ ಮಾಡುವಾಗ ತಳ ಹಿಡಿದು ಕಲೆಯಾಗುವುದು ಹಾಗೆ ಇಟ್ಟಲ್ಲಿಯೇ ಸೀದು ಹೋಗಿರುವ ಕಲೆಗಳು ಉಂಟಾಗಿರುತ್ತದೆ. ಕುಕ್ಕರ್‌ನ ತಳದಲ್ಲಿ ಕಪ್ಪು ಕಲೆಗಳು ಉಳಿದುಬಿಡುತ್ತವೆ. ಈ ಕಲೆಯನ್ನು ನೀವು ಯಾವುದೇ ಸೋಪುಗಳು, ಪುಡಿಗಳು, ಲಿಕ್ವಿಡ್ ಹಾಕಿ ಉಜ್ಜಿದರು ಕ್ಲೀನ್ ಆಗುವುದೇ ಇಲ್ಲ. ಬದಲಿಗೆ ಮತ್ತಷ್ಟು ಕಠಿಣವಾಗುತ್ತದೆ.
ಆದ್ರೆ ನಾವಿಂದು ಸುಲಭವಾಗಿ ಈ ಕಲೆಗಳ ನಿವಾರಿಸಿ ಮೊದಲಿನಂತೆ ಕುಕ್ಕರ್ ಹೊಳೆಯುವಂತೆ ಮಾಡಲು ಈ ರೀತಿಯ ವಿಧಾನವನ್ನು ಒಮ್ಮೆ ನೀವು ಟ್ರೈ ಮಾಡಿ ನೋಡಿ.
ಮೊದಲು ಕಲೆ ಹಿಡಿದಿರುವ ಕುಕ್ಕರ್ ತೆಗೆದುಕೊಂಡು ಒಮ್ಮೆ ನೀರಿನಿಂದ ತೊಳೆದುಕೊಳ್ಳಿ. ಅನಂತರ ಯಾವುದಾರು ಬಟ್ಟೆಯಿಂದ ಒರೆಸಿಕೊಳ್ಳಿ. ನಂತರ ಒಲೆಯನ್ನು ಹೊತ್ತಿಸಿ ಅದರ ಮೇಲೆ ಇಟ್ಟು ಸಣ್ಣ ಉರಿಯಲ್ಲಿ ಕುಕ್ಕರ್ ಕಾಯಿಸಿ. ನಂತರ ಒಂದು ಗ್ಲಾಸ್ ನೀರು ಹಾಕಿಕೊಳ್ಳಿ, ನಂತರ ಇದಕ್ಕೆ ಬಟ್ಟೆ ತೊಳೆಯಲು ಬಳಸುವ ಪುಡಿ, ಸ್ಪೂನ್ ಉಪ್ಪು, ಅಡುಗೆ ಸೋಡಾ, ಅರ್ಧ ನಿಂಬೆ ಹಿಂಡಿ ಈ ನೀರು ಕುದಿ ಬರಲು ಬಿಡಬೇಕು.
ನೀರು ಕುದಿಯಲು ಆರಂಭಿಸಿ 3 ನಿಮಿಷದ ಬಳಿಕ ಒಲೆ ಆಫ್ ಮಾಡಿ ಕುಕ್ಕರ್ ಅನ್ನು ಇಳಿಸಿಕೊಳ್ಳಿ. ನಂತರ ಯಾವುದಾದರು ಪಾತ್ರೆ ತೊಳೆಯುವ ಲಿಕ್ವಿಡ್ ಅನ್ನು ಬೌಲ್‌ಗೆ ಹಾಕಿಕೊಂಡು ಅದಕ್ಕೆ ಅಡುಗೆ ಸೋಡಾ, ಅರ್ಧ ನಿಂಬೆ ಹಿಂಡಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ, ಈ ಮಿಶ್ರಣದಿಂದ ಕುಕ್ಕರ್ ಅನ್ನು ಚೆನ್ನಾಗಿ ಉಜ್ಜಿಕೊಳ್ಳಿ. ನಂತರ ನೀರಿನಿಂದ ತೊಳೆಯಿರಿ.
ಹೀಗೆ ಮಾಡಿದರೆ ಎಂತಹ ಕಲೆಗಳು, ಎಷ್ಟು ಹಳೆಯ ಕಲೆಗಳು ಇದ್ದರೂ ಮರೆಯಾಗುತ್ತವೆ. ನೀವು ಕೂಡ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ. ಕುಕ್ಕರ್ ಮಾತ್ರವಲ್ಲ ಯಾವುದೇ ಪಾತ್ರೆಗಳು ಕಲೆಯಾಗಿದ್ದರೆ ಈ ರೀತಿ ಮಾಡಿ ನೋಡಿ.



Click it and Unblock the Notifications
