Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಹೀಗೆ ಮಾಡಿದ್ರೆ ಇನ್ನೆಂದು ನೊಣಗಳು ಮನೆ ಬಳಿಯೂ ಬರಲ್ಲ..!
ಎಲ್ಲರ ಮನೆಯ ಸಾಮಾನ್ಯ ಸಮಸ್ಯೆ ಅಂದ್ರೆ ಅದು ಕೀಟಗಳು, ಅಡುಗೆ ಮನೆಯಿಂದ ಹಿಡಿದು ಮಲಗುವ ಕೋಣೆಯಲ್ಲೂ ಕಾಟ ಕೊಡುತ್ತವೆ. ರಾತ್ರಿ ಹೊತ್ತು ಸೊಳ್ಳೆಗಳ ಕಾಟವಾದರೆ ಹಗಲಲ್ಲಿ ನೊಣ, ಇರುವೆಗಳು ಕಾಡುತ್ತವೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ನೊಣಗಳ ಕಾಟ ಇದ್ದೇ ಇರುತ್ತೆ. ಮಳೆಗಾಲ ಹಾಗೂ ಬೇಸಿಗೆಯಲ್ಲಿ ಇವು ಹೆಚ್ಚು.
ಇನ್ನು ಅಡುಗೆ ಮನೆಯಲ್ಲಿ ನೊಣಗಳು ಬಂದರೆ ಗೃಹಿಣಿಯರಿಗೆ ತಲೆನೋವು. ಯಾಕೆಂದ್ರೆ ಅಡುಗೆಗೆಳ ಮೇಲೆ ಕೂರುವುದು, ತಟ್ಟೆ, ಲೋಟ, ಪಾತ್ರೆಗಳ ಮೇಲೆ ಕುಳಿತು ರೋಗ ಹರಡುವ ವೈರಸ್‌ಗಳಾಗಿ ಮಾರ್ಪಡುತ್ತವೆ. ಇತ್ತ ಅವುಗಳ ನಿವಾರಣೆಗೆ ಹಲವು ಸೂತ್ರಗಳಿದ್ದರು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇದು ಫಲ ನೀಡಲ್ಲ.

ರೂಮ್ ಫ್ರೇಶ್ನರ್, ನೊಣ ಓಡಿಸುವ ಸ್ಪ್ರೇಷಗಳು, ಪುಡಿಗಳು ಹೀಗೆ ಒಂದಲ್ಲಾ ಒಂದು ಮದ್ದು ಇದೆ. ಆದ್ರೆ ಇದೆಲ್ಲವೂ ಕ್ಷಣಿಕ ಮಾತ್ರ ಒಂದೆರಡು ವಾರದಲ್ಲಿ ನೊಣಗಳು ಮೊದಲಿಗಿಂತಲೂ ಹೆಚ್ಚಾಗಿ ಕಾಣಿಸಿಕೊಳ್ಳಲು ಆರಂಭಿಸುತ್ತವೆ. ನೊಣಗಳಿಂದ ಚಿಕ್ಕ ಮಕ್ಕಳು ಹೆಚ್ಚಾಗಿ ಸಮಸ್ಯೆ ಎದರಿಸುತ್ತಾರೆ, ಯಾಕಂದ್ರೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಕಾರಣದಿಂದಾಗಿ ಮಕ್ಕಳು ಬಹುಬೇಗ ರೋಗಗಳಿಗೆ ತುತ್ತಾಗುತ್ತಾರೆ.
ನೊಣಗಳು, ಜ್ವರದಿಂದ ಹಿಡಿದು, ಹೊಟ್ಟೆಗೆ ಸಂಬಂಧಿಸಿದ ಹಲವು ರೀತಿಯ ರೋಗಕಾರಕಗಳನ್ನು ಹರಡುತ್ತವೆ. ನೊಣಗಳು ಮನೆಯಲ್ಲಿ ಹೆಚ್ಚಾಗದಂತೆ ತಡೆಯುವುದು ನಮ್ಮ ಆರೋಗ್ಯದ ದೃಷ್ಟಿಯಿಂದಲೂ ಬಹಳ ಅಗತ್ಯ. ಹಾಗಾದ್ರೆ ಮನೆಯಲ್ಲಿ ನೊಣಗಳು ಹರಡದಂತೆ ತಡೆಯುವುದು ಹೇಗೆ?, ನೊಣಗಳಿಗೆ ಮನೆಮದ್ದು ಏನು? ಶಾಶ್ವತವಾಗಿ ನೊಣಗಳಿಂದ ಮುಕ್ತಿ ಪಡೆಯಲು ಏನು ಮಾಡಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಉಪ್ಪಿನ ದ್ರವಣ
ಒಂದು ಗ್ಲಾಸ್‌ನಲ್ಲಿ ಉಪ್ಪು ಹಾಕಿ ಅದಕ್ಕೆ ನೀರು ಹಾಕಿ ಚೆನ್ನಾಗಿ ಕರಗಿಸಿಕೊಳ್ಳಿ. ಬಳಿಕ ಇದನ್ನು ಸ್ಪೇ ಬಾಟಲಿ ಅಥವಾ ಬಟ್ಟೆಯನ್ನು ಒದ್ದೆ ಮಾಡಿಕೊಂಡು ಇಲ್ಲವೆ ಹಾಗೆಯೆ ಹನಿಗಳನ್ನು ಎಲ್ಲಿ ನೊಣಗಳು ಹೆಚ್ಚಾಗಿದೆಯೋ ಅಲ್ಲಿ ಹಾಕಿರಿ. ನೀವು ಯಾವುದೇ ವಸ್ತು ಇಟ್ಟರೂ ಅದರ ಮೇಲೆ ನೊಣಗಳೂ ಕುಳಿತುಕೊಳ್ಳುತ್ತವೆ. ಆದರೆ ನೊಣಗಳು ಎಂದಿಗೂ ಉಪ್ಪಿನ ಮೇಲೆ ಕೂರುವುದಿಲ್ಲ.
ನಿಂಬೆ-ಲವಂಗ
ಒಂದು ನಿಂಬೆ ಹಣ್ಣು ತೆಗೆದುಕೊಂಡು ಕತ್ತರಿಸಿಕೊಂಡು ಇದಕ್ಕೆ 6 ರಿಂದ 7 ಲವಂಗವನ್ನು ಚುಚ್ಚಬೇಕು. ಈ ನಿಂಬೆಯನ್ನು ನೊಣಗಳು ಎಲ್ಲಿ ಹೆಚ್ಚಾಗಿವೆಯೋ ಆ ಜಾಗದಲ್ಲಿ ಇಡಬೇಕು. ಅಡುಗೆ ಮನೆ, ಹಾಲ್, ದೇವರ ಕೋಣೆ ಹೀಗೆ ಎಲ್ಲಿ ಬೇಕಾದರೂ ಈ ನಿಂಬೆಯನ್ನ ಇಡಿ. ಈ ರೀತಿ ಲವಂಗ ನಿಂಬೆಯಿಂದ ಹೊರಬರುವ ರಾಸಾಯನಿಕವು ನೊಣಗಳನ್ನು ದೂರ ಓಡಿಸಲಿದೆ.
ಓಂಕಾಳು-ಬೆಳ್ಳುಳ್ಳಿ
ಒಂದು ಸಣ್ಣ ಸ್ಟೀಲ್ ಬೌಲ್‌ನಲ್ಲಿ ಓಂಕಾಳು-ಬೆಳ್ಳುಳ್ಳಿ ಹಾಕಿಕೊಳ್ಳಿ. ಬಳಿಕ ಇದಕ್ಕೆ ಪಲಾವ್ ಎಲೆಯನ್ನು ಸಣ್ಣದಾಗು ಪುಡಿ ಮಾಡಿ ಅದಕ್ಕೆ ಹಾಕಿ. ನಂತರ 1 ಕರ್ಪೂರ ಪುಡಿ ಮಾಡಿ ಹಾಕಿಕೊಳ್ಳಿ. ಬಳಿಕ 1 ಸ್ಪೂನ್ ಬೇವಿನ ಎಣ್ಣೆ ಅಥವಾ ತುಪ್ಪವನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಇದಕ್ಕೆ ಬೆಂಕಿ ಹಚ್ಚಿ ಉರಿಯಲು ಇಡಬೇಕು. ಬೆಂಕಿ ಉರಿಯದಿದ್ದರೆ ಕರ್ಪೂರ ಹಾಕಿ ಬೆಂಕಿ ಹೊತ್ತಿಸಿ. ಇದರ ಹೊಗೆಯಿಂದ ನೊಣಗಳು ಸೇರಿ ಸೊಳ್ಳೆಗಳು ಸಹ ಹೊರಗೆ ಹೋಗುತ್ತವೆ.
ಲವಂಗ ಸ್ಪ್ರೇ
ಲವಂಗವನ್ನು ನೀರಿನಲ್ಲಿ ಹಾಕಿ ನೆನೆಸಿಟ್ಟು ಬಳಿಕ ಒಂದು ಗ್ಲಾಸ್ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು. ಬಳಿಕ ಅದನ್ನು ತಣ್ಣಗಾಗಲು ಬಿಡಬೇಕು. ನಂತರ ಲವಂಗದ ನೀರನ್ನು ತೆಗೆದು ಬದಿಗಿಟ್ಟುಕೊಳ್ಳಿ. ಈಗ ನಿಂಬೆಹಣ್ಣನ್ನು ಹಿಂಡಿ ಅದರ ಹುಳಿ ತೆಗೆದುಕೊಳ್ಳಿ. ಈಗ ಒಂದು ಬಾಟಲಿಗೆ ಲವಂಗದ ನೀರು ಹಾಗೂ ನಿಂಬೆ ರಸವನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ನೀರನ್ನು ಸ್ಪ್ರೇ ಮಾಡಿದರೆ ಮತ್ತೆಂದು ನೊಣಗಳು ಮನೆಯೊಳಗೆ ಬರುವುದಿಲ್ಲ.



Click it and Unblock the Notifications