Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಬೇಸಿಗೆಯ ಬಿಸಿ ತಣಿಸಲು ಶ್ವಾನಗಳಿಗೆ ಈ ಆಹಾರ ಕೊಟ್ರೆ ಒಳ್ಳೆಯದು !
ಬೇಸಿಗೆ ಕಾಲದಲ್ಲಿ ಈ ಸಿಕ್ಕಾಪಟ್ಟೆ ಸೆಕೆ ತಡೆಯೋಕಾಗದೇ ಮನುಷ್ಯರಾದ ನಾವೇ ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುತ್ತೇವೆ. ನಾವು ತಿನ್ನುವ ಆಹಾರವಿರಬಹುದು, ನಾವು ಮಾಡುವ ಚಟುವಟಿಕೆ ಹೀಗೆ ಎಲ್ಲವೂ ಬದಲಾಗುತ್ತದೆ. ಹೀಗಿರುವಾಗ ಮೂಕ ಪ್ರಾಣಿಯಾದ ನಾಯಿಯ ಕಾಳಜಿ ಮಾಡುವುದು ತುಂಬಾನೇ ಮುಖ್ಯವಾಗುತ್ತದೆ. ಈ ರಣ ಬಿಸಿಲಿಗೆ ಅವುಗಳು ಕೂಡ ನಮ್ಮಂತೆಯೇ ಒದ್ದಾಡುತ್ತದೆ. ಇಂತಹ ಸಂದರ್ಭದಲ್ಲಿ ಅವುಗಳ ದೇಹವನ್ನು ತಂಪಾಗಿಡುವಂತಹ ಆಹಾರ ಪದಾರ್ಥಗಳನ್ನು ನೀಡಬೇಕು. ಹಾಗಾದ್ರೆ ಎಂತಹ ಆಹಾರ ನೀಡಬೇಕು ಅನ್ನೋದನ್ನು ತಿಳಿಯೋಣ.
1. ತೆಂಗಿನಕಾಯಿ ನೀರು
ಬೇಸಿಗೆ ಕಾಲದಲ್ಲಿ ತೆಂಗಿನ ಕಾಯಿ ನೀರು ಕುಡಿಯೋದ್ರಿಂದ ಇದು ನಮ್ಮನ್ನು ರಿಫ್ರೆಶ್ ಆಗಿಡಲು ಸಹಾಯ ಮಾಡುತ್ತದೆ. ನಾಯಿಗಳಿಗೂ ಕೂಡ ತೆಂಗಿನಕಾಯಿ ನೀರನ್ನು ನೀಡಬಹುದು. ಇದ್ರಲ್ಲಿ ಎಲೆಕ್ಟ್ರೋಲೈಟ್ಸ್, ಕ್ಯಾಲ್ಸಿಯಂ, ಪೊಟ್ಯಾಶಿಯಂ, ಮತ್ತು ವಿಟಮಿನ್ ಸಿ ಅಂಶವಿದೆ. ಇದು ದೇಹವನ್ನು ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತದೆ. ಹೀಗಾಗಿ ಬೇಸಿಗೆ ಸಮಯದಲ್ಲಿ ನಿಮ್ಮ ಶ್ವಾನಗಳಿಗೆ ತೆಂಗಿನಕಾಯಿ ನೀರು ನೀಡಿ.

2. ಮೊಸರು ಮತ್ತು ಮಜ್ಜಿಗೆ
ಮೊಸರು ಹಾಗೂ ಮಜ್ಜಿಗೆ ಈ ಬೇಸಿಗೆಗೆ ತುಂಬಾನೇ ಒಳ್ಳೆಯದು. ಇದರಲ್ಲಿರುವ ಬ್ಯಾಕ್ಟೀರಿಯಾಗಳು ಬೇಸಿಗೆಯಲ್ಲಿ ಉಂಟಾಗುವ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಇದ್ರಲ್ಲಿರುವ ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯಾವು ಈ ಬಿಸಿಲಿನಲ್ಲಿ ನಿಮ್ಮ ಶ್ವಾನಗಳ ದೇಹಕ್ಕೆ ತುಂಬಾನೇ ಒಳ್ಳೆಯದು. ಇದು ನೈಸರ್ಗಿಕ ಪ್ರೋಬಯಾಟಿಕ್ ಆಗಿದ್ದು, ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ
3. ಮಾವಿನ ಹಣ್ಣು
ಈ ಬೇಸಿಗೆಯಲ್ಲಿ ಮಾವಿನ ಹಣ್ಣುಗಳನ್ನು ನಿಮ್ಮ ಪ್ರೀತಿಯ ಶ್ವಾನಗಳಿಗೂ ನೀಡಿ. ಮಾವಿನಹಣ್ಣುಗಳ ಬೀಜ ಮತ್ತು ಹೊರ ಸಿಪ್ಪೆಯನ್ನು ಹೊರತುಪಡಿಸಿ ಶ್ವಾನಗಳಿಗೆ ನೀಡಬಹುದು. ಮಾವಿನ ಹಣ್ಣಿನಲ್ಲಿ ಎ, ಬಿ6, ಸಿ, ಇ, ಆ್ಯಂಟಿಆಕ್ಸಿಡೆಂಟ್‌ಗಳು, ಫ್ಲೇವನಾಯ್ಡ್‌ಗಳು ಮತ್ತು ಫೈಬರ್‌ನಂತಹ ವಿಟಮಿನ್‌ಗಳು ಸಮೃದ್ಧವಾಗಿವೆ. ಎಲ್ಲಾ ಪೋಷಕಾಂಶಗಳನ್ನು ಹೊಂದಿರುವ ಮಾವಿಹಣ್ಣು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಮಾತ್ರವಲ್ಲದೇ ಈ ಬೇಸಿಗೆಯಲ್ಲಿ ನಾಯಿಗಳು ಆಸೆ ಪಟ್ಟು ತಿನ್ನುತ್ತವೆ.
4. ಕಲ್ಲಂಗಡಿ ಹಣ್ಣು
ಕಲ್ಲಂಗಡಿ ಹಣ್ಣಿನಲ್ಲಿ ಶೇಕಡಾ 90% ನೀರಿನ ಅಂಶವಿದ್ದು, ಇದು ಈ ಬೇಸಿಗೆಗೆ ತುಂಬಾನೇ ಉತ್ತಮ ಆಹಾರ ಅಂತಾನೇ ಹೇಳಬಹುದು. ಇದು ಪ್ರಾಣಿಗಳ ದೇಹವನ್ನು ಹೈಡ್ರೇಟ್ ಮಾಡುತ್ತದೆ. ಇದ್ರಲ್ಲಿ ಪೊಟ್ಯಾಶಿಯಂ, ವಿಟಮಿನ್ ಬಿ6, ಎ ಮತ್ತು ಸಿ ಇದೆ. ಇನ್ನೂ ನಾಯಿಗಳಿಗೆ ಕಲ್ಲಂಗಡಿ ಹಣ್ಣನ್ನು ತಿನ್ನಲು ಕೊಡೋದಕ್ಕೆ ಮೊದಲು ಎಲ್ಲಾ ಬೀಜಗಳನ್ನು ತೆಗೆದರೆ ಉತ್ತಮ. ಇದು ಅವುಗಳು ಶ್ವಾನಗಳ ಕರುಳಿಗೆ ಅಡಚಣೆಯನ್ನು ಉಂಟು ಮಾಡುವ ಸಾಧ್ಯತೆ ಇದೆ.
5. ಸೌತೆಕಾಯಿ
ಶ್ವಾನಗಳಿಗೆ ಈ ಬೇಸಿಗೆಯಲ್ಲಿ ಸೌತೆಕಾಯಿ ತಿನ್ನಲು ಕೊಟ್ಟರೆ ತುಂಬಾನೇ ಒಳ್ಳೆಯದು. ಇದ್ರಲ್ಲಿ ತಾಮ್ರ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಜೊತೆಗೆ ಬಿ1, ಬಿ7, ಸಿ ಮತ್ತು ಕೆ ನಂತಹ ಜೀವಸತ್ವಗಳನ್ನು ಹೊಂದಿದೆ. ಇನ್ನೂ ನಾಯಿಗಳಿಗೆ ತೂಕ ಕಳೆದುಕೊಳ್ಳೋದಕ್ಕೂ ಇದು ಸಹಾಯ ಮಾಡುತ್ತದೆ. ಸೌತೆಕಾಯಿಯಲ್ಲಿ ಕಾರ್ಬೋಹೈಡ್ರೇಟ್‌ಗಳು ಮತ್ತು ಸಕ್ಕರೆಯ ಮಟ್ಟವು ತುಂಬಾ ಕಡಿಮೆಯಿದ್ದು, ನಾಯಿಗಳಿಗೆ ಯಾವುದೇ ರೀತಿ ತೊಂದರೆ ಆಗೋದಿಲ್ಲ.
6. ಐಸ್‌ಕ್ರೀಮ್
ನಾಯಿಗಳಿಗೆ ಯಾವಾಗಲೂ ಐಸ್‌ಕ್ರೀಮ್ ನೀಡುವುದು ಒಳ್ಳೆಯದಲ್ಲ. ಯಾವಾಗಲಾದರೂ ಒಮ್ಮೆ ವೆನ್ನಿಲ್ಲಾ ಐಸ್‌ಕ್ರೀಮ್ ಕೊಡಬಹುದು. ಕೆಲವು ಶ್ವಾನಗಳ ದೇಹಕ್ಕೆ ಅತಿಯಾದ ಲ್ಯಾಕ್ಟೋಸ್ ಅಂಶ ಸರಿ ಹೊಂದೋದಿಲ್ಲ. ಹೀಗಾಗಿ ನೀವು ಮನೆಯಲ್ಲೇ ಐಸ್‌ಕ್ರೀಮ್ ತಯಾರಿಸಿ ನೀಡಬಹುದು. ನಾಯಿಗಳ ದೇಹಕ್ಕೆ ಸರಿ ಹೊಂದುವ ಹಾಗೆ ಐಸ್‌ಕ್ರೀಮ್ ತಯಾರು ಮಾಡಿ ನೀಡಬಹುದು, ಇದರಿಂದ ಯಾವುದೇ ರೀತಿ ತೊಂದರೆಯಾಗೋದಿಲ್ಲ.
7. ಬ್ಲೂಬೆರಿ ಹಣ್ಣುಗಳು
ಬ್ಲೂ ಬೆರಿ ಹಣ್ಣುಗಳಲ್ಲಿ ಪೋಷಕಾಂಶ ಅಧಿಕ ಪ್ರಮಾಣದಲ್ಲಿದೆ. ಬ್ಲೂ ಬೆರಿಯಲ್ಲಿ ಫೈಬರ್, ವಿಟಮಿನ್ ಸಿ ಹಾಗೂ ಕಡಿಮೆ ಫ್ಯಾಟ್ ಇದೆ. ಇದು ದೇಹದಲ್ಲಿ ಆಂಟಿಆಕ್ಸೈಡ್ ಅಂಶ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದ್ರಲ್ಲಿ ಕ್ಯಾಲೋರಿ ಮತ್ತು ಸಕ್ಕರೆ ಅಂಶ ಕಡಿಮೆ ಪ್ರಮಾಣದಲ್ಲಿ ಇರೋದ್ರಿಂದ ಈ ಬೇಸಿಗೆಯಲ್ಲಿ ಶ್ವಾನಗಳಿಗೆ ನೀಡೋದ್ರಿಂದ ಯಾವುದೇ ರೀತಿ ತೊಂದರೆಯಿಲ್ಲ.
8. ಶುಂಠಿ
ಈ ಬೇಸಿಗೆಗೆ ಹೊಟ್ಟೆ ಹಾಗೂ ಇಡೀ ದೇಹವೇ ಉರಿ ಬಂದ ಅನುಭವವಾಗುತ್ತದೆ. ಶುಂಠಿಯು ಶ್ವಾನಗಳಿಗೆ ತಂಪಾದ ಅನುಭವ ನೀಡುತ್ತದೆ ಹಾಗೂ ಉರಿಯೂತದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ತೆಂಗಿನ ನೀರಿನಲ್ಲಿ ಶುಂಠಿಯನ್ನು ಸೇರಿಸಿ ಶ್ವಾನಗಳಿಗೆ ನೀಡಿ. ಅಥವಾ ನೀರು ಕೊಡುವ ಸಂದರ್ಬದಲ್ಲಿ ಅದರಲ್ಲಿ ಶುಂಠಿ ರಸ ಸೇರಿಸಿ. ಶುಂಠಿ ಬೇಸಿಗೆಯಲ್ಲಿ ತುಂಬಾನೇ ಪರಿಣಾಮಕಾರಿಯಾಗಿದೆ.
ಬೇಸಿಗೆಯಲ್ಲಿ ನಿಮ್ಮ ಸಾಕು ಪ್ರಾಣಿಗಳ ಕಾಳಜಿ ವಹಿಸೋದು ನಿಮ್ಮ ಜವಾಬ್ದಾರಿಯಾಗಿದೆ. ಸಾಕಷ್ಟು ನೀರು ಜೊತಗೆ ಇಂತಹ ಆಹಾರಗಳನ್ನೇ ಸಾಧ್ಯವಾದಷ್ಟು ಶ್ವಾನಗಳಿಗೆ ನೀಡಿ.



Click it and Unblock the Notifications


