Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ದೊಡ್ಡಪತ್ರೆ ಗಿಡ ಒಂದರಿಂದಲೇ ಎಷ್ಟೆಲ್ಲಾ ಮನೆಮದ್ದು ಮಾಡಬಹುದು ಗೊತ್ತಾ?
ನಮ್ಮ ಸುತ್ತಮುತ್ತಲು ಸಿಗುವ ಹಲವು ಗಿಡಗಳು ನಮ್ಮ ದೈನಂದಿನ ಆರೋಗ್ಯ ಸುಧಾರಿಸುವ ಒಂದು ರೀತಿಯ ಔಷಧಿಗಳಾಗಿರುತ್ತದೆ. ಆದ್ರೆ ನಾವು ಅದನ್ನು ನಿರ್ಲಕ್ಷಿಸಿರುತ್ತೇವೆ. ನಾವು ಯಾವಾಗಲೂ ಮಾತ್ರೆ, ಇಂಜಕ್ಷನ್, ಮಾರಕಟ್ಟೆಯಲ್ಲಿ ಸಿಗುವ ದ್ರಾವಣ, ಸ್ಪ್ರೇಗಳು ಹೀಗೆ ಇಂಗ್ಲೀಷ್ ಔಷಧಿ ಎಂದು ಕರೆಯುವ ವಿಧಾನಕ್ಕೆ ಮರುಳಾಗಿದ್ದೇವೆ. ಈ ಔಷಧಿಯು ಮುಖ್ಯ ಎನಿಸಿದ್ದರು ಸಣ್ಣಪುಟ್ಟ ಸಮಸ್ಯೆಗೂ ನಾವಿಂದು ಆಸ್ಪತ್ರೆ, ಮೆಡಿಕಲ್ ಹುಡುಕುತ್ತಿರುವುದನ್ನು ನೋಡಬಹುದು.
ಆದ್ರೆ ಪ್ರಾಚೀನ ಕಾಲದಿಂದ ಗಿಡಮೂಲಿಕೆ, ನಾಟಿ ಔಷಧಿ, ಆಯುರ್ವೇದದಂತಹ ಅತ್ಯಂತ ಸುರಕ್ಷಿತ ವಿಧಾನವನ್ನು ನಾವು ಕಡೆಗಣಿಸುತ್ತಾ ಬಂದಿದ್ದೇವೆ. ನಾವು ಆಹಾರಕ್ಕಾಗಿ ಬಳಸುವ ಅದೆಷ್ಟೋ ವಸ್ತುಗಳು ಔಷಧಿ ಗಿಡಗಳು ಎಂಬುದೇ ನಮಗೆ ತಿಳಿದಿಲ್ಲ. ನಾವು ವಾಣಿಜ್ಯ ಉದ್ದೇಶದಿಂದಲೋ ಅಥವಾ ಮನೆಯ ಅಲಂಕಾರದ ಉದ್ದೇಶದಿಂದ ಬೆಳೆಸಿರುವ ಗಿಡಗಳು ಔಷಧಿ ಗುಣಗಳ ಹೊಂದಿರುವ ಗಿಡ ಎಂಬುದನ್ನೇ ನಾವಿ ತಿಳಿದುಕೊಂಡಿರುವುದಿಲ್ಲ.

ಇತ್ತ ಮನೆಯಲ್ಲಿಯೂ ಸಹ ನಾವು ಬೆಳೆಯುವ ಕೆಲವು ಗಿಡಗಳು ಈ ಔಷಧಿ ಸಸ್ಯಗಳಾಗಿವೆ. ಅದರಲ್ಲಿ ನಾವಿಂದು ದೊಡ್ಡ ಪತ್ರೆ ಗಿಡ ಅಥವಾ ಅಜ್ವೈನಾ, ಮೆಕ್ಸಿಕನ್ ಮಿಂಟ್ ಬಗ್ಗೆ ತಿಳಿದುಕೊಳ್ಳೋಣ. ನೋಡಲು ಪುದಿನ ಎಲೆಗಳಂತೆ, ಪುದಿನ ಗಿಡದಂತೆಯೇ ಕಂಡುಬರುವ ಈ ಅಜ್ವೈನ ಗಿಡವು ಹತ್ತು ಹಲವು ಆರೋಗ್ಯಕರ ಅಂಶಗಳನ್ನು ತನ್ನಲ್ಲಿಟ್ಟುಕೊಂಡಿದೆ.
ನಾವು ಈ ದೊಡ್ಡ ಪತ್ರೆ ಗಿಡವನ್ನು ಆಹಾರ ತಯಾರಿಕೆಯ ಉದ್ದೇಶದಿಂದ ಮನೆಯಲ್ಲಿ ಅಥವಾ ಮಾರುಕಟ್ಟೆಯಿಂದ ಖರೀದಿಸಿ ತರುತ್ತೇವೆ. ಆದರೆ ಇದರ ಆರೋಗ್ಯಕರ ಲಾಭಗಳ ಕುರಿತು ನಮಗೆ ಅರಿವಿರುವುದಿಲ್ಲ. ಈ ಎಲೆಗಳನ್ನ ಹಲವು ರೀತಿಯ ಅಡುಗೆಗೆ ಬಳಸುವುದನ್ನು ನಾವು ನೋಡಬಹುದು.
ಹಾಗಾದ್ರೆ ಈ ದೊಡ್ಡ ಪತ್ರೆ ಗಿಡ ಉಪಯೋಗವೇನು? ಈ ಗಿಡ ಮನೆಯಲ್ಲಿ ಬೆಳೆಸುವುದು ಹೇಗೆ ಎಂಬುದನ್ನು ನೋಡೋಣ.
ಶೀತ ಮತ್ತು ಕೆಮ್ಮು ಇದ್ದರೆ ಸುಲಭ ಪರಿಹಾರ
ನಿಮಗೆ ಕಾಲೋಚಿತವಾಗಿ ಉಂಟಾಗುವ ಶೀತ ಹಾಗೂ ಕೆಮ್ಮು ಸೇರಿದಂತೆ ಗಂಟಲು ನೋವು, ಮೂಗು ಸೋರುವುದು ಸೇರಿ ಅನೇಕ ಸಮಸ್ಯೆಗೆ ಒಳಗಾಗುತ್ತೀರಿ. ಈ ಸಮಸ್ಯೆಗಳಿಗೆ ಪರಿಹಾರ ಎಂದರೆ ಈ ದೊಡ್ಡ ಪತ್ರೆ ಗಿಡ. ಇದನ್ನು ಅಜ್ವೈನ ಗಿಡ ಅಂತಲೂ ಕರೆಯುತ್ತಾರೆ. ಅಜ್ವೈನ್ ಎಲೆಗಳನ್ನು ರಿನಲ್ಲಿ ಕುದಿಸಿ ಕುಡಿಯುವುದು ನಿರಂತರ ಶೀತ ಮತ್ತು ಕೆಮ್ಮನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮೊದಲು ಒಂದು ಗ್ಲಾಸ್‌ನಲ್ಲಿ ನೀರು ಇಟ್ಟು ಅದಕ್ಕೆ 5ರಿಂದ 6 ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ನೀರಿಗೆ ಜರಡಿ ಹಿಡಿದು ಆ ನೀರಿಗೆ ಒಂದು ಹನಿ ನಿಂಬೆರಸ ಹಾಕಿಕೊಂಡು ಕುಡಿದರೆ ಕಫ, ಶೀತ, ಕೆಮ್ಮು ನಿವಾರಣೆಯಾಗುತ್ತದೆ.
ತೂಕ ಇಳಿಸಲು ಇವು ಸಹಕಾರಿ
ದೊಡ್ಡ ಪತ್ರೆ ಎಲೆಗಳಲ್ಲಿ ಕಡಿಮೆ ಕ್ಯಾಲೋರಿ ಹೊಂದಿರುವ ಕಾರಣ ಇದು ಹೃದಯದ ಆರೋಗ್ಯಕ್ಕೆ ಬಹಳ ಉತ್ತಮ. ಇದರಲ್ಲಿ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್‌ಗಳು ಕಡಿಮೆ ಇರುವ ಕಾರಣ ತೂಕ ಇಳಿಸಲು ಸಹಾಯವಾಗುತ್ತದೆ. ನಾರಿನ ಅಂಶ ಹೆಚ್ಚಾಗಿರುವುದರಿಂದ ಜೀರ್ಣಕ್ರಿಯೆಗೆ ಇದು ಸಹಕಾರಿಯಾಗಿದೆ. ಹಾಗೆಯೇ ಗ್ಯಾಸ್, ಅಜೀರ್ಣ ಮತ್ತು ಹೊಟ್ಟೆ ಉಬ್ಬರ ಸಮಸ್ಯೆ ನಿವಾರಣೆಯಾಗುತ್ತದೆ. ಮಲಬದ್ಧತೆ ಕಡಿಮೆಯಾಗುತ್ತದೆ. ಕರುಳಿನಲ್ಲಿನ ಹುಣ್ಣು ಮತ್ತು ನೋವು ನಿವಾರಣೆಗೂ ಇದು ಸಹಕಾರಿಯಾಗಿದೆ.
ಈ ಗಿಡ ನೆಡುವುದು ಹೇಗೆ?
ಈ ದೊಡ್ಡ ಪತ್ರೆ ಗಿಡವನ್ನು ನರ್ಸರಿಯಿಂದ ತಂದು ನೆಡಬಹುದು. ಒಂದು ದೊಡ್ಡ ಪಾಟ್‌ನಲ್ಲಿ ಹದವಾಗಿ ನೀರು ಬೆರೆಸಿದ ಮಣ್ಣು ಹಾಕಿ ನೆಡಬೇಕು. ಚೆನ್ನಾಗಿ ಗಾಳಿ ಬೆಳಕು ಬರುವ ಕಡೆ ಮಾತ್ರ ಈ ಗಿಡ ಹಸಿರಾಗಿ ಬೆಳೆಯುತ್ತದೆ. ಹಾಗೆ ಈ ಗಿಡಕ್ಕೆ ವಾರಕ್ಕೆ ಒಮ್ಮೆ ನೀರು ಹಾಕಿದರೆ ಸಾಕಾಗುತ್ತದೆ. ತುಂಬಾ ದೊಡ್ಡದಾಗಿ ಈ ಗಿಡ ಬೆಳೆಯುವುದಿಲ್ಲ. ಹೀಗಾಗಿ ಇದರ ಚಿಗುರನ್ನು ನೀವು ನಿಯಮಿತವಾಗಿ ಕತ್ತರಿಸುತ್ತಾ ಇದ್ದರೆ ಗೊಡ ತಂಬಾ ಅಗಲವಾಗಿ ಹರಡಿಕೊಂಡು ಬೆಳೆಯುತ್ತದೆ.



Click it and Unblock the Notifications
