Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ತರಕಾರಿಗಳಿಂದ ಹುಳುಗಳ ಹೊರತೆಗೆಯೋದು ಹೇಗೆ? ಈ ಟ್ರಿಕ್ಸ್ ಮಾಡಿ ನೋಡಿ..!
ನೀವು ಮನೆಯಲ್ಲಿ ಬಗೆ ಬಗೆಯ ತರಕಾರಿಗಳ ಬಳಸಿಕೊಂಡು ಅತ್ಯಂತ ರುಚಿಕರ ಅಡುಗೆ ಮಾಡಿ ಸವಿಯುತ್ತೀರಿ. ಹಸಿರು ತರಕಾರಿ ನಮ್ಮ ದೇಹಕ್ಕೆ ಎಷ್ಟು ಮುಖ್ಯ ಅನ್ನೋದನ್ನು ನೀವೆಲ್ಲರು ತಿಳಿದಿದ್ದೀರಿ. ಅದರಲ್ಲೂ ಕೆಲವು ತರಕಾರಿಗಳು ನಿಮಗೆ ಕಬ್ಬಿಣಾಂಶ, ಕ್ಯಾಲೋರಿ, ಫೈಬರ್, ಹೀಗೆ ದೇಹಕ್ಕೆ ಅಗತ್ಯವಿರುವ ಕೆಲವು ಅಂಶಗಳು ನಮಗೆ ಸಿಗುತ್ತವೆ. ಈಗ ಹಸಿರು ತರಕಾರಿಗಳನ್ನೇ ಹೆಚ್ಚು ಆಹಾರದಲ್ಲಿ ಬಳಸುವಂತೆ ಸಲಹೆ ಕೂಡ ನೀಡುವುದು ನಾವು ನೋಡಬಹುದು.
ಹಾಗೆ ಈ ಹಸಿರು ತರಕಾರಿಯು ಮಾರುಕಟ್ಟೆಯಲ್ಲಿ ಸಿಗುತ್ತವೆ, ಆದ್ರೆ ಮಾರುಕಟ್ಟೆ ತಲುಪುವ ಮುನ್ನ ಅವು ಹಲವು ಬಗೆಯ ರಾಸಾಯನಿಕ ಕ್ರಿಯೆಗೆ ಒಳಪಡುತ್ತವೆ. ಕೀಟಗಳಿಂದ ಕಾಪಾಡಿಕೊಳ್ಳಲು ರೈತರು ಇವುಗಳಿಗೆ ಕೀಟನಾಶಕ್ಕೆ ಸಿಂಪಡಿಸುತ್ತಾರೆ. ಹಾಗೆ ಉಗ್ರಾಣಗಳಲ್ಲಿ ಹಾಳಾಗದಂತೆ ಕಾಪಾಡಿಕೊಳ್ಳಲು ಕೂಡ ಇವು ಕೀಟನಾಶಕ ಸಿಂಪಡಣೆಯಂತಹ ಕ್ರಿಯೆಗೆ ಒಳಗಾಗಬೇಕಾಗುತ್ತದೆ.

ಹೀಗಾಗಿ ಇತ್ತೀಚಿಗೆ ಮಾರುಕಟ್ಟೆಯಲ್ಲಿ ಸಿಗುವ ತರಕಾರಿ, ಹಣ್ಣುಗಳನ್ನು ನಾವು ಚೆನ್ನಾಗಿ ತೊಳೆದು ಸೇವಿಸಬೇಕಾಗಿದೆ. ಇಲ್ಲದಿದ್ದರೆ ಅನಾರೋಗ್ಯ, ಹಾಗೆ ಪ್ರಾಣಕ್ಕೆ ಸಂಚಕಾರ ತರುವಷ್ಟು ಅಪಾಯ ಹೆಚ್ಚಿಸಿವೆ. ಹಾಗೆ ನೀವು ತಂದಿರುವ ತರಕಾರಿಗಳಲ್ಲಿ ಕೀಟ, ಹುಳುಗಳು ಇರುವುದು ನೀವು ಗಮನಿಸಿರಬಹುದು. ಅದರಲ್ಲೂ ಹಸಿರು ತರಕಾರಿಯನ್ನು ತಂದಾಗ ನೀವು ಪರಿಶೀಲಿಸದೆ ಬಳಸಲು ಸಾಧ್ಯವೇ ಇಲ್ಲ.
ಅದರಲ್ಲೂ ಮುಖ್ಯವಾಗಿ ಬದನೆಕಾಯಿ, ಹೂಕೋಸು, ಬೀನ್ಸ್, ಎಲೆಕೋಸು, ಪಾಲಕ್, ಬ್ರೊಕೋಲಿಯಂತಹ ತರಕಾರಿಗಳಲ್ಲಿ ಹುಳುಗಳು ಇದ್ದೇ ಇರುತ್ತವೆ. ಕೆಲವೊಂದು ನಾವು ಕ್ಲೀನ್ ಮಾಡುವಾಗ ಅತೀ ಹೆಚ್ಚಿನ ಗುಳುಗಳು ಇದ್ದರೆ ಅದನ್ನು ಎಸೆಯುತ್ತೇವೆ. ಮತ್ತೆ ಕೆಲವೊಮ್ಮೆ ಹುಳುಗಳ ಸ್ವಚ್ಛ ಮಾಡಿ, ಇಲ್ಲವೆ ಹುಳುವಿದ್ದ ತರಕಾರಿಯ ಭಾಗವನ್ನು ಕತ್ತರಿಸಿ ಅದನ್ನು ಬಳಸುತ್ತೇವೆ.
ಆದರೆ ಅಡುಗೆ ಮಾಡುವಾಗ ಬಹಳಷ್ಟು ಸಮಯವನ್ನು ಈ ಪ್ರಕ್ರಿಯೆಯಲ್ಲಿ ಕಳೆಯಬೇಕಾಗುತ್ತದೆ. ಹಾಗೆ ಹೂಕೋಸು, ಪಾಲಕ್ ಸೊಪ್ಪಿನಲ್ಲಿ ಹುಳುಗಳ ಆರಿಸುವುದು ಬಹಳ ಕಷ್ಡವಾಗುತ್ತೆ. ಈ ಹುಳುಗಳು ಕೂಡ ಹಸಿರು ಬಣ್ಣದಲ್ಲಿ ಕೂಡಿರುವುದರಿಂದ ಅವುಗಳ ಪತ್ತೆ ಸಮಯದ ಜೊತೆಗೆ ಸಾಹಸಮಯ ಕೆಲಸವಾಗುತ್ತದೆ.
ಹಾಗಾದ್ರೆ ನಾವಿಂದು ಈ ತರಕಾರಿಗಳಿಂದ ಸುಲಭವಾಗಿ ಹುಳುಗಳ ಪತ್ತೆ ಮಾಡುವುದು ಹಾಗೆ ಹುಳುಗಳನ್ನು ಹೊರತೆಗೆಯುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಅದರಲ್ಲೂ ಸುಲಭದ ವಿಧಾನದಲ್ಲಿ ಹುಳುಗಳನ್ನು ತರಕಾರಿಯಿಂದ ಬೇರ್ಪಡಿಸುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೊದಲು ಒಂದು ಬೌಲ್‌ನಲ್ಲಿ ಬಿಸಿ ನೀರು ತೆಗೆದುಕೊಳ್ಳಿ. ಅನಂತರ ಈ ಬಿಸಿ ನೀರಿಗೆ ಹಸಿ ತರಕಾರಿಯನ್ನು ದೊಡ್ಡದಾಗಿ ಹೆಚ್ಚಿಕೊಂಡು ಹಾಕಬೇಕು. ಒಂದು ವೇಳೆ ಸೊಪ್ಪಾಗಿದ್ದರೆ ದೊಡ್ಡ ಪಾತ್ರೆಯಲ್ಲಿ ನೀರು ತೆಗೆದುಕೊಂಡು ಹಾಗೆ ಅದ್ದಿಕೊಳ್ಳಿ. ಆದ್ರೆ ತರಕಾರಿ ಆದರೆ ಅದನ್ನು ತುಂಡಾಗಿ ಕತ್ತರಿಸಿಕೊಂಡು ನೀರಿಗೆ ಹಾಕಿ ಬಳಿಕ ಎರಡು ಸ್ಪೂನ್ ಉಪ್ಪು ಹಾಕಿ ಮಿಕ್ಸ್ ಮಾಡಿ.
ಇಷ್ಟಾದರೆ ಆ ತರಕಾರಿಯಲ್ಲಿ ಹುಳುಗಳಿದ್ದರೆ ಒಂದೊಂದಾಗಿ ಮೇಲಕ್ಕೆ ಬರುತ್ತದೆ. ಹಾಗೆ ಈ ನೀರಿಗೆ ಅರಶಿಣ ಪುಡಿ ಕೂಡ ಸೇರಿಸಿ ಈ ರೀತಿ ಮಾಡಬಹುದು ಹುಳುಗಳಿದ್ದರೆ ಬಹುಬೇಗ ಮೇಲಕ್ಕೆ ಬರುತ್ತವೆ. ಅನಂತರ ಉಪ್ಪು ನೀರಿನಿಂದ ತರಕಾರಿಯನ್ನು ತೆಗೆದು ಸ್ವಚ್ಛವಾದ ನೀರಿನಿಂದ ತೊಳೆದರೆ ಸಾಕಾಗುತ್ತದೆ. ಹೀಗೆ ಪಾಲಕ್ ಸೊಪ್ಪಿಗೂ ಕೂಡ ಮಾಡಬಹುದು.
ಸಣ್ಣ ಸಣ್ಣ ಹುಳುಗಳು ನಿಮ್ಮ ಕಣ್ಣಿಗೆ ಬೀಳದಿದ್ದರೂ ಈ ವಿಧಾನದ ಮೂಲಕ ಹೊರಹಾಕಬಹುದು. ನೀವು ಕೂಡ ಮನೆಯಲ್ಲಿ ತರಕಾರಿಗಳ ತಂದಾಗ ಈ ರೀತಿ ವಿಧಾನದಲ್ಲಿ ಸ್ವಚ್ಛ ಮಾಡಲು ಪ್ರಯತ್ನಿಸಿ ಫಲಿತಾಂಶ ಕೂಡ ನೀವೆ ನೋಡಬಹುದು. ಈಗ ತರಕಾರಿಗಳಿಂದ ರಾಸಾಯನಿಕ ಹೊರತೆಗೆಯಲು ಗ್ಯಾಜೆಟ್‌ಗಳು ಕೂಡ ಮಾರುಕಟ್ಟೆಗೆ ಬಂದಿವೆ.



Click it and Unblock the Notifications
