Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮುಖದಲ್ಲಿ ಕಪ್ಪು ಕಲೆ, ಡಾರ್ಕ್ ಸರ್ಕಲ್‌ಗೆ ಮನೆಯಲ್ಲಿ ಮದ್ದು: 5 ನಿಮಿಷದ ಟಿಪ್ಸ್ ಇವು!
ಮಹಿಳೆಯರು ತಮ್ಮ ಸೌಂದರ್ಯದ ಕುರಿತು ಬಹಳ ಕಾಳಜಿ ಎಚ್ಚರಿಕೆ ಇಡುತ್ತಾರೆ. ಸೌಂದರ್ಯಕ್ಕೆ ಮತ್ತೊಂದು ಹೆಸರು ಸ್ತ್ರೀ ಎನ್ನಬಹುದು. ಮುಖವು ಕಲೆ ಮುಕ್ತವಾಗಿ ಕಾಣಿಸಬೇಕು ಎಂದು ಎಲ್ಲರು ಬಯಸುತ್ತಾರೆ. ಹಾಗೆ ಇದಕ್ಕಾಗಿ ಎಲ್ಲರು ವಿವಿಧ ರೀತಿಯ ಕ್ರೀಮ್‌ಗಳು, ಔಷಧಿಗಳು ಹಚ್ಚುವುದು ನೋಡಬಹುದು. ಹಾಗೆ ಪಾರ್ಲರ್‌ಗಳಿಗೆ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ.
ಹಾಗೆ ಮುಖದಲ್ಲಿ ಕಲೆಯಾದರೆ, ಮೊಡವೆಯಾದರೆ, ಡಾರ್ಕ್ ಸರ್ಕಲ್ ಆದೆ ಎಲ್ಲದಕ್ಕೂ ಸಾವಿರಾರು ರೂಪಾಯಿ ಬಳಸಿ ಪರಿಹಾರ ಮಾಡುವುದು ನೋಡಬಹುದು. ಆದ್ರೆ ಇದೆಲ್ಲದಕ್ಕೂ ನೀವು ಸುಲಭವಾಗಿ ಪರಿಹಾರ ಪಡೆಯುವುದು ಕಷ್ಟವಾಗಬಹುದು. ಆದ್ರೆ ನಾವಿಂದು ಸುಲಭವಾಗಿ ಮನೆಯಲ್ಲಿರುವ ವಸ್ತುಗಳಿಂದಲೇ ನಿಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.

ಅದ್ರಲ್ಲೂ ಮನೆಯಲ್ಲಿ ಇರುವ ವಸ್ತುವನ್ನು ಬಳಸಿಕೊಂಡು ಮುಖದ ಕೆಲೆ, ಡಾರ್ಕ್ ಸರ್ಕಲ್ ಹಾಗೆ, ಸುಕ್ಕನ್ನು ನಿವಾರಣೆ ಮಾಡಿಕೊಳ್ಳಬಹುದು. ಹಾಗಾದ್ರೆ ಯುವತಿಯರ ಸೌಂದರ್ಯ ವೃದ್ಧಿಸುವಂತಹ ಈ ಟಿಪ್ಸ್ ಯಾವುದು? ಏನು ಮಾಡಬೇಕು ಅನ್ನೋದನ್ನು ತಿಳಿದುಕೊಳ್ಳೋಣ.
ಮುಖದ ಕಾಂತಿ ಹೆಚ್ಚಿಸಲು ನೀವು ಕಡಲೆ ಹಿಟ್ಟು ಬಳಸಿ
ಮೊದಲಿಗೆ ಒಂದು ಬೌಲ್‌ಗೆ ಕಡಲೆ ಹಿಟ್ಟನ್ನು ಹಾಕಿಕೊಂಡು ಅದಕ್ಕೆ ಅದಕ್ಕೆ ಹಸಿ ಹಾಲು ಹಾಕಿ ಕಲಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳಬೇಕು. ತೆಳುವಾದ ಪೇಸ್ಟ್ ಮಾಡಿ ಹಚ್ಚಿಕೊಳ್ಳಿ. ಡ್ರೈ ಸ್ಕಿನ್ ಇದ್ದವರು ಹಾಲಿನ ಬದಲು ಮೊಸರು ಬಳಸಿ. ಇದನ್ನು ಹಚ್ಚಿಕೊಂಡು 5 ರಿಂದ 10 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ. ನಿತ್ಯವೂ ಇದನ್ನು ಮಾಡಬಹುದು. ಅಥವಾ ವಾರದಲ್ಲಿ ಈ ರೀತಿ 3ರಿಂದ 4 ಬಾರಿ ಮಾಡಿ. 2 ವಾರದಲ್ಲಿ ನಿಮ್ಮ ಮುಖದಲ್ಲಿನ ಬದಲಾವಣೆ ನೋಡಬಹುದು. ಮೊಡವೆಗಳಿದ್ದರೆ ಈ ರೀತಿ ಕಡಲೆ ಹಿಟ್ಟನ್ನು ಬಳಸಬೇಡಿ.
ಡಾರ್ಕ್ ಸರ್ಕಲ್ ತೆಗೆಯೋದು ಹೇಗೆ?
ಒಂದು ಆಲೂಗಡ್ಡೆಯ ಸಿಪ್ಪೆಯನ್ನು ತೆಗೆದು ಸಣ್ಣದಾಗಿ ಕತ್ತರಿಸಿಕೊಂಡು ಒಂದು ಮಿಕ್ಸಿ ಜಾರ್‌ಗೆ ಹಾಕಿ ರುಬ್ಬಿಕೊಳ್ಳಿ. ನೀರು ಬಳಸಬೇಡಿ. ನಂತರ ರುಬ್ಬಿದ ಆಲೂಗಡ್ಡೆಯನ್ನು ಒಮದು ಬಟ್ಟೆಯ ಸಹಾಯದಿಂದ ಹಿಂಡಿ ಅದರ ರಸವನ್ನು ತೆಗೆದುಕೊಳ್ಳಬೇಕು. ನಂತರ ಇದನ್ನು ಡಾರ್ಕ್ ಸರ್ಕಲ್ ಆಗಿರುವ ಕಡೆಗೆ ಹಚ್ಚಿಕೊಳ್ಳಬೇಕು. ಹತ್ತಿಯ ಸಹಾಯದಿಂದ ಹಚ್ಚಿಕೊಳ್ಳಬೇಕು. 10 ನಿಮಿಷ ಬಿಟ್ಟು ತೊಳೆದುಕೊಂಡರೆ ಸಾಕಾಗುತ್ತದೆ. ಈ ರೀತಿ ನಿತ್ಯವೂ ಮಾಡಬಹುದು. ಇಲ್ಲವೆ ವಾರದಲ್ಲಿ 4 ಬಾರಿ ಮಾಡಿ. 2 ವಾರದಲ್ಲಿ ಕಣ್ಣಿನ ಕೆಳಗೆ ಕಪ್ಪಾಗಿರುವ ಜಾಗವು ಹೊಳಪು ಬರಲಿದೆ.
ತುಟಿ ಕಪ್ಪಾಗಿದ್ದರೆ ಏನು ಮಾಡಬೇಕು?
ತುಟಿಗಳು ಕಪ್ಪಾದರೆ ಮನೆಯಲ್ಲಿರುವ ಬೀಟ್ರೂಟ್ ಅನ್ನು ಕತ್ತರಿಸಿಕೊಂಡು ಹಾಗೆ ನೇರವಾಗಿಯೂ ತುಟಿಗಳ ಮೇಲೆ ಉಜ್ಜಿಕೊಳ್ಳಬಹುದು. ಇಲ್ಲವೆ ಸಣ್ಣ ತುಂಡುಗಳ ಮಿಕ್ಸಿ ಜಾರ್‌ಗೆ ಹಾಕಿಕೊಂಡು ರುಬ್ಬಿ ಅದರ ರಸ ತೆಗೆದು ರಸವನ್ನು ಕೂಡ ತುಟಿಗಳ ಮೇಲೆ ಹಚ್ಚಿಕೊಳ್ಳಬಹುದು. ಈ ರೀತಿ ತುಟಿ ಮೇಲೆ ಬೀಟ್ರೂಟ್ ರಸ ಹಚ್ಚಿದರೆ 2 ವಾರದಲ್ಲಿ ಹೊಸ ರೀತಿ ಬಣ್ಣಕ್ಕೆ ತಿರುಗಲಿದೆ. ಈ ಮೇಲಿನ ಯಾವುದೇ ಅಂಶಗಳು ಹಾನಿ ಉಂಟು ಮಾಡುವುದಿಲ್ಲ. ಎಲ್ಲರು ಮಾಡಬಹುದು. ಹಾಗೆ ಮನೆಯಲ್ಲಿಯೇ ಸಿಗುವ ಅಂಶಗಳಿವು, ಹೀಗಾಗಿ ನೈಸರ್ಗಿಕವಾಗಿ ಸೌಂದರ್ಯ ಹೆಚ್ಚಿಸಿಕೊಳ್ಳುವ ಟಿಪ್ಸ್ ಇದಾಗಿವೆ.
ಹಕ್ಕುತ್ಯಾಗ: ಈ ಮೇಲೆ ನೀಡಲಾಗಿರುವ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇಲ್ಲಿ ನೀಡಲಾದ ಪ್ರಯೋಗದ ಫಲಿತಾಂಶ ಕುರಿತು ಕನ್ನಡ ಬೋಲ್ಡ್ ಸ್ಕೈ ಆಗಲಿ ಅಥವಾ ಲೇಖಕರಾಗಲಿ ಪ್ರಮಾಣಿಕರಿಸುವುದಿಲ್ಲ. ನೀವು ಇದನ್ನು ನಿಮ್ಮ ಸ್ವಂತ ಆಯ್ಕೆಯ ಮೇರೆಗೆ ಪ್ರಯೋಗಿಸಬಹುದು. ನಮ್ಮ ಉದ್ದೇಶ ಕೇವಲ ಮಾಹಿತಿಯನ್ನು ನೀಡುವುದಾಗಿದೆ



Click it and Unblock the Notifications
