Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಟೆರೇಸ್, ಬಾಲ್ಕನಿಯಲ್ಲಿ ತರಕಾರಿ ಬೆಳೆಯಲು ಟಿಪ್ಸ್
ಮನೆ ಬಳಕೆಗೆ ತರಕಾರಿಯನ್ನು ನಾವೇ ಬೆಳೆಯಬಹುದು. ತರಕಾರಿ ಬೆಳೆಯಲು ಹೊಲ ಇರಬೇಕೆಂದು ಇಲ್ಲ. ಎಷ್ಟೋ ಜನ ತಮ್ಮ ಮನೆಯ ಟೆರೇಸ್‌ನಲ್ಲಿ ತರಕಾರಿ ಬೆಳೆದು ಯಶಸ್ವಿಯಾಗಿದ್ಧಾರೆ.
ಮನೆ ಬಾಲ್ಕನಿ ಅಥವಾ ಟೆರೇಸ್‌ನಲ್ಲಿ ಸೊಪ್ಪು, ತರಕಾರಿಗಳನ್ನು ಆರಾಮವಾಗಿ ಬೆಳೆಯಬಹುದು. ನಾವೇ ತರಕಾರಿ ಬೆಳೆಯುವುದರಿಂದ ಆರೋಗ್ಯ ಲಾಭ, ಹಣ ಲಾಭ.
ನೀವು ಮಾರುಕಟ್ಟೆಗೆ ಹೋಗಿ ತರಕಾರಿ ಬೆಲೆ ಕೇಳಿದರೆ ಬೆಚ್ಚಿ ಬೀಳುವಂತಾಗುವುದು. ರೂ. 500 ಹಿಡಿದು ಹೋದರೆ ಎರಡು ದಿನದ ಅಡುಗೆಗೆ ಬೇಕಾಗುವಷ್ಟು ತರಕಾರಿ ಕೂಡ ಸಿಗುವುದಿಲ್ಲ. ಅಲ್ಲದೆ ಹೊರಗಡೆ ಸಿಗುವಂಥ ತರಕಾರಿಯಲ್ಲಿ ಕೆಮಿಕಲ್ ಹಾಕಿರುತ್ತಾರೋ, ಇಲ್ಲವೋ ಎಂಬುವುದು ಒಂದು ಗೊತ್ತಾಗುವುದಿಲ್ಲ, ಕೆಮಿಕಲ್ ಹಾಕಿದ ತರಕಾರಿಗಳನ್ನು ತಿಂದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು.
ಅದೇ ನಾವೇ ಬೆಳೆದ ತರಕಾರಿಯಾದರೆ ಸಾವಯವ ಗೊಬ್ಬರ ಹಾಕಿ ಬೆಳೆಸಬಹುದು, ಹಣವೂ ಉಳಿಯುತ್ತೆ, ಆರೋಗ್ಯವೂ ಹೆಚ್ಚುತ್ತೆ. ಟೆರೇಸ್ ಗಾರ್ಡನ್ ಮಾಡುವವರಿಗೆ ಕೆಲವೊಂದು ಟಿಪ್ಸ್ ನೀಡಿದ್ದೇವೆ ನೋಡಿ:

ಮೊದಲಿಗೆ ನಿಮಗೆ ಬೇಕಾದ ವಸ್ತುಗಳನ್ನು ಜೋಡಿಸಿ
ಟೆರೇಸ್‌ನಲ್ಲಿ ಮೊದಲು ಏನೆಲ್ಲಾ ಬೇಕು, ಆ ವಸ್ತುಗಳನ್ನು ಜೋಡಿಸಿ. ಮೊದಲಿಗೆ ನಿಮಗೆ ಫಲವತ್ತಾದ ಮಣ್ಣು ಬೇಕು, ಅದನ್ನು ತುಂಬಲು ಹೂ ಕುಂಡ ಅಥವಾ ಗೋಣಿ ಚೀಲ ಬೇಕು. ಅದರಲ್ಲಿ ಮಣ್ಣಿಗೆ ಸೆಗಣಿ ಗೊಬ್ಬರ ಹಾಕಿ ಮಿಕ್ಸ್ ಮಾಡಿ ಮಾಡಿ ಚೀಲದಲ್ಲಿ ತುಂಬಿ. ನಂತರ ಬೀಜಗಳನ್ನು ಹಾಕಿ, ಸ್ವಲ್ಪ ನೀರು ಹಾಕಿ

ಅವುಗಳನ್ನು ಬಿಸಿಲು ಸರಿಯಾಗಿ ಬೀಳುವ ಕಡೆ ಇಡಿ
ಗಿಡಗಳು ಚೆನ್ನಾಗಿ ಬೆಳೆಯಲು ಬಿಸಿಲು ಚೆನ್ನಾಗಿ ಬೀಳುವಂತಿರಬೇಕು. ಯಾವ ಗಿಡವನ್ನು ಎಲ್ಲಿ ಇಡಬೇಕು ಎಂಬುವುದನ್ನು ಮೊದಲೇ ನಿರ್ಧರಿಸಿ ಅದರಂತೆ ಇಡಿ. ನೀವು ಓಡಾಡಿ ಣಿರು ಹಾಕಲು ಅನುಕೂಲಕರವಾಗುವಂತೆ ಅವುಗಳನ್ನು ಜೋಡಿಸಿ.

ಸರಿಯಾದ ಪ್ರಮಾಣದಲ್ಲಿ ನೀರನ್ನು ಹಾಕಿ
ಗಿಡಗಳಿಗೆ ನೀರು ಕಡಿಮೆಯಾಗಬಾರದು, ಅಧಿಕವೂ ಆಗಬಾರದು ಆ ರೀತಿ ಆರೈಕೆ ಮಾಡಬೇಕು. ಇನ್ನು ಮಳೆಗಾಲವಾದರೆ ಮಳೆ ನೀರು ಹೆಚ್ಚು ಬೀಳದಂತೆ ವ್ಯವಸ್ಥೆ ಮಾಡಬೇಕು.

ಕೀಟ ನಾಶಕಗಳನ್ನು ಬಳಸಿ
ಗಿಡಗಳಿಗೆ ಕೀಟಗಳು ದಾಳಿ ಮಾಡದಿರಲು ಕೀಟ ನಾಶಕಗಳನ್ನು ಬಳಸಿ. ಗಿಡ ಹೂ ಬಿಡುವ ಸಮಯದಲ್ಲಿ ತುಂಬಾ ಕೀಟಗಳು ದಾಳಿ ಮಾಡುತ್ತವೆ. ಈ ಸಮಯದಲ್ಲಿ ಸೂಕ್ತವಾದ ಕೀಟ ನಾಶಕಗಳನ್ನು ಬಳಸಿ.

ಗೊಬ್ಬರ
ಮನೆಯಲ್ಲಿ ಪ್ರತಿನಿತ್ಯ ಬಿಸಾಡುವ ತರಕಾರಿ ಸಪ್ಪೆ, ಉಳಿದ ಅನ್ನ, ಮೊಟ್ಟೆ ಸಿಪ್ಪೆ ಇವುಗಳನ್ನು ಗೊಬ್ಬರವಾಗಿ ಬಳಸಬಹುದು. ಸೆಗಣಿ ಗೊಬ್ಬರ ಸಿಕ್ಕರೆ ಅದನ್ನು ಬಳಸಿ.

ಒಮ್ಮೆ ಫಸಲು ಬಂದ ಮೇಲೆ ಹೊಸ ಮಣ್ಣು ಬಳಸಿ
ಒಮ್ಮೆ ಫಸಲು ಬಂದ ನಂತರ ಅದೇ ಮಣ್ಣಿನಲ್ಲಿ ಬೆಳೆದರೆ ಬೆಳೆ ಚೆನ್ನಾಗಿ ಬರುವುದಿಲ್ಲ. ಪುನಃ ಬೆಳೆಯಲು ಹೊಸ ಮಣ್ಣನ್ನು ಬಳಸಿ.



Click it and Unblock the Notifications











