Latest Updates
-
ರಕ್ಷಾಬಂಧನ 2026: ಚಂದ್ರಗ್ರಹಣದ ಭಯ ಬೇಡ, ರಾಖಿ ಕಟ್ಟಲು ಬೆಸ್ಟ್ ಟೈಮ್ ಇಲ್ಲಿದೆ! -
ಉರಿ ಬಿಸಿಲು, ತೇವಾಂಶದ ಕಾಟ: ಎಸಿ ಇಲ್ಲದಿದ್ದರೂ ಫಿಟ್ ಆಗಿರಲು 12 ನಿಮಿಷದ ಸರಳ ವರ್ಕೌಟ್! -
ರಕ್ಷಾಬಂಧನ ಶಾಪಿಂಗ್ ಎಚ್ಚರ: ನಿಮ್ಮ ಹಣ ಕದಿಯಲು ಕಾಯುತ್ತಿದ್ದಾರೆ ಸೈಬರ್ ವಂಚಕರು! -
ಭಾರಿ ಮಳೆ, ಬಿರುಗಾಳಿ ಎಚ್ಚರಿಕೆ: ನಿಮ್ಮ ಅಪಾರ್ಟ್ಮೆಂಟ್ ಸುರಕ್ಷಿತವಾಗಿಡಲು ಈ 30 ನಿಮಿಷದ ಪ್ಲಾನ್ ಫಾಲೋ ಮಾಡಿ -
ಮುಂಬೈನಲ್ಲಿ ಮೋಮೋಸ್ ತಿಂದ 16 ಮಂದಿಗೆ ಫುಡ್ ಪಾಯಿಸನಿಂಗ್: ಹೊರಬಂತು ಶಾಕಿಂಗ್ ಸತ್ಯ, ಸುರಕ್ಷಿತವಾಗಿರುವುದು ಹೇಗೆ? -
ರಕ್ಷಾಬಂಧನ ವಿಶೇಷ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ; ಪ್ರಯಾಣಕ್ಕೂ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಖೇಲೋ ಇಂಡಿಯಾ ಸಂವಾದ ವೀಕ್ಷಿಸುವಾಗ ಜಡತ್ವ ಬೇಡ: 12 ನಿಮಿಷಗಳ ಈ ಸಿಂಪಲ್ ವರ್ಕೌಟ್ ಟ್ರೈ ಮಾಡಿ! -
ಆಗಸ್ಟ್ 27 ಅಥವಾ 28? ರಾಖಿ ಹಬ್ಬದ ಗೊಂದಲಕ್ಕೆ ಇಲ್ಲಿದೆ ಬೆಸ್ಟ್ ಪ್ಲಾನ್! -
ಗುಡುಗು-ಸಿಡಿಲು ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು 15 ನಿಮಿಷಗಳ ತುರ್ತು ಕ್ರಮಗಳು -
ರಕ್ಷಾಬಂಧನಕ್ಕೆ ಸಿಹಿ ಖರೀದಿಸ್ತಿದ್ದೀರಾ? ಈ ತಪ್ಪು ಮಾಡಿದ್ರೆ ಆರೋಗ್ಯಕ್ಕೆ ಕುತ್ತು, ನಕಲಿ ಸ್ವೀಟ್ಸ್ ಪತ್ತೆ!
ಗುಲಾಬಿ ಗಿಡಗಳ ನಿರ್ವಹಣೆಗೆ ಇಲ್ಲಿದೆ ಸುಲಭ ಟಿಪ್ಸ್
ಸಾಮಾನ್ಯವಾಗಿ ಬೇಸಿಗೆ ಕಾಲದ ಋತುವಿನಲ್ಲಿ ಗಿಡ, ಸಸ್ಯಗಳಿಗೆ ಹಾನಿಯುಂಟಾಗುವುದು ಸಹಜ. ಕೆಲವೊಂದು ಗಿಡಗಳಿಗೆ ಬೇಸಿಗೆ ಕಾಲದಲ್ಲಿ ತುಂಬಾ ಗ್ರಹಣಶಕ್ತಿ ಹೊಂದಿರುತ್ತದೆ. ಗುಲಾಬಿ, ಟೊಮೆಟೊ, ಮಲ್ಲಿಗೆ ಹಾಗೂ ವಿವಿಧ ರೀತಿಯ ಅಲಂಕಾರಿಕ ಸಸ್ಯಗಳು ಸಮಸ್ಯೆಗೆ ತುತ್ತಾಗುವ ಗಿಡಗಳು.
ಈ ಎಲ್ಲಾ ಗಿಡಗಳಿಗಿಂತಲೂ ಗುಲಾಬಿ ಸಸ್ಯಗಳಿಗೆ ಹೆಚ್ಚಿನ ಆರೈಕೆ ಮತ್ತು ರಕ್ಷಣೆ ಬೇಕಾಗುತ್ತದೆ. ಗುಲಾಬಿ ತುಂಬಾ ಸುಂದರ ಹೂ ಮತ್ತು ಇದು ಎಲ್ಲರಿಗೂ ಮೆಚ್ಚುಗೆಯ ಸಸ್ಯವಾಗಿದೆ. ಪ್ರತಿಯೊಂದು ಮನೆಯ ಹೂದೋಟದಲ್ಲಿ ಗುಲಾಬಿ ಗಿಡ ನೋಡಲು ಸಿಕ್ಕೇ ಸಿಗುತ್ತದೆ. ಗುಲಾಬಿ ಗಿಡಗಳು ತುಂಬಾ ಸುಕ್ಷ್ಮ ಹಾಗೂ ಹವಾಮಾನ ಮತ್ತು ಉಷ್ಣತೆ ಬದಲಾಗುವ ಕಾರಣ ಇದರ ಮೇಲೆ ಪರಿಣಾಮವಾಗಬಹುದು.

ಬೇಸಿಗೆಗಾಲ ಬಂದಾಗ ನಿಮ್ಮ ಗುಲಾಬಿ ತೋಟವನ್ನು ರಕ್ಷಿಸುವುದು ತುಂಬಾ ಮುಖ್ಯ. ಹಾಗಾಗಿ ಗುಲಾಬಿ ತೋಟಗಾರಿಕೆಗೆ ಕೆಲವೊಂದು ಉಪಯುಕ್ತ ಟಿಪ್ಸ್‌ಗಳಿವೆ. ಈ ಟಿಪ್ಸ್‌ಗಳು ನಿಮ್ಮ ಹೂತೋಟದಲ್ಲಿ ಗುಲಾಬಿ ಗಿಡಗಳ ಆರೈಕೆ ಮಾಡಲು ಖಂಡಿತವಾಗಿಯೂ ನೆರವಾಗಲಿದೆ. ಗುಲಾಬಿ ತೋಟದ ಬಗ್ಗೆ ಇರುವ ಕೆಲವೊಂದು ಸರಳ ಟಿಪ್ಸ್‌ಗಳು ಖಂಡಿತವಾಗಿಯೂ ನಿಮಗೆ ನೆರವಾಗಲಿದೆ.
ಬೇವಿನ ಎಲೆಯ 7 ಹೂದೋಟ ಸಲಹೆಗಳನ್ನು ನಿಮ್ಮದಾಗಿಸಿಕೊಳ್ಳಿ!
ಸುತ್ತಲಿನ ಪ್ರದೇಶ ಸ್ವಚ್ಛವಾಗಿಡಿ:
ಸಾಮಾನ್ಯವಾಗಿ ತೋಟದಲ್ಲಿ ತುಂಬಾ ಒಣಗಿದ ಎಲೆಗಳು, ಮರದ ಕಾಂಡಗಳು ಬಿದ್ದಿರುವುದರಿಂದ, ಇದರಿಂದ ಗುಲಾಬಿ ಗಿಡಗಳಿಗೆ ಬೇಗನೆ ಸೋಂಕಿಗೆ ಗುರಿಯಾಗುತ್ತದೆ. ಒಣಗಿದ ಎಲೆಗಳು ಮತ್ತು ಕಾಂಡಗಳು ತಮ್ಮೊಳಗೆ ಇರುವ ಕೀಟಗಳನ್ನು ಹೊರಹಾಕುತ್ತದೆ. ಯಾವುದೇ ರೀತಿಯ ಸೋಂಕು ಅಥವಾ ಪರಾವಲಂಬಿ ಜೀವಿ ಬರದಂತೆ ಗುಲಾಬಿ ಗಿಡದ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಿ. ತೋಟವನ್ನು ಸ್ವಚ್ಛಗೊಳಿಸುವ ಮೂಲಕ ಅದು ಸುಂದರ ಹಾಗೂ ಕ್ರಮಬದ್ಧವಾಗಿ ಕಾಣುತ್ತದೆ.
ನೀರು:
ಗುಲಾಬಿ ಗಿಡಗಳು ಬೇಸಿಗೆಗಾಲದಲ್ಲಿ ಒಣ ಹಾಗೂ ತೇವಾಂಶರವಹಿತವಾಗುತ್ತದೆ. ಗಿಡಗಳನ್ನು ತಾಜಾ ಮತ್ತು ತೇವಾಂಶಭರಿತವಾಗಿಡಲು ನಿಯಮಿತವಾಗಿ ನೀರು ಹಾಕಿ. ನಿಯಮಿತವಾಗಿ ನೀರು ಹಾಕುವುದರಿಂದ ಗುಲಾಬಿ ಗಿಡದ ಬೇರುಗಳಿಗೆ ತಂಪಾಗಿರುವ ಮಣ್ಣಿನಲ್ಲಿ ನೀರು ಹುಡುಕುವ ಕೆಲಸ ಬೀಳುವುದಿಲ್ಲ. ಎಲ್ಲಾ ಚಟುವಟಿಕೆಗಳಿಗೆ ನೀರು ಪ್ರಮುಖವೆನ್ನುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಗುಲಾಬಿ ಗಿಡಗಳ ಬೆಳವಣಿಗೆ ಮತ್ತು ಹೂ ಬಿಡಲು ಅವುಗಳಿಗೆ ಹೆಚ್ಚಿನ ನೀರು ಬೇಕಾಗಿದೆ.
ಗುಲಾಬಿ ಗಿಡದ ಬುಡವನ್ನು ಚೆನ್ನಾಗಿ ನೋಡಿಕೊಳ್ಳಿ:
ಗುಲಾಬಿ ಗಿಡಗಳಿಗೆ ಕೆಂಪು ಮಣ್ಣು ಮತ್ತು ಗೊಬ್ಬರ ಹಾಕಿ ರಕ್ಷಿಸಿ. ಇದು ಗಿಡಗಳಿಗೆ ಬಲ ಮತ್ತು ಬಿಸಿ ನೀಡುತ್ತದೆ. ಕಾಂಡದ ಆರಂಭಿಕ ಭಾಗವನ್ನು ಇದರ ಮೂಲಕ ರಕ್ಷಿಸುವುದು ತುಂಬಾ ಮುಖ್ಯ. ಇದು ಒಳ್ಳೆಯ ಗುಲಾಬಿ ತೋಟಗಾರಿಕೆಯ ಟಿಪ್ಸ್. ಆದರೆ ಇದಕ್ಕಾಗಿ ತುಂಬಾ ಶ್ರಮ ಬೇಕಾಗುತ್ತದೆ.
ಸರಳವಾಗಿ ಗಾರ್ಡನಿಂಗ್ ಮಾಡುವುದಕ್ಕೆ ಪರಿಣಾಮಕಾರಿ ಸಲಹೆಗಳು
ಒಳಾಂಗಣ ತೋಟಗಾರಿಕೆ:
ಬೇಸಿಗೆಗಾಲದ ಬಿಸಿಯನ್ನು ತಡೆಯಲು ಗುಲಾಬಿ ಗಿಡಗಳನ್ನು ಮನೆಯ ಒಳಗಡೆ ಕೊಂಡುಹೋಗಬಹುದು. ಮನೆಯ ಒಳಗಡೆ ಗುಲಾಬಿ ಗಿಡಗಳನ್ನು ಇಟ್ಟರೆ ಆಗ ಹೆಚ್ಚಿನ ನಿರ್ವಹಣೆ ಬೇಕಾಗುತ್ತದೆ. ಬಾಗಿಲು ಮತ್ತು ಕಿಟಕಿ ಗಿಡದ ಹತ್ತಿರ ಗುಲಾಬಿ ಗಿಡಗಳನ್ನು ಇಡಿ. ಇದಕ್ಕೆ ನೇರವಾಗಿ ಸೂರ್ಯನ ಬೆಳಕು ಬೀಳದಂತೆ ನೋಡಿಕೊಳ್ಳಿ.



Click it and Unblock the Notifications