Latest Updates
-
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು!
ಚಿಕ್ಕದಾದ ಚೊಕ್ಕದಾದ ಕೈ ತೋಟ ನಿರ್ಮಿಸುವುದು ಹೇಗೆ?
ಮನೆ ಎಂದರೆ ಅಲ್ಲಿ ಉದ್ಯಾನವನ ಅತ್ಯವಶ್ಯಕ. ಸುಂದರ ಹೂ ತೋಟ ಮನೆಗೆ ಶೋಭೆಯನ್ನು ತರುತ್ತದೆ ಮತ್ತು ಸುತ್ತಲಿನ ಪರಿಸರವನ್ನು ಆಹ್ಲಾದಮಯವನ್ನಾಗಿಸುತ್ತದೆ.
ಮಹಾ ನಗರಗಳಲ್ಲಿ ಮನೆಗಳು ಸಣ್ಣದಾಗಿರುವುದರಿಂದ ಹೂ ತೋಟಕ್ಕೆ ಬೇಕಾದ ಸಾಕಷ್ಟು ಜಾಗ ಅವರಲ್ಲಿ ಇರುವುದಿಲ್ಲ. ಆದರೂ ಇದ್ದ ಸ್ಥಳದಲ್ಲೆ ಸುಂದರವಾದ ಚೊಕ್ಕದಾದ ಹೂ ತೋಟವನ್ನು ನಿರ್ಮಿಸುವುದು ನಿಮಗೆ ತಿಳಿದಿರಬೇಕು.
ಉದ್ಯಾನವನವನ್ನು ಪ್ರೇಮಿಸುವವರಿಗೆ ಸಣ್ಣ ಸ್ಥಳಾವಕಾಶ ಕೂಡ ಮಹತ್ತರ ಬದಲಾವಣೆಗೆ ದಾರಿ ಮಾಡಿಕೊಡುತ್ತದೆ. ಚಿಕ್ಕದಾದ ಚೊಕ್ಕದಾದ ಕೈ ತೋಟವನ್ನು ನಿರ್ಮಿಸುವ ಕಲೆ ಅವರಲ್ಲಿ ಮೊಳಕೆಯೊಡೆಯುತ್ತದೆ. ನಿಮ್ಮ ಮನೆಯ ಕಿಟಕಿಯಲ್ಲೂ ಸಣ್ಣದಾದ ಹೂತೋಟವನ್ನು ನಿಮಗೆ ನಿರ್ಮಿಸಬಹುದು.

ಆ ಚಿಕ್ಕದಾದ ಸ್ಥಳದಲ್ಲಿ ಸುಂದರ ಕೈ ತೋಟ ನಿರ್ಮಿಸುವುದು ಹೇಗೆಂಬುದು ನಿಮ್ಮ ಚಿಂತೆಯಾಗಿದ್ದರೆ ಅದಕ್ಕಾಗಿ ನಾವಿರುವೆವು ಇಲ್ಲಿ. ಈ ಕೆಲವು ವಿಧಾನಗಳನ್ನು ನೀವು ಅರಿತುಕೊಂಡರೆ ಸುಂದರ ಕೈ ತೋಟ ನಿರ್ಮಾಣ ಅತಿ ಸರಳವಾದುದು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಹಿತ್ತಲ ತೋಟಗಾರಿಕೆಗೆ ಟಿಪ್ಸ್ ಗಳು
ಹರ್ಬಲ್ ಉದ್ಯಾನದ ನಿರ್ಮಾಣ:
ಸಣ್ಣ ಜಾಗ ನಿಮ್ಮಲ್ಲಿದ್ದರೂ ಅದರ ಸರಿಯಾದ ಬಳಕೆಯನ್ನು ನೀವು ಮಾಡಬೇಕು. ಲಿಂಬೆ ಬಳ್ಳಿ, ಇತರ ಗಿಡಮೂಲಿಕೆ ಸಸ್ಯಗಳ ಬಳ್ಳಿಗಳನ್ನು ನೀವು ಪೋಷಿಸಬಹುದು. ಇಂತಹ ಬಳ್ಳಿಗಳಿಗೆ ವಾರಕ್ಕೊಮ್ಮೆ ಹಾಕುವ ನೀರು ಸಾಕಾಗುತ್ತದೆ. ಅದೇ ರೀತಿ ಇವುಗಳ ಪೋಷಣೆಗೆ ಬಹಳಷ್ಟು ಸಮಯ ಬೇಕೆಂದಿಲ್ಲ.
ಸಲಾಡ್ ಗಾರ್ಡನ್ ನಿರ್ಮಿಸಿ:
ಮುಳ್ಳುಸೌತೆ ಹಾಗೂ ಟೊಮೇಟೋ ಇಷ್ಟವೇ?, ನಿಮ್ಮ ಚಿಕ್ಕ ಜಾಗದಲ್ಲಿ ಇವೆರಡೂ ತರಕಾರಿಗಳನ್ನು ಸುಲಭವಾಗಿ ನಿಮಗೆ ಬೆಳೆಸಿಕೊಳ್ಳಬಹುದು. ಇವುಗಳೊಂದಿಗೆ ಇತರೆ ಸಲಾಡ್ ತರಕಾರಿಗಳನ್ನು ನಿಮ್ಮ ಕೈ ತೋಟದಲ್ಲಿ ಬೆಳೆಸಿಕೊಳ್ಳಿ. ಪಾಲಾಕ್, ಬೀಟ್‌ರೋಟ್, ಮೂಲಂಗಿ ಮೊದಲಾದವುಗಳನ್ನು ಬೆಳೆಸಬಹುದು.
ನಿಮ್ಮ ಗಾರ್ಡನ್ ಸುಂದರಗೊಳಿಸಿ:
ಸಣ್ಣ ಸ್ಥಳದಲ್ಲಿ ಹೂಗಳನ್ನು ಬೆಳೆಸಿ ನಿಮ್ಮ ಉದ್ಯಾನವನವನ್ನು ಸುಂದರಗೊಳಿಸಲು ಸಾಧ್ಯ. ಉದ್ದನೆಯ ದಾಹಿಲಾಸ್ ಹಾಗೂ ಗ್ಲೋರಿಸೋಗಳನ್ನು ಕೈ ತೋಟದಲ್ಲಿ ಬೆಳೆಸಬಹುದು. ಪಿಂಕ್ ಹಾಗೂ ನೇರಳೆ ಬಣ್ಣದ ಹೂಗಳನ್ನು ನೆಟ್ಟು ನಿಮ್ಮ ಕೈ ತೋಟವನ್ನು ವರ್ಣರಂಜಿತಗೊಳಿಸಬಹುದು. ಕಾಸ್ಮೋ ಹಾಗೂ ಸವ್ಲಿಯಾವನ್ನು ಬೆಳೆಸಿ ನಿಮ್ಮ ತೋಟದ ಶೋಭೆಯನ್ನು ಹೆಚ್ಚಿಸಬಹುದು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಈ ಗಾರ್ಡನ್ ಕ್ರಾಂತಿಗೆ ನೀವು ರೆಡಿನಾ?
ಸುಂದರ ಕೈ ತೋಟಕ್ಕಾಗಿ ಪೊದೆಗಳ ನಿರ್ಮಾಣ:
ನಿಮ್ಮ ಸಣ್ಣ ಸ್ಥಳಾವಕಾಶದಲ್ಲಿ ಪೊದೆಗಳನ್ನು ಬೆಳೆಸಿ ನಿಮ್ಮ ಕೈ ತೋಟದ ಸುಂದರತೆಯನ್ನು ಹೆಚ್ಚಿಸಬಹುದು. ಇವುಗಳು ನಿಜಕ್ಕೂ ಗಾರ್ಡನ್‌ನ ಸೌಂದರ್ಯವನ್ನು ಹೆಚ್ಚಿಸಬಹುದು. ನಿಮ್ಮ ಸುಂದರ ಗಾರ್ಡನ್‌ನಲ್ಲಿ ಸಂಜೆಯ ವಿರಾಮವನ್ನು ಆರಾಮವಾಗಿ ಕಳೆಯಬಹುದು ಹಾಗೂ ಬಿಸಿ ಚಹಾವನ್ನು ಹೀರುತ್ತಾ ತಣ್ಣಗಿನ ತಂಪು ಪರಿಸರವನ್ನು ಆಸ್ವಾದಿಸಬಹುದು.



Click it and Unblock the Notifications











