Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ಈ ಹೂ ಗಿಡಗಳಿಗೆ ಬಿಸಿಲು ಇಷ್ಟ, ನೆರಳು ಕಷ್ಟ
ನಗರ ಪ್ರದೇಶದಲ್ಲಿ ಮನೆ ಮುಂದೆ ಹೂ ತೋಟ ಮಾಡಲು ಸ್ಥಳಾವಕಾಶವಿರುವುದಿಲ್ಲ. ಆದ್ದರಿಂದ ಹೆಚ್ಚಿನವರು ಮನೆಯ ಆವರಣದಲ್ಲಿ ಹೂ ಕುಂಡವಿಟ್ಟು ಬೆಳೆಯುತ್ತಾರೆ. ಆದರೆ ಎಲ್ಲಾ ಹೂ ಗಿಡಗಳನ್ನು ಹೂ ಕುಂಡದಲ್ಲಿ ಬೆಳೆಯಲು ಸೂಕ್ತವಲ್ಲ.
ಇಲ್ಲಿ ನಾವು ಕೆಲವೊಂದು ಗಿಡಗಳ ಬಗ್ಗೆ ಹೇಳಲಾಗಿದೆ. ಹೂ ಕುಂಡದಲ್ಲಿ ಬೆಳೆಯಲು ಸೂಕ್ತವಾದ ಹೂ ಗಿಡಗಳೆಂದು ನಾವು ಬೆಳೆಯುತ್ತೇವೆ. ಆದರೆ ಈ ಗಿಡಗಳು ಚೆನ್ನಾಗಿ ಬೆಳೆಯಲು ಹೂ ತೋಟದಲ್ಲಿ ನೆಡುವುದು ಸೂಕ್ತ, ಏಕೆಂದರೆ ಈ ಗಿಡಗಳು ಸೊಂಪಾಗಿ ಬೆಳೆದು ಸುಂದರವಾದ ಹೂಗಳನ್ನು ಬಿಡಲು ಇವಕ್ಕೆ ಬಿಸಿಲು ಚೆನ್ನಾಗಿ ಬೀಳಬೇಕು. ಆದ್ದರಿಂದ ಬಿಸಿಲು ತುಂಬಾ ಅಗತ್ಯವಿರುವ ಗಿಡಗಳನ್ನು ಮನೆಯೊಳಗೆ ಬೆಳೆಯಬಾರದು.
ಯಾವ ಗಿಡಗಳನ್ನು ಮನೆಯೊಳಗೆ ಬೆಳೆಯಬಾರದೆಂದು ನೋಡೋಣ ಬನ್ನಿ:

ಆಡಂಮ್ಸ್ ನೀಡಲ್
ಈ ಗಿಡದ ಹೂ ನೋಡಲು ತುಂಬಾ ಸುಂದರವಾಗಿರುತ್ತದೆ. ಈ ಗಿಡ ಹೂ ಬಿಡಲು ಸರಿಯಾದ ಬಿಸಿಲು ಅವಶ್ಯಕ. ಆದ್ದರಿಂದ ಇದನ್ನು ಹೂ ತೋಟದಲ್ಲಿ ಬೆಳೆಯುವುದು ಒಳ್ಳೆಯದು.
ಲೋಳೆಸರ
ಹೆಚ್ಚಿನವರು ಲೋಳೆಸರವನ್ನು ಮನೆಯೊಳಗೆ ಬೆಳೆಯುತ್ತಾರೆ. ಆದರೆ ಈ ಗಿಡ ಸಮೃದ್ಧಿಯಾಗಿ ಬೆಳೆಯಲು ಮನೆಯ ಹೊರಗಡೆ ಬೆಳೆಯುವುದು ಒಳ್ಳೆಯದು. ಆದರೆ ಈ ಗಿಡವನ್ನು ತುಂಬಾ ತಂಪಾದ ಪ್ರದೇಶದಲ್ಲಿ ನೆಡಬೇಡಿ. ಈ ಗಿಡ ಸೊಗಸಾಗಿ ಬೆಳೆಯಲು ಸೂರ್ಯನ ಕಿರಣಗಳು ಬೀಳುವಂತಿರಬೇಕು, ಒಣ ಮಣ್ಣಾಗಿರಬೇಕು.
ಬೋನ್ಸಾಯಿ
ಬೀನ್ಸಾಯಿ ಗಿಡಗಳನ್ನು ಬೆಳೆಸಲು ಇಚ್ಛೆ ಪಡುವುದಾದರೆ ಅದನ್ನು ಚೆನ್ನಾಗಿ ಬಿಸಿಲು ಬೀಳುವ ಕಡೆ ಇಡಿ. ಬೋನ್ಸಾಯಿ ಗಿಡಗಳಿಗೆ ಬಿಸಿಲು ಸರಿಯಾಗಿ ಬೀಳದಿದ್ದರೆ ಅವುಗಳು ಸೊರಗಿ ಹೋಗುತ್ತದೆ.
ಬುಷ್ ಕ್ಲೋವರ್
ಬುಷ್ ಕ್ಲೋವರ್ ನ ಹೂ ಬೇಸಿಗೆಯಲ್ಲಿ ಹೆಚ್ಚಾಗಿ ಅರಳುತ್ತದೆ. ಈ ಗಿಡಕ್ಕೆ ಒಂದು ವಾರಕ್ಕೊಮ್ಮೆ ನೀರು ಹಾಕಿದರೆ ಸಾಕು, ಸೂರ್ಯನ ಬಿಸಿಲು ನೇರವಾಗಿ ಬೀಳುವಂತಹ ಜಾಗದಲ್ಲಿ ಈ ಗಿಡವನ್ನು ನೆಡುವುದು ಒಳ್ಳೆಯದು.



Click it and Unblock the Notifications
