Latest Updates
-
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್
ಹಚ್ಚ ಹಸಿರಿನ ಸೌಂದರ್ಯ ಸೆಳೆಯುವುದು ಮನ
ಹುಲ್ಲು ತಾನಾಗಿ ಬೆಳೆದರೆ ಕಳೆ ಅದೇ ನಾವೇ ಕಷ್ಟಪಟ್ಟು ಬೆಳೆಸಿದರೆ ಅದು ತರುತ್ತದೆ ತೋಟಕ್ಕೆ ಕಳೆ. ಹೌದು ಹೂ ತೋಟದಲ್ಲಿ ಮತ್ತು ಪಾರ್ಕ್ ಗಳಲ್ಲಿ ಹುಲ್ಲನ್ನು ಬೆಳೆಸಲಾಗುವುದು. ಈ ಹುಲ್ಲನ್ನು ಸರಿಯಾಗಿ ಆರೈಕೆ ಮಾಡದಿದ್ದರೆ ಹಾಳಾಗವುದು. ಮನೆಯಲ್ಲಿ ಅಥವಾ ಕೈತೋಟದಲ್ಲಿ ಬೆಳೆಯುವ ಹುಲ್ಲುಗಳಲ್ಲಿ ನಾನಾ ಬಗೆಗಳಿರುತ್ತವೆ. ಅವುಗಳನ್ನು ಸರಿಯಾಗಿ ಬೆಳೆಸಿ ಆಕರ್ಷಕವಾಗಿ ಕತ್ತರಿಸಿದರೆ ಅದರ ಚೆಲುವು ಮನಸೆಳೆಯುವುದು ದಿಟ. ನಿಮ್ಮ ಕೈತೋಟದ ಚೆಲುವನ್ನು ಹೆಚ್ಚಿಸಲು ಹುಲ್ಲುಗಳನ್ನು ಬೆಳೆಸಲು ಇಷ್ಟಪಡುವುದಾದರೆ ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದು.

1. ಉತ್ತಮವಾದ ಹುಲ್ಲು ಆಯ್ಕೆ ಮಾಡಬೇಕು. ಸೊರಗಿದ ಹುಲ್ಲುಗಳನ್ನು ನೆಡಲು ಹೋಗಬೇಡಿ. ಹುಲ್ಲನ್ನು ಬುಡದಿಂದ ಕಿತ್ತು ತಂದು ನೆಡುವ ಬದಲು ಬೀಜ ಹಾಕಬೇಕು. ಈ ಹುಲ್ಲಿನ ಬೀಜಗಳ ಮಣ್ಣಿಗೆ ಹಾಕುವಾಗ ಅವುಗಳು ತುಂಬಾ ತೇವ ಇರಬಾರದು. ಮೆದುವಾಗಿದ್ದರೆ ಅಂತಹ ಬೀಜಗಳು ಚೆನ್ನಾಗಿ ಬೆಳೆಯುವುದಿಲ್ಲ. ಹುಲ್ಲಿನ ಬೀಜವನ್ನು ಹಾಕುವ ನೆಲ ತೇವವಾಗಿರಬೇಕು ಆದರೆ ತುಂಬಾ ತೇವವಾಗಿರಬಾರದು.
2. ಹುಲ್ಲನ್ನು ಹೂ ಕುಂಡದಲ್ಲಿ ಬೆಳೆಸಲು ಇಷ್ಟಪಡುವುದಾದರೆ ಸ್ವಲ್ಪ ಅಗಲವಾದ ಹೂ ಕುಂಡವನ್ನು ಆಯ್ಕೆ ಮಾಡಿ. ಅದರಲ್ಲೂ ಮಣ್ಣಿನ ಹೂ ಕುಂಡಗಳಾದರೆ ನೀರು ಇಂಗಲು ಸಹಕಾರಿಯಾಗುವುದು. ಹೂ ಕುಂಡದಲ್ಲಿ ನೀರು ಹೋಗಲು ಸರಿಯಾದ ತೂತಗಳಿವೆಯೇ ಎಂದು ನೋಡಿ ಕೊಂಡುಕೊಳ್ಳಿ. ಇಲ್ಲದಿದ್ದರೆ ಗಿಡ ಕೊಳೆತು ಹೋಗುವುದು.
3. ಈಗ ಹೂ ಕುಂಡಗಳಿಗೆ ಫಲವತ್ತಾದ ಮಣ್ಣು ತುಂಬಿ. ಹೀಗೆ ತುಂಬುವಾಗ ಕುಂಡದ ಮೇಲ್ಭಾಗದಲ್ಲಿ ಫಲವತ್ತಾದ ಮಣ್ಣು ಹಾಕಿ ಕೆಳಗಡೆ ಯಾವುದಾದರೂ ಮಣ್ಣು ಹಾಕಿದರೂ ಸಾಕು. ಏಕೆಂದರೆ ಹುಲ್ಲಿನ ಬೇರು ತುಂಬಾ ಆಳಕ್ಕೆ ಇಳಿಯುವುದಿಲ್ಲ. ನೀರನ್ನು ತುಂಬಾ ಹೀರಿಕೊಳ್ಳುವಂತಹ ಮಣ್ಣು ಬಳಸಬೇಡಿ. ಸ್ವಲ್ಪ ಮರಳು ಹಾಕಿ ಮಿಶ್ರ ಮಾಡಿ ನಂತರ ಹೂ ಕುಂಡಕ್ಕೆ ತುಂಬಿ. ನೆಲದಲ್ಲಿ ನೆಡುವುದಾದರೆ ತುಂಬಾ ನೀರು ನಿಲ್ಲುವ ಜಾಗದಲ್ಲಿ ನೆಡಬೇಡಿ, ಕೊಳೆತು ಹೋಗುವುದು.
4. ಹುಲ್ಲಿನ ಬೀಜಗಳನ್ನು ಹಾಕುವಾಗ ಒಂದು ಕಡ್ಡಿಯಿಂದ ನೆಲವನ್ನು ಅರ್ಧ ಇಂಚು ಆಳಕ್ಕೆ ಗೀರಿ ಅದರಲ್ಲಿ ಬೀಜಗಳನ್ನು ಹಾಕಬೇಕು. ಒಂದು ಗೀರಿನಿಂದ ಮತ್ತೊಂದು ಗೀರಿಗೆ ಅಂತರವಿರಲಿ. ಬೀಜಗಳನ್ನು ಹಾಕಿದ ನಂತರ ಮಣ್ಣುಗಳನ್ನು ಮುಚ್ಚಿ. ತುಂಬಾ ಆಳದಲ್ಲಿ ಹಾಕಿ ಬೀಜ ಮೊಳಕೆ ಒಡೆಯಲು ಕಷ್ಟವಾಗುವುದು.
5. ಹುಲ್ಲಿನ ಬೀಜ ಹಾಕಿದ ನಂತರ ನೀರನ್ನು ದಿನಾ ಹಾಕಿ. ಆದರೆ ಹಾಗೇ ನೀರನ್ನು ಸುರಿಯುವ ಬದಲು ವಾಟರ್ ಕ್ಯಾನ್ ಬಳಸಿ ನೀರನ್ನು ಸಿಂಪಡಿಸುವುದು ಒಳ್ಳೆಯದು.
6. ಈ ರೀತಿ ಬೀಜ ಹಾಕಿದ ಮೇಲೆ ಇರುವೆಗಳು ಬಂದು ತಿನ್ನದಂತೆ ಎಚ್ಚರಕೆವಹಿಸಿ. ಹಳ್ಳಿ ಮನೆಗಳಲ್ಲಿ ಸೌತೆ ಬಳಸಿ ಅಡುಗೆ ಮಾಡುತ್ತಾರೆ. ಅದರ ಬೂದಿಯನ್ನು ಹಾಕಿದರೆ ಸಾಕು ಇರುವೆ ಬರುವುದಿಲ್ಲ. ಬೂದಿ ಬಳಸಲಿಕ್ಕೆ ಆಗದವರು ಇರುವೆ ಬರದಂತೆ ತಡೆಯುವ ರಾಸಾಯನಿಕಗಳನ್ನು ಬಳಸಿ.
7. ಹುಲ್ಲು ಮೊಳಕೆ ಬಂದು ಹುಲ್ಲು ಬೆಳೆದ ಮೇಲೆ ಬೇಕಾದ ರೀತಿಯಲ್ಲಿ ಹುಲ್ಲನ್ನು ಕತ್ತರಿಸಿ ವಿನ್ಯಾಸಗೊಳಿಸಬಹುದು.
ಹುಲ್ಲು ನೆಟ್ಟಿರುವ ಹೂವಿನ ಕುಂಡಗಳನ್ನು ಇಡುವಾಗ ಸೂರ್ಯನ ಕಿರಣಗಳು ಸರಿಯಾಗಿ ಬೀಳುವ ಜಾಗದಲ್ಲಿ ನೆಡಬೇಕು. ಕೈ ತೋಟದಲ್ಲಿ ಬೆಳೆಯುವುದಾದರೆ ಅದರ ಮೇಲೆ ನಡೆದಾಡಲು ಬಿಡಬಾರದು. ನಾಯಿಗಳು ಅದರ ಮೇಲೆ ಓಡಾಡದಂತೆ ಎಚ್ಚರಿಕೆ ವಹಿಸಿ. ತುಂಬಾ ಉದ್ದ ಬಂದಾಗ ಹುಲ್ಲನ್ನು ಕತ್ತರಿಸಬೇಕು. ಈ ರೀತಿ ಆರೈಕೆ ಮಾಡಿದರೆ ತೋಟ ಹಚ್ಚ ಹಸಿರಿನಿಂದ ಕಂಗೊಳಿಸುವುದು.
ಈ ರೀತಿ ಹುಲ್ಲು ಬೆಳೆಸಿ ಮಧ್ಯದಲ್ಲಿ ಹೂವಿನ ಗಿಡಗಳನ್ನು ನೆಟ್ಟು, ಅದರ ಸುತ್ತ ಚಿಕ್ಕ ಕಲ್ಲುಗಳಿಂದ ಅಲಂಕರಿಸಿದರೆ ತೋಟ ತುಂಬಾ ಆಕರ್ಷಕವಾಗಿ ಕಾಣುವುದು. ಅನೇಕ ಬಗೆಯ ಹುಲ್ಲುಗಳನ್ನು ಬೇರೆ-ಬೇರೆ ಹೂ ಕುಂಡದಲ್ಲಿ ನೆಟ್ಟು ಮನೆಯ ಎದುರು ಇಟ್ಟರೆ ನೋಡಲು ತುಂಬಾ ಆಕರ್ಷಕವಾಗಿ ಕಾಣುವುದು.



Click it and Unblock the Notifications