Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸೇವಂತಿ ಮತ್ತು ತ್ಯಾರಣದ ಗಿಡದ ಆರೈಕೆ
ಮನೆ ಮುಂದೆ ಹೂತೋಟ ಬೆಳೆಸುವ ಅಭ್ಯಾಸವಿರುವವರಿಗೆ ಮಳೆಗಾಲವು ಹೂ ತೋಟದ ಆರೈಕೆಗೆ ಸೂಕ್ತ ಸಮಯವಾಗಿದೆ. ಈ ಸಮಯದಲ್ಲಿ ಗಿಡಗಳ ನಡುವೆ ಇರುವ ಕಳೆಯನ್ನು ಕಿತ್ತು, ಗಿಡವನ್ನು ಕತ್ತರಿಸಲಾಗುವುದು , ಕೆಲವೊಂದು ಹೊಸ ಗಿಡಗಳನ್ನು ನೆಡಲಾಗುವುದು. ಅದರಲ್ಲೂ ಕೆಲವು ಗಿಡಗಳನ್ನು ಅಥವಾ ಬೀಜಗಳನ್ನು ಮಳೆಗಾಲದಲ್ಲಿ ಹಾಕಿದರೆ ಗಿಡಗಳಾಗಿ ಅವುಗಳು ಆಗಸ್ಟ್ , ಸೆಪ್ಟಂಬರ್ ತಿಂಗಳಿನಲ್ಲಿ ಸುಂದರ ಹೂಗಳನ್ನುಬಿಟ್ಟು ಹೂ ತೋಟದ ಸೌಂದರ್ಯ ಹೆಚ್ಚಿಸುವುದು.

ಅದರಲ್ಲೈ ತ್ಯಾರಣದಂತಹ ಗಿಡಗಳು ಹೂಗಳು ಅರಳಿದ ಬಳಿಕ ಆ ಗಿಡಗಳಿದ್ದ ಸುಳಿವು ಕೂಡ ಇರುವುದಿಲ್ಲ. ಇದನ್ನು ಕೆಲವು ಕಡೆ ಕೋಳಿ ಜುಟ್ಟು ಹೂ ಅಂತ ಕರೆಯುತ್ತಾರೆ. ಅದರ ಬೀಜವಾದರೆ ಅದನ್ನು ಕೈಯಿಂದ ಅದುಮಿದರೆ ಸಾಕು, ಪಟ್ ಅಂತ ಸಿಡಿಯುತ್ತದೆ, ಈ ಗಿಡದ ಬಳಿ ಹೋದರೆ ಅದರಲ್ಲಿ ಶಂಕದ ರೀತಿಯಲ್ಲಿ ಹಸಿರು ಬಣ್ಣದ ದೊಡ್ಡ ಬೀಜವಿರುತ್ತದೆ.
ಇದನ್ನು ನೋಡಿದರೆ ಕೈಯಿಂದ ಒಡೆಯಬೇಕೆನಿಸುವುದು ಸಹಜ. ಬೀಜ ಒಡೆದರೆ ಚಿಕ್ಕ ಸಾಸಿವೆಯಂತಹ ಚಿಕ್ಕ ಬೀಜಗಳಿರುತ್ತದೆ.ಅದನ್ನು ಒಣಗಿಸಿ ಮಳೆಗಾಲದಲ್ಲಿ ಬಿತ್ತಿದರೆ ಮೃದು ದಂಟಿನ ಗಿಡಗಳು ಕಂಡುಬರುತ್ತದೆ. ಸಪ್ಟೆಂಬರ್ ನಲ್ಲಿ ಇನ್ನೇನು ಮಳೆಗಾಲ ಮುಗಿಯಿತು ಎಂದಾಗ ಕೆಂಪು,ನೀಲಿ, ಕೇಸರಿ ಬಣ್ಣದ ಹೂವುಗಳು ಅರಳಲಾರಂಭಿಸುತ್ತವೆ.ನಂತರ ಅದರ ಬೀಜವನ್ನು ಸಂಗ್ರಹಿಸಿ ಮತ್ತೊಂದು ಮಳೆಗಾಲದಲ್ಲಿ ಬಿತ್ತಬಹುದು. ಹೂ ತೋಟದ ನಡುವೆ ಇದನ್ನು ಬಿತ್ತಿದರೆ ಕೈ ತೋಟದ ಚೆಲುವು ಹೆಚ್ಚುವುದು. ಇದರಲ್ಲಿ ಅನೇಕ ಬಣ್ಣದ ಹೂಗಳಿರುತ್ತವೆ.
ಇದೇ ರೀತಿಯ ತೋಟದ ಸೌಂದರ್ಯ ಹೆಚ್ಚಿಸುವ ಮತ್ತೊಂದು ಹೂ ಸೇವಂತಿಗೆ. ಸೇವಂತಿ ಗಿಡವನ್ನು ಜಡಿ ಮಳೆಯಲ್ಲಿ ಹೆಚ್ಚು ಆರೈಕೆ ಮಾಡಬೇಕಾಗುತ್ತದೆ. ವಿಪರೀತ ಮಳೆ ತಾಗಲು ಬಿಡದಂತೆ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಕೊಳೆತು ಹೋಗುವುದು. ಸೇವಂತಿಯಲ್ಲಿ ದೊಡ್ಡದು ಮತ್ತು ಚಿಕ್ಕ ಸೇವಂತಿ ಇರುತ್ತದೆ. ಈ ಸೇವಂತಿ ಹೂ ಅರಳಿದರೆ ಅದರ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ.



Click it and Unblock the Notifications
