Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಫೆಂಗ್ ಶ್ಯೂ ಪ್ರಕಾರ ತೋಟಕ್ಕೆ ಯಾವ ಗಿಡ ಸೂಕ್ತ?

ಫೆಂಗ್ ಶ್ಯೂ ಪ್ರಕಾರ ಐದು ಶಕ್ತಿಗಳ ಸಂಕೇತ
* ಮರ: ಸಂಪತ್ತು
* ನೀರು: ಗುರಿ
* ಭೂಮಿ: ನಿಶ್ಚಲತೆ
* ಅಗ್ನಿ: ಭರವಸೆ ಮತ್ತು ಸಂತಸ
* ಮೆಟಲ್: ಶಕ್ತಿ
ಈ ಎಲ್ಲಾ ಅಂಶವನ್ನು ಒಳಗೊಂಡಿರುವ ಬಿದಿರನ್ನು ಕೆಲವರು ತಮ್ಮ ತೋಟಗಳಲ್ಲಿ ಬೆಳೆಸುತ್ತಾರೆ. ಆದರೆ ಫೆಂಗ್ ಶ್ಯೂ ಪ್ರಕಾರ ಸುಲಭವಾಗಿ ಮನೆಯ ತೋಟದಲ್ಲಿ ನೆಡಬಹುದಾದ ಕೆಲವು ಗಿಡಗಳು ಇಲ್ಲಿವೆ.
* ಮನಿ ಪ್ಲಾಂಟ್ ನಲ್ಲಿ ಮೆಟಲ್: ಮನಿ ಪ್ಲಾಂಟನ್ನು ಲಕ್ಕಿ ಪ್ಲಾಂಟ್ ಎಂದೇ ಹೇಳಲಾಗುತ್ತದೆ. ಇದು ಸಂಪತ್ತನ್ನು ಮನೆಗೆ ಒದಗಿಸುತ್ತದೆ ಎಂದು ನಂಬಲಾಗಿದೆ. ಆದರೆ ಫೆಂಗ್ ಶ್ಯೂ ಪ್ರಕಾರ ಮನಿ ಪ್ಲಾಂಟ್ ಎಲೆಗೆ ನಾಣ್ಯದ ಹೋಲಿಕೆಯಿರುವುದರಿಂದ ಮೆಟಲ್ ನ ಶಕ್ತಿ ಮತ್ತು ನೀರಿನಲ್ಲಿ ಬೆಳೆಯುವುದರಿಂದ ನೀರಿನ ಶಕ್ತಿಯಾದ ಗುರಿಯನ್ನೂ ನೀಡುತ್ತದೆ ಎನ್ನಲಾಗಿದೆ.
* ಮಲ್ಲಿಗೆಯಲ್ಲಿ ಮರದ ಅಂಶ: ಫೆಂಗ್ ಶ್ಯೂ ಪ್ರಕಾರ ಮರ ಸಂಪತ್ತಿನ ಸಂಕೇತ. ಆದ್ದರಿಂದ ನಿಮ್ಮ ತೋಟದಲ್ಲಿರುವ ಮರಗಳೆಲ್ಲವೂ ಸಂಪತ್ತನ್ನು ಪ್ರತಿನಿಧಿಸುತ್ತದೆ. ಅದರಲ್ಲೂ ಮಲ್ಲಿಗೆ ಸ್ನೇಹದ ಗುರುತಾಗಿರುವುದರಿಂದ ನಿಮ್ಮ ಮನೆಗೆ ಸ್ನೇಹದ ಸಂಪತ್ತನ್ನು ಹರಿಸುತ್ತದೆ ಎಂದಿದೆ.
* ಕಮಲದ ಹೂವಿನಲ್ಲಿ ನೀರಿನ ಶಕ್ತಿ: ದೈವೀ ಶಕ್ತಿ ಮತ್ತು ಶುದ್ಧತೆಯ ಸಂಕೇತವಾಗಿರುವ ಕಮಲವನ್ನು ಮನೆಯಲ್ಲಿ ಬೆಳೆದರೆ ನಿಮ್ಮ ಜೀವನದ ದಿಕ್ಕನ್ನು ಒಳ್ಳೆಯ ಕಡೆಗೆ ಕೊಂಡೊಯ್ಯುತ್ತದೆ. ನೀರು ಎತ್ತ ಹರಿದರೂ ಅದರ ಗುರಿಯನ್ನು ಮರೆಯುವುದಿಲ್ಲ, ಹಾಗೆಯೇ ಜೀವನವೂ ನೀರಿನಂತೆ ಸರಾಗವಾಗಿ ಗುರಿ ತಲುಪಲು ಕಮಲದ ಹೂವನ್ನು ಬೆಳೆಸಬಹುದು ಎಂದು ಫೆಂಗ್ ಶ್ಯೂ ಹೇಳುತ್ತದೆ.
* ಡೆಲ್ಫಿನಿಯಂನಲ್ಲಿ ಭೂಮಿಯ ನಿಶ್ಚಲತೆ: ಭೂಮಿ ನಿಶ್ಚಲತೆ ಮತ್ತು ಧೃಡತೆಯ ಸಂಕೇತ. ಲ್ಯಾವೆಂಡರ್ ಪರ್ಪಲ್ ಕಲರ್ ನಲ್ಲಿರುವ ಈ ಇಂಗ್ಲಿಷ್ ಹೂವು ಮನೆ ಮಂದಿಯ ಮನಸ್ಸನ್ನು ಹತೋಟಿಯಲ್ಲಿಡುತ್ತದೆ ಮತ್ತು ಧೃಡ ಸಂಕಲ್ಪ ನೀಡುತ್ತದೆ ಎಂದು ತಿಳಿಸಿದೆ.
* ಸೂರ್ಯಕಾಂತಿಯಲ್ಲಿ ಅಗ್ನಿ: ಫೆಂಗ್ ಶ್ಯೂ ಪ್ರಕಾರ ಅಗ್ನಿ ಭರವಸೆ ಮತ್ತು ಸಂತಸದ ಗುರುತು. ಸೂರ್ಯ ಕಾಂತಿಯಲ್ಲಿ ಅಗ್ನಿ ಅಂಶವಿರುವುದರಿಂದ ಇದು ಮನೆ ಮಂದಿ ಸಂತಸದಿಂದಿರಲು ಸಹಾಯ ಮಾಡುತ್ತದೆ ಎಂದು ತಿಳಿಸಿದೆ.



Click it and Unblock the Notifications
