Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಚೆಂದದ ತೋಟಕ್ಕೆ ಮನೆಯಲ್ಲೇ ಗೊಬ್ಬರ ತಯಾರಿಸಿ

ಕೆಲವು ನೈಸರ್ಗಿಕ ಗೊಬ್ಬರವನ್ನು ಬಳಸುವ ರೀತಿ ಇಲ್ಲಿದೆ.
* ಕಾಫಿ: ಉಳಿದ ಕಾಫಿ ಪುಡಿಯನ್ನು ಮತ್ತು ಗಷ್ಟವನ್ನು ಗಿಡದ ಬುಡಕ್ಕೆ ಬಳಸಿದರೆ ಒಳ್ಳೆಯದು. ಆದರೆ ಹಾಕುವ ಮುನ್ನ ನೀರಿನಲ್ಲಿ ಬೆರೆಸಿ ಹಾಕಬೇಕು. ಪ್ರತಿದಿನವೂ ಇದನ್ನು ಬಳಸಬಾರದು. ವಾರಕ್ಕೊಮ್ಮೆ ಕಾಫಿ ಗೊಬ್ಬರ ಹಾಕಿದರೆ ಗಿಡಕ್ಕೆ ಅವಶ್ಯವಿರುವ ವಿಟಮಿನ್ ನೀಡುತ್ತದೆ.
* ಟೀ: ತಿಂಗಳಿಗೆ ಒಂದು ಬಾರಿ ಟೀ ಉಳಿಕೆಯನ್ನು ಗಿಡಕ್ಕೆ ಹಾಕಿದರೆ ಅವಶ್ಯಕವಾದ ಮಿನರಲ್ ದೊರೆಯುತ್ತದೆ. ಇದು ಗಿಡದ ಚಿಗುರಿಗೆ ಉತ್ತಮ. ಟೀ ಬ್ಯಾಗ್ ಗಳನ್ನೂ ಕೂಡ ಗಿಡದ ಬುಡಕ್ಕೆ ಹಾಕಬಹುದು.
* ಬಾಳೆ ಸಿಪ್ಪೆ: ರೋಜಾ ಹೂವಿಗೆ ಬಾಳೆಹಣ್ಣಿನ ಸಿಪ್ಪೆ ತುಂಬಾ ಒಳ್ಳೆಯದು. ತಿಂದ ಸಿಪ್ಪೆಯನ್ನು ಕಿತ್ತು ಬುಡಕ್ಕೆ ಹಾಕಿದರೆ ಫಲವತ್ತತೆ ನೀಡುತ್ತದೆ.
* ಮೊಟ್ಟೆ ಸಿಪ್ಪೆ: ಗಿಡಕ್ಕೆ ಅತಿ ಅಗತ್ಯವಿರುವ ಪೊಟಾಶಿಯಂ ಮತ್ತು ಕ್ಯಾಲ್ಸಿಯಂ ಅನ್ನು ಮೊಟ್ಟೆ ಸಿಪ್ಪೆ ನೀಡುತ್ತದೆ. ಪುಡಿ ಮಾಡಿದ ಮೊಟ್ಟೆ ಸಿಪ್ಪೆಯನ್ನು ಗಿಡದ ಬುಡದ ಸುತ್ತ ಹಾಕಬೇಕು. ಅಥವಾ ನೀರಿನಲ್ಲಿ ಸುಮಾರು 15 ಮೊಟ್ಟೆ ಸಿಪ್ಪೆಗಳನ್ನು 8 ಗಂಟೆಯವರೆಗೆ ನೆನೆಸಿ, ಸಿಪ್ಪೆ ತೆಗೆದು ವಾರಕ್ಕೆ ಒಂದು ಬಾರಿ ಈ ನೀರನ್ನು ಗಿಡಗಳಿಗೆ ಹಾಕಬಹುದು.
* ಓಕ್ ಎಲೆ: ಒಣಗಿದ ಓಕ್ ಎಲೆಗಳನ್ನು ಬಕೆಟ್ ನೀರಿನಲ್ಲಿ ನೆನೆಹಾಕಿ ಬಿಸಿಲಿನಲ್ಲಿ ಇಡಬೇಕು. ಆ ನೀರು ತನ್ನ ಬಣ್ಣ ಬದಲಿಸುವವರೆಗೂ (ಸುಮಾರು ಒಂದು ವಾರ) ಅದನ್ನು ಹಾಗೇ ಬಿಡಬೇಕು. ಅಥವಾ ಒಂದು ವಾರ ಕಾಯುವುದು ಹೆಚ್ಚೆನಿಸಿದರೆ ಬಿಸಿ ನೀರಿಗೆ ಹಾಕಿ ತಣ್ಣಗಾದ ನಂತರ ಗಿಡಗಳಿಗೆ ಸಿಂಪಡಿಸಬಹುದು.
ಈ ನೈಸರ್ಗಿಕ ಗೊಬ್ಬರವನ್ನು ನೀವೂ ತಯಾರಿಸಿ ನಿಮ್ಮ ಕೈತೋಟ ಮತ್ತಷ್ಟು ಕಂಗೊಳಿಸುವಂತೆ ಮಾಡಿ.



Click it and Unblock the Notifications
