ಈ 6 ಹಣ್ಣುಗಳನ್ನು ಫ್ರೀಜರ್‌ನಲ್ಲಿಟ್ಟು ತಿಂಗಳ ಬಳಿಕವೂ ಸವಿಯಬಹುದು..!! ಯಾವೆಲ್ಲಾ ಗೊತ್ತಾ?

ನೀವು ಮನೆಗೆ ಹಣ್ಣುಗಳ ತಂದು ಮನೆಯಲ್ಲಿ ಇಟ್ಟು ಹಲವು ದಿನ ಸವಿಯಲು ಇಷ್ಟಪಡುತ್ತೀರಿ, ಆದ್ರೆ ಹಲವು ದಿನಗಳ ಕಾಲ ಹಣ್ಣು ಇಟ್ಟರೆ ಅದು ಹಾಳಾಗುವುದು ಕಾಮನ್, ನೀವು ಯಾವುದೇ ಹಣ್ಣು ತಂದರೂ ಹೆಚ್ಚೆಂದರೆ ಒಂದು ವಾರ ಇಟ್ಟು ಸವಿಯಬಹುದು, ಆದ್ರೆ ಇದಕ್ಕಿಂತ ಹೆಚ್ಚು ದಿನ ಇಟ್ಟರೆ ಹಾಳಾಗುವುದು ನೋಡಬಹುದು.

ಆದ್ರೆ ಕೆಲವೊಂದು ಹಣ್ಣುಗಳನ್ನು ಹೆಚ್ಚು ದಿನ ಇಡಬಹುದು, ಹಾಗೆ ಕೆಲವೊಂದು ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿಟ್ಟರೂ ಅದು ಸವಿಯಲು ಸೂಕ್ತವಾಗಿ ಉಳಿದಿರುವುದಿಲ್ಲ. ಆದ್ರೆ ಕೆಲವೊಂದು ಹಣ್ಣುಗಳನ್ನು ಫ್ರೀಜರ್‌ನಲ್ಲಿಟ್ಟು ಹಲವು ದಿನಗಳ ಬಳಿಕವೂ ಸವಿಯಬಹುದು. ಅಂದರೆ ತಿಂಗಳ ಕಾಲ ಫ್ರೀಜ್‌ನಲ್ಲಿ ಇಟ್ಟು ಬಳಿಕ ಸವಿಯಬಹುದು.

Freeze and Enjoy 6 Fruits That Stay Fresh for a Month

ಹಾಗಾದ್ರೆ ಯಾವೆಲ್ಲಾ ಹಣ್ಣುಗಳನ್ನು ಫ್ರೀಜ್ ಮಾಡಿ ತಿಂಗಳ ಕಾಲ ಇಟ್ಟು ಸವಿಯಬಹುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಫ್ರಿಡ್ಜ್‌ನಲ್ಲಿ ಈ ಹಣ್ಣುಗಳನ್ನು ಫ್ರೀಜ್‌ ಮಾಡಿಟ್ಟರೆ ಹಲವು ದಿನಗಳ ಕಾಲ ಸವಿಯಬಹುದು. ಹಾಗಾದ್ರೆ ಯಾವ ಹಣ್ಣುಗಳು ಎಂಬುದನ್ನು ತಿಳಿದುಕೊಳ್ಳೋಣ.

ಬಾಳೆಹಣ್ಣುಗಳು

ಬಾಳೆಹಣ್ಣುಗಳನ್ನು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇಟ್ಟಿರುತ್ತಾರೆ. ಸವಿಯಲು ಬಳಸುವುದು ಕೂಡ ಕಾಮನ್, ಆದ್ರೆ ಬಾಳೆಹಣ್ಣುಗಳು ಬಹುಬೇಗ ಹಾಳಾಗುವುದು ನೋಡಬಹುದು. ಆದ್ರೆ ಬಾಳೆಹಣ್ಣಿನ ಸಿಪ್ಪೆ ತೆಗೆದು ವೃತ್ತಾಕಾರವಾಗಿ ಕತ್ತರಿಸಿಕೊಂಡು ಒಂದು ಪಾತ್ರೆಯಲ್ಲಿ ಹಾಕಿ ಅದರ ಮುಚ್ಚಳ ಹಾಕಿ ಗಾಳಿ ಆಡದಂತೆ ಮಾಡಿ ಫ್ರೀಜ್ ಮಾಡಿ ಇಡಬಹುದು. ಈ ರೀತಿ ಫ್ರೀಜ್ ಮಾಡಲಾದ ಹಣ್ಣುಗಳನ್ನು ಸ್ಮೂಥಿಗಳು, ಜ್ಯೂಸ್, ಐಸ್ ಕ್ರೀಮ್‌ನಂತಹ ಪದಾರ್ಥಗಳ ತಯಾರಿಕೆಯ ವೇಳೆ ಬಳಸಿಕೊಳ್ಳಬಹುದು.

ದ್ರಾಕ್ಷಿಗಳು

ನೀವು ದ್ರಾಕ್ಷಿಯನ್ನು ಫ್ರೀಜ್ ಮಾಡಿ ಇಟ್ಟು ತಿಂಗಳ ಕಾಲ ಇಡಬಹುದು. ನೀವು ಮೊದಲು ದ್ರಾಕ್ಷಿಯನ್ನು ಬಿಡಿಸಿ ಚೆನ್ನಾಗಿ ತೊಳೆದು ಬಳಿಕ ನೀರು ಒಣಗಿಸಬೇಕು. ಅನಂತರ ಒಂದು ಬಾಕ್ಸ್‌ನಲ್ಲಿ ಹಾಕಿ ಗಾಳಿ ಹೋಗದಂತೆ ಫ್ರೀಜರ್‌ನಲ್ಲಿ ಇಟ್ಟರೆ ಹಲವು ದಿನ ಹಾಳಾಗದೆ ಉಳಿಯುತ್ತದೆ. ಹಾಗೆ ಬೇಕಾದಾಗ ಇದನ್ನು ತೆಗೆದು ಬಳಸಿಕೊಳ್ಳಬಹುದು.

ದಾಳಿಂಬೆ

ದಾಳಿಂಬೆಗಳು ಅವುಗಳ ರುಚಿಗೆ ತಕ್ಕಂತೆ ಬಹಳ ಆರೋಗ್ಯಕರ ಹಣ್ಣಾಗಿದೆ. ನೀವು ದಾಳಿಂಬೆಯನ್ನು ಬಿಡಿಸಿ ಅದರ ಬೀಜಗಳನ್ನು ಜಿಪ್‌ಲಾಕ್ ಕವರ್‌ಗೆ ಹಾಕಿ ಗಾಳಿ ಹೋಗದಂತೆ ಫ್ರೀಜ್ ಮಾಡಿ ಇಡಬಹುದು. ಇದು ರುಚಿ ಕಳೆದುಕೊಳ್ಳುವುದಿಲ್ಲ. ಹಾಗೆ ಒಣಗುವುದು ಕೂಡ ಇಲ್ಲ.

ಪೇರಲೆ ಹಣ್ಣು

ಪೇರಲೆ ಅಥವಾ ಸೀಬೆ ಹಣ್ಣು ಎಂದು ಕರೆಯಲ್ಪಡುವ ಇದನ್ನು ಮಕ್ಕಳಂತು ಬಹಳ ಇಷ್ಟಪಟ್ಟು ಸವಿಯುತ್ತಾರೆ. ಆರೋಗ್ಯಕ್ಕೂ ಬಹಳ ಉತ್ತಮ. ಹಾಗೆ ಇದನ್ನು ಕತ್ತರಿಸಿ ಫ್ರೀಜ್ ಮಾಡಬಹುದು. ಇದನ್ನು ಕತ್ತರಿಸಿದ ಬಳಿಕ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಚೆನ್ನಾಗಿ ಕಟ್ಟಿ ಫ್ರೀಜ್‌ನಲ್ಲಿ ಇಡಬಹುದು. ಬೇಕಾದಾಗ ಫ್ರೀಜರ್‌ನಿಂದ ತೆಗೆದು ಸ್ವಲ್ಪ ಸಮಯ ಬಿಟ್ಟು ಜ್ಯೂಸರ್, ಅಥವಾ ಹಾಗೆಯೇ ಸವಿಯಬಹುದು.

ಪಪ್ಪಾಯಿ

ಅತಿಯಾಗಿ ಮಾಗಿದ ಪಪ್ಪಾಯಿಗಳನ್ನು ಹೆಚ್ಚಾಗಿ ಬೇಗ ಹಾಲಾಗುತ್ತದೆ. ಆದ್ರೆ ಈ ಪಪ್ಪಾಯವನ್ನು ಕತ್ತರಿಸಿಕೊಂಡು ಜಿಪ್ ಲಾಕ್ ಕವರ್‌ನಲ್ಲಿ ಹಾಕಿ ಪ್ರೀಜರ್‌ನಲ್ಲಿ ಇಟ್ಟರೆ ಯಾವಾಗ ಬೇಕಾದರು ಬಳಸಬಹುದು. ಇದರಿಂದ ಜ್ಯೂಸ್ ಮಾಡಿ, ಸ್ಮೂಥಿ ಮಾಡಿ ಕೂಡ ಸವಿಯಬಹುದು. ಇದು ಫ್ರೀಜ್ ಮಾಡಿದಾಗ ಹೆಚ್ಚು ಗಟ್ಟಿಯಾಗಿರುತ್ತದೆ. ಆದ್ರೆ ಬಹುಬೇಗ ಹಾಳಾಗುವುದಿಲ್ಲ.

ಸ್ಟ್ರಾಬೆರಿ ಹಣ್ಣಗಳು

ಸ್ಟ್ರಾ ಬೆರಿ ಹಣ್ಣುಗಳಿಗೆ ದುಬಾರಿ ಬೆಲೆ ನೀಡಿ ಮನೆಗೆ ತಂದರೆ ಬಹುಬೇಗ ಕೆಡುವುದು ನೋಡಬಹುದು. ಆದ್ರೆ ಜಿಪ್‌ಲಾಕ್ ಕವರ್‌ಗೆ ಹಾಕಿ ಫ್ರೀಜರ್‌ನಲ್ಲಿ ಇಟ್ಟು ಹಲವು ದಿನಗಳ ಬಿಟ್ಟು ನೀವು ಸವಿಯಬಹುದು, ಇದು ಹಾಳಾಗಯವುದಿಲ್ಲ. ಹಾಗೆ ಯಾವುದೇ ಹಾನಿಯೂ ಇಲ್ಲ.

English summary

Freeze and Enjoy: 6 Fruits That Stay Fresh for a Month

Some fruits can be kept for a long time, while some fruits will not remain suitable for consumption even if kept in the fridge. However, some fruits can be consumed even after several days in the freezer.
Story first published: Monday, January 20, 2025, 19:59 [IST]
X
Desktop Bottom Promotion