Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
1 ಲೋಟ ನೀರಿನಿಂದ ಗ್ಯಾಸ್ ಲೀಕೇಜ್ ಪತ್ತೆ ಮಾಡಿ..! ಏನು ಮಾಡಬೇಕು ಗೊತ್ತಾ?
ಈಗ ಎಲ್ಲರ ಮನೆಯಲ್ಲೂ ಎಲ್‌ಪಿಜಿ ಗ್ಯಾಸ್ ಇದ್ದೇ ಇರುತ್ತೆ. ಪ್ರತಿಯೊಬ್ಬರು ಎಲ್‌ಪಿಜಿ ಗ್ಯಾಸ್ ಬಳಸಿಯೇ ಅಡುಗೆ ಮಾಡುತ್ತಾರೆ. ಈಗ ಎಲ್‌ಪಿಜಿಯನ್ನ ಬಹುಪಯೋಗಿ ಸಾಧನವಾಗಿ ಬಳಸಲಾಗುತ್ತಿದೆ. ಅಂದ್ರೆ ಅಡುಗೆಗೆ ಮಾತ್ರವಲ್ಲ ಗೀಸರ್‌ನಲ್ಲೂ ಬಳಕೆಯಾಗುತ್ತದೆ. ಹೀಗಾಗಿ ಮನೆಯಲ್ಲಿ ಪ್ರಮುಖ ಕೆಲಸಗಳಲ್ಲಿ ಗ್ಯಾಸ್ ಬೇಕಾಗುತ್ತಿದೆ. ಈಗ ಒಂದು ಮನೆಯಲ್ಲಿ 2 ಅಥವಾ ಮೂರು ಎಲ್‌ಪಿಜಿ ಸಿಲಿಂಡರ್‌ಗಳನ್ನು ಇಟ್ಟುಕೊಂಡಿರುತ್ತಾರೆ.
ಎಲ್‌ಪಿಜಿ ಗ್ಯಾಸ್ ಬಳಸುವವರು ಮನೆಯಲ್ಲಿ ಎಷ್ಟು ಜಾಗೃತಿ ವಹಿಸಿದರು ಕಡಿಮೆಯೇ. ಏಕೆಂದರೆ ಗ್ಯಾಸ್ ಸಿಲಿಂಡರ್ ಎಷ್ಟು ಸುರಕ್ಷಿತವಾಗಿರುತ್ತೋ ಅಷ್ಟು ಒಳಿತು. ಹೀಗಾಗಿ ಆಗಾಗ ಗ್ಯಾಸ್ ಸಿಲಿಂಡರ್ ಹಾಗು ರೆಗ್ಯೂಲೇಟರ್, ಪೈಪ್‌ಗಳ ಪರಿಶೀಲಿಸುತ್ತಿರಬೇಕಾಗುತ್ತದೆ. ಸಿಲಿಂಡರ್ ಡೆಲಿವರಿಗೆ ಬರುವಂತಹ ಸಿಬ್ಬಂದಿ ಕೆಲವೊಮ್ಮೆ ಇದನ್ನು ಪರಿಶೀಲನೆ ನಡೆಸುತ್ತಾರೆ.

ಒಂದು ವೇಳೆ ಎಲ್‌ಪಿಜಿ ಸಿಲಿಂಡರ್‌ನಿಂದ ನೀವು ಅಡುಗೆ ಮಾಡುವಾಗ ಗ್ಯಾಸ್ ವಾಸನೆ ಬರುತ್ತಿದ್ದರೆ ಬಹಳ ಎಚ್ಚರಿಕೆಯಿಂದ ಇರಬೇಕು. ಯಾಕಂದ್ರೆ ಸಣ್ಣಪುಟ್ಟ ಲೀಕೇಜ್ ಕೂಡ್ ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು. ರೆಗ್ಯೂಲೇಟರ್, ಗ್ಯಾಸ್ ಪೈಪ್‌ನಿಂದ ಲೀಕೇಜ್ ಕಂಡುಬಂದರೆ ತಕ್ಷಣವೇ ಸರಿಪಡಿಸಿಕೊಳ್ಳಬೇಕು. ಸಿಲಿಂಡರ್‌ನಲ್ಲಿ ಹೆಚ್ಚಾಗಿ ಅದರ ರೆಗ್ಯೂಲೇಟರ್ ಹಾಕುವ ಭಾಗದಿಂದ ಹೆಚ್ಚಾಗಿ ಗ್ಯಾಸ್ ಲೀಕ್ ಆಗುತ್ತಿರುತ್ತದೆ.
ಗ್ಯಾಸ್ ಸಿಲಿಂಡರ್‌ನಲ್ಲಿ ವಾಷರ್ ಸ್ವಲ್ಪ ಹಳತಾಗಿದ್ದರೆ ಅಥವಾ ವಾಷರ್ ಇಲ್ಲದಿದ್ದರೆ ಗ್ಯಾಸ್ ಲೀಕೇಜ್ ಕಂಡುಬರುತ್ತದೆ. ಹೀಗಾಗಿ ಹೊಸ ಸಿಲಿಂಡರ್ ಪಡೆದು ಜೋಡಿಸುವ ಮುನ್ನ ಇದನ್ನು ಗಮನಿಸುವುದು ಉತ್ತಮ. ಹಾಗೆ ಗ್ಯಾಸ್ ಜೋಡಿಸಿದ ತಕ್ಷಣವೇ ಸ್ಟವ್ ಆನ್ ಮಾಡುವುದಕ್ಕಿಂತ ಅದನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ. ಎಲ್ಲಾದರು ಗ್ಯಾಸ್ ವಾಸನೆ ಬರುತ್ತಿದೆಯೇ ಎಂಬುದನ್ನು ಪರಿಶೀಲಿಸಿ.
ಆದ್ರೆ ಗ್ಯಾಸ್ ಲೀಕ್ ಆಗುತ್ತಿದೆಯೇ ಇಲ್ಲವೆ ಎಂಬುದನ್ನು ಪತ್ತೆ ಮಾಡುವುದು ಬಹಳ ಸುಲಭ. ಹೌದು ನೀವು ಅಡುಗೆ ಮಾಡುವಾಗ ಗ್ಯಾಸ್ ಲೀಕ್ ಆಗುತ್ತಿರುವ ವಾಸನೆ ಬರುತ್ತಿರಬಹುದು ಆದ್ರೆ ಎಲ್ಲಿಂದ ಲೀಕೇಜ್ ಇದೆ ಎಂಬುದನ್ನು ಪತ್ತೆ ಮಾಡುವುದು ಹೇಗೆ? ಬಹಳ ಸುಲಭವಾಗಿ ಗ್ಯಾಸ್ ಲೀಕ್ ಆಗುವುದನ್ನು ಪತ್ತೆ ಮಾಡುವುದು ಹೇಗೆ ಎಂಬುದನ್ನು ನಾವಿಂದು ಹೇಳುತ್ತೇವೆ ನೋಡಿ.
ಮೊದಲು ಎಲ್‌ಪಿಜಿ ಸಿಲಿಂಡರ್‌ನಿಂದ ಗ್ಯಾಸ್ ಲೀಕ್ ಆಗುತ್ತಿದ್ದರೆ ಒಂದು ಲೋಟದಲ್ಲಿ ನೀರು ತೆಗೆದುಕೊಂಡು ಸಿಲಿಂಡನ ವಾಷರ್ ಇರುವ ಜಾಗಕ್ಕೆ ಹಾಕಬೇಕು. ಆ ಜಾಗದಿಂದ ಸಣ್ಣ ಸಣ್ಣ ಗುಳ್ಳೆಗಳು ಬಂದರೆ ಖಂಡಿತ ಇಲ್ಲಿಂದಲೇ ಗ್ಯಾಸ್ ಲೀಕ್ ಆಗುತ್ತಿದೆ ಎಂದರ್ಥ. ಗುಳ್ಳೆಗಳು ಕಾಣಿಸದಿದ್ದರೆ ನೀರನ್ನು ಒಂದು ಬಟ್ಟೆಯಿಂದ ಚೆನ್ನಾಗಿ ಒರೆಸಿ ಒಣಗಿದ ಬಳಿಕವೇ ರೆಗ್ಯೂಲೇಟರ್ ಅನ್ನು ಹಾಕಿ.
ಈಗ ಸಿಲಿಂಡರ್ ಪೈಪ್‌ನಿಂದಲೇ ಗ್ಯಾಸ್ ಲೀಕ್ ಆಗುತ್ತಿದ್ದರೆ ಪೈಪ್ ಅನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಬದಲಾಯಿಸಬೇಕು. ಅದರಲ್ಲೂ ರೆಗ್ಯಲೇಟರ್ ತುದಿಯಲ್ಲಿ ಹಾಗೂ ಒಲೆಗೆ ಹಾಕಿರುವ ತುದಿಯಲ್ಲಿ ಹೆಚ್ಚಾಗಿ ಗ್ಯಾಸ್ ಲೀಕ್ ಆಗುತ್ತಿರುತ್ತದೆ. ಎರಡೂ ತುದಿಗಳು ಗಟ್ಟಿಯಾಗಿವೆ. ಪೈಪ್ ತುದಿಯಲ್ಲಿ ಸಿಳಿಕೊಂಡಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಒಂದು ವೇಳೆ ಪೈಪ್ ಹಳೆಯದಾಗಿದ್ದರೆ ಅದರ ಎಕ್ಸ್‌ಪೈರಿ ಚೆಕ್ ಮಾಡಿಕೊಂಡು ಬದಲಾಯಿಸುವುದು ಉತ್ತಮ.
ಇನ್ನು ಗ್ಯಾಸ್ ವಾಸನೆ ಎಲ್ಲಿಂದ ಬರುತ್ತಿದೆ ಎಂಬುದನ್ನು ನಿಮ್ಮಿಂದ ಪತ್ತೆ ಮಾಡಲು ಸಾಧ್ಯವಾಗದಿದ್ದರೆ ಗ್ಯಾಸ್ ಏಜೆಂನ್ಸಿ ಸಿಬ್ಬಂದಿಯ ಸಹಾಯ ಪಡೆದುಕೊಳ್ಳಿ, ನೀವೆ ಮನೆಯಲ್ಲಿ ಸರಿ ಮಾಡುವಂತಹ ದುಸ್ಸಾಹಸಕ್ಕೆ ಕೈಹಾಕಬೇಡಿ. ಇದರಿಂದ ಅನಾಹುತವಾಗುವ ಸಂಭವವಿರುತ್ತದೆ.



Click it and Unblock the Notifications
