Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
10 ರೂಪಾಯಿಯಲ್ಲಿ ಎಕ್ಸೋ ಬಾರ್ ಮನೆಯಲ್ಲೇ ಮಾಡಿ..! ಈ ಟ್ರಿಕ್ಸ್ ಯಾರಿಗೂ ಗೊತ್ತಿರೋದಿಲ್ಲ..!
ನೀವು ಮನೆಯಲ್ಲಿ ಅಡುಗೆ ಮಾಡಿದ ಬಳಿಕ ಎಲ್ಲಾ ಪಾತ್ರೆಗಳನ್ನು ಕೂಡ ತೊಳೆದು ಇಡುತ್ತೀರಿ. ಹಾಗೆ ಕೆಲವೊಂದು ಪಾತ್ರೆಗಳನ್ನು ನಿತ್ಯ ತೊಳೆಯುತ್ತಿರಿ, ಆದ್ರೆ ಮತ್ತೆ ಕೆಲವೊಂದನ್ನು ಬಳಸುವುದು ಅಪರೂಪ ಹಾಗೆ ತೊಳೆಯುವುದು ಕೂಡ ಅಪರೂಪ. ಹಾಗೆ ಮತ್ತೆ ಕೆಲವು ಪಾತ್ರೆಗಳಂತು ತಳ ಹಿಡಿಯುವುದು, ಕರಿ ಹಿಡಿಯುವುದರಿಂದ ಅದನ್ನು ತೊಳೆಯುವುದು ಕೂಡ ದೊಡ್ಡ ಸವಾಲಿನ ಕೆಲಸವೇ ಸರಿ.
ಇನ್ನು ಮನೆ ಸ್ವಚ್ಛ ಮಾಡುವ ಕಾರ್ಯದಲ್ಲಿ ಹತ್ತು ಹಲವು ರೀತಿಯ ಸೋಪಿನ ಪುಡಿ, ಲಿಕ್ವಿಡ್, ದ್ರಾವಣಗಳ ಬಳಸಿರುತ್ತೀರಿ, ಅದ್ರಲ್ಲೂ ಕೆಲವೊಂದು ದುಬಾರಿ ದ್ರಾವಣಗಳು ಈಗ ಮಾರುಕಟ್ಟೆಗೆ ಬಂದಿವೆ. ಹತ್ತಾರು ಕಂಪನಿಯ ಕ್ಲೀನಿಂಗ್ ವಸ್ತುಗಳು ಈಗ ಮಾರುಕಟ್ಟೆಯಲ್ಲಿ ತಮ್ಮ ನಡುವೆ ಸ್ಪರ್ಧೆಗಿಳಿದಿವೆ. ಗ್ರಾಹಕರು ಕೂಡ ಯಾವುದು ಕಡಿಮೆ ಬೆಲೆಗೆ ಸಿಗುತ್ತದೆ ಹೆಚ್ಚು ಸುಲಭವಾಗಿ ಕೆಲಸ ಮಾಡಬಹುದು ಎಂಬುದನ್ನು ಅರಿತು ಖರೀದಿಸುತ್ತಾರೆ.

ಇನ್ನು ಪಾತ್ರೆ ತೊಳೆಯಲೆಂದು ನೀವು ಮಾರುಕಟ್ಟೆಯಲ್ಲಿ ಸಿಗುವಂತಹ ಎಕ್ಸೋ ಬಾರ್ ಬಳಸಿರುತ್ತೀರಿ, ವೃತ್ತಾಕಾರದ ಬಾಕ್ಸ್‌ನಲ್ಲಿ ಬರುವ ಈ ಸಾಬೂನು ಎಲ್ಲರ ಮನೆಯಲ್ಲೂ ಉರುವುದು ಕಾಮನ್, ಇದರಲ್ಲಿ ಪಾತ್ರೆ ಉಜ್ಜಲು ಒಂದು ಸ್ಕ್ರಬ್ ಕೂಡ ಉಚಿತವಾಗಿ ಸಿಗುತ್ತದೆ. ಹೀಗಾಗಿ ಎಲ್ಲರು ಈ ಎಕ್ಸೋ ಬಾರ್ ಬಳಸಲು ಇಷ್ಟಪಡುತ್ತಾರೆ. ಇದರ ಬೆಲೆ ಕೂಡ ಅಧಿಕವಾಗಿದೆ.
ಆದ್ರೆ ಈ ಎಕ್ಸೋ ಬಾರ್ ಅನ್ನು ಮನೆಯಲ್ಲೇ ನಾವು ಮಾಡಬಹುದು ಎಂಬ ರಹಸ್ಯ ನಿಮಗೆ ಗೊತ್ತಾ? ಹೌದು ನಿಮಗಿದು ಅಚ್ಚರಿ ಎನಿಸಬಹುದು. ಆದ್ರೆ ಈ ಎಕ್ಸೋ ಬಾರ್ ಅನ್ನು ನಾವು ಮನೆಯಲ್ಲೇ ಮಾಡಬಹುದು. ಕೇವಲ ಒಂದು ಸೋಪನ್ನು ಬಳಸಿಕೊಂಡು ನಾವು ಎಕ್ಸೋ ಬಾರ್ ಮಾಡಿಕೊಳ್ಳಬಹುದು. ಹಾಗಾದ್ರೆ ಪಾತ್ರೆ ತೊಳೆಯಲು ನಾವು ಮನೆಯಲ್ಲೇ ಈ ಎಕ್ಸೋ ಬಾರ್ ಮಾಡುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಎಕ್ಸೋ ಬಾರ್ ಮನೆಯಲ್ಲೇ ಮಾಡೋದು ಹೇಗೆ?
ಮೊದಲು ಯಾವುದಾದರೊಂದು ಸೋಪು ತೆಗೆದುಕೊಳ್ಳಿ. ಬಟ್ಟೆ ಒಗೆಯಲು ಅಥವಾ ಪಾತ್ರೆ ತೊಳೆಯಲು ಬಳಸುವಂತಹ ಸಾಬೂನು ಇದ್ದರೆ ಒಳ್ಳೆಯದು.
10 ರೂಪಾಯಿಯ ಸಾಬೂನು ತೆಗೆದುಕೊಳ್ಳಿ. ಇದನ್ನು ಕ್ಯಾರೆಟ್, ಕೊಬ್ಬರಿ ತುರಿಯುವ ಪಾತ್ರೆಯಲ್ಲಿ ಸಣ್ಣದಾಗಿ ತುರಿದುಕೊಂಡು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ.
ನಂತರ ಇದಕ್ಕೆ ಸ್ವಲ್ಪ ನೀರು ಹಾಕಿಕೊಂಡು ಒಲೆ ಮೇಲೆ ಇಟ್ಟು ಸೋಪು ಕರಗಲು ಬಿಡಿ. ನಿಧಾನವಾಗಿ ಗಿರುಗಿಸುತ್ತಾ ಇರಿ, ತಳ ಹಿಡಿಯಲು ಬಿಡದೆ ತಿರುಗಿಸುತ್ತಾ ಇರಿ. ಸೋಪು ಕರಗುವವರೆಗೂ ತಿರುಗಿಸಿಕೊಂಡು ಬಳಿಕ ಒಲೆ ಆಫ್ ಮಾಡಿ ದ್ರಾವಣ ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ಇದಕ್ಕೆ ಎರಡು ಸ್ಪೂನ್ ಗೋಧಿ ಹಿಟ್ಟು, ಸ್ಪೂನ್ ಉಪ್ಪು, ಬೇಕಿಂಗ್ ಸೋಡಾ, ಸಿಟ್ರಿಕ್ ಆಸಿಡ್ ಒಂದು ಸ್ಪೂನ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸಿಟ್ರಿಕ್ ಆಸಿಡ್ ಅಂಗಡಿಗಳಲ್ಲಿ 10 ರೂಪಾಯಿಯಷ್ಟು ಖರೀದಿಸಿ ತನ್ನಿ.
ಈ ದ್ರಾವಣವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಸ್ವಲ್ಪ ಗಟ್ಟಿಯಾದರೆ ನೀರು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಅನಂತರ ಇದನ್ನು ಹಳೆಯ ಎಕ್ಸೋ ಬಾರ್ ಖಾಲಿಯಾಗಿರುವ ಬಾಕ್ಸ್ ಅಥವಾ ಯಾವುದಾದರು ಪ್ಲಾಸ್ಟಿಕ್ ಬಾಕ್ಸ್‌ನಲ್ಲಿ ಈ ದ್ರಾವಣ ಹಾಕಿಕೊಂಡು ತಣ್ಣಗಾಗಿ ಗಟ್ಟಿಯಾಗಲು ಬಿಟ್ಟುಬಿಡಿ.
ಕೆಲವೇ ಹೊತ್ತಿನಲ್ಲಿ ಇದು ಗಟ್ಟಿಯಾಗುತ್ತದೆ. ಇದನ್ನು ಕೇವಲ 20 ರೂಪಾಯಿಯಲ್ಲಿಯೇ 70 ರೂಪಾಯಿ ಮೌಲ್ಯದ ಎಕ್ಸೋ ಬಾರ್ ಅನ್ನು ಮನೆಯಲ್ಲೇ ಮಾಡಬಹುದು. ಇದು ಸುಮಾರು 2 ತಿಂಗಳ ಕಾಲ ನಿಮಗೆ ಬಳಕೆಗೆ ಬರಲಿದೆ. ಎಷ್ಟೇ ಕಲೆಯಾದ ಪಾತ್ರೆ ಇದ್ದರೂ ಇದನ್ನು ಬಳಸಿ ಉಜ್ಜಿದರೆ ಕಲೆಗಳು ನಿವಾರಣೆಯಾವುದು ಮಾತ್ರವಲ್ಲ, ಪಾತ್ರೆ ಪಳ ಪಳ ಹೊಳೆಯುವಂತೆ ಮಾಡುತ್ತದೆ.



Click it and Unblock the Notifications
