Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ತಾಮದ ಪಾತ್ರೆಗಳನ್ನು ಫಳ-ಫಳ ಹೊಳೆಯುವಂತೆ ಮಾಡಲು ಟಿಪ್ಸ್
ಹಿಂದೆಯೆಲ್ಲಾ ಪೂಜೆಗೆ ಬಳಸುವುದರಿಂದ ಹಿಡಿದು ಅಡುಗೆ ಮಾಡುವುದಕ್ಕೆ, ಆಹಾರ ಸೇವಿಸುವುದಕ್ಕೆ ತಾಮ್ರದ ಪಾತ್ರೆಗಳನ್ನು ಬಳಸುತ್ತಿದ್ದರು. ಬರ್ತಾ... ಬರ್ತಾ ಫ್ಯಾಷನ್ ಹೆಸರಿನಲ್ಲಿ ಗಾಜಿನ ಅಥವಾ ಸ್ಟೀಲ್ ಪ್ಲೇಟ್‌ಗಳು, ಲೋಟಗಳನ್ನು ಬಳಸಲಾರಂಭಿಸಿದೆವು, ಅಡುಗೆಯಲ್ಲೂ ತಾಮ್ರದ ಪಾತ್ರೆ ಬಳಕೆ ಕಡಿಮೆಯಾಯಿತು, ದೇವರ ಕಾರ್ಯಗಳಿಗಷ್ಟೇ ತಾಮ್ರದ ಪಾತ್ರೆಗಳನ್ನು ಬಳಸಲಾರಂಭಿಸಿದೆವು.
ಇದೀಗ ಮತ್ತೆ ಟ್ರೆಂಡ್ ಬದಲಾಗಿದೆ. ತಾಮ್ರದ ಪಾತ್ರೆಗಳನ್ನು ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿದು ಬಂದ ಮೇಲೆ ಮತ್ತೆ ತಾಮ್ರದ ಪಾತ್ರೆಗಳನ್ನು ಬಳಸುವ ಟ್ರೆಂಡ್ ಶುರುವಾಗಿದೆ. ಅದರಲ್ಲೂ ನೀರು ಕುಡಿಯಲು ತಾಮ್ರದ ಬಾಟಲಿಗಳನ್ನು ಹೆಚ್ಚಾಗಿ ಬಳಸಲಾರಂಭಿಸಿದ್ದಾರೆ.

ತಾಮ್ರದ ಪಾತ್ರೆಗಳು ಆರೋಗ್ಯಕ್ಕೆ ಒಳ್ಳೆಯದು, ಆದರೆ ಅವುಗಳನ್ನು ನಿರ್ವಹಣೆ ಮಾಡುವುದು ಇದೆಯೆಲ್ಲಾ ತುಂಬಾನೇ ಕಷ್ಟ, ಈ ಕಾರಣಕ್ಕೆ ಕೆಲವರು ತಾಮ್ರದ ಪಾತ್ರೆಯನ್ನು ಬಳಸಲು ಹಿಂದೇಟು ಹಾಕುತ್ತಾರೆ. ಅವುಗಳು ಫಳ-ಫಳ ಹೊಳೆಯುತ್ತಿದ್ದರೆ ಮಾತ್ರ ಚೆಂದ, ಕಪ್ಪಾದರೆ ಶುಚಿಯಾಗಿ ಕಾಣಲ್ಲ.
ತಾಮ್ರದ ಪಾತ್ರೆಯನ್ನು ಸುಲಭದಲ್ಲಿ ಶುಚಿಗೊಳಿಸುವುದು ಹೇಗೆ ಎಂದು ನೋಡೋಣ ಬನ್ನಿ:
ವಿನಿಗರ್ ಮತ್ತು ಉಪ್ಪು
ತಾಮ್ರದ ಪಾತ್ರೆ ಬೆಳ್ಳಗಾಗಿಸಲು ಸೂಪರ್ ವಿಧಾನವಾಗಿದೆ. ಈ ಎರಡು ವಸ್ತುಗಳನ್ನು ಹಾಕಿ ತಿಕ್ಕಿ ತೊಳೆದರೆ ಪಾತ್ರೆ ಬೇಗನೆ ಬೆಳ್ಳಗಾಗುವುದು.
ವಿನೆಗರ್, ಉಪ್ಪು ಹಾಕಿ ತೊಳೆಯುವ ಮತ್ತೊಂದು ವಿಧಾನ
ಒಂದ ದೊಡ್ಡ ಪಾತ್ರೆಗೆ ನೀರು ಹಾಕಿ ಅದಕ್ಕೆ ಉಪ್ಪು ಮತ್ತು ವಿನೆಗರ್ ಹಾಕಿ, ಆ ನೀರಿಗೆ ತಾಮ್ರದ ಪಾತ್ರೆಗಳನ್ನು ಹಾಕಿ ಕಾಯಿಸಿ ಉರಿಯಿಂದ ಇಳಿಸಿ ಹಾಗೇ ಇಡಿ, ನೀರು ತಣ್ಣಗಾದ ಮೇಲೆ ಸೋಪು ಹಾಕಿ ತಿಕ್ಕಿದರೆ ಸಾಕು ಪಾತ್ರೆ ಫಳ-ಫಳ ಹೊಳೆಯುವುದು.
ನಿಂಬೆಹಣ್ಣು ಅಥವಾ ಹುಣಸೆ ಹಣ್ಣು
ತಾಮ್ರದ ಪಾತ್ರೆ ತಿಕ್ಕಿ ತೊಳೆಯಲು ನಿಂಬೆಹಣ್ಣು ಅಥವಾ ಹುಣಸೆಹಣ್ಣು ಕೂಡ ತುಂಬಾನೇ ಪ್ರಯೋಜನಕಾರಿ, ನಿಂಬೆಹಣ್ಣಿಗೆ ಅಥವಾ ಹುಣಸೆಹಣ್ಣಿಗೆ ಕಲ್ಲುಪ್ಪು ಸೇರಿಸಿ ತಿಕ್ಕಿ ತೊಳೆದರೆ ಸಾಕು ತಾಮ್ರದ ಪಾತ್ರೆಗಳು ಫಳ-ಫಳ ಹೊಳೆಯುವುದು.
ಉಪ್ಪು, ವಿನೆಗರ್, ಹಿಟ್ಟು ಅಥವಾ ಬೂದಿ
ಮನೆಯಲ್ಲಿ ಹಿಟ್ಟು ತುಂಬಾ ಸಮಯ ಇಟ್ಟು ಹಾಳಾದರೆ ಅವುಗಳನ್ನು ಬಿಸಾಡಬೇಡಿ, ತಾಮ್ರದ ಪಾತ್ರೆ ತೊಳೆಯಲು ಬಳಸಬಹುದು. ನೀವು ಹಿಟ್ಟಿಗೆ ಸ್ವಲ್ಪ ಕಲ್ಲುಪ್ಪು, ವಿನೆಗರ್ ಹಾಕಿ ತಿಕ್ಕಿ ತೊಳೆದರೆ ಸಾಕು ಪಾತ್ರೆ ಫಳ-ಫಳ ಹೊಳೆಯುವುದು. ತುಂಬಾ ಕಪ್ಪಗೆ ಹಾಕಿದರೆ ಈ ಪೇಸ್ಟ್ ಹಚ್ಚಿ ಅರ್ಧ ಗಂಟೆ ಬಿಟ್ಟು ನಂತರ ತಿಕ್ಕಿ ತೊಳೆಯಿರಿ.
ಈ ವಿಧಾನ ಕೂಡ ಪರಿಣಾಮಕಾರಿ
ಬೇಕಾಗುವ ಸಾಮಗ್ರಿ
1 ಚಮಚ ಕಡ್ಲೆಹಿಟ್ಟು
1 ಚಮಚ ಉಪ್ಪು
3-4 ಚಮಚ ಮೊಸರು
1 ಚಮಚ ಅರಿಶಿಣ
2 ಚಮಚ ನಿಂಬೆರಸ
ಇವುಗಳ ಪೇಸ್ಟ್ ಮಾಡಿ, ಪಾತ್ರೆಗೆ ತಿಕ್ಕಿದರೆ ಸಾಕು ತಾಮ್ರ ಪಾತ್ರೆ ಹೊಚ್ಚ ಹೊಸದರಂತೆ ಫಳ-ಫಳ ಹೊಳೆಯುವುದು.



Click it and Unblock the Notifications