Latest Updates
-
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ
ಸೂಜಿಗೆ ದಾರ ಹಾಕಲು ಪರದಾಡಬೇಡಿ..! ಈ ಟ್ರಿಕ್ಸ್ ಯಾರು ನಿಮಗೆ ಹೇಳಿರೋದಿಲ್ಲ!!
ನಾವು ಮನೆಯ ನಿತ್ಯದ ಕೆಲಸದ ನಡುವೆ ಕೆಲವೊಂದು ಸರಳ ಕೆಲಸ ಮಾಡಲು ಪರದಾಡುತ್ತೇವೆ. ದೊಡ್ಡ ಕೆಲಸಕ್ಕಿಂತ ಇಂತಹ ಕೆಲವು ಸಣ್ಣ ಪುಟ್ಟ ಕೆಲಸಗಳು ಸಮಯ ಹಾಳು ಮಾಡುತ್ತವೆ. ಇಂತಹ ಕೆಲವು ಕೆಲಸದಲ್ಲಿ ಸೂಜಿಗೆ ದಾರ ಹಾಕುವುದು ಕೂಡ ಒಂದು. ಮನೆಯಲ್ಲಿ ಯಾವುದಾದರು ಬಟ್ಟೆ ಹರಿದಿದ್ದರೆ, ಬಟನ್ ಕಿತ್ತು ಹೋಗಿದ್ದರೆ, ಸಣ್ಣ ಸ್ಟಿಚ್ ಬಿಟ್ಟರೆ, ಹೊಲಿಗೆ ಹೋಗಿದ್ದರೆ ನಾವೇ ಸರಿ ಮಾಡಲು ಉಂದಾಗುತ್ತೇವೆ.
ಈ ರೀತಿ ಹೊಲಿಗೆ ಮಾಡುವ ಮುನ್ನ ನಾವು ಸೂಜಿಗೆ ದಾರ ಹಾಕುವ ಕೆಲಸ ಮಾಡವೇಕು. ಹೊಲಿಗೆ ಹಾಕುವುದಕ್ಕಿಂತ ಸವಾಲಿನ ಕೆಲಸ ಅಂದ್ರೆ ಅದು ದಾರ ಹಾಕುವುದು. ಏಕೆಂದರೆ ಸೂಜಿಯ ಸಣ್ಣದಾದ ಹೋಲ್‌ನಲ್ಲಿ ದಾರ ಪೋಣಿಸುವುದು ಅತ್ಯಂತ ಸವಾಲಿನ ಕೆಲಸವೇ ಸರಿ. ಅದ್ರಲ್ಲೂ ಹಿರಿಯರಿಗಂತು ಈ ಕೆಲಸ ಮಾಡುವ ಮೊದಲೇ ಸೋಲು ಒಪ್ಪಿಕೊಂಡಂತೆ.

ಮನೆಯಲ್ಲಿ ಮಕ್ಕಳಿದ್ದರೆ ಅವರ ಸಹಾಯ ಪಡೆದು ಸೂಜಿಗೆ ದಾರ ಹಾಕಿಕೊಡಲು ಹೇಳೋದು ಸಾಮಾನ್ಯ. ಹಾಗೆ ಈ ಕೆಲಸ ಮಾಡಲು ಕಷ್ಟ ಪಡುವುದು ಸಹ ಹಿರಿಯರೇ ಆಗಿರುತ್ತಾರೆ. ಆದ್ರೆ ಸುಲಭವಾಗಿ ಸೂಜಿಗೆ ದಾರ ಹಾಕುವ ಟ್ರಿಕ್ಸ್ ನಿಮಗೆ ಗೊತ್ತಾ? ಸೂಜಿಗೆ ದಾರ ಹಾಕಲು ಹಲವು ರೀತಿಯ ಟ್ರಿಕ್ಸ್ ಇದೆ. ನೀವು ಕೂಡ ಸೂಜಿಗೆ ದಾರ ಹಾಕಲು ಹಲವು ರೀತಿಯ ಟ್ರಿಕ್ಸ್ ಬಳಸಿರುತ್ತೀರಿ.
ಆದ್ರೆ ಈಗೊಂದು ವಿಡಿಯೋದಲ್ಲಿ ಸೂಜಿಗೆ ದಾರ ಹಾಕುವಂತಹ ಸುಲಭದ ಟ್ರಿಕ್ಸ್ ಹೇಳಲಾಗಿದೆ. ಹೀಗಾಗಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅತ್ಯಂತ ಸುಲಭವಾಗಿ ಸೂಜಿಗೆ ದಾರ ಹಾಕುವುದು ಹೇಗೆ ಎಂಬುದನ್ನು ವಿಡಿಯೋ ಮೂಲಕ ವಿವರಿಸಲಾಗಿದೆ. ಈ ವಿಡಿಯೋ ನೋಡಿದ ಮಂದಿ ಇಷ್ಟೊಂದು ಸುಲಭವಾಗಿ ಸೂಜಿಗೆ ದಾರ ಹಾಕಬಹುದೇ ಎಂದು ಅಚ್ಚರಿ ಹೊರಹಾಕಿದ್ದಾರೆ.
ಇನ್ನು ಮುಂದೆ ಸೂಜಿಗೆ ದಾರ ಹಾಕಲು ಪರದಾಡುವುದೇ ಬೇಡ. ಏಕೆಂದರೆ ಸುಲಭವಾಗಿ ಈ ವಿಧಾನದ ಮೂಲಕ ನೀವು ಕ್ಷಣದಲ್ಲಿ ಸೂಜಿಗೆ ದಾರ ಹಾಕಬಹುದು. ಹಾಗಾದ್ರೆ ಏನಿದು ಸುಲಭದ ವಿಧಾನ ಎಂಬುದು ನಿಮಗೆ ಗೊತ್ತಾ? ನೀವು ಇನ್ನು ಮುಂದೆ ಸೂಜಿಗೆ ದಾರ ಹಾಲು ಪರದಾಡಬೇಕಿಲ್ಲ. ಏಕೆಂದರೆ ಈ ರೀತಿ ಮಾಡಿ ನೋಡಿ.
ಮೊದಲು ಒಂದು ಖಾಲಿಯಾದ ಮಾತ್ರೆಯ ಲೇಬಲ್ ತೆಗೆದುಕೊಳ್ಳಿ. ಅದರನ್ನು ಕತ್ತರಿಸಿಕೊಂಡು ಉದ್ದವಾಗಿ ಮಾಡಿ ಅದರ ತುದಿಯಲ್ಲಿ ಸಣ್ಣದಾದ ಹುಕ್ ರೀತಿ ಮಾಡಿಕೊಳ್ಳಿ. ನಂತರ ಸೂಜಿಯನ್ನು ತೆಗೆದುಕೊಂಡು ಅದರ ಹೋಲ್ ಒಳಗೆ ಈ ಮಾತ್ರೆಯ ಲೇಬಲ್ ಹಾಕಿ ಅನಂತರ ತುದಿಯಲ್ಲಿರುವ ಹುಕ್‌ಗೆ ದಾರವನ್ನು ಸುತ್ತಿಕೊಂಡು ವಾಪಾಸು ಅದೇ ಹೋಲ್‌ನಲ್ಲಿ ತೆಗೆಯಿರಿ, ಹೀಗೆ ಮಾಡಿದಾಗ ಸೂಜಿಯ ಹೋಲ್‌ನಿಂದ ದಾರ ಹೊರಬರಲಿದೆ. ನಂತರ ನೀವು ಸುಲಭವಾಗಿ ನಿಮ್ಮ ಕೆಲಸ ಮಾಡಬಹುದು.
ಇದನ್ನು ಹೇಗೆ ಮಾಡಬೇಕು ಎಂಬುದನ್ನು ವಿಡಿಯೋ ಒಂದರಲ್ಲಿ ವಿವರಿಸಲಾಗಿದೆ. ಈ ವಿಡಿಯೋ ನೋಡಿದ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗಂಟೆಗಳ ಕಾಲ ಪರದಾಡುತ್ತಿದ್ದ ಜನರಿಗೆ ಈ ವಿಡಿಯೋ ಖಂಡಿತ ನೆರವಾಗಲಿದೆ, ನಿಮಗೆ ಧನ್ಯವಾದ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಖಂಡಿತ ಇದೊಂದು ಸುಲಭದ ಉಪಾಯವಾಗಿದ, ಇದಕ್ಕಿಂತ ಸುಲಭವಾಗಿ ನಾವು ಸೂಜಿಗೆ ದಾರ ಹಾಕಲು ಸಾಧ್ಯವಿಲ್ಲ ಬಿಡಿ ಎಂದು ಇನ್ನೊಬ್ಬರು ಬರೆದಿದ್ದಾರೆ.
ಹಾಗೆ ಈ ರೀತಿ ಒಂದು ಬಾರಿ ಮಾಡಿ ಆ ಮಾತ್ರೆಯ ಲೇಬಲ್ ಇಟ್ಟುಕೊಂಡರೆ ಸುಲಭವಾಗಿ ಸೂಜಿಗೆ ದಾರ ಹಾಕಬಹುದು. ದಿನದಲ್ಲಿ ಎಷ್ಟು ಬಾರಿ ಬೇಕಾದರು ಈ ಕೆಲಸ ಮಾಡಬಹುದು. ಸಮಯವೂ ಹಾಳಾಗುವುದಿಲ್ಲ ಎಂಬ ಅಭಿಪ್ರಾಯ ಹೊರಹಾಕಿದ್ದಾರೆ.



Click it and Unblock the Notifications
