Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಪೇಪರ್‌ನಿಂದ ಮಾಡಿ ಹಾರುವ ಚಿಟ್ಟೆ: ಮಕ್ಕಳ ಆಟಿಕೆ ಮನೆಯಲ್ಲೇ ಮಾಡೋದು ಹೇಗೆ ಗೊತ್ತಾ?
ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ಅವರಿಗೆ ಹತ್ತಾರು ಆಟಿಕೆಗಳನ್ನು ನೀಡಿರುತ್ತೀರಿ, ಈ ಆಟಿಕೆಗಳಿದ್ದರೆ ಮಾತ್ರವೇ ಮಕ್ಕಳು ಹಠ ಮಾಡದೆ ಒಂದು ಕಡೆ ಕುಳಿತು ಆಟವಾಡುತ್ತಾ ಕಾಲ ಕಳೆಯುತ್ತಾರೆ. ಆಟವಾಡಲು ಅವರಿಗೆ ಎಷ್ಟು ಆಟಿಕೆಗಳಿದ್ದರೂ ಸಾಲದು. ಏಕೆಂದರೆ ಆಟಿಕೆಗಳಿಂದ ಮಾತ್ರ ಅವರು ಒಂದು ಕಡೆ ಕುಳಿತುಕೊಳ್ಳುತ್ತಾರೆ. ಮಕ್ಕಳ ಕೈಗೆ ಆಟಿಕೆ ನೀಡಿ ನೀವು ಒಂದು ಕಡೆ ವಿಶ್ರಾಂತಿ ಪಡೆಯಬಹುದು ಇಲ್ಲವೆ ಕೆಲಸ ಮಾಡಿಕೊಳ್ಳಬಹುದು.
ಆದ್ರೆ ಮಕ್ಕಳಿಗೆ ಎಷ್ಟು ಆಟಿಕೆಗಳಿದ್ದರೂ ಕೆಲವೇ ದಿನದಲ್ಲಿ ಅವರಿಗೆ ಬೋರ್ ಎನಿಸುತ್ತದೆ. ಅದರ ಜೊತೆ ಆಡುವುದಕ್ಕಿಂತ ಅದನ್ನು ಬದಿಗೆ ಎಸೆದು ಕಿತ್ತಿ ಹಾಳು ಮಾಡುವ ಕಾರ್ಯದಲ್ಲೇ ಅವರು ಹೆಚ್ಚು ಸಮಯ ಕಳೆಯುತ್ತಾರೆ. ಹೀಗಾಗಿ ಕೆಲವೊಂದು ಆಟಿಕೆಗಳು ಪುಡಿ ಪುಡಿಯಾಗಿಯೂ ಮನೆಯಲ್ಲಿ ಬಿದ್ದಿರುತ್ತವೆ.

ಆದ್ರೆ ಮಕ್ಕಳು ಈ ರೀತಿ ಮಾಡಬಾರದು ಎಂಬುದು ನಿಮ್ಮ ಬಯಕೆಯಾಗಿದ್ದರೆ ನೀವೆ ಮನೆಯಲ್ಲಿ ಕೆಲವೊಂದು ಆಟಿಕೆ ಮಾಡಿ ಕೊಡಿ. ಈ ಆಟಿಕೆಗಳು ನಿಮ್ಮ ಮಕ್ಕಳಿಗೆ ತುಂಬಾನೆ ಇಷ್ಟವಾಗುತ್ತವೆ. ಅಲ್ಲದೆ ಅವರನ್ನು ಯಾವಾಗಲು ಚಟುವಟಿಕೆಯಿಂದ ಕೂಡಿರುವಂತೆ ನೋಡಿಕೊಳ್ಳುತ್ತವೆ. ಹಾಗಾದ್ರೆ ಆ ರೀತಿ ಮನೆಯಲ್ಲಿಯೇ ನಾವು ಸುಲಭವಾಗಿ ಮಾಡಬಹುದಾದ ಆಟಿಕೆಗಳು ಯಾವುದು ಅದನ್ನು ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಪೇಪರ್‌ನಲ್ಲಿ ಮಾಡಿ ಹಾರುವ ಚಿಟ್ಟೆ
ಮಕ್ಕಳಿಗೆ ಚಿಟ್ಟೆಗಳೆಂದರೆ ಎಲ್ಲಿಲ್ಲದ ಪ್ರೀತಿ, ಹೀಗಾಗಿ ನೀವು ಅವರ ಆಟಿಕೆಗಳಲ್ಲು ಒಂದೆರಡು ಪ್ಲಾಸ್ಟಿಕ್ ಚಿಟ್ಟೆಗಳ ತಂದಿರುತ್ತೀರಿ. ಆದ್ರೆ ಪೇಪರ್‌ನಿಂದ ಮಾಡಿದ ಹಾರಾಡುವ ಚಿಟ್ಟೆಯನ್ನ ಮಕ್ಕಳಿಗೆ ನೀಡಿದ್ದೀರಾ? ಹೌದು ಒಂದು ಸಣ್ಣ ಪೇಪರ್‌ನಿಂದ ಹಾರಾಡುವ ಚಿಟ್ಟೆಯನ್ನ 1 ನಿಮಿಷದೊಳಗೆ ಮಾಡಬಹುದು.
ಹೇಗೆ ಅನ್ನೋದನ್ನು ಈ ಕೆಳಗೆ ನೀಡಲಾದ ವಿಡಿಯೋ ಒಂದರಲ್ಲಿ ವಿವರಿಸಲಾಗಿದೆ, ಅದರಲ್ಲಿ ಮಹಿಳೆಯೊಬ್ಬರು ಸಣ್ಣ ಪೇಪರ್ ತೆಗೆದುಕೊಂಡು ಕತ್ತರಿಯಿಂದ ಕತ್ತರಿಸಿಕೊಳ್ಳುತ್ತಾ ಮಡಚುತ್ತಾ ಒಂದು ಸಣ್ಣ ಚಿಟ್ಟೆ ರಚಿಸುತ್ತಾರೆ. ಇದನ್ನು ಮೂಲೆಯೊಂದರಲ್ಲಿ ಬಿಟ್ಟಾಗ ತಾನಾಗಿಯೇ ಹಾರಾಡುತ್ತಿದೆ, ಇದು ಹೇಗೆ ಸಾಧ್ಯ ಎಂದರೆ ಮನೆಯಲ್ಲಿ ಫ್ಯಾನ್ ಕೆಳಗಡೆ ಈ ರೀತಿ ಪೇಪರ್ ಕಟ್ ಮಾಡಿ ಹಾಕಿದರೆ ಅದು ಹಾರಾಡಲು ಆರಂಭಿಸುತ್ತದೆ. ಅದರಲ್ಲೂ ಮೂಲೆಯನ್ನು ಗಾಳಿಯ ಒತ್ತಡ ಕೆಳಗಿನಿಂದ ಹಾಗೂ ಮೇಲಿನಿಂದ ಸಮತಲದಲ್ಲಿರುತ್ತದೆ. ಹೀಗಾಗಿ ಈ ಪೇಪರ್ ಚಿಟ್ಟೆ ಹಾರಾಡುತ್ತದೆ. ನೀವು ಸಹ ಮನೆಯಲ್ಲಿ ಇದನ್ನು ಮಾಡಬಹುದು. ಈ ರೀತಿ ಮಾಡಿದರೆ ಮಕ್ಕಳಲ್ಲೂ ಹೊಸ ಹೊಸ ರೀತಿಯ ಐಡಿಯಾ ಹುಟ್ಟಿಕೊಳ್ಳುತ್ತವೆ.
ಬಾಟಲಿ ಮುಚ್ಚಳದ ಬುಗುರಿ
ನಾವು ಸಣ್ಣವರಿರುವಾಗ ಇದನ್ನು ಬಹಳ ಬಳಸುತ್ತಿದ್ದೆವು. ಪ್ಲಾಸ್ಟಿಕ್ ಬಾಟಲಿಯ ಎರಡು ಮುಚ್ಚಳ ತೆಗೆದುಕೊಂಡು ಎರಡಲ್ಲೂ ಮದ್ಯದಲ್ಲಿ ಒಂದು ಸಣ್ಣ ರಂಧ್ರ ಮಾಡಬೇಕು. ಬಳಿಕ ಎರಡನ್ನು ಒಟ್ಟುಗೂಡಿಸಿ ಮಧ್ಯದಲ್ಲಿ ಸುತ್ತಲೂ ಗಮ್ ಟೇಪ್ ಹಚ್ಚಬೇಕು. ನಂತರ ಈ ರಂಧ್ರದಲ್ಲಿ ಗಟ್ಟಿಯಾಗಿ ಹಿಡಿಯುವಂತಹ ಕಡ್ಡಿಯಯೊಂದನ್ನು ಹಾಕಬೇಕು. ಇದನ್ನು ಒಂದು ಕಡೆ ಉದ್ದವಾಗಿ ಮತ್ತೊಂದು ಕಡೆ ಗಿಡ್ಡವಾಗಿ ಇಡಿ. ಉದ್ದವಿರುವ ಕಡೆಯನ್ನ ಹಿಡಿದುಕೊಂಡು ತಿರುಗಿಸಿ ನೆಲೆದಲ್ಲಿ ಬಿಟ್ಟರೆ ಬುಗುರಿಯಂತೆ ತಿರುಗುತ್ತದೆ.
ಪ್ಲಾಸ್ಟಿಕ್ ಗನ್
ಮಕ್ಕಳಿಗೆ ಆಟಿಕೆಯ ಗನ್‌ಗಳೆಂದರೆ ಎಲ್ಲಿಲ್ಲದ ಪ್ರೀತಿ, ಹಾಗೆ ನಾವಿಂದು ಸಣ್ಣದಾದ ಗನ್ ಮಾಡುವುದು ಹೇಗೆ ನೋಡೋಣ. ಇದಕ್ಕೆ ಯಾವುದಾದರು ಒಂದು ಪೆನ್ನಿನ ಕ್ಯಾಪ್ ತೆಗೆದುಕೊಳ್ಳಿ. ಆ ಕ್ಯಾಪ್ ಎರಡೂ ಕಡೆ ತೆರೆದಿರಬೇಕು. ಯಾವುದೇ ಮುಚ್ಚಿರುವ ವಸ್ತು ಇರಬಾರದು. ಈಗ ಒಂದು ರಬ್ಬರಗ ತೆಗೆದುಕೊಂಡು ಅದನ್ನು ಕತ್ತರಿಸಿ ಅದರ ಎರಡೂ ಬದಿಯಲ್ಲಿ ಕ್ಯಾಪ್‌ನ ಒಂದು ಬದಿಯ ಮೇಲ್ಭಾಗಕ್ಕೆ ಸಮನಾಗಿ ಹಿಡಿದು ಗಮ್ ಟೇಪ್ ಸುತ್ತಿ. ಒಂದು ಭಾಗದಲ್ಲಿ ಯು ಆಕಾರದಲ್ಲಿ ರಬ್ಬರ್ ಕಾಣಿಸುತ್ತಿರಬೇಕು. ಈಗ ಹಲ್ಲಿಗೆ ಹಾಕಲು ಬಳಸು ತೂಟ್ ಪಿಕ್ ಅನ್ನು ಕ್ಯಾಪ್‌ನ ಒಂದು ಬದಿಯಿಂದ ಒಳಗೆ ಹಾಕಿ ಯು ಆಕಾರದ ರಬ್ಬರ್‌ಗೆ ತಾಕಿಸಿ ಹಿಂದಕ್ಕೆ ಎಳೆದು ಬಿಟ್ಟರೆ ಈ ಕಡ್ಡಿ ಮುಂದಿರುವ ಗುರಿಗೆ ಚ್ಚುಚ್ಚಿಕೊಳ್ಳುತ್ತೆ. ಆದ್ರೆ ಈ ಆಟಿಕೆಯನ್ನು ನೀಡುವಾಗ ಎಚ್ಚರಿಕೆ ವಹಿಸಿ.



Click it and Unblock the Notifications

