Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಕ್ಲೋರೈಡ್ ಹಿಡಿದ ಬಕೆಟ್, ನಲ್ಲಿ ಕ್ಲೀನ್ ಮಾಡೋಕೆ ಉಪ್ಪು ಇದ್ರೆ ಸಾಕು..! ಹೊಸತರಂತೆ ಮಾಡಬಹುದು!!
ಮನೆಯಲ್ಲಿ ಕಿಚನ್ ಹಾಗೂ ಬಾತ್ ರೂಮ್ ವಸ್ತುಗಳ ಕ್ಲೀನ್ ಮಾಡುವುದು ಬಹಳ ಕಷ್ಟದ ಕೆಲಸ ಆಗಿರುತ್ತೆ. ನಾವು ನಿತ್ಯವೂ ಬಾತ್ ರೂಮ್ ಕ್ಲೀನ್ ಮಾಡುತ್ತೇವೆ. ಆದ್ದರೆ ಬಾತ್ ರೂಮ್‌ನ ಕೆಲವು ವಸ್ತುಗಳನ್ನು ಆಗಾಗ ಮಾತ್ರ ಕ್ಲೀನ್ ಮಾಡಲು ಮುಂದಾಗುತ್ತೇವೆ. ಅದರಲ್ಲಿ ಮುಖ್ಯವಾಗಿ ನಾವು ಬಾತ್ ರೂಮ್‌ನ ನಲ್ಲಿಗಳು, ಟಬ್, ಬಕೆಟ್ ಹೀಗೆ ಕೆಲವೊಂದು ಬಾತ್ ರೂಮ್ ವಸ್ತುಗಳನ್ನು ಆಗಾಗ ಮಾತ್ರ ಸ್ವಚ್ಛ ಮಾಡುತ್ತೇವೆ.
ಬಾತ್ ರೂಮ್‌ನ ಕೆಲವು ವಸ್ತುಗಳು ಕ್ಲೋರೈಡ್ ತುಂಬಿದ ನೀರಿನ ಕಾರಣದಿಂದಾಗಿ ಬಹುಬೇಗ ಹಾಳಾಗುತ್ತವೆ. ಹಾಗೆ ಈ ನೀರಿನಿಂದ ವಸ್ತುಗಳು ಹಾಳಾಗುತ್ತವೆ. ನಾವು ಎಷ್ಟೇ ಪ್ರಯತ್ನ ಮಾಡಿದರು ಈ ವಸ್ತುಗಳು ಕ್ಲೋರೈಡ್‌ನಿಂದ ಹೊರಗುಳಿಯುವುದಿಲ್ಲ. ಅವು ಬಿಳಿಯಾಗವುದು, ಕಲೆ ಹಿಡಿಯುವುದು ನಡೆಯುತ್ತಲೇ ಇರುತ್ತದೆ.

ಕ್ಲೋರೈಡ್ ನೀರಿನ ಕಾರಣದಿಂದಾಗಿ ನಲ್ಲಿಗಳು, ಬಕೆಟ್‌ಗಳಲ್ಲಿ ಬಿಳಿ ಬಣ್ಣದ ಸುಣ್ಣದ ರೀತಿಯ ಕಲೆಗಳು ನೋಡಬಹುದು. ಈ ರೀತಿಯ ಕಲೆಗಳನ್ನು ಹೋಗಲಾಡಿಸುವುದು ಕಷ್ಟವಾಗುತ್ತದೆ. ಅದ್ರಲ್ಲೂ ಬಕೆಟ್‌ಗಳು ಯಾವಾಗಲು ಕಲೆ ಹಿಡಿದು, ಸುಣ್ಣ ಹಿಡಿದಿರುವ ರೀತಿಯಲ್ಲಿ ಕಂಡುಬರುತ್ತಿರುತ್ತದೆ. ಹಾಗಾದರೆ ಈ ಕಲೆಗಳನ್ನು ಸುಲಭವಾಗಿ ಹೋಗಲಾಡಿಸುವುದು ಹೇಗೆ?
ನಾವಿಂದು ಈ ಕಲೆಗಳನ್ನು ಸುಲಭವಾಗಿ ಹೋಗಲಾಡಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಈ ಕಲೆಗಳ ಹೋಗಲು ಯಾವ ಹೋಮ್ ರೆಮಿಡೀಸ್ ಮಾಡಬೇಕು ಎಂಬುದನ್ನು ನೋಡಿ.
ಮೊದಲು ನೀವು ಪಾತ್ರೆ ಉಜ್ಜಲು ಬಳಸುವಂತಹ ಸ್ಪಂಜಿನ ಸ್ಕ್ರಬ್ ತೆಗೆದುಕೊಂಡು ಅದರ ಮೇಲೆ ಸ್ವಲ್ಪ ಪುಡಿ ಉಪ್ಪು ಹಾಕಿಕೊಳ್ಳಿ. ಅನಂತರ ಬಕೆಟ್ ಅನ್ನು ನೀರಿನಿಂದ ಚೆನ್ನಾಗಿ ನೆನೆಸಿಕೊಳ್ಳಿ. ಹಾಗೆ ಈ ಉಪ್ಪಿನ ಸ್ಕ್ರಬ್ ನಿಂದ ಚೆನ್ನಾಗಿ ಉಜ್ಜಿಕೊಳ್ಳಿ. ಎಲ್ಲಿ ಹೆಚ್ಚಾಗಿ ಕ್ಲೋರೈಡ್ ಅಂಶ ಹಿಡಿದು ಬಿಳಿಯಾಗಿದ್ಯೋ ಅಲ್ಲಿ ಗಟ್ಟಿಯಗಿ ಉಜ್ಜಿಕೊಳ್ಳಿ, ಇಷ್ಟು ಮಾಡಿದರೆ ಬಿಳಿಯಾಗಿ ಹಿಡಿದಿರುವ ಈ ಕ್ಲೋರಡ್ ಅಂಶ ಹೋಗುತ್ತದೆ.
ಇದೊಂದೆ ಅಲ್ಲ ನೀವು ವಿನೆಗರ್ ಹಾಗೂ ಸ್ವಲ್ಪ ಹಾರ್ಪಿಕ್ ಅನ್ನು ಒಟ್ಟಿಗೆ ಹಾಕಿ ಸೇರಿಸಿಕೊಂಡು ಅದರಿಂದ ಬಂದ ಮಿಶ್ರಣದಿಂದಲೂ ಹಳೆಯ ಕಲೆಗಳನ್ನು ಉಜ್ಜಿ ತೆಗೆಯಬಹುದು. ಇದು ಕೂಡ ಒಂದು ವಿಧಾನವಾಗಿದೆ. ಆದ್ರೆ ಉಪ್ಪಿನಿಂದ ಅತ್ಯಂತ ಸುಲಭವಾಗಿ ಹಾಗೂ ಕಡಿಮೆ ಸಮಯದಲ್ಲಿ ಈ ಕ್ಲೋರೈಡ್ ಅಂಶ ಬಿಡುತ್ತದೆ. ಇದನ್ನು ಬಕೆಟ್ ಮಾತ್ರವಲ್ಲ ನಲ್ಲಿ, ಮಗ್, ಡಬ್ ಹೀಗೆ ಎಲ್ಲಾ ವಸ್ತುಗಳ ಮೇಲೆ ಇರುವ ಕ್ಲೋರೈಡ್ ತೆಗೆಯಲು ನಾವು ಬಳಸಬಹುದು.
ಹಾಗೆ ಕಿಚನ್‌ನಲ್ಲಿರುವ ನಲ್ಲಿಗಳು ಅಥವಾ ಯಾವುದಾದರು ವಸ್ತುಗಳ ಮೇಲೆಯೂ ಕಲೆಗಳಿದ್ದರೆ ಈ ರೀತಿ ಉಪ್ಪನ್ನು ಬಳಸಿ ಕ್ಲೋರೈಡ್ ಅಂಶ ತೆಗೆಯಬಹುದು. ಆದ್ರೆ ಎಣ್ಣೆ ಜಿಡ್ಡುಗಳನ್ನು ಇದರಿಂದ ತೆಗೆಯಲು ಸಾಧ್ಯವಿಲ್ಲ. ಆದ್ರೆ ಈ ಕಿಚನ್‌ನಲ್ಲಿರುವ ಎಣ್ಣೆ ಜಿಡ್ಡು ತೆಗೆಯು ಒಂದು ಬೌಲ್‌ನಲ್ಲಿ ಟೂತ್ ಪೇಸ್ಟ್ ತೆಗೆದುಕೊಳ್ಳಿ. ಅನಂತರ ಪುಡಿ ಉಪ್ಪು, ವಿನೆಗರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಈ ಮಿಶ್ರಣ ಮಾಡಿ 5 ನಿಮಿಷ ಹಾಗೆಯೇ ಬಿಡಿ. ಈ ಮಿಶ್ರಣ ನಿಮ್ಮ ಅಡುಗೆ ಮನೆಯಲ್ಲಿರುವ ಎಣ್ಣೆ ಜಿಡ್ಡು ಹಿಡಿದಿರುವ ಜಾಗಕ್ಕೆ ಹಚ್ಚಿಕೊಳ್ಳಬೇಕು. ಬ್ರಷ್‌ನಿಂದ ಅಥವಾ ಕೈನಿಂದಲೇ ಹಚ್ಚಿ, ಹೀಗೆ ಹಚ್ಚಿ 5 ನಿಮಿಷ ಬಿಡಿ. ಅನಂತರ ಒಂದು ಬ್ರಷ್‌ನಿಂದ ಚೆನ್ನಾಗಿ ಉಜ್ಜಿಕೊಂಡರೆ ಎಷ್ಟು ಹಳೆಯ ಕಲೆಗಳಿದ್ದರೂ ಕ್ಲೀನ್ ಆಗುತ್ತದೆ. ನೀವು ಕೂಡ ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ. ಅದರಲ್ಲೂ ಅಡುಗೆ ಮನೆ ಕಿಟಕಿಗಳಿಗೆ ಹಿಡಿದಿರುವ ಹಳೆಯ ಎಣ್ಣೆ, ಮಸಾಲೆ ಜಿಡ್ಡನ್ನು ಈ ಮಿಶ್ರಣ ಬಳಸಿ ತೆಗೆಯಬಹುದು.



Click it and Unblock the Notifications
