Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಳೆಯ ಬ್ರಷ್ ಎಸೆಯಬೇಡಿ..! ಇಷ್ಟೆಲ್ಲಾ ಲಾಭ ಇರೋದು ತಿಳಿದರೆ ಅಚ್ಚರಿ ಪಡ್ತೀರಿ..!
ನಾವು ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಬಳಸದೆ ಇಡುತ್ತೇವೆ, ಹಾಗೆ ಹಳೆಯದಾದ ಬಳಿಕ ಎಸೆಯುತ್ತೇವೆ. ಅದರಲ್ಲೂ ಅಡುಗೆ ಮನೆಯಲ್ಲಿ ಹಲವು ರತ ವಸ್ತಗಳನ್ನು ನಾವು ಎಸೆಯುತ್ತೇವೆ. ಹಳೆಯ ಪಾತ್ರೆಗಳು, ಬಟ್ಟೆಗಳು ಹೀಗೆ ಹತ್ತಾರು ರೀತಿ ವಸ್ತ ಎಸೆಯುತ್ತೇವೆ. ಹಾಗೆ ಹಲ್ಲುಗಳ ಉಜ್ಜು ಬಳಸುವ ಬ್ರಷ್‌ಗಳನ್ನು ಕೂಡ ಎಸೆಯುತ್ತೇವೆ.
ಆದ್ರೆ ಈ ಹಳೆಯ ಬ್ರಷ್‌ಗಳ ಉಪಯೋಗ ನಿಮಗೆ ತಿಳಿದರೆ ನೀವೆಂದು ಅವುಗಳನ್ನು ಎಸೆಯುವುದಿಲ್ಲ. ನೀವು ಈ ಹಳೆಯ ಬ್ರಷ್‌ಗಳ ಸಹಾಯದಿಂದ ಈ ಕೆಲಸಗಳ ಮಾಡಬಹುದು. ಮನೆಯಲ್ಲಿ ಹಲವು ಕೆಲಸಗಳಿಗೆ ಈ ಹಳೆಯ ಬ್ರಷ್ ಬಳಸಬಹುದು. ಹಾಗಾದ್ರೆ ಈ ಹಳೆಯ ಬ್ರಷ್‌ಗಳನ್ನು ಎಸೆಯುವ ಬದಲಾಗಿ ಈ ರೀತಿ ಕೆಲಸಗಳಿಗೆ ಬಳಸಬಹುದು.

ಹಾಗಾದ್ರೆ ನಾವು ಹಲ್ಲು ಉಜ್ಜುವ ಬ್ರಷ್ ಬಳಸಿ ಮನೆಯ ಯಾವೆಲ್ಲಾ ಕೆಲಸ ಮಾಡಿಕೊಳ್ಳಬಹುದು? ಇದರಿಂದ ಏನೆಲ್ಲಾ ಉಪಯೋಗ ಇದೆ ಎಂದು ತಿಳಿದಿರೆ ನೀವು ಎಂದಿಗೂ ಅದನ್ನು ಎಸೆಯುವುದಿಲ್ಲ. ಬದಲಿಗೆ ಈ ಕೆಲಸಗಳಿಗೆ ಬಳಸಲು ಮುಂದಾಗುತ್ತೀರಿ. ಹಾಗಾದ್ರೆ ಯಾವೆಲ್ಲಾ ಹ್ಯಾಕ್ಸ್ ಮಾಡಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಹೇರ್ ಡೈ ಹಚ್ಚಲು ಬೆಸ್ಟ್ ಇದು
ನೀವು ಬಳಸದೆ ಇಟ್ಟಿರುವ ಬ್ರಷ್‌ಗಳನ್ನು ಹೇರ್ ಡೈ ಹಚ್ಚಲು ಬಹಳ ಸುಲಭವಾಗಿ ಬಳಸಬಹುದು. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಈ ರೀತಿ ಮಾಡುತ್ತಾರೆ. ಎಲ್ಲರ ಮನೆಯಲ್ಲಿೂ ಹೇರ್ ಡೈ ಹಚ್ಚಲು ಈ ಬ್ರಷ್‌ಗೆ ಬಳಸುವುದು ನೋಡಬಹುದು. ಹಳೆಯ ಬ್ರಷ್‌ಗಳಿದ್ದರೆ ಈ ಕ್ರೀಮ್ ಹಚ್ಚಿಕೊಳ್ಳುವುದು ಸುಲಭವಾಗುತ್ತದೆ. ನೀವು ಕೂಡ ಇಷ್ಟ ದಿನ ಬೇರೆ ಬ್ರ್ ಬಳಸಿದ್ದರೆ ಅದಕ್ಕಿಂತ ಈ ಹಲ್ಲುಜ್ಜುವ ಬ್ರಷ್ ಬಹಳ ಉಪಯೋಕಾರಿಯಾಗಲಿದೆ.
ದೇವರ ಪಾತ್ರೆ ಕ್ಲೀನ್ ಮಾಡಲು
ಈ ಹಳೆಯ ಬ್ರಷ್‌ಗಳನ್ನು ಬಳಸಿ ಮನೆಯಲ್ಲಿರುವ ದೇವರ ಪಾತ್ರೆಗಳ ಕ್ಲೀನ್ ಮಾಡಬಹುದು. ದೇವರ ಪಾತ್ರೆಗಳ ಮೇಲೆ ಡಿಸೈನ್ ಇರುವ ಕಾರಣ ಸುಲಭವಾಗಿ ಕ್ಲೀನ್ ಮಾಡಲು ಆಗುವುದಿಲ್ಲ. ಹೀಗಾಗಿ ಈ ಬ್ರಷ್‌ಗಳ ಬಳಸಿಕೊಂಡು ಸುಲಭವಾಗಿ ಸ್ವಚ್ಛ ಮಾಡಬಹುದು. ಬ್ರಷ್ ತುದಿಗೆ ಪೀತಾಂಬರ ಅಥವಾ ಪಾತ್ರೆ ಉಜ್ಜುವ ಲಿಕ್ವಿಡ್ ಹಚ್ಚಿಕೊಂಡು ಸುಲಭವಾಗಿ ದೇವರ ಪಾತ್ರೆ ವಸ್ತುಗಳನ್ನು ಸ್ವಚ್ಛ ಮಾಡಬಹುದು.
ಕಿಟಕಿ ಸ್ವಚ್ಛ ಮಾಡೋದು ಸುಲಭ
ಈ ಬ್ರಷ್‌ಗಳ ಬಳಸಿಕೊಂಡು ಸುಲಭವಾಗಿ ಮನೆಯ ಕಿಟಕಿಯನ್ನು ಸ್ವಚ್ಛ ಮಾಡಬಹುದು. ಕಿಟಕಿಯಲ್ಲಿ ಧೂಳು, ಕೊಳೆಗಳು ಹಾಗೆ ಇರುತ್ತವೆ, ಇವುಗಳನ್ನು ಕ್ಲೀನ್ ಮಾಡುವುದು ಕಷ್ಟ. ಹೀಗಾಗಿ ಬ್ರಷ್ ಬಳಸಿಕೊಂಡು ಕಿಟಕಿಯನ್ನು ಸ್ವಚ್ಚ ಮಾಡಬಹುದು.
ಬಾತ್ ರೂಮ್ ಕಷ್ಟದ ಜಾಗಗಳು
ಈ ಟೂತ್ ಬ್ರಷ್‌ಗಳ ಬಳಸಿ ನೀವು ಬಾತ್‌ರೂಮ್‌ನಲ್ಲಿ ಕೈಗೆ ಸಿಗದಂತಹ ಜಾಗಗಳನ್ನು ಸ್ವಚ್ಛ ಮಾಡಬಹುದು. ಕಮೋಡ್, ಬೇಸಿನ್, ಹೀಗೆ ಕೆಲವೊಂದು ಜಾಗವನ್ನು ಈ ಬ್ರಷ್ ಬಳಸಿ ತಿಕ್ಕಿ ಹೊಳೆಯುವಂತೆ ಮಾಡಬಹುದು. ಹಾಗೆ ಟೈಲ್ಸ್‌ಗಳ ನಡುವಿನ ಕಪ್ಪ ಕಲೆಗಳನ್ನು ಕೂಡ ಈ ಬ್ರಷ್ ಬಳಸಿ ಕ್ಲೀನ್ ಮಾಡಬಹುದು. ನಲ್ಲಿ, ಷವರ್ ಹೀಗೆ ಪ್ರತಿಯಿಂದು ವಸ್ತುವನ್ನು ಬಿಳಿ ಮಾಡಬಹುದು
ಮನೆಯ ಬೆಳ್ಳಿ ಬಂಗಾರದ ಆಭರಣ
ಆಭರಣ ಸ್ವಚ್ಛ ಮಾಡಲು ಇದಕ್ಕಿಂತ ಉತ್ತಮ ಉಸ್ತು ಬೇರೊಂದಿಲ್ಲ, ಬೆಳ್ಳಿ ಆಗಿರಲಿ ಅಥವಾ ಚಿನ್ನವ ಆಭರಣವನ್ನು ಈ ಬ್ರಷ್ ಅನ್ನು ಬಳಸಿಕೊಂಡು ಕ್ಲೀನ್ ಮಾಡಬಹುದು.
ಅಡುಗೆ ಮನೆ ವಸ್ತು ಕ್ಲೀನ್ ಮಾಡಿ
ನೀವು ಮನೆಯ ಮಿಕ್ಸಿಯ ಮೇಲ್ಭಾಗದಲ್ಲಿ ಬ್ರಷ್‌ನಿಂದ ಕ್ಲೀನ್ ಮಾಡಬಹುದು. ಅಲ್ಲಿ ಯಾವಾಗಲು ಮಸಾಲೆಗಳು ಉಳಿದು ಕಲೆಗಳಾಗಿರುತ್ತೆ. ಆದ್ರೆ ಆ ಜಾಗವನ್ನು ಬ್ರಷ್‌ನಿಂದ ಕ್ಲೀನ್ ಮಾಡಬಹುದು. ಹಾಗೆ ಮನೆಯ ರಿಮೋರ್ಟ್‌ಗಳು, ಮೊಬೈಲ್ ಕೂಡ ಈ ಬ್ರಷ್ ಬಳಸಿ ಕ್ಲೀನ್ ಮಾಡಬಹುದು.



Click it and Unblock the Notifications