Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ರುಬ್ಬುವಾಗ ಮಿಕ್ಸಿ ಜಾರ್ ಬ್ಲೇಡ್ ಜಾಮ್ ಆಗುತ್ತಾ? ಈ ಟ್ರಿಕ್ಸ್ ಮಾಡಿದ್ರೆ ಇನ್ನೆಂದು ಕೆಡೋದಿಲ್ಲ..!
ಅಡುಗೆ ಮನೆಯ ಪ್ರತಿಯೊಂದು ವಸ್ತುಗಳು ಕೂಡ ಅಡುಗೆ ಸಮಯದಲ್ಲಿ ಅತ್ಯಂತ ಮುಖ್ಯವಾಗುತ್ತೆ, ಯಾವುದಾದರು ಒಂದು ವಸ್ತು ಆ ದಿನ ಸರಿ ಇಲ್ಲದಿದ್ದರೆ ಇಡೀ ದಿನ ನೀವು ಕಷ್ಟಪಡಬೇಕಾಗುತ್ತದೆ. ಆದರಲ್ಲೂ ಮಿಕ್ಸರ್ ಗ್ರೈಂಡರ್ ಅಥವಾ ಮಿಕ್ಸಿ ಅಡುಗೆ ಸಮಯದಲ್ಲಿ ದುರಸ್ಥಿಯಾದರೆ ಆ ದಿನ ನೀವು ಅಡುಗೆ ಬಿಟ್ಟು ದೊಡ್ಡ ಸವಾಲುಗಳ ಎದುರಿಸಬೇಕಾಗುತ್ತದೆ.
ಅಡುಗೆ ಮಾಡಲು ಬೇಕಾಗುವ ತಯಾರಿಯಲ್ಲಿ ಮಿಕ್ಸಿ ಪ್ರಮುಖ ಪಾತ್ರ ವಹಿಸುತ್ತದೆ. ಮಿಕ್ಸಿಯ ಬಳಸಿಕೊಂಡು ನೀವು ಅಡುಗೆಗೆ ಬೇಕಾದ ಮಸಾಲೆಗಳು, ಖಾರ ರುಬ್ಬಿಕೊಳ್ಳಬೇಕಾಗುತ್ತದೆ. ಆದ್ರೆ ಕೆಲವೊಂದು ಬಾರಿ ನೀವು ಅಡುಗೆ ಮಾಡುವಾಗ ಅಥವಾ ಬ್ರೇಕ್‌ಫಾಸ್ಟ್‌ಗೆ ತಿಂಡಿ ಮಾಡುವಾಗ ಹಿಟ್ಟು ರುಬ್ಬುವ ಸಂದರ್ಭದಲ್ಲಿ ಮಿಕ್ಸಿ ಹಾಳಾಗುವುದು ನೋಡಬಹುದು.

ಮಿಕ್ಸಿ ಚೆನ್ನಾಗಿ ಕೆಲಸ ಮಾಡುತ್ತಿರುವಾಗಲೇ ದಿಢೀರ್ ಆಗಿ ಸಮಸ್ಯೆ ತರುವುದು ನೋಡಬಹುದು. ಬ್ಲೇಡ್‌ಗಳು ಜಾಮ್ ಆಗುವುದು, ಬಿಸಿಯಾಗುವುದು, ಬ್ಲೇಡ್‌ಗಳು ತುಂಡಾಗುವುದು ಹೀಗೆ ಹತ್ತಾರು ಸಮಸ್ಯೆ ಎದುರಾಗುವುದು ನೋಡಬಹುದು. ಅದರಲ್ಲೂ ಹೆಚ್ಚಾಗಿ ಮಿಕ್ಸಿ ಹೀಟ್ ಆಗಿ ಕೆಲ ಕಾಲ ಕೆಲಸ ಮಾಡುವುದನ್ನೇ ನಿಲ್ಲಿಸೋದು ನೋಡಬಹುದು.
ಹಾಗೆ ಬ್ಲೇಡ್ ಜಾಮ್ ಆದಾಗಲು ಕೂಡ ಅಡುಗೆ ಮಾಡಲು ಅಡ್ಡಿಯಾಗುತ್ತೆ. ಹಾಗಾದ್ರೆ ಈ ರೀತಿ ಬ್ಲೇಡ್ ಜಾಮ್ ಆಗುವುದು, ತಿರುಗದೆ ಇದ್ದಾಗ ಏನು ಮಾಡಬೇಕು ಅನ್ನೋದು ನಿಮಗೆ ಗೊತ್ತಾ? ಮಿಕ್ಸಿ ತಿರುಗದೆ ಇದ್ದಾಗ ಪ್ರತಿ ಬಾರಿಯು ಅದರ ರಿಪೇರಿ ಮಾಡಿಸಬೇಕು ಎಂದೇನಿಲ್ಲ. ನೀವು ಮನೆಯಲ್ಲೇ ಅದನ್ನು ಸರಿ ಮಾಡಬಹುದು. ಹಾಗಾದ್ರೆ ಮಿಕ್ಸಿ ಬ್ಲೇಡ್ ಜಾಮ್ ಆದಾಗ ಏನು ಮಾಡಬೇಕು?
ಬಿಸಿ ನೀರು ಬಳಸಿ ರೆಡಿ ಮಾಡಿ
ನೀವು ಹಿಟ್ಟು ರುಬ್ಬುವಾಗ, ಚಟ್ನಿ ಮಾಡುವಾಗ, ಮಸಾಲೆ ರುಬ್ಬುವಾಗ ಬ್ಲೇಡ್‌ಗಳು ಜಾಮ್ ಆಗುವುದು ನೋಡಬಹುದು. ಕೆಲವೊಮ್ಮೆ ಇದು ಮಿಕ್ಸಿಗೆ ಹಾಕಿದ ಪದಾರ್ಥಗಳು ಮಿಕ್ಸಿಯ ಬ್ಲೇಡ್ ಬಳಿ ಸಿಲುಕುವ ಕಾರಣದಿಂದಾಗಿ ಜಾಮ್ ಆಗುತ್ತದೆ. ಈ ಸಮಯದಲ್ಲಿ ನೀವು ಬಿಸಿ ನೀರು ಬಳಸಿ ಸರಿ ಮಾಡಬಹುದು. ಬಿಸಿ ನೀರು ಹಾಕಿ ಬಿಟ್ಟರೆ ಜಾಮ್ ಆಗಿರುವ ಬ್ಲೇಡ್ ಸರಿಯಾಗುತ್ತದೆ. ಈ ಟ್ರಿಕ್ಸ್ ನೀವು ಕೂಡ ಫಾಲೋ ಮಾಡಿ ನೋಡಬಹುದು.
ತೆಂಗಿನ ಎಣ್ಣೆ
ಯಾವುದೇ ವಸ್ತುವನ್ನು ರುಬ್ಬವಾಗ ಮಿಕ್ಸಿಯ ಬ್ಲೇಡ್ ಜಾಮ್ ಆಗಿ ತಿರುಗುವುದನ್ನು ನಿಲ್ಲಿಸಿದರೆ ನೀವು ತೆಂಗಿನ ಎಣ್ಣೆ ಹಾಕಿ ಸರಿ ಮಾಡಬಹುದು. ಮೊದಲು ಮಿಕ್ಸಿ ಒಳಗಿನಿಂದ ತೆಂಗಿನ ಎಣ್ಣೆಯನ್ನು ಹಾಕಿ ಹಾಗೆ ಹೊರಗಿನಿಂದಲೂ ಕೆಳಗಿನ ಭಾಗದಲ್ಲಿ ಸ್ವಲ್ಪವೇ ತಂಗಿನ ಎಣ್ಣೆ ಹಾಕಿ ಕೈಯಿಂದ ಮೊದಲು ತಿರುಗಿಸಿಕೊಂಡು ನಂತರ ಸ್ವಿಚ್ ಆನ್ ಮಾಡಿ ರುಬ್ಬಬಹುದು. ಹೀಗೆ ಮಾಡುವುದರಿಂದ ಜಾಮ್ ಆಗಿರುವ ಈ ಬ್ಲೇಡ್‌ಗಳು ಸಡಿಲವಾಗುತ್ತವೆ. ತೆಂಗಿನ ಎಣ್ಣೆಯನ್ನೇ ಬಳಸುವುದು ಉತ್ತಮ ಏಕೆಂದರೆ ನೀವು ಅದರಲ್ಲಿ ಅಡುಗೆಗೆ ಬಳಸುವ ವಸ್ತುಗಳ ರುಬ್ಬುವುದರಿಂದ ಬೇರೆ ಎಣ್ಣೆಗಳು ರುಚಿ ಕೆಡಿಸಬಹುದು.
ರಿವರ್ಸ್ ರನ್
ಎಲ್ಲಾ ಮಿಕ್ಸಿ ಜಾರ್‌ಗಳಲ್ಲೂ ರಿವರ್ಸ್ ರನ್ ಮಾಡುವ ಆಯ್ಕೆ ಇರುತ್ತದೆ. ನೀವು ಹಲವು ಸಮಯದಲ್ಲಿ ಇದನ್ನು ಬಳಸಿರುತ್ತೀರಿ. ಮಸಾಲೆಗಳು ಬ್ಲೇಡ್‌ನಲ್ಲಿ ಸಿಲುಕಿದ್ದರೆ ಈ ರೀತಿ ರಿವರ್ಸ್ ರನ್ ಮಾಡಿದಾಗ ಅವು ಅರಿಯುತ್ತವೆ. ಹಾಗೆ ಈ ಬ್ಲೇಡ್‌ಗಳು ಜಾಮ್ ಆದಾಗಲೂ ಕೂಡ ರಿವರ್ಸ್ ರನ್ ಮಾಡಿ ಸರಿ ಮಾಡಬಹುದು. ಅಥವಾ ನೀವೆ ಕೈಯಿಂದ ಹಿಮ್ಮುಖವಾಗಿ ಬ್ಲೇಡ್‌ಗಳನ್ನು ಚಲಿಸುವಂತೆ ಮಾಡಿದರೆ ಜಾಮ್ ಆಗಿರುವ ಬ್ಲೇಡ್‌ಗಳು ಮೊದಲಿನಂತಾಗುತ್ತವೆ.



Click it and Unblock the Notifications
