Latest Updates
-
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಬೇಸಿಗೆ ಮದುವೆ ಸಂಭ್ರಮ: ಬಿಸಿಲ ಬೇಗೆಯಿಂದ ಅತಿಥಿಗಳನ್ನು ರಕ್ಷಿಸಲು ಇಲ್ಲಿದೆ ಮಾಸ್ಟರ್ ಪ್ಲಾನ್ -
ಮೇ 2-3ರ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಭಾರತದಲ್ಲಿ ಸುಡುವ ಬಿಸಿಲು: ಹೀಟ್ ವೇವ್ನಿಂದ ಪಾರಾಗಲು ಇಲ್ಲಿವೆ ಬೆಸ್ಟ್ ಡಯಟ್ ಮತ್ತು ಹೈಡ್ರೇಶನ್ ಟಿಪ್ಸ್!
ಅಡುಗೆಗೆ ಯಾವ ಪ್ಯಾನ್ ಬಳಸುವುದು ಉಪಯುಕ್ತ ಗೊತ್ತಾ? ಇಲ್ಲಿವೆ ಆಯ್ಕೆಗಳು!!
ನೀವು ಅಡುಗೆ ಮಾಡಲು ಹಲವು ಬಗೆಯ ಪಾತ್ರೆಗಳ ಬಳಸುತ್ತೀರಿ. ಅದ್ರಲ್ಲೂ ಫ್ರೈ ಪಾನ್‌ಗಳ ಬಳಸಿಕೊಂಡು ಹಲವು ರೀತಿ ರೆಸಿಪಿಗಳು, ತಿಂಡಿಗಳ ಮಾಡಬೇಕಾಗುತ್ತದೆ. ಹಾಗೆ ನಾವು ಅಡುಗೆಗೆ ಯಾವ ರೀತಿಯ ಪ್ಯಾನ್ ಅನ್ನು ಬಳಸುತ್ತಿದ್ದೇವೆ ಎಂಬುದು ಸಹ ಮುಖ್ಯವಾಗಲಿದೆ. ಕೆಲವೊಮ್ಮೆ ನೀವು ಅಡುಗೆಗೆ ಬಳಸುವ ಪ್ಯಾನ್ ಬಹಳ ಕಳಪೆ ಗುಣಮಟ್ಟದಾಗಿರಬಹುದು, ಹಾಗೆ ಅದರಿಂದ ಹಾನಿಯೂ ಇದೆ.
ಹಾಗೆ ಸರಿಯಾದ ಪ್ಯಾನ್ ಬಳಸುವುದರಿಂದ ಊಟದ ರುಚಿ, ಆರೋಗ್ಯ, ಸಮಯದ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು. ಯಾವುದೇ ಪಾತ್ರೆ ಅಂಗಡಿಗೆ ನೀವು ಭೇಟಿ ನೀಡಿದರೆ ಅಲ್ಲಿ ಹಲವು ರೀತಿಯ ಪ್ಯಾನ್‌ಗಳ ನೋಡಬಹುದು. ಸ್ಟೀನ್ ಲೆಸ್, ನಾನ್ ಸ್ಟಿಕಿ, ಹಾಗೆ ಐರನ್ ಪ್ಯಾನ್‌ನಂತರ ಹಲವು ವಿಧದ ಪ್ಯಾನ್ ಕಾಣಸಿಗಲಿದೆ.

ಆದ್ರೆ ನಿಮಗೆ ಅಡುಗೆ ಮಾಡಲು ಯಾವ ಪ್ರಕಾರ ಪ್ಯಾನ್ ಅತ್ಯುತ್ತಮ ಎಂಬುದನ್ನು ನೀವು ತಿಳಿದಿದ್ದೀರಾ? ನಾವಿಂದು ನಿತ್ಯ ಬಳಕೆಗೆ ಯಾವ ರೀತಿಯ ಪ್ಯಾನ್ ಉಪಯುಕ್ತ ಎಂಬುದನ್ನು ತಿಳಿದುಕೊಳ್ಳೋಣ.
ಕಬ್ಬಿಣದ ಪ್ಯಾನ್
ಕಬ್ಬಿಣದ ಪ್ಯಾನ್‌ಗಳು ಉಳಿದೆಲ್ಲಾ ಪ್ಯಾನ್ ವಿಧಗಳಿಗಿಂತ ಭಿನ್ನ ಎನಿಸಿಕೊಳ್ಳುತ್ತವೆ. ತೂಕದಲ್ಲಿಯೂ ಹೆಚ್ಚು ತೂಗುವ ಇವು. ಬಾಳಿಕೆ ಬರಲಿವೆ. ಹಾಗೆ ಇವು ನೈಸರ್ಗಿಕವಾಗಿ ಕಬ್ಬಿಣದ ಅಂಶವನ್ನು ಆಹಾರಕ್ಕೆ ವರ್ಗಾಯಿಸಬಹುದು. ಇದರಿಂದ ಕಬ್ಬಿಣಾಂಶ ದೇಹಕ್ಕೆ ಸೇರಲಿದೆ. ಹಾಗೆ ಕಬ್ಬಿಣವು ಉರಿಯ ಶಾಖವನ್ನು ಸರಿಯಾದ ಪ್ರಮಾಣವದಲ್ಲಿ ಹಂಚಿಕೆ ಮಾಡಲಿದೆ. ಹಾಗೆ ಕಬ್ಬಿಣ ಹೊತುಪಡಿಸಿ ಉಳಿದಂತೆ ಯಾವುದೇ ರಾಸಾಯನಿಕವನ್ನು ಈ ಪ್ಯಾನ್ ತಯಾರಿಯಲ್ಲಿ ಬಳಸಿರುವುದಿಲ್ಲ. ಹೀಗಾಗಿ ಇದು ಆರೋಗ್ಯದ ದೃಷ್ಟಿಯಲ್ಲಿ ಬಹಳ ಉಪಯುಕ್ತವಾಗಿದೆ. ಆದ್ರೆ ಇದನ್ನು ಸರಿಯಾದ ರೀತಿ ನಿರ್ವಹಣೆ ಮಾಡದೆ ಇದ್ದರೆ ತುಕ್ಕು ಹಿಡಿಯಬಹುದು. ತುಕ್ಕು ದೇಹಕ್ಕೆ ಅಪಾಯ ತರಬಹುದು. ಹಾಗೆ ಆಹಾರದ ರುಚಿಯನ್ನು ಹಾಳು ಮಾಡಬಹುದು. ಹೀಗಾಗಿ ಸರಿಯಾದ ರೀತಿ ಇದನ್ನು ನಿರ್ವಹಙಣೆ ಮಾಡಬೇಕಿದೆ.
ನಾನ್ ಸ್ಟಿಕಿ ಪ್ಯಾನ್
ಇತ್ತೀಚಿಗೆ ಬಹುತೇಕರ ಮನೆಯಲ್ಲಿ ಈ ನಾನ್ ಸ್ಟಿಕಿ ಪ್ಯಾನ್ ಇದ್ದೇ ಇರುತ್ತದೆ. ಈ ನಾನ್ ಸ್ಟಿಕಿಯನ್ನು ಸ್ವಚ್ಛಗೊಳಿಸುವ ಮಾರ್ಗ ಬಹಳ ಸುಲಭ. ಇದಕ್ಕೆ ಆಹಾರ ಪದಾರ್ಥಗಳು ಅಂಟಿಕೊಳ್ಳುವುದಿಲ್ಲ. ಹಾಗೆ ಇದರಲ್ಲಿ ಯಾವುದೇ ಖಾದ್ಯ ತಯಾರಿಸಲು ಹೆಚ್ಚು ಎಣ್ಣೆಯ ಅಗತ್ಯವೂ ಇರುವುದಿಲ್ಲ. ಇದು ಹಗುರವಾಗಿರಲಿದೆ. ಹಾಗೆ ಉರಿಯಲ್ಲಿ ತಕ್ಷಣ ಬಿಸಿಯಾಗುತ್ತದೆ. ಹಾಗೆ ಬಹುಬೇಗ ತಣ್ಣಗಾಗುವ ಗುಣ ಸಹ ಹೊಂದಿರಲಿದೆ. ಹಗುರವಾದ ಮತ್ತು ನಿರ್ವಹಿಸಲು ಸುಲಭ - ದೈನಂದಿನ ಬಳಕೆಗೆ, ವಿಶೇಷವಾಗಿ ಹಗುರವಾದ ಕುಕ್‌ವೇರ್‌ಗೆ ಆದ್ಯತೆ ನೀಡುವವರಿಗೆ ಸೂಕ್ತವಾಗಿದೆ.
ಆದ್ರೆ ಇದು ಬಹಳ ಸಮಯ ಬಾಳಿಕೆ ಬರುವುದಿಲ್ಲ. ಬಹುಬೇಗ ಗೆರೆಗಳು ಮೂಡುವುದು ಹಾಗೆ ಸಮಯ ಕಳೆದಂತೆ ಬಾಗುವುದು, ಅಥವಾ ಆಹಾರದೊಂದಿಗೆ ಅದರ ರಾಸಾಯನಿಕ ಅಂಶವನ್ನು ಬಿಡುಗಡೆ ಮಾಡುವುದು ನೋಡಬಹುದು. ಇದರಿಂದ ಬಹು ಸಮಯದವರೆಗೂ ಇದನ್ನು ಬಳಸಲು ಸಾಧ್ಯವಿಲ್ಲ.
ಸ್ಟೈನ್‌ಲೆಸ್ ಸ್ಟೀಲ್
ಸ್ಟೈನ್ ಲೆಸ್ ಸ್ಟೀಲ್‌ನಿಂದ ಮಾಡುವ ಈ ಪ್ಯಾನ್ ಸಹ ಬಹುತೇಕರ ಮನೆಯಲ್ಲಿ ನೋಡಬಹುದು. ಇವು ಆದ್ರೆ ಇದು ಬಹಳ ತೆಳುವಾಗಿದ್ದರೆ ಆಹಾರ ಬೇಗ ಡೀಪ್ ಫ್ರೈ ಆಗುತ್ತದೆ. ಹಾಗೆ ದಪ್ಪವಾಗಿದ್ದರೆ ಸಹ ಸಮಸ್ಯೆಗಳ ತರಬಹುದು. ಇದು ತುಕ್ಕು ನಿರೋಧಕ. ಆದ್ರೆ ಇದನ್ನು ಸರಿಯಾಗಿ ಸ್ವಚ್ಛ ಮಾಡದೆ ಇಟ್ಟರೆ ಇದರಿಂದ ಬ್ಯಾಕ್ಟೀರಿಯಾ ಕೂಡ ಹರಡಬಹುದು. ಹಾಗೆ ಇದನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಬಹಳಷ್ಟು ಬಾಳಿಕೆ ಬರುತ್ತದೆ.



Click it and Unblock the Notifications