Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಮನೆಗೆ ಬಂದ ಅತಿಥಿಗಳು ಏನೆಲ್ಲಾ ಗಮನಿಸುತ್ತಾರೆ ಗೊತ್ತಾ?
ನಿಮ್ಮ ಮನೆಯನ್ನು ಎಷ್ಟು ಸ್ವಚ್ಛವಾಗಿ ನೀಟಾಗಿ ಇಡಬೇಕು ಎಂದು ನೀವು ನಿತ್ಯವು ಕ್ಲೀನ್ ಮಾಡುವುದು ಅಲಂಕಾರಿಕ ವಸ್ತುಗಳ ಇಡುವುದು ಮಾಡುತ್ತೇವೆ. ಏಕೆಂದರೆ ಯಾರಾದರು ಅತಿಥಿಗಳು ಬಂದಾಗ ನಿಮ್ಮ ಮನೆಯನ್ನು ನೋಡಿ ಸಂತಸ ಪಡಬೇಕು ಎಂಬುದೇ ಅವರ ಉದ್ದೇಶವಾಗಿರುತ್ತದೆ.
ಅಲ್ಲದೆ ಅತಿಥಿಗಳು ಮನೆಗೆ ಪ್ರವೇಶಿಸಿದ ತಕ್ಷಣ, ಅವರು ಮನೆಯ ಬಗ್ಗೆ ಅನೇಕ ವಿಷಯಗಳನ್ನ ಗಮನಿಸುತ್ತಾರೆ. ಮನೆಗೆ ಬಂದಾಗ ಸುತ್ತಲಿನ ವಸ್ತುಗಳು, ಗೋಡೆ ಮೇಲೆ ಅವರ ದೇಷ್ಟಿ ಹರಿಯುತ್ತದೆ. ಹೀಗಾಗಿ ಗೃಹಿಣಿಯರು ಮನೆಯನ್ನು ಹೆಚ್ಚು ಅಲಂಕೃತಗೊಳಿಸಿ ಇಡುತ್ತಾರೆ.

ಮನೆಯಲ್ಲಿ ಅತಿಥಿಗಳು ಗಮನಿಸುವ ಮೊದಲ ವಿಷಯವೆಂದರೆ ಸ್ವಚ್ಛತೆ. ಸ್ವಚ್ಛವಾದ ಮನೆಯು ನೀವು ಮನೆಗೆ ನೀಡುವ ಕಾಳಜಿಯನ್ನು ತೋರಿಸುತ್ತದೆ. ಧೂಳು ಇಲ್ಲದ ಕುರ್ಚಿ, ಸೋಫಾಗಳೆಡೆ ಅವರ ದೇಷ್ಟಿ ಹರಿಯುತ್ತದೆ. ಜೊತೆಗೆ ನೆಲದ ಮೇಲೆಯೂ ಅವರು ಗಮನವಿಡುತ್ತಾರೆ.
ಅಂತೆಯೇ, ಅತಿಥಿಗಳು ಗಮನಿಸುವ ಮತ್ತೊಂದು ಪ್ರಮುಖ ಅಂಶವೆಂದರೆ ಮನೆಯ ವಾಸನೆ. ಮನೆಯೊಳಗೆ ಬಂದ ತಕ್ಷಣ ಅತಿಥಿಗಳಿಗೆ ಯಾವ ವಾಸನೆ ಬರುತ್ತದೆ ಎಂಬುದನ್ನು ಅವರು ಗಮನಿಸುತ್ತಾರೆ. ಹೀಗಾಗಿ ಮನೆಯಲ್ಲಿ ಅಹಿತಕರ ವಾಸನೆ ಬರದಂತೆ ನೋಡಿಕೊಳ್ಳಿ.
ಗಾಳಿ ಮತ್ತು ಬೆಳಕು
ಮನೆಯಲ್ಲಿ ಪರಿಸರಕ್ಕೆ ಒಳ್ಳೆಯ ಗಾಳಿ ಹಾಗು ಬೆಳಕು ಬರುವಂತೆ ಇರಬೇಕು. ಅದರಲ್ಲೂ ನೈಸರ್ಗಿಕವಾಗಿಯೇ ಬೆಳಕು ಬರುವಂತೆ ಇದ್ದರೆ ಉತ್ತಮ. ಅತಿಥಿಗಳು ನಿಮ್ಮ ಮನೆಗೆ ಬಂದಾಗ ಅವರು ಬೆಳಕು ಮತ್ತು ಗಾಳಿಯ ಬಗ್ಗೆ ಹೆಚ್ಚು ಗಮನ ಇಡುತ್ತಾರೆ. ಅಗತ್ಯವಿದ್ದರೆ ಅವರಿಗೆ ಫ್ಯಾನ್ ಹಾಕಿಡಿ.
ಮನೆಯ ಅಲಂಕಾರ
ಅತಿಥಿಗಳು ಮನೆಯೊಳಗೆ ಬಂದ ತಕ್ಷಣ ನಿಮ್ಮ ಮನೆಯ ಅಲಂಕಾರ ಹೇಗಿದೆ ಎಂಬುದನ್ನು ನೋಡುತ್ತಾರೆ. ಏಕೆಂದರೆ ಮನೆಯ ಅಲಂಕಾರವು ನಿಮ್ಮ ಮನೆಯ ಸದಸ್ಯರ ಗುಣಗಳ ಹೇಳುತ್ತಿರುತ್ತವೆ. ಅಲ್ಲದೆ ಮನೆಯಲ್ಲಿನ ಧನಾತ್ಮಕ ಅಂಶಕ್ಕೆ ಕಾರಣವಾಗುತ್ತದೆ. ಹೀಗಾಗಿ ಮನೆಯ ಅಲಂಕಾರ ಸುಂದರವಾಗಿರಲಿ.
ಪೀಠೋಪಕರಣ ಹೇಗಿರಬೇಕು?
ಅತಿಥಿಗಳು ಮನೆಗೆ ಬಂದಾಗ ಅವರು ಕುಳಿತುಕೊಳ್ಳುವ ಕುರ್ಚಿಗಳ ಮೇಲೆ ಗಮನ ಹರಿಯುತ್ತದೆ. ನಿಮ್ಮ ಮನೆಯಲ್ಲಿ ಯಾವ ರೀತಿಯ ಪೀಠೋಪಕರಣಗಳ ಬಳಸಿದ್ದೀರಿ ಎಂಬುದನ್ನು ನೋಡುತ್ತಾರೆ. ಅಲ್ಲದೆ ಎಷ್ಟು ಕುರ್ಚಿಗಳಿವೆ, ಯಾವ ಸ್ಥಳದಲ್ಲಿ ಇಡಲಾಗಿದೆ ಎಂಬುದನ್ನು ಸಹ ನೋಡುತ್ತಾರೆ.
ಮನೆಯ ತಾಪಮಾನ
ಅತಿಥಿಗಳು ಮನೆಯೊಳಗೆ ಕಾಲಿಟ್ಟಾಗ ನಿಮ್ಮ ಮನೆಯ ತಾಮನಾದ ಬಗ್ಗೆ ಗಮನ ಕೊಡುತ್ತಾರೆ. ಏಕೆಂದರೆ ಆರಂಭದಲ್ಲಿ ಅವರಿಗೆ ತಾಪಮಾನದ ಕಾರಣದಿಂದಾಗಿ ಇರುಸು ಮುರುಸು ಉಂಟಾಗಬಹುದು. ಜೊತೆಗೆ ಯಾವ ಮನೆ ತಂಪಾದ ವಾತಾವರಣದಿಂದ ಕೂಡಿರುತ್ತದೆಯೇ ಅಲ್ಲಿ ಅತಿಥಿಗಳು ಹೆಚ್ಚು ಹೊತ್ತು ಕಾಲ ಕಳೆಯಬಹುದು. ಒಂದು ವೇಳೆ ತಾಪಮಾನ ಹೆಚ್ಚಾಗಿದ್ದರೆ ಅವರು ಮನೆಯಿಂದ ಆಚೆ ಹೋಗಲು ಮುಂದಾಗಬಹುದು.
ಗೋಡೆ ಮೇಲಿನ ಫೋಟೋಗಳು
ಮನೆಗೆ ಬರುವ ಅತಿಥಿಗಳು ಮನೆ ಗೋಡೆ ಮೇಲಿನ ಫೋಟೋಗಳ ಮೇಲೆ ಒಮ್ಮೆಯಾದರು ನೋಡಿಯೇ ನೋಡುತ್ತಾರೆ. ಜೊತೆಗೆ ಅಲ್ಲಿರುವ ವಿಷಯಗಳ ಮೇಲೆ ಗಮನ ಹರಿಸುತ್ತಾರೆ. ಕೆಲವೊಮ್ಮೆ ಅವರು ಫೋಟೋಗಳ ಸಂಬಂಧ ಪ್ರಶ್ನೆಗಳನ್ನೂ ಕೇಳಬಹುದು. ಅಲ್ಲಿರುವವರು ಯಾರು? ಇದು ಯಾವ ಫೋಟೋ? ಹೀಗೆ ಹತ್ತಾರು ಪ್ರಶ್ನೆ ಕೇಳಬಹುದು.
ಅಡುಗೆ ಮನೆ ಹಾಗೂ ಬಾತ್‌ರೂಮ್
ಮನೆಗೆ ಬರುವ ಅತಿಥಿಗಳು ಅಡುಗೆ ಮನೆಯ ಕಡೆ ಗಮನ ಇಟ್ಟಿರುತ್ತಾರೆ. ಜೊತೆಗೆ ಅವರು ಬಾತ್‌ರೂಮ್‌ಗೂ ತೆರಳಿದರೆ ಅಲ್ಲಿರುವ ವಸ್ತುಗಳನ್ನು ಸಹ ಗಮನಿಸುತ್ತಾರೆ.
ಟಿವಿ ಹಾಗೂ ಸ್ಟ್ಯಾಂಡ್
ಮನೆಗೆ ಬಂದ ಅತಿಥಿಗಳು ನಿಮ್ಮ ಮನೆಯ ಟಿವಿ ಮೇಲೆ ಗಮನವಿಡುತ್ತಾರೆ ಎಂಬುದು ನಿಮ್ಮ ಗಮನಕ್ಕೂ ಬಂದಿರಬಹುದು. ಏಕೆಂದರೆ ಅವರಿಗೆ ಕಾಲ ಕಳೆಯಬೇಕಾದರೆ ಟಿವಿ ನೋಡಲು ಮುಂದಾಗುತ್ತಾರೆ. ಅಲ್ಲದೆ ಟಿವಿ ಇಟ್ಟಿರುವ ಸ್ಟ್ಯಾಂಡ್ ಹಾಗೂ ಸ್ಟ್ಯಾಂಡ್ ಮೇಲಿರುವ ವಸ್ತುಗಳ ಮೇಲೆಯು ಅವರು ಗಮನ ಇಡುತ್ತಾರೆ.



Click it and Unblock the Notifications
