Latest Updates
-
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ
ಮನೆಯಲ್ಲಿ ಜೇಡರ ಹುಳು ಬಲೆ ಕಟ್ಟುತ್ತಿದ್ಯಾ? ಹೀಗೆ ಮಾಡಿದ್ರೆ ಇನ್ನೆಂದು ಕಟ್ಟುವುದಿಲ್ಲ..!
ಮನೆಯನ್ನ ಎಷ್ಟು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಅನ್ನೋದು ಪ್ರತಿಯೊಬ್ಬ ಗೃಹಿಣಿಯ ಆಸೆಯಾಗಿರುತ್ತೆ. ಇದಕ್ಕೆಂದೇ ಅವರು ದಿನದ ಬಹುಪಾಲು ಸಮಯವನ್ನ ಮನೆ ಸ್ವಚ್ಛ ಮಾಡುವುದರಲ್ಲೇ ಕಳೆದುಬಿಡುತ್ತಾರೆ. ಜೊತೆಗೆ ಒಂದಿಷ್ಟು ಕಾಲ ಅಡುಗೆ ಮನೆಯಲ್ಲಿ ಕಳೆಯಬೇಕಾಗುತ್ತದೆ. ಹೀಗಾಗಿಯೇ ಅವರನ್ನ ಹೋಮ್ ಮೆಕರ್‌ಗಳು ಎಂದು ಕರೆಯಲಾಗುತ್ತದೆ.
ಇನ್ನು ಮನೆಯನ್ನು ಸ್ವಚ್ಛ ಮಾಡುವಾಗ ಕಣ್ಣಿಗೆ ಬೀಳುವ ಅಂಶವೆಂದರೆ ಜೇಡರ ಹುಳು ಕಟ್ಟಿಕೊಂಡಿರುವ ಬಲೆಗಳು. ಈ ಬಲೆಗಳನ್ನು ಎಷ್ಟು ತೆಗೆದರು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಹೀಗಾಗಿ ಈ ಬಲೆಗಳ ತೆಗೆಯುವುದು ದೊಡ್ಡ ಸಾಹಸದ ಕಾರ್ಯವಾಗಿರುತ್ತೆ. ನೀವು ಪ್ರತಿದಿನ ತೆಗೆದರು ಮತ್ತೆ ಮಾರನೇ ದಿನ ಬಲೆ ಹಣೆದುಕೊಂಡಿರುತ್ತೆ. ಹಾಗಾದ್ರೆ ಮನೆಯ ಮೊಲೆಯಲ್ಲಿ ಜೇಡರ ಹುಳು ಬಲೆ ಕಟ್ಟದಂತೆ ಮಾಡುವುದು ಹೇಗೆ?

ಇದಕ್ಕೆ ಮನೆಯಲ್ಲೇ ಈ ರೀತಿಯ ಉಪಾಯ ಮಾಡಿದರೆ ಇನ್ನೆಂದು ಮನೆಯ ಮೂಲೆಯಲ್ಲಿ ಜೇಡರ ಬಲೇ ಕಾಣಿಸುವುದೇ ಇಲ್ಲ. ಹಾಗಾದ್ರೆ ಇದಕ್ಕೆ ಏನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ ನೋಡಿ
ಮೊದಲು ಜೇಡರ ಬಲೆಯನ್ನು ಪೊರಕೆಯಿಂದ ತೆಗೆದು ಆ ಜಾಗವನ್ನು ಸ್ವಚ್ಛ ಮಾಡಿಕೊಳ್ಳಿ. ನಂತರ ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ಬಿಳಿ ವಿನೆಗರ್ ಹಾಕಿ ಸ್ವಲ್ಪ ನೀರು ಬೆರೆಸಿ ಇಡಿ. ಕೆಲವು ನಿಮಿಷದ ಬಳಿಕ ಚೆನ್ನಾಗಿ ಎರಡು ಅಂಶಗಳು ಮಿಕ್ಸ್ ಆಗುವಂತೆ ಮಾಡಿ ನಂತರ ಅದರ ಒಳಗೆ ಒಂದು ಬಟ್ಟೆ ಅದ್ದಿ ಬಳಿಕ ಆ ಬಟ್ಟೆಯನ್ನು ಪೊರಕೆಯ ತುದಿಗೆ ಕಟ್ಟಬೇಕು. ಒಂದು ಹಗ್ಗ ಅಥವಾ ರಬ್ಬರ್ ಬಳಸಿ ತುದಿಯಲ್ಲಿ ಕಟ್ಟಬೇಕು ಬಳಿಕ ಜೇಡ ಬಲೆ ಕಟ್ಟುವ ಜಾಗ ಅಥವಾ ಮನೆಯ ಮೂಲೆಗೆ ಈ ಬಟ್ಟೆಯಿಂದ ಒರೆಸಬೇಕು. ಹೀಗೆ ಮಾಡುವುದರಿಂದಾಗಿ ನಿಮ್ಮ ಮನೆಯಲ್ಲಿ ಜೇಡರ ಬಲೆ ಕಟ್ಟುವುದು ಕಡಿಮೆಯಾಗುತ್ತದೆ.
ಬೆಳ್ಳುಳ್ಳಿ-ಚಕ್ಕೆ
ಇದಿಷ್ಟೆ ಅಲ್ಲ ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ 5ರಿಂದ 6 ಬೆಳ್ಳುಳ್ಳಿ ಹಾಕಿ, ನಂತರ 4 ಚಕ್ಕೆ ತುಂಡುಗಳು, ಒಂದು ನಿಂಬೆ ಹಣ್ಣನ್ನು ಕತ್ತರಿಸಿಕೊಂಡು ಹಾಕಿಕೊಳ್ಳಿ. ಬಳಿಕ ಇದಕ್ಕೆ 2 ಚಮಚ ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಇದರಿಂದ ನೀರನ್ನು ಸೋಸಿಕೊಳ್ಳಿ. ಇದು ಬಳಕೆಗೆ ಸಿದ್ಧವಾದ ದ್ರಾವಣವಾಗಿದೆ. ಈಗ ಇದನ್ನು ಬಟ್ಟೆಯಿಂದ ಅಥವಾ ಮೋಪ್‌ಗೆ ಅದ್ದಿಕೊಂಡು ಇಲ್ಲಿವೆ ನೀರು ಅದರ ಮೇಲೆ ಹಾಕಿ ಮೂಲೆ ಮೂಲೆಯನ್ನು ಒರೆಸಿ ಬಿಡಿ. ಹೀಗೆ ಮಾಡಿದರೆ ಇನ್ನೆಂದು ಮೂಲೆಯಲ್ಲಿ ನೀವು ಜೇಡರ ಬಲೆ ನೋಡಲು ಸಾಧ್ಯವಾಗುವುದಿಲ್ಲ.
ನಿಂಬೆ-ಪುದಿನ
ಒಂದು ನಿಂಬೆ ಹಣ್ಣು ಹಾಗೂ ಸ್ವಲ್ಪ ಪುದಿನ ಸೊಪ್ಪು ತೆಗೆದುಕೊಳ್ಳಿ. ಪುದಿನ ಸೊಪ್ಪನ್ನು ಮಿಕ್ಸಿಗೆ ಹಾಕಿಕೊಂಡಿ ಸ್ವಲ್ಪವೇ ನೀರು ಹಾಕಿ ಚೆನ್ನಾಗಿ ರುಬ್ಬಿ ರಸ ತೆಗೆದುಕೊಳ್ಳಿ. ನಂತರ ಇದಕ್ಕೆ ನಿಂಬೆ ಹಣ್ಣಿನ ರಸವನ್ನು ಹಿಂಡಿಕೊಳ್ಳಿ. ಅನಂತರ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಬಾಟಲಿಗೆ ಹಾಕಿಕೊಳ್ಳಿ. ಸ್ಪ್ರೇಯರ್ ಬಾಟಲಿ ಇದ್ದರೆ ಒಳ್ಳೆಯದು. ಇದನ್ನು ಮೂಲೆ ಮೂಲೆಗೆ ಅಥವಾ ಜೇಡ ಬಲೆ ಕಟ್ಟುವ ಜಾಗಕ್ಕೆ ಸ್ಪ್ರೇ ಮಾಡಿದರೆ ಇನ್ನೆಂದು ಆ ಜಾಗದಲ್ಲಿ ಜೇಡ ಬಲೆ ಕಟ್ಟಲು ಮುಂದಾಗುವುದಿಲ್ಲ.



Click it and Unblock the Notifications
