Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ಒಂದು ಬಣ್ಣ ನಿಮ್ಮ ಮನೆಯ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುವುದು
ಪುಟ್ಟದಾದರೂ ಸರಿ, ದೊಡ್ಡದಾದರೂ ಸರಿ, ಒಂದು ಮನೆ ಎನ್ನುವುದು ಬೇಕೇ ಬೇಕು. ನಮ್ಮದು ಎನ್ನುವ ಸ್ವಂತ ಮನೆ ಇರಬೇಕು. ಅದಕ್ಕೆ ಬೇಕಾದ ಸುಂದರವಾದ ಬಣ್ಣಗಳು, ಪೀಠೋಪಕರಣಗಳು, ಗೋಡೆಯ ಮೇಲಿನ ಚಿತ್ತಾರಗಳು, ಮೆಟ್ಟಿಲ ಅಲಂಕಾರ ಹೀಗೆ ವಿವಿಧ ಬಗೆಯಲ್ಲಿ ಮನೆಯನ್ನು ಸಿಂಗರಿಸಿಕೊಳ್ಳುತ್ತಾರೆ. ಆದರೆ ನಾವು ಮಾಡುವ ಆಯ್ಕೆಗಳು ಉತ್ತಮವಾಗಿಲ್ಲದೆ ಹೋದರೆ ಅದು ನಮ್ಮ ಮನೆಯ ಸೌಂದರ್ಯವನ್ನು ಹಾಳು ಮಾಡಬಹುದು. ಅದೇ ನಮ್ಮ ಆಯ್ಕೆಯು ಉತ್ತಮವಾಗಿದೆ ಎಂದಾಗ ಮನೆಯ ನೋಟವು ಹೆಚ್ಚಿನ ಆಕರ್ಷಣೆಯಿಂದ ಕೂಡಿರುತ್ತದೆ.
ನಿಜ, ಮನೆ ಎಂದರೆ ಎಲ್ಲರೂ ಜೀವನದಲ್ಲಿ ಒಮ್ಮೆ ದೊಡ್ಡ ಮೊತ್ತದ ಹಣವನ್ನು ವ್ಯಯಿಸುತ್ತಾರೆ. ಹೀಗೆ ವ್ಯಯಿಸಿದ ಹಣವು ನಂತರ ಮನಸ್ಸಿಗೆ ಒಂದು ನೆಮ್ಮದಿ ಹಾಗೂ ತೃಪ್ತಿಯ ಭಾವನೆಯನ್ನು ನೀಡಬೇಕು. ಹಾಗಾಗಿ ನಾವು ಮನೆಯನ್ನು ನಿರ್ಮಿಸುವಾಗ ಮತ್ತು ಅಲಂಕಾರದ ವಿಷಯಗಳನ್ನು ಪರಿಗಣಿಸಿದಾಗ ಮೊದಲೇ ಸೂಕ್ತ ಆಯ್ಕೆ ಹಾಗೂ ಯೋಜನೆಯನ್ನು ಕೈಗೊಂಡಿರಬೇಕು. ಇಲ್ಲವಾದರೆ ಪದೇ ಪದೇ ಹೆಚ್ಚಿನ ಹಣವನ್ನು ವ್ಯಯಿಸಬೇಕಾಗುವುದು.

ಮನೆಗೆ ಆಯ್ಕೆ ಮಾಡುವ ಬಣ್ಣಗಳು ಹಾಗೂ ಪೀಠೋಪಕರಣಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ಕೆಲವೊಮ್ಮೆ ಮನೆಯ ಒಳಾಂಗಣದ ವಿನ್ಯಾಸ ಸುಂದರವಾಗಿಲ್ಲವಾದರೂ, ಅಳವಡಿಸಿಕೊಳ್ಳುವ ಬಣ್ಣ ಹಾಗೂ ಪೀಠೋಪಕರಣಗಳು ಮನೆಗೆ ಶ್ರೀಮಂತಿಕೆಯ ಆಕರ್ಷಣೆಯನ್ನು ನಿಡುತ್ತವೆ. ನಿಮಗೂ ನಿಮ್ಮ ಮನೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬೇಕು ಎನ್ನುವ ಆಸೆ ಅಥವಾ ಹಂಬಲವಿದ್ದರೆ ಈ ರೀತಿಯ ಬಣ್ಣಗಳನ್ನು ಬಳಸಿ. ಸುಂದರ ಆಕರ್ಷಣೆ ಹೊಂದುವಂತೆ ಮಾಡಿ.

ಈ ಬಣ್ಣವು ನಿಮ್ಮ ಮನೆಯನ್ನು ಶ್ರೀಮಂತವಾಗಿ ಕಾಣುವಂತೆ ಮಾಡುವುದು
ಮನೆ ಮಾಡುವಾಗ ತೆಗೆದುಕೊಳ್ಳುವ ಅತ್ಯಂತ ನಿರ್ಣಾಯಕ ನಿರ್ಧಾರವೆಂದರೆ ಗೋಡೆಗಳ ಬಣ್ಣ. ವಿವಿಧ ಬಗೆಯ ಬಣ್ಣಗಳನ್ನು ನೋಡಿದಾಗ ನಾವು ಯಾವ ಬಣ್ಣದ ಆಯ್ಕೆ ಮಾಡಬೇಕು ಎನ್ನುವುದನ್ನು ಪರಿಶೀಲಿಸುವಾಗ ಕೆಲವೊಮ್ಮೆ ಎಡವುವ ಸಾಧ್ಯತೆಗಳಿರುತ್ತವೆ. ಮನೆಯ ಒಳಾಂಗಣವು ಬಿಳಿ ಬಣ್ಣ ಅಥವಾ ತಿಳಿ ಬಣ್ಣಗಳಿಂದ ಕೂಡಿದ್ದರೆ ಮನೆಯು ಹೆಚ್ಚು ಆಕರ್ಷಣೆಯನ್ನು ಪಡೆದುಕೊಳ್ಳುವುದು. ಜೊತೆಗೆ ಎಲ್ಲಾ ಬಗೆಯ ಪೀಠೋಪಕರಣಗಳಿಗೂ ಹೊಂದಿಕೆ ಆಗುವುದು.

ಬಿಳಿ ಗೋಡೆ ಖಾಲಿ ಸ್ಲೇಟ್ ನಂತೆ
ಗೋಡೆಗಳು ಬಿಳಿ ಬಣ್ಣದಿಂದ ಕೂಡಿದ್ದರೆ, ನೀವು ಪೀಠೋಪಕರಣಗಳನ್ನು ಆಯ್ಕೆ ಮಾಡಲು ಹಾಗೂ ಹೊಂದಿಸಲು ಅಧಿಕ ಸಮಯ ಬೇಕಾಗುವುದಿಲ್ಲ. ಬಹುಬೇಗ ನಿಮ್ಮ ಮನೆಯ ಸೌಂದರ್ಯವನ್ನು ಹೆಚ್ಚಿಸುವ ಅಂಗತಿಗಳನ್ನು ಆಯ್ಕೆ ಮಾಡಬಹುದು. ಬಿಳಿ ಬಣ್ಣವು ಎಲ್ಲಾ ಬಗೆಯ ವಿನ್ಯಾಸಗಳಿಗೂ ಬಹುಬೇಗ ಹೊಂದಿಕೊಳ್ಳುತ್ತವೆ. ಪೀಠೋಪಕರಣಗಳು ಗೋಡೆಯ ಬಣ್ಣಕ್ಕೆ ಹೊಂದಿಕೆ ಆದರೆ ಮನೆಯ ಆಕರ್ಷಣೆ ಅತ್ಯುತ್ತಮವಾಗಿ ಇರುತ್ತದೆ.

ವಿವಿಧ ಬಣ್ಣಗಳ ಸಂಯೋಜನೆಗೆ ಪರಿಪೂರ್ಣವಾದ ಹಿನ್ನೆಲೆ
ಮನೆಗೆ ವಿವಿಧ ಬಣ್ಣಗಳ ಸೋಫಾ, ಕರ್ಟನ್, ಅಲಂಕಾರವನ್ನು ಬೆಂಬಲಿಸುವ ಪೀಠೋಪಕರಣಗಳು ಅತ್ಯಗತ್ಯವಾಗಿರುತ್ತವೆ. ಅವುಗಳ ಆಯ್ಕೆಯನ್ನು ನಾವು ನಮ್ಮ ಇಷ್ಟದ ಬಣ್ಣದಲ್ಲಿ ಮಾಡಿದರೆ ಕೆಲವೊಮ್ಮೆ ಮನೆಯ ಗೋಡೆ ಬಣ್ಣಕ್ಕೆ ಹಾಗೂ ನಾವು ಅಯ್ಕೆ ಮಾಡಿದ ವಸ್ತುವಿಗೆ ಹೊಂದಾಣಿಕೆ ಆಗುವುದಿಲ್ಲ. ಆದರೆ ಬಿಳಿ ಬಣ್ಣದ ಗೋಡೆ ಹೊಂದಿದ್ದರೆ ನೀವು ನಿಮ್ಮ ಅಗತ್ಯಕ್ಕೆ ಬೇಕಾದ ರೀತಿಯಲ್ಲಿ ಮನೆಯನ್ನು ಸಜ್ಜುಗೊಳಿಸಬಹುದು.

ಮೋಲ್ಡಿಂಗ್ ಸೊಗಸಾಗಿ ಕಾಣುವುದು
ನೀವು ಗೋಡೆಯ ಮೇಲೆ ಯಾವುದೇ ರೀತಿಯ ಮೋಲ್ಡಿಂಗ್ ಗಳನ್ನು ಯೋಜಿಸುತ್ತಿದ್ದರೆ ಅಥವಾ ಛಾವಣಿಗಳ ಮೇಲೆ ಪಿಒಪಿ ಯೋಜಿಸಿದ್ದರೆ ಬಿಳಿ ಬಣ್ಣವು ಅವುಗಳ ಶ್ರೀಮಂತಿಕೆಯನ್ನು ಹೆಚ್ಚಿಸುತ್ತವೆ.

ಕೊಠಡಿಯು ಬೆಳಕಿನಿಂದ ಕೂಡಿರುತ್ತದೆ
ಬಿಳಿ ಬಣ್ಣವು ಶುಭ್ರತೆಯ ಸಂಕೇತ. ಇದು ಬೆಳಕನ್ನು ಆಕರ್ಷಿಸುವುದು. ಒಳಾಂಗಣದ ಬಣ್ಣ ಬಿಳಿ ಬಣ್ಣದಿಂದ ಕೂಡಿದ್ದರೆ, ಸ್ವಲ್ಪ ಬೆಳಕು ಇದ್ದರೂ ಹೆಚ್ಚು ಬೆಳಕನ್ನು ಹೊಂದಿರುವಂತೆ ತೋರುವುದು.

ಕೊಠಡಿಯು ವಿಶಾಲವಾಗಿ ಕಾಣುವುದು
ಬಿಳಿ ಗೋಡೆಯು ವಿಸ್ತರಣೆಯನ್ನು ಹೆಚ್ಚಿಸಿರುವಂತೆ ತೋರುವುದು. ಸುತ್ತಲೂ ಬಿಳಿ ಬಣ್ಣದಿಂದ ಕೂಡಿದ್ದರೆ ಕೊಠಡಿಯು ಅತ್ಯಂತ ವಿಶಾಲತೆಯಿಂದ ಕೂಡಿರುವಂತೆ ಕಾಣುವುದು.

ನಿರ್ವಹಣೆ ಸುಲಭ
ಯಾವ ಬಣ್ಣದ ಗೋಡೆಯಾಗಿದ್ದರೂ ಅದು ಸ್ವಲ್ಪ ಸಮಯದ ಬಳಿಕ ಮಂಕಾಗುವುದು. ಆಗ ಪುನಃ ಬಣ್ಣವನ್ನು ಬಳಿಯಬೇಕು. ನಾವು ಬಿಳಿ ಬಣ್ಣವನ್ನು ಹೊಂದಿದ್ದರೆ ಸುಲಭವಾಗಿ ಪುನಃ ಪುನಃ ಬಣ್ಣಗಳನ್ನು ಬಳಿಯ ಬಹುದು. ಅದೇ ವಿಭಿನ್ನವಾದ ಬಣ್ಣಗಳನ್ನು ಹೊಂದಿದ್ದರೆ ಅದರ ನಿರ್ವಣೆ ಕಷ್ಟವಾಗುವುದು.

ಫ್ಯಾಷನ್ ಹೊರತಾಗಿ ಇರುವುದಿಲ್ಲ
ಬಿಳಿ ಬಣ್ಣ ಎಂದಿಗೂ ತನ್ನ ಶೈಲಿಯಲ್ಲಿ ಹೊರತಾಗಿರುವುದಿಲ್ಲ. ಅದೇ ಇತರ ಬಣ್ಣಗಳು ಕೆಲವು ಸಮಯದ ನಂತರ ತನ್ನ ಟ್ರೆಂಡ್ ಅನ್ನು ಕಳೆದುಕೊಳ್ಳಬಹುದು. ಆಗ ಪುನಃ ಬೇರೆ ಬಣ್ಣಗಳ ಆಯ್ಕೆಗೆ ಮೊರೆ ಹೋಗಬೇಕಾಗುವುದು.

ನೈಸರ್ಗಿಕ ಬೆಳಕನ್ನು ಉತ್ತಮಗೊಳಿಸುತ್ತದೆ
ಬಿಳಿ ಬಣ್ಣ ಬೆಳಕಿನ ಉತ್ತಮ ಪ್ರತಿಫಲಕ. ಕೋಣೆಯಲ್ಲಿ ಬರುವ ನೈಸರ್ಗಿಕ ಬೆಳಕನ್ನು ಅಗಲವಾಗಿ ಮತ್ತು ಪ್ರಕಾಶಮಾನವಾಗಿ ಹರಡುತ್ತದೆ. ಇದರಿಂದ ಕಡಿಮೆ ಪ್ರಮಾಣದಲ್ಲಿ ವಿದ್ಯುತ್ ಅನ್ನು ಬಳಕೆಮಾಡಬಹುದು. ಹಾಗಾಗಿ ಬಿಳಿ ಬಣ್ಣ ಪರಿಸರ ಪ್ರೇಮಿ ಬಣ್ಣವೂ ಹೌದು.

ನಿಮ್ಮ ಅಲಂಕಾರವನ್ನು ಉತ್ತಮವಾಗಿ ಶೋಭಿಸುವಂತೆ ಮಾಡುವುದು
ಬಿಳಿ ಬಣ್ಣವು ಇತರ ಬಣ್ಣಗಳನ್ನು ಪೋಷಿಸುತ್ತದೆ. ಹಾಗಾಗಿ ಬಿಳಿ ಬಣ್ಣದ ಗೋಡೆಯು ನಿಮ್ಮ ಪೀಠೋಪಕರಣ ಹಾಗೂ ಗೋಡೆಯ ಮೇಲೆ ಅಳವಡಿಸುವ ಚಿತ್ರಕಲೆಗಳು ಉತ್ತಮವಾಗಿ ಶೋಭಿಸುವಂತೆ ಮಾಡುವುದು.



Click it and Unblock the Notifications