Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
1BHK ಮನೆ ಚಿಕ್ಕದಾಗಿದ್ದರೂ ಇಕ್ಕಟ್ಟಾಗದಿರಲು ಈ ಟಿಪ್ಸ್ ಬಳಸಿ
ನಮ್ಮದು 1 BHK ಮನೆ, ಯಾರಾದರೂ ಮನೆಗೆ ನೆಂಟರು ಬರುತ್ತಾರೆ ಎಂದರೆ ಅವರು ಉಳಿದುಕೊಳ್ಳಲು ಸ್ಥಳನೇ ಇಲ್ಲ, ಹಾಲ್‌ನಲ್ಲಿ ಸೋಫಾ, ಟೇಬಲ್ ಅಂತ ನಡೆದಾಡುವುದಕ್ಕೇ ಜಾಗ ಇಲ್ಲ ಎಂದು 1 BHK ಮನೆಯಲ್ಲಿರುವವರು ಅಂದುಕೊಳ್ಳುವುದುಂಟು.
ಆದರೆ ನೀವು ಸ್ವಲ್ಪ ಟೆಕ್ನಿಕ್ ಅಳವಡಿಸಿದರೆ 1 BHK ಮನೆಯಾದರೂ ಸ್ವಲ್ಪ ಸ್ಥಳಾವಕಾಶವಿರುವಂತೆ ಮನೆಯನ್ನು ಅಲಂಕರಿಸಬಹುದು. ಹೇಗೆ ಎಂದು ನೋಡೋಣ ಬನ್ನಿ:

ಮಡಚಬಹುದಾದ ಪೀಠೋಪಕರಣ ಬಳಸಿ
1 BHK ಮನೆಯಾದರೆ ಸ್ವಲ್ಪ ಹೊಸ ವಿನ್ಯಾಸದ ಪೀಠೋಪಕರಣಗಳನ್ನು ಬಳಸುವುದು ಸೂಕ್ತ. ಡೈನಿಂಗ್ ಟೇಬಲ್, ಸ್ಟಡಿ ಟೇಬಲ್ , ಐರನ್ ಟೇಬಲ್ ಹೀಗೆ ಎಲ್ಲದಕ್ಕೂ ಸೂಕ್ತವಾಗುವಂತೆ ಮಡಚಬಹುದಾದ ಟೇಬಲ್ ಬಳಸಿ. ಆಗ ಮಡಚಿ ಇಟ್ಟರೆ ಸ್ಥಳಾವಕಾಶ ಕಾಣುವುದು, ಅಗ್ಯತವಿದ್ದಾಗ ಮಾತ್ರ ಅವುಗಳನ್ನು ಬಿಡಿಸಿಕೊಂಡು ಬಳಸಬಹುದು.

ಸ್ಟೋರೇಜ್ ಜಾಗ ತುಂಬಾ ಇರಲಿ
ಮನೆ 1 BHK ಆದರೂ ಸ್ಟೋರೇಜ್ ಜಾಗಗಳು ತುಂಬಾ ಇದ್ದರೆ ಯವುದೇ ತೊಂದರೆಯಾಗಲ್ಲ. ಅಡುಗೆ ಮನೆ ಹಾಗೂ ಬೆಡ್ ರೂಂ, ಹಾಲ್‌ನಲ್ಲಿ ಕಪಾಟುಗಳು ಅಧಿಕವಿರಬೇಕು. ಆಗ ವಸ್ತುಗಳನ್ನು ನೀಟಾಗಿ ಅದರಲ್ಲಿ ಜೋಡಿಸಬಹುದು, ಚೆಲ್ಲಾಪಿಲ್ಲಿಯಾಗಿ ಇಡಬೇಕಾಗಿಲ್ಲ. ವಸ್ತುಗಳನ್ನು ಕಪಾಟಿನಲ್ಲಿಟ್ಟರೆ ನೆಲದಲ್ಲಿ ಜಾಗವಿರುವುದು, ಜೋಡಲು ಕೂಡ ನೀಟಾಗಿ ಕಾಣುವುದು.

ಬಣ್ಣ
ಇನ್ನು ಮನೆ ಗೋಡೆಗೆ ಬಳಸುವ ಬಣ್ಣ ಕೂಡ ಮನೆಯನ್ನು ವಿಶಾಲವಾಗಿ ಕಾಣುವಂತೆ ಮಾಡುತ್ತದೆ. ಬಿಳಿ, ಬೀಜ್, ಲೈಟ್ ಬ್ರೌನ್, ಗ್ರೇ, ಕ್ರೀಮ್ ಈ ರೀತಿಯ ಬಣ್ಣಗಳು ಕೋಣೆಗಳು ಚಿಕ್ಕದಾದರೂ ನೋಡಲು ಸ್ವಲ್ಪ ದೊಡ್ಡದಾಗಿರುವಂತೆ ಭ್ರಮೆ ಉಂಟು ಮಾಡುವುದು.

ಮನೆಯ ವಸ್ತುಗಳನ್ನು ಸರಿಯಾಗಿ ಜೋಡಿಸಿ
ದೊಂದು ವಸ್ತುವನ್ನು ಹಾಗೇ ಇಡುವುದಕ್ಕಿಂತ ಅವುಗಳನ್ನು ಒಂದರ ಮೇಲೆ ಒಂದು ಎಂಬಂತೆ ನೀಟಾಗಿ ಜೋಡಿಸಿಕೊಂಡು ಹೋಗಿ. ಸ್ಲಿಮ್ ಟಿವಿ ಬಳಸಿ, ನಿಮ್ಮ ವಸ್ತುಗಳನ್ನು ಇಡಲು ನೆಲಕ್ಕಿಂತ ಗೋಡೆಯ ಜಾಗವನ್ನು ಹೆಚ್ಚಾಗಿ ಬಳಸಿ. ಅಂದ್ರೆ ಗೋಡೆಗಳನ್ನು ಆಕರ್ಷಕವಾಗಿ ಕಾಣುವಂತೆ ವಸ್ತುಗಳನ್ನು ಇಡಿ. ಈ ರೀತಿ ಮಾಡಿದರೆ ಮನೆ ಚಿಕ್ಕದಾಗಿದ್ದರೂ ತುಂಬಾ ಇಕ್ಕಟ್ಟಾಗಿ ಕಾಣುವುದಿಲ್ಲ.
ಕೊನೆಯದಾಗಿ
ನೀವು ನಗರ ಪ್ರದೇಶದಲ್ಲಿ ಇರುವಾಗ ಈ ಟಿಪ್ಸ್ ಖಂಡಿತ ಸಹಾಯ ಮಾಡುವುದು. ಇರುವ ಮನೆಯಲ್ಲಿ ಹೆಚ್ಚು ಕಬೋರ್ಡ್ ವ್ಯವಸ್ಥೆ ಇಲ್ಲದಿದ್ದರೆ ಸುಲಭವಾಗಿ ಕೊ<ಡೊಯ್ಯಲು ಅನುಕೂಲವಾಗುವಂಥ ಕಪಾಟುಗಳು ಒರೆಯುತ್ತವೆ, ಅವುಗಳನ್ನು ಬಳಸಿ. ಅಲ್ಲದೆ ತುಂಬಾ ವಸ್ತುಗಳನ್ನು ಜೋಡಿಸುವ ಬದಲಿಗೆ ಅಗ್ಯತವಿರುವ ವಸ್ತುಗಳನ್ನಷ್ಟೇ ಜೋಡಿಸಿ.



Click it and Unblock the Notifications