Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಪೇಪರ್ ಕ್ರಿಸ್ಮಸ್ ಟ್ರೀ ಮಾಡೋದು ಹೇಗೆ ಗೊತ್ತಾ?
ಕ್ರಿಸ್ಮಸ್ ಅಂದ್ರೆ ತಕ್ಷಣ ನೆನಪಾಗೋದು, ಕ್ರಿಸ್ಮಸ್ ಟ್ರೀ. ಮನೆ ಮುಂದೆ ಕಲರ್ ಕಲರ್ ಲೈಟ್, ಬಲೂನ್, ರಿಬ್ಬನ್‌ಗಳಿಂದ ಕಂಗೊಳಿಸೋ ಕ್ರಿಸ್ಮಸ್ ಟ್ರೀಯನ್ನು ನೋಡೋದೇ ಒಂದು ಹಬ್ಬ. ಅದಕ್ಕಾಗಿ ದಿನಗಳಗಟ್ಟಲೇ ತಯಾರಿ ಮಾಡಿಕೊಳ್ತಾ ಇರ್ತಾರೆ. ಕೆಲವೊಬ್ಬರಂತೂ ಕಾಂಪಿಟೇಷನ್ ರೀತಿಯಲ್ಲಿ ಸಿಂಗಾರ ಮಾಡಿ, ಸಂಭ್ರಮಿಸುತ್ತಿರುತ್ತಾರೆ. ಇಂತಹ ಕ್ರಿಸ್ಮಸ್ ಟ್ರೀಯನ್ನು ಮನೆಯಲ್ಲಿಯೇ ತಯಾರಿಸಬಹುದು. ಅದು ನಿವೇ ಸುಲಭವಾಗಿ ಹಾಗೂ ಸರಳವಾಗಿ ಅಂದ್ರೆ ಆಶ್ಚರ್ಯವಾಗುತ್ತಾ?
ಹೌದು, ಮನೆ ಮುಂದೆ ಇಡೋ ಕ್ರಿಸ್ಮಸ್ ಟ್ರೀಯನ್ನು ನಿಮ್ಮ ಕೈಯಾರೇ ಮಾಡಬಹುದು. ಈ ಪುಟಾಣಿ ಟ್ರೀಯನ್ನು ನಿಮ್ಮ ದೊಡ್ಡ ಕ್ರಿಸ್ಮಸ್ ಮರದ ಮಧ್ಯೆ ಇಟ್ರೆ ಆ ಟ್ರೀಗೆ ಮತ್ತಚ್ಟು ಮೆರಗು ಬರೋದ್ರಲ್ಲಿ ಸಂಶಯವಿಲ್ಲ. ಅಥವಾ ಕೇವಲ ಇದೇ ಚಿಕ್ಕ-ಚಿಕ್ಕ ಮರಗಳನ್ನೇ ಉಪಯೋಗ ಮಾಡ್ಕೊಂಡು ನಿಮ್ಮ ಕ್ರಿಸ್ಮಸ್ ಆಚರಣೆ ಮಾಡ್ತೀರಾ ಅಂದ್ರೂ ಅದೂ ಕೂಡ ಸೂಪರೇ. ಇದನ್ನು ನೀವು ಮಾಡಬಹುದು, ನಿಮ್ಮ ಮಕ್ಕಳಿಗೂ ಹೇಳಕೊಡಬಹುದು. ಹಾಗಾದ್ರೆ ಬನ್ನಿ ಮನೆಯಲ್ಲಿಯೇ ಸುಲಭವಾಗಿ ಕರಕುಶಲವಾಗಿ ಕ್ರಿಸ್ಮಸ್ ಟ್ರೀಯನ್ನು ಕೇವಲ ಒಂದು ಹಸಿರು ಕಾಗದದಲ್ಲಿ ಹೇಗೆ ತಯಾರು ಮಾಡೋದು ಅಂತ ನೋಡಿಕೊಂಡು ಬರೋಣ.

ಕ್ರಿಸ್ಮಸ್ ಟ್ರೀ ಮಾಡಲು ಅಗತ್ಯವಿರುವ ವಸ್ತುಗಳು:
ಹಸಿರು ಕಾಗದ (ಅಥವಾ ನೀವು ಇಷ್ಟಪಡುವ ಯಾವುದೇ ಬಣ್ಣ)
ಕತ್ತರಿ
ಟೇಪ್
ಮಾರ್ಕರ್
ನಿಮ್ಮ ಮರಕ್ಕೆ ಅಲಂಕಾರಕ ವಸ್ತುಗಳು; ಬಣ್ಣದ ಕಾಗದ, ಸ್ಟಿಕ್ಕರ್‌ಗಳು, ಮಿನುಗು, ರಿಬ್ಬನ್, ಕಾನ್ಫೆಟ್ಟಿ, ಇತ್ಯಾದಿ
ಅಲಂಕಾರಗಳನ್ನು ಅಂಟಿಸಲು ಕ್ರಾಫ್ಟ್ ಅಂಟು ಅಥವಾ ಅಂಟು ಚುಕ್ಕೆಗಳು
ಟಾಪರ್ ಅನ್ನು ಲಗತ್ತಿಸಲು ಬಿಸಿ ಅಂಟು ಗನ್ ಮತ್ತು ಅಂಟು ಕಡ್ಡಿ (ಐಚ್ಛಿಕ)

ತಯಾರಿಸುವ ವಿಧಾನ:
ಸ್ಟೆಪ್ 1
ಕಾಗದವನ್ನು ಒಂದೇ ರೀತಿಯ ಎರಡು ಮರದ ಆಕಾರದಂತೆ ಕತ್ತರಿಸಿ. ಕಾಗದದ ಎರಡು ಹಾಳೆಗಳನ್ನು ಜೋಡಿಸಿ ಮತ್ತು ಅವುಗಳನ್ನು ಅರ್ಧದಷ್ಟು ಮಡಚಿ. ಅವುಗಳ ಮೇಲೆ ಮಾರ್ಕರ್‌ನಿಂದ ಕ್ರಿಸ್ಮಸ್ ಮರದ ಎಲೆಗಳನ್ನು ಬಿಡಿಸಿ. ನಂತರ ಅದನ್ನು ಆಕಾರದಂತೆ ಕತ್ತರಿಸಿ. ಈಗ ನೀವು ಎರಡು ಒಂದೇ ತರಹದ ಮರದ ಆಕಾರಗಳನ್ನು ಪಡೆಯುತ್ತೀರಿ.

ಸ್ಟೆಪ್ 2
ಅವುಗಳನ್ನು ಒಟ್ಟಿಗೆ ಸೇರಿಸಲು ಮರದ ಆಕಾರದ ಮಧ್ಯೆ ಸೀಳುಗಳನ್ನು ಮಾಡಿ. ಈ ಮರಗಳ ಮಧ್ಯವನ್ನು ಗುರುತಿಸಿ. ಈಗ, ಒಂದು ಮರದಲ್ಲಿ ಒಂದು ಸೀಳನ್ನು ಮೇಲಿನಿಂದ ಮಧ್ಯದ ಗುರುತುವರೆಗೆ ಕತ್ತರಿಸಿ, ಮತ್ತು ಇನ್ನೊಂದು ಮರವನ್ನು ಕೆಳಗಿನಿಂದ ಮಧ್ಯದವರೆಗೆ ಕತ್ತರಿಸಿ.

ಸ್ಟೆಪ್ 3
ಈಗ ಎರಡು ಆಕಾರಗಳನ್ನು ಸೇರಿಸಿಕೊಂಡು ಮರವನ್ನು ಮಾಡಿ. ಈ ಮರಗಳು ದೃಢವಾಗಿ ಮತ್ತು ಒಟ್ಟಿಗೆ ಹಿಡಿದಿಡಲು ಮರದ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಬಿಳಿ ಗಮ್ ಟೇಪಿನ ಕೆಲವು ತುಣುಕುಗಳನ್ನು ಅಂಟಿಸಿ. ಈಗ, ಮರವನ್ನು ತೆರೆದಂತೆ ಮಡಚಿ. ಇದರಿಂದ ಮರವು ನಿಲ್ಲುತ್ತದೆ.
ಸ್ಟೆಪ್ 4
ಇದೀಗ ನಿಮ್ಮ ಕ್ರಿಸ್ಮಸ್ ಟ್ರೀಯನ್ನು ಅಲಂಕರಿಸಿ ಆನಂದಿಸಿ! ನಿಮ್ಮ ಕ್ರಿಸ್ಮಸ್ ಮರವನ್ನು ಸ್ಪಾರ್ಕ್ಲರ್ಗಳು, ರಿಬ್ಬನ್ಗಳು, ಥ್ರೆಡ್ ಅಥವಾ ಯಾವುದೇ ಅಲಂಕಾರಿಕ ವಸ್ತುಗಳನ್ನು ಬಳಸಿ!



Click it and Unblock the Notifications
